ಅರ್ಬನ್‌ ಕೋಆಪರೇಟಿವ್‌ ಬ್ಯಾಂಕುಗಳಿಗೆ ಆರ್‌ಬಿಐ ಮತ್ತೊಂದು ಅಸ್ತ್ರ

ನವದೆಹಲಿ: ಅರ್ಬನ್ ಕೋ ಆಪರೇಟಿವ್ ಬ್ಯಾಂಕು​ಗಳ ಪ್ರಸ್ತುತ ಸ್ಥಿತಿಗತಿ ಹಾಗೂ ಆಗಬೇಕಾದ ಬದಲಾವಣೆಯ ಕುರಿತಂತೆ ಅಧ್ಯಯನ ನಡೆಸಲು ರಿಸರ್ವ್ ಬ್ಯಾಂಕ್ (ಆರ್​ಬಿಐ) ತಜ್ಞರ ಸಮಿತಿಯೊಂದನ್ನು ಸೋಮವಾರ ರಚಿಸಿದೆ. ಈ ಸಮಿತಿಗೆ ರಿಸರ್ವ್ ಬ್ಯಾಂಕ್​ನ ಉಪ ಗವರ್ನರ್ ಎನ್.​ ಎಸ್.​ ವಿಶ್ವನಾಥನ್ ಅಧ್ಯಕ್ಷರಾಗಿರಲಿದ್ದು, ಇದು ಅರ್ಬನ್ ಬ್ಯಾಂಕುಗಳ ಸ್ಥಿತಿಗತಿಯಷ್ಟೇ ಅಲ್ಲದೇ ಅವುಗಳ ಮುಂದಿನ ಹಾದಿಯ ಬಗ್ಗೆಯೂ ಅಧ್ಯಯನ … Continued

ವಾಟ್ಸಅಪ್‌‌‌ಗೆ ಚಾಟಿ ಬೀಸಿದ ಸರ್ವೋಚ್ಚ ನ್ಯಾಯಾಲಯ

ನವದೆಹಲಿ: ಹೊಸ ಗೌಪ್ಯತೆ ನೀತಿ ಜಾರಿಗೆ ತರಲು ಮುಂದಾಗಿದ್ದ ಮೆಸೆಜಿಂಗ್‌ ಅಪ್ಲಿಕೇಶನ್‌ ವ್ಯಾಟ್ಸಪ್‌ಗೆ ಚಾಟಿ ಬೀಸಿದ ಸರ್ವೋಚ್ಚ ನ್ಯಾಯಾಲಯ, ಹಣಕ್ಕಿಂತ ನಾಗರಿಕರ ಗೌಪ್ಯತೆ ಮುಖ್ಯವಾಗಿದೆ ಎಂದು ಅಭಿಪ್ರಾಯಟ್ಟಿದೆ. ಕೇಂದ್ರ ಸರಕಾರ ಹಾಗೂ ವ್ಯಾಟ್ಸಪ್‌ಗೆ ನೊಟೀಸ್‌ ನೀಡಿದ ನ್ಯಾಯಾಲಯ, ನ್ಯಾಯಾಲಯವು ಜನರ ಗೌಪ್ಯತೆ ಬಗ್ಗೆ ಗಂಭೀರ ಕಾಳಜಿ ಹೊಂದಿದೆ. ಜನರ ಗೌಪ್ಯತೆ ರಕ್ಷಿಸುವುದು ನಮ್ಮ ಕರ್ತವ್ಯ ಎಂದು … Continued

ಯಡಿಯೂರಪ್ಪ ಕುಟುಂಬದ ಮಾರಿಷಿಸ್‌ ಪ್ರವಾಸದ ಗುಟ್ಟು ರಟ್ಟಾಗಬೇಕು: ಯತ್ನಾಳ

ಮುಖ್ಯಮಂತ್ರಿ ಯಡಿಯೂರಪ್ಪ ಕುಟುಂಬ ಇತ್ತೀಚಿಗೆ ಮಾರಿಷಿಸ್‌ಗೆ ವಿಮಾನದಲ್ಲಿ ಯಾಕೆ ಹೋಗಿತ್ತು? ಅಲ್ಲಿ ಏನು ಹಣದ ವ್ಯವಹಾರ ನಡೆದಿದೆ ಎಂಬುದು ರಾಜ್ಯದ ಜನರಿಗೆ ತಿಳಿಯಬೇಕು ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಬಸವರಾಜ ಪಾಟೀಲ ಯತ್ನಾಳ ತಿಳಿಸಿದ್ದಾರೆ. ಸತ್ಯ ಸಂಗತಿ ಜನರ ಎದುರು ಬರಬೇಕು ಎಂದು ಆಗ್ರಹಿಸಿದರು. ಯಡಿಯೂರಪ್ಪ ಅವರ ಕುಟುಂಬದ ಸದಸ್ಯರೇ ಅವರಿಗೆ … Continued

ಪ್ಲಾಸ್ಟಿಕ್‌, ಗಾಜಿನ ಮೇಲೆ ಹೆಚ್ಚು ಕಾಲ ಬದುಕುವ ಕೊರೊನಾ ಸೋಂಕು: ಐಐಟಿ ಸಂಶೋಧನೆ

ಕೊರೊನಾ ಸೋಂಕು ಕಾಗದ ಹಾಗೂ ಬಟ್ಟೆಗೆ ಹೋಲಿಕೆ ಮಾಡಿದರೆ ಪ್ಲಾಸ್ಟಿಕ್‌ ಹಾಗೂ ಗಾಜಿನ ಮೇಲ್ಮೈ ಮೇಲೆ ಹೆಚ್ಚು ಕಾಲ ಬದುಕುಳಿಯುತ್ತದೆ ಎಂದು ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ಐಐಟಿ) ಬಾಂಬೆ ಸಂಶೋಧಕರು ತಿಳಿಸಿದ್ದಾರೆ. ಭೌತಶಾಸ್ತ್ರದ ಸಂಶೋಧನಾ ಜರ್ನಲ್‌ನಲ್ಲಿ ಪ್ರಕಟಗೊಂಡ ಪ್ರಬಂಧದಲ್ಲಿ ಈ ಮಹತ್ವದ ವಿಷಯವನ್ನು ತಿಳಿಸಲಾಗಿದೆ. ಗಾಜು ಹಾಗೂ ಪ್ಲಾಸ್ಟಿಕ್‌ ಮೇಲೆ ಕೊವಿಡ್‌-೧೯ ಸೋಂಕು ಹೆಚ್ಚು … Continued

ಸಿದ್ದರಾಮಯ್ಯ ದೆಹಲಿ ದೌಡ್:‌ ನಾಳೆ ರಾಹುಲ್‌ ಗಾಂಧಿ ಭೇಟಿ

ಬೆಂಗಳೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಂಗಳವಾರ ದೆಹಲಿಗೆ ತೆರಳಲಿದ್ದು, ಪಕ್ಷದ ಮುಖಂಡ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ. ದಿಢೀರ್‌ ಆಗಿ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿಯನ್ನು ಭೇಟಿ ಮಾಡುತ್ತಿರುವುದು ರಾಜ್ಯ ಕಾಂಗ್ರೆಸ್‌ ವಲಯದಲ್ಲಿ ಕುತೂಹಲ ಮೂಡಿಸಿದೆ. ಮಂಗಳವಾರ ಬೆಳಗ್ಗೆ ಸಿದ್ದರಾಮಯ್ಯ ದೆಹಲಿಗೆ ತೆರಳಲಿದ್ದಾರೆ. ಸಂಜೆ ನಾಲ್ಕು ಗಂಟೆಗೆ ರಾಹುಲ್ ಗಾಂಧಿ … Continued

ಫೆ.೧೫ರ ಮಧ್ಯರಾತ್ರಿಯಿಂದ ಫಾಸ್ಟ್ಯಾಗ್ ಬಳಕೆ ಕಡ್ಡಾಯ

ನವದೆಹಲಿ: ವಾಹನಗಳ ಚಾಲಕರು, ಮಾಲೀಕರು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವಾಗ ಟೋಲ್‌ ಪ್ಲಾಜಾಗಳಲ್ಲಿ ಶುಲ್ಕ ಪಾವತಿಸಲು ಸೋಮವಾರ (ಫೆ.೧೫ರ ಮಧ್ಯರಾತ್ರಿ)ಮಧ್ಯರಾ‌ತ್ರಿಯಿಂದ ಜಾರಿಗೆ ಬರುವಂತೆ ಫಾಸ್ಟ್ಯಾಗ್ ಬಳಸುವುದು ಕಡ್ಡಾಯವಾಗಲಿದೆ. ಫಾಸ್ಟ್ಯಾಗ್ ಇಲ್ಲದಿದ್ದರೆ ಅಂಥ ವಾಹನಗಳ ಮಾಲೀಕರು, ಚಾಲಕರು ನಿಗದಿತ ಶುಲ್ಕದ ದುಪ್ಪಟ್ಟು ಮೊತ್ತವನ್ನು ಪಾವತಿಸಬೇಕಾಗುತ್ತದೆ ಎಂದು ಕೇಂದ್ರ ಭೂ ಸಾರಿಗೆ ಸಚಿವಾಲಯವು ತಿಳಿಸಿದೆ. ಶುಲ್ಕ ಸಂಗ್ರಹದ ವ್ಯಾಪ‍್ತಿಗೆ ಬರುವ … Continued

ರೈತರ ಬೇಡಿಕೆ ಈಡೇರುವ ವರೆಗೂ ಸರ್ಕಾರಕ್ಕೆ ಶಾಂತಿಯಿಂದಿರಲು ಬಿಡಲ್ಲ

ರೈತರ ಬೇಡಿಕೆಗಳನ್ನು ಈಡೇರಿಸುವವರೆಗೂ ಶಾಂತಿಯಿಂದ ಕುಳಿತುಕೊಳ್ಳಲು ಬಿಡುವುದಿಲ್ಲ ಎಂದು ಸರ್ಕಾರದ ವಿರುದ್ಧ ಮುಂಚೂಣಿಯಲ್ಲಿರುವ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯಿತ್‌ ಹೇಳಿದ್ದಾರೆ. ರೈತರ “ಮಹಾಪಂಚಾಯತ್” ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರದ ಕೃಷಿ ಕಾನೂನುಗಳ ವಿರುದ್ಧದ ಆಂದೋಲನಕ್ಕೆ ಮುಂದಾಗಿರುವ 40 ನಾಯಕರು ಇಡೀ ದೇಶದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ. ಸರ್ಕಾರವು ನಮ್ಮ ಪರವಾಗಿ ತೀರ್ಮಾನಿಸುವ … Continued

ಮೀಸಲಾತಿ ಹೋರಾಟ : ಕಾನೂನು ಚೌಕಟ್ಟಿನಲ್ಲಿ ಎಲ್ಲರಿಗೂ ಅವಕಾಶ

ದಾವಣಗೆರೆ:ರಾಜ್ಯದಲ್ಲಿ ವಿವಿಧ ಸಮುದಾಯಗಳು ಮೀಸಲಾತಿಗಾಗಿ ನಡೆಸುತ್ತಿರು ಹೋರಾಟ ನ್ಯಾಯಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ದಾವಣಗೆರೆಯಲ್ಲಿ ರವಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾನೂನಿನ ಚೌಕಟ್ಟಿನಲ್ಲಿ ಅವರಿಗೆ ಹೇಗೆ ಮೀಸಲಾತಿ ಕಲ್ಪಿಸಬೇಕು ಎನ್ನುವ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಅವರು ಭರವಸೆ ನೀಡಿದ್ದಾರೆ. ವೀರಶೈವ- ಲಿಂಗಾಯತ, ವಾಲ್ಮೀಕಿ, ಕುರುಬ ಸಮುದಾಯ ಸೇರಿದಂತೆ ಮೀಸಲಾತಿಗಾಗಿ ಹೋರಾಟ … Continued

ಟೂಲ್‌ಕಿಟ್‌ ಸಂಪಾದನೆ ಆರೋಪ: ದಿಶಾ ರವಿ ೫ ದಿನ ಪೊಲೀಸ್‌ ವಶಕ್ಕೆ

ದೆಹಲಿ: ರೈತರ ಪ್ರತಿಭಟನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟೂಲ್‌ಕಿಟ್‌ ಹಂಚಿಕೆ ಹಾಗೂ ಸಂಪಾದನೆ ಆರೋಪಕ್ಕಾಗಿ ಬಂಧಿತ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರನ್ನು ದೆಹಲಿ ನ್ಯಾಯಾಲಯ ೫ ದಿನಗಳ ಪೊಲೀಸ್‌ ವಶಕ್ಕೆ ನೀಡಿದೆ. ಬೆಂಗಳೂರಿನಿಂದ ದೆಹಲಿ ಪೊಲೀಸರ ಸೈಬರ್ ಸೆಲ್ ತಂಡವು ೨೧ರ ಹರೆಯದ ದಿಶಾ ರವಿ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿತು. ಕೇಂದ್ರ ಸರ್ಕಾರದ ವಿರುದ್ಧ … Continued

ಮನಸು ಮಾಡಿದ್ರೆ ೨೪ ಗಂಟೆಗಳಲ್ಲಿ ೫ ಕಾಂಗ್ರೆಸ್‌ ಶಾಸಕರ ರಾಜೀನಾಮೆ ಕೊಡಿಸಬಲ್ಲೆ

ಬೆಳಗಾವಿ: ನಾನು ಮನಸು ಮಾಡಿದರೆ ೨೪ ಗಂಟೆಗಳಲ್ಲಿ ಐದು ಕಾಂಗ್ರೆಸ್‌ ಶಾಸಕರ ರಾಜಿನಾಮೆ ಕೊಡಿಸಬಲ್ಲೆ ಎಂದು ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ. ಕಾಂಗ್ರೆಸ್‌ನಿಂದ ಬಿಜೆಪಿಗೆ ೧೭ ಶಾಸಕರು ಖುಷಿಯಿಂದ ಇಲ್ಲ ಎಂದು ಕೆಲವರು ಹೇಳುತ್ತಾರೆ. ಆದರೆ ಬೇಕೆನಿಸಿದರೆ ೨೪ ತಾಸುಗಳಲ್ಲಿ ಐವರು ಕಾಂಗ್ರೆಸ್‌ ಶಾಸಕರ ರಾಜಿನಾಮೆ ಕೊಡಿಸಬಲ್ಲೆ ಎಂದರು. ಕಾಂಗ್ರೆಸ್ನ ಉನ್ನತ ಹಂತದ … Continued