ದಕ್ಷಿಣ ಆಫ್ರಿಕಾ ತರಹದ ಹೊಸ ಕೊರೊನಾ ರೂಪಾಂತರಿ ವೈರಸ್‌ ಬ್ರೆಜಿಲ್‌ನಲ್ಲಿ ಪತ್ತೆ..!!

ಬ್ರೆಜಿಲ್ ನ ಸಾವೊ ಪಾಲೊದಲ್ಲಿ ಹೊಸ ಕೊವಿಡ್‌ -19 ರೂಪಾಂತರವನ್ನು ಪತ್ತೆ ಮಾಡಲಾಗಿದೆ. ಇದು ದಕ್ಷಿಣ ಆಫ್ರಿಕಾದಲ್ಲಿ ಮೊದಲು ನೋಡಿದ ರೂಪಾಂತರದಂತೆಯೇ ಇದೆ ಎಂದು ರಾಜ್ಯದ ಬುಟಾಂಟನ್ ಬಯೋಮೆಡಿಕಲ್ ಸಂಸ್ಥೆಯ ಮುಖ್ಯಸ್ಥರು ಹೇಳಿದ್ದಾರೆ. ಬ್ರೆಜಿಲ್ ಒಂದು ದಿನದಲ್ಲಿ 3,780 ಸಾವುಗಳನ್ನು ದಾಖಲಿಸಿದ ಮರುದಿನ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬುಟಾಂಟನ್ ಅಧ್ಯಕ್ಷ ಡಿಮಾಸ್ ಕೋವಾಸ್, ರೂಪಾಂತರ ಹೊಂದಿರುವ … Continued

ಸೂಪರ್‌ ಸ್ಟಾರ್‌ ರಜನಿಕಾಂತ್‌ಗೆ ದಾದಾಸಾಹೇಬ್ ಫಾಲ್ಕೆ ಪುರಸ್ಕಾರ

ನಟ ರಜನಿಕಾಂತ್ ಅವರು 51 ನೇ ದಾದಾಸಾಹೇಬ್ ಫಾಲ್ಕೆ ಪುರಸ್ಕಾರವನ್ನು ಸ್ವೀಕರಿಸಲಿದ್ದಾರೆ, ಇದನ್ನು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಗುರುವಾರ ಪ್ರಕಟಿಸಿದ್ದಾರೆ. ಇದು ಭಾರತೀಯ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿಯಾಗಿದ್ದು, ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾರತೀಯ ಚಿತ್ರರಂಗದ ಪಿತಾಮಹ ಧುಂಡಿರಾಜ್ ಗೋವಿಂದ್ ಫಾಲ್ಕೆ ಅವರ ಹೆಸರನ್ನು ಇಡಲಾಗಿದೆ. ಇದನ್ನು 1969 ರಲ್ಲಿ ಸ್ಥಾಪಿಸಲಾಯಿತು. ಭಾರತೀಯ ಚಿತ್ರರಂಗದ ಬೆಳವಣಿಗೆ … Continued

ಭಾರತದಲ್ಲಿ 72 ಸಾವಿರ ದಾಟಿದ ದೈನಂದಿನ ಕೊರೊನಾ ಪ್ರಕರಣ.. ಒಂದೇ ದಿನ 31 ಸಾವಿರ ದಾಟಿದ ಪ್ರಕರಣಗಳ ಜಿಗಿತ..!

ಕಳೆದ 24 ಗಂಟೆಗಳಲ್ಲಿ ಭಾರತವು 72,330 ಹೊಸ ಕೊರೊನಾ ವೈರಸ್ (ಕೋವಿಡ್ -19) ಪ್ರಕರಣಗಳನ್ನು ದಾಖಲಿಸಿದೆ. ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ಗುರುವಾರ ಬೆಳಿಗ್ಗೆ ತೋರಿಸಿದೆ. ಈ ಸೋಂಕಿನಿಂದ 459 ಜನರ ಪ್ರಾಣ ಕಳೆದುಕೊಂಡಿದ್ದಾರೆ. ಬುಧವಾರ 354 ಮೃತಪಟ್ಟಿದ್ದರು. ಸಾವಿನ ಸಂಖ್ಯೆಯಲ್ಲಿಯೂ ಗಣನೀಯ ಹೆಚ್ಚಳವಾಗಿದೆ. ರಾಷ್ಟ್ರವ್ಯಾಪಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 1,22,21,665 … Continued

ಮಹತ್ವದ ಸುದ್ದಿ..ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಕಡಿತದ ಆದೇಶ ಹಿಂಪಡೆದ ಕೇಂದ್ರ

ಇಂದಿನಿಂದ (ಏಪ್ರಿಲ್ 1 ರಿಂದ) ಜಾರಿಗೆ ಬರಬೇಕಿದ್ದ ಸಣ್ಣ ಉಳಿತಾಯ  ಬಡ್ಡಿದರಗಳಲ್ಲಿ ತೀವ್ರ ಕಡಿತದ ಆದೇಶವನ್ನು ಕೇಂದ್ರ ಸರ್ಕಾರ ಹಿಂತೆಗೆದುಕೊಂಡಿದೆ. ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಗುರುವಾರ ಬೆಳಿಗ್ಗೆ “ಮೇಲ್ವಿಚಾರಣೆಯಿಂದ ಹೊರಡಿಸಲಾದ ಆದೇಶಗಳನ್ನು ಹಿಂಪಡೆಯಲಾಗುವುದು” ಎಂದು ಹೇಳಿದ್ದಾರೆ. ವಿವಿಧ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು ಸರ್ಕಾರ ಬುಧವಾರ 40-110 ಬೇಸಿಸ್‌ ಪಾಯಿಂಟ್‌ಗಳಿಂದ ತೀವ್ರವಾಗಿ ಕಡಿತಗೊಳಿಸಿತ್ತು. ಪರಿಷ್ಕೃತ … Continued

ಕೊವಿಡ್‌-19 ಲಸಿಕಾ ಅಭಿಯಾನದ ಮೂರನೇ ಹಂತ ಇಂದಿನಿಂದ ಆರಂಭ. ಸಂದೇಹಗಳಿಗೆ ಇಲ್ಲಿದೆ ಉತ್ತರ..

ನವ ದೆಹಲಿ :ದೇಶಾದ್ಯಂತ ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆ, ಸರ್ಕಾರವು ಏಪ್ರಿಲ್ 1 ರಿಂದ ಮೂರನೇ ಹಂತದ ವ್ಯಾಕ್ಸಿನೇಷನ್ ಚಾಲನೆ ನೀಡಲಿದೆ. ಪರಿಸ್ಥಿತಿ “ಕೆಟ್ಟದ್ದರಿಂದ ಇನ್ನೂ ಕೆಟ್ಟದ್ದಕ್ಕೆ” ಹೋಗುತ್ತಿದೆ ಎಂದು ಕೇಂದ್ರವು ಎಚ್ಚರಿಸಿದೆ. ಹೀಗಾಗಿ ಹೆಚ್ಚೆಚ್ಚು ಜನರು ಲಸಿಕೆ ಪಡೆದುಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ರಾಜ್ಯಗಳಿಗೆ ಸೂಚಿಸಿದೆ. ಇಂದಿನಿಂದ (ಏಪ್ರಿಲ್ 1 ರಿಂದ ) ವ್ಯಾಕ್ಸಿನೇಷನ್ … Continued

ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರ ಇಳಿಕೆ ಮಾಡಿ ಕೇಂದ್ರ

ನವ ದೆಹಲಿ: ವಿವಿಧ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ಇಳಿಕೆ ಮಾಡಿ ಕೇಂದ್ರ ಸರ್ಕಾರವು ಬುಧವಾರ ಆದೇಶ ಹೊರಡಿಸಿದೆ. ಈ ಆದೇಶದಿಂದಾಗಿ ಬ್ಯಾಂಕುಗಳು ತನ್ನ ಠೇವಣಿ ದರಗಳನ್ನು ಇಳಿಸಲು ಸಹಕಾರಿಯಾಗಲಿದೆ. ಕಳೆದ ಮೂರು ತ್ರೈಮಾಸಿಕದಲ್ಲಿ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಈಗ ಪರಿಷ್ಕೃತ ಬಡ್ಡಿದರ ಏಪ್ರಿಲ್ 1, 2021ರಿಂದ ಜಾರಿಗೆ ಬರಲಿದೆ. ಪಿಪಿಎಫ್, ರಾಷ್ಟ್ರೀಯ … Continued

ಕರ್ನಾಟಕದಲ್ಲಿ ನಾಲ್ಕು ಸಾವಿರ ದಾಟಿದ ದೈನಂದಿನ ಕೊರೊನಾ ಪ್ರಕರಣ…!

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಇಂದು ಆರ್ಭಟಿಸಿದೆ. ಕಳೆದ 24 ಗಂಟೆಗಳಲ್ಲಿ ಹೊಸ ಸೋಂಕು ಪ್ರಕರಣಗಳು ನಾಲ್ಕು ಸಾವಿರ ಗಡಿದಾಟಿದೆ. ಬೆಂಗಳೂರು ನಗರದಲ್ಲಿಸೋಂಕಿತರ ಸಂಖ್ಯೆ ಮೂರು ಸಾವಿರ ಹತ್ತಿರ ಬಂದಿದೆ. ಮೃತಪಟ್ಟವರ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 4225 ಕೋರೊನಾ ಹೊಸ ಪ್ರಕರಣಗಳು ವರದಿಯಾಗಿವೆ. 26 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಬೆಂಗಳೂರು ನಗರದಲ್ಲೇ … Continued

ನಂದಿಗ್ರಾಮದಲ್ಲಿ ಮಮತಾಗೆ ಹಿನ್ನಡೆ ? ಪ್ರಶಾಂತ್ ಕಿಶೋರ್ ಆಂತರಿಕ ಸಮೀಕ್ಷೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌, ಸತ್ಯಾಸತ್ಯತೆ ಬಗ್ಗೆ ಖಚಿತವಿಲ್ಲ

ಪಶ್ಚಿಮ ಬಂಗಾಳವು ರಾಜ್ಯ ವಿಧಾನಸಭಾ ಚುನಾವಣೆಯ 2ನೇ ಹಂತದಲ್ಲಿ ಮತ ಚಲಾಯಿಸಲು ಕೆಲವೇ ತಾಸುಗಳ ಮೊದಲು ಐಪಿಎಸಿಯ ಆಂತರಿಕ ಸಮೀಕ್ಷೆಯ ಚಿತ್ರಣ ಎಂದು ಹೇಳಲಾಗುತ್ತಿರುವುದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ, ಇದು ಮಮತಾ ಬ್ಯಾನರ್ಜಿ ನಂದಿಗ್ರಾಮ ಕ್ಷೇತ್ರದಲ್ಲಿ ಸೋಲುವ ಮುನ್ಸೂಚನೆ ನೀಡಿರುವುದು ಈಗ ದೊಡ್ಡ ಪಶ್ಚಿಮ ಬಂಗಾಳದಲ್ಲಿ ದೊಡ್ಡ ಕೋಲಾಹಲಕ್ಕೆ ಕಾರಣವಾಗಿದೆ. ಐಪಿಎಸಿ ಮತದಾನ ತಂತ್ರಜ್ಞ … Continued

ಭಾರತದಲ್ಲಿ ಸತತ ಮೂರನೇ ದಿನ ದೈನಂದಿನ ಕೊರೊನಾ ಪ್ರಕರಣಗಳ ಇಳಿಕೆ.. ಆದರೆ ಸಾವಿನ ಸಂಖ್ಯೆಯಲ್ಲಿ ಏರಿಕೆ..!

ನವ ದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 53,480 ಹೊಸ ಪ್ರಕರಣಗಳು ದಾಖಲಾದ ನಂತರ ದೇಶದ ಕೊರೊನಾ ವೈರಸ್ ಸೋಂಕಿತರ ಸಂಕ್ಯೆ ಬುಧವಾರ 1,21,49,335ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಪ್ರಸ್ತುತ 5,52,566 ರಷ್ಟಿದೆ ಎಂದು ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ. ಈ ಕಾಯಿಲೆಯಿಂದ 354 … Continued

ಟಾಟಾ ಸನ್ಸ್‌ ನಿಂದ ಟಿಸಿಎಸ್, ಟಾಟಾ ಸ್ಟೀಲ್, ಟಾಟಾ ಪವರ್, ಟಾಟಾ ಮೋಟಾರ್ಸ್ ಪ್ಲೆಡ್ಜಡ್‌ ಷೇರು ಬಿಡುಗಡೆ

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್), ಟಾಟಾ ಸ್ಟೀಲ್, ಟಾಟಾ ಪವರ್, ಟಾಟಾ ಮೋಟಾರ್ಸ್ ಮತ್ತು ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್‌ಗಳ ಪ್ರವರ್ತಕರು ಈ ಕಂಪನಿಗಳಲ್ಲಿ ಷೇರುಗಳನ್ನು ಬಿಡುಗಡೆ ಮಾಡಿದ್ದಾರೆ. ಅಲ್ಪಾವಧಿಯಲ್ಲಿಯೇ, ಟಾಟಾ ಗ್ರೂಪ್‌ನ ವಿವಿಧ ಕಂಪನಿಗಳು ವಿನಿಮಯಕ್ಕೆ ಸೂಚಿಸಿದ್ದು, ಟಾಟಾ ಸನ್ಸ್ ಕಳೆದ ವಾರ ಕೆಲವು ವಾಗ್ದಾನ (ಪ್ಲೆಡ್ಜಡ್‌) ಷೇರುಗಳನ್ನು ಬಿಡುಗಡೆ ಮಾಡಿದೆ. ಟಿಸಿಎಸ್‌ನ ಪ್ರವರ್ತಕ ಟಾಟಾ … Continued