300 ರೂ.ಗೆ ನಕಲಿ ಕೋವಿಡ್‌ -19 ನೆಗೆಟಿವ್‌ ವರದಿ ನೀಡುವ ಮುಂಬೈನ ಟೂರ್ಸ್-ಟ್ರಾವೆಲ್ಸ್ ಆಪರೇಟರ್‌ಗಳು:ಪತ್ರಿಕಾ ವರದಿಯಲ್ಲಿ ಬಹಿರಂಗ..!!

ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಅಪಾಯಕಾರಿ ದರದಲ್ಲಿ ಏರಿಕೆಯಾಗುತ್ತಿದ್ದಂತೆಯೇ ಲಾಕ್‌ಡೌನ್‌ ಅಥವಾ ಕಟ್ಟುನಿಟ್ಟಿನ ಕ್ರಮಕ್ಕೆ ಸರ್ಕಾರ ಮುಂದಾಗುವ ಸೂಚನೆ ಸಿಗುತ್ತಿದ್ದಂತೆಯೇ ಮುಂಬೈನ ಅನೇಕ ಟೂರ್ಸ್‌ ಮತ್ತು ಟ್ರಾವೆಲ್ ಆಪರೇಟರ್‌ಗಳು ಜನರು ಈ ರಾಜ್ಯದಿಂದ ತೆರಳಲು ನಕಲಿ ಆರ್ಟಿಪಿಸಿಆರ್ ಸರ್ಟಿಫಿಕೆಟ್‌ ನೀಡುತ್ತಿವೆ ಎಂದು ವರದಿಯಾಗಿದೆ. ಘಾಟ್ಕೋಪರ್‌ನ ಗೋಪಾಲ್ ಭುವನ್ ನಿಲ್ದಾಣದಲ್ಲಿ ಮತ್ತು ಬೋರಿವ್ಲಿಯ ಎಸ್‌ಜಿಎನ್‌ಪಿ ಬಸ್ ನಿಲ್ದಾಣದಲ್ಲಿ … Continued

ಕರ್ನಾಟಕದಲ್ಲಿ 11 ಸಾವಿರ ದಾಟಿದ ದೈನಂದಿನ ಕೊರೊನಾ ಸೋಂಕು…! ಬೆಂಗಳೂರಲ್ಲೇ 8 ಸಾವಿರಕ್ಕೂ ಹೆಚ್ಚು..!!

ಬೆಂಗಳೂರು: ಕರ್ನಾಟಕವು ಬುಧವಾರ 11,000ಕ್ಕೂ ಹೆಚ್ಚು ಹೊಸ ಕೊರೊನಾ ದೈನಂದಿನ ಪ್ರಕರಣಗಳನ್ನು ವರದಿ ಮಾಡಿದೆ. 2021ರ ಅತಿ ಹೆಚ್ಚು ಏಕದಿನದ ಏರಿಕೆಯಾಗಿದೆ. ಬುಧವಾರ 11,265 ಕೊರೊನಾ ಪ್ರಕರಣಗಳು ದಾಖಲಾಗಿದೆ. ಕರ್ನಾಟಕವು ಏಪ್ರಿಲ್ 11 ರಂದು 10,250 ಸೋಂಕುಗಳು ದಾಖಲಾಗಿತ್ತು. ಕರ್ನಾಟಕದ ಒಟ್ಟಾರೆ ಸೋಂಕಿತರ ಸಂಖ್ಯೆ 10,94,912 ಕ್ಕೆ ತಲುಪಿದೆ ಎಂದು ದೈನಂದಿನ ಆರೋಗ್ಯ ಇಲಾಖೆ ಬುಲೆಟಿನ್ … Continued

ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌.. ಕರಾವಳಿ ಜಿಲ್ಲೆಗಳಲ್ಲಿ ಅಧಿಕ ಮಳೆ ಸಾಧ್ಯತೆ

ಬೆಂಗಳೂರು: ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯದ ಕೆಲವು ಭಾಗಗಳಲ್ಲಿ ಮಳೆಯಾಗಿದ್ದು, ಇನೂ ಎರಡು ದಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಯುಗಾದಿಯ ಮಾರನೇ ದಿನ ಬುಧವಾರ ಪ್ಲವ ಸಂವತ್ಸರದ ಮೊದಲ ಮಳೆ ರಾಜಧಾನಿ ಬೆಂಗಳೂರಿಗೆ ತಂಪೆರೆದಿದೆ. ಬೆಳಗ್ಗೆಯಿಂದ ಮೋಡ ಮುಸುಕಿದ ವಾತವರಣವಿದ್ದು, ಮಳೆಯಾಗುವ ಬಗ್ಗೆ ಮೊದಲೇ ಹವಾಮಾನ ಇಲಾಖೆ ವರದಿ ಮಾಡಿತ್ತು. … Continued

ಮಹತ್ವದ ನಿರ್ಧಾರ.. ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆ ರದ್ದು, 12ನೇ ತರಗತಿ ಪರೀಕ್ಷೆ ಮುಂದಕ್ಕೆ

ನವ ದೆಹಲಿ: 10ನೇ ತರಗತಿ ಸಿಬಿಎಸ್‌ಇ ಮಂಡಳಿ ಪರೀಕ್ಷೆಗಳು ಈ ವರ್ಷ ನಡೆಯುವುದಿಲ್ಲ. ಆಂತರಿಕ ಮೌಲ್ಯಮಾಪನದ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಬಡ್ತಿ ನೀಡಲಾಗುವುದು ಎಂದು ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಬುಧವಾರ ಭಾರತ ತಿಳಿಸಿದ್ದಾರೆ. ಸರ್ಕಾರ ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಗಳನ್ನು ಮೇ 30ರ ವರೆಗೆ  ಮುಂದೂಡಿದ್ದು, ಜೂನ್ 1 ರಂದು ಪರಿಸ್ಥಿತಿ ಆಧಾರದ … Continued

ಭಾರತದಲ್ಲಿ 1.84 ಲಕ್ಷ ದಾಟಿದ ದೈನಂದಿನ ಕೊರೊನಾ ಸೋಂಕು, ಸಾವಿರಕ್ಕೂ ಹೆಚ್ಚು ಸಾವು..!!

ಭಾರತವು 24 ಗಂಟೆಗಳ ಅವಧಿಯಲ್ಲಿ 1.84 ಲಕ್ಷ ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ದೇಶಾದ್ಯಂತ ದೈನಂದಿನ ಸರಾಸರಿ ಕೋವಿಡ್ -19 ಪ್ರಕರಣಗಳು ಕಳೆದ ವಾರ 1.5 ಲಕ್ಷ ದಾಟಿದೆ. ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 1,38,73,825 ಕ್ಕೆ ಏರಿದೆ. ಇದೇ ಸಮಯದಲ್ಲಿ ದೇಶದಲ್ಲಿ 1,027 ಕೋವಿಡ್ ಸಂಬಂಧಿತ … Continued

ಭಾರತದ ಐಪಿಎಲ್‌ ಕ್ರಿಕೆಟ್‌ ಟೂರ್ನಿ ಲಂಡನ್ನಿಗೆ ಕೊಂಡೊಯ್ತಾರಂತೆ ಈ ಮೇಯರ್‌ ಖಾನ್‌…!

ಭಾರತದಲ್ಲಿ ಚುನಾವಣೆಯಲ್ಲಿ ಎಲ್ಲವನ್ನೂ ಫ್ರೀ ಕೊಡುತ್ತೇವೆ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಭರವಸೆ ನೀಡಿದರೆ ಲಂಡನ್‌ ಮೇಯರ್‌ ಒಬ್ಬರು ತಮ್ಮ ಮರುಚುನಾವಣೆಗೆ ಅವಕಾಶ ಹೆಚ್ಚಿಸಿಕೊಳ್ಳಲು ಈಗ ನಡೆಯುತ್ತಿರುವ ವಿಶ್ವದ ಅತ್ಯಂತ ಜನಪ್ರಿಯ ಟಿ-೨೦ ಕ್ರಿಕೆಟ್‌ ಟೂರ್ನಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಕ್ರಿಕೆಟ್‌ ಟೂರ್ನಿಯನ್ನೇ ಮುಂದಿನ ದಿನಗಳಲ್ಲಿ ಲಂಡನ್‌ಗೆ ಸ್ಥಳಾಂತರಿಸುವ ಭರವಸೆ ನೀಡಿದ್ದಾರೆ..!! ಲಂಡನ್ ಮೇಯರ್ … Continued

ತಂದೆ-ತಾಯಿಗಳಿಂದಲೇ ತಮ್ಮ ಜೀವಕ್ಕೆ ಅಪಾಯವಿದೆ ಎಂದು ಪೊಲೀಸ್‌ ದೂರು ದಾಖಲಿಸಿದ 15, 6 ವರ್ಷದ ಅಣ್ಣತಮ್ಮ..!!

ಇರೋಡ್: ಆರು ಮತ್ತು ಹದಿನೈದು ವರ್ಷದ ಇಬ್ಬರು ಸಹೋದರರು ಸೋಮವಾರ ಪೊಲೀಸ್ ವರಿಷ್ಠಾಧಿಕಾರಿಗೆ ತಮ್ಮ ತಂದೆ-ತಾಯಿಗಳ ವಿರುದ್ಧವೇ ದೂರು ನೀಡಿದ್ದಾರೆ, ತಮಗೆ ತಮ್ಮ ಪಾಲಕರು ಚಿತ್ರಹಿಂಸೆ ನೀಡಿದ್ದಾರೆ ಮತ್ತು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದು, ತಮ್ಮ ಪಾಲಕರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ತಮ್ಮ ದೂರಿನಲ್ಲಿ, ಈ ಮಕ್ಕಳು ತಮ್ಮ ಪಾಲಕರು ಮತ್ತು ತಮ್ಮ … Continued

ಕೋವಿಡ್: ಮಹಾರಾಷ್ಟ್ರ ರಾಜ್ಯಾದ್ಯಂತ ಮೇ 1ರ ವರೆಗೆ ಸೆಕ್ಷನ್ 144 ಜಾರಿ; 5,476 ಕೋಟಿ ರೂ. ಪ್ಯಾಕೇಜ್‌

ಮುಂಬೈ: ಮಹಾರಾಷ್ಟ್ರದಲ್ಲಿ ಕೋವಿಡ್‌-19 ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಂಗಳವಾರ ರಾಜ್ಯದಾದ್ಯಂತ ಸೆಕ್ಷನ್ 144 ಅನ್ನು ಮೇ 1ರ ವರೆಗೆ ವಿಧಿಸಿದ್ದಾರೆ. ಅಂದರೆ ಸಾರ್ವಜನಿಕ ಸ್ಥಳಗಳಲ್ಲಿ ಐದಕ್ಕೂ ಹೆಚ್ಚು ಜನರನ್ನು ಅನುಮತಿಸಲಾಗುವುದಿಲ್ಲ. ಮಾರಾಟಗಾರರು, ಆಟೋರಿಕ್ಷಾ ಚಾಲಕರು, ಮನೆ ಸಹಾಯಕರು, ನಿರ್ಮಾಣ ಕಾರ್ಮಿಕರು ಸೇರಿದಂತೆ ಹಲವಾರು ಫಲಾನುಭವಿಗಳಿಗೆ 5,476 ಕೋಟಿ ರೂ.ಗಳ ಪ್ಯಾಕೇಜ್ ಘೋಷಿಸಿದ್ದಾರೆ. … Continued

ಕೊರೊನಾ ಸೋಂಕಿಗೊಳಗಾದ ಶೇ.34 ಜನರಿಗೆ ಕಾಡುವ ಸಮಸ್ಯೆಗಳು: ಡಬ್ಲುಎಚ್‌ಒ ಮುಖ್ಯಸ್ಥರು ಹೇಳಿದ್ದೇನು?

ಜಿನಿವಾ: ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ನಂತರವೂ ಹಲವಾರು ಸಮಸ್ಯೆಗಳು ಪ್ರಾರಂಭವಾಗುತ್ತವೆ ಎಂದು ಸಂಶೋಧನೆ ಹೇಳುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲುಎಚ್‌ ಒ) ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಎಚ್ಚರಿಸಿದ್ದಾರೆ. ಕೊರೊನಾ ಸೋಂಕಿನಿಂದ ಚೇತರಿಸಿಕೊಳ್ಳುವ ಪ್ರತಿ ಮೂವರಲ್ಲಿ ಒಬ್ಬರು ನರ ಸಮಸ್ಯೆಗಳು ಅಥವಾ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ಕೊರೊನಾ ಸೋಂಕು ತಗುಲಿದ ಮೊದಲ ಆರು ತಿಂಗಳಲ್ಲಿ ಸುಮಾರು ಶೇ. … Continued

ಕರ್ನಾಟಕದಲ್ಲಿ ಸತತ ಎರಡನೇ ದಿನವೂ ದೈನಂದಿನ ಸೋಂಕು ಇಳಿಮುಖ..ಆದರೆ ಸಾವಿನ ಸಂಖ್ಯೆಯಲ್ಲಿ ಹೆಚ್ಚಳ..!

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಉಲ್ಬಣ ಮುಂದುವರೆದಿದ್ದು, ಮಂಗಳವಾರ 8778 ಹೊಸ ಪ್ರಕರಣಗಳು ದಾಖಲಾಗಿವೆ. ಕಳೆದ 24 ತಾಸಿನಲ್ಲಿ ಕೊರೊನಾ ಸೋಂಕಿನಿಂದ 67 ಜನರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಈವರೆಗೆ ಸೋಂಕಿಗೆ ತುತ್ತಾದವರ ಸಂಖ್ಯೆ 10,83,647 ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 13,008 ಕ್ಕೆ ಏರಿಕೆಯಾಗಿದೆ. ಸೋಂಕಿನಿಂದ 6079 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಈ ಮೂಲಕ … Continued