ಏಪ್ರಿಲ್ ತಿಂಗಳಾಂತ್ಯಕ್ಕೆ ಬ್ರಿಟನ್‌ ಪ್ರಧಾನಿ ಭಾರತಕ್ಕೆ ಭೇಟಿ

ಲಂಡನ್: ಬ್ರಿಟನ್‌ ಪ್ರಧಾನಿ ಬೋರಿಸ್ ಜಾನ್ಸನ್ ಏಪ್ರಿಲ್ ತಿಂಗಳಾಂತ್ಯಕ್ಕೆ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬಂದ ನಂತರ ಇದು ಅಲ್ಲಿನ ಪ್ರಧಾನಿಯ ಪ್ರಮುಖ ಅಂತಾರಾಷ್ಟ್ರೀಯ ಪ್ರವಾಸವಾಗಿದೆ. ಬ್ರಿಟನ್‌ ಪ್ರಧಾನಿ ಬೋರಿಸ್ ಜಾನ್ಸನ್ ಈ ವರ್ಷ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಬರಬೇಕಿತ್ತು. ಆದರೆ ಇಂಗ್ಲೆಂಡಿನಲ್ಲಿ ಕೋವಿಡ್- ಪ್ರಕರಣಗಳು ಹೆಚ್ಚಾಗಿದ್ದರಿಂದ ಕೊನೆ ಕ್ಷಣದಲ್ಲಿ ಪ್ರವಾಸ ರದ್ದುಪಡಿಸಿ … Continued

ಭಾರತದಲ್ಲಿ 24,492 ದೈನಂದಿನ ಕೊರೊನಾ ಪ್ರಕರಣಗಳು

ನವ ದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ದೈನಂದಿನ 24,492 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. 131 ಜನ ಇದರಿಂದ ಮೃತಪಟ್ಟಿದ್ದು, ಸಾವಿನ ಸಂಖ್ಯೆ 1,56,014ಕ್ಕೆ ಏರಿಕೆಯಾಗಿದೆ.ಸೋಮವಾರ ಒಂದೇ ದಿನ 20,191 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದು, ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 1,10,27,543 … Continued

ಭಾರತದಲ್ಲಿ ಪ್ರತಿ ದಿನ 146 ಟನ್ ಜೈವಿಕ ವೈದ್ಯಕೀಯ ಕೊವಿಡ್‌ ತ್ಯಾಜ್ಯ ಉತ್ಪಾದನೆ…!

ನವ ದೆಹಲಿ: ದೇಶದಲ್ಲಿ ಕೊವಿಡ್‌ -19 ರಿಂದಾಗಿ ಪ್ರತಿದಿನ 146 ಟನ್ ಜೈವಿಕ ವೈದ್ಯಕೀಯ ತ್ಯಾಜ್ಯ ಉತ್ಪತ್ತಿಯಾಗುತ್ತದೆ ಎಂದು ಪರಿಸರ ಸಚಿವಾಲಯ ಸಂಸತ್ತಿಗೆ ಸೋಮವಾರ ಮಾಹಿತಿ ನೀಡಿದೆ. ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪರಿಸರ ಖಾತೆ ರಾಜ್ಯ ಸಚಿವ ಬಾಬುಲ್ ಸುಪ್ರಿಯೋ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (ಸಿಪಿಸಿಬಿ) ಅಂಕಿ ಅಂಶಗಳ ಪ್ರಕಾರ, ದೇಶದಲ್ಲಿ ಪ್ರತಿ … Continued

ಭಾರತದಲ್ಲಿ 26 ಸಾವಿರ ದಾಟಿದ ದಿನವೊಂದರ ಕೊರೊನಾ ಸೋಂಕು..!

ನವ ದೆಹಲಿ: ದೇಶದಲ್ಲಿ ದಿನದಿನವೂ ಕೊವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಕಳೆದ 24ಗಂಟೆಯಲ್ಲಿ 26,291 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಕಳೆದ ಮೂರು ತಿಂಗಳಲ್ಲಿ ಇದೇ ಮೊದಲ ಬಾರಿಗೆ ಇಷ್ಟು ಪ್ರಮಾಣದ ಸೋಂಕಿತರು ಒಂದೇ ದಿನ ಪತ್ತೆಯಾಗಿದ್ದಾರೆ. 2020ರ ಡಿಸೆಂಬರ್​ 20ರಂದು 26,624 ಕೊರೊನಾ ಸೋಂಕಿನ ಕೇಸ್​ಗಳು ದಾಖಲಾಗಿದ್ದವು. ಭಾನುವಾರ 25,320 ಪ್ರಕರಣಗಳು ದಾಖಲಾಗಿದ್ದವು. ಸೋಮವಾರ ಸುಮಾರು … Continued

ದೇಶಾದ್ಯಂತ ವಿದ್ಯುತ್‌‌ ಬಳಕೆ ಹೆಚ್ಚಳ: ಆರ್ಥಿಕ ಪುನಶ್ಚೇತನದ ಸೂಚನೆ?

ನವದೆಹಲಿ: ಕಳೆದ ವರ್ಷ ಮಾರ್ಚ್‌ನ ಮೊದಲ ೧೨ ದಿನಗಳಿಗೆ ಹೋಲಿಕೆ ಮಾಡಿದರೆ, ವಿದ್ಯುತ್‌ ಬಳಕೆ ಪ್ರಮಾಣದಲ್ಲಿ ಶೇ.೧೬.೫ರಷ್ಟು ಹೆಚ್ಚಳವಾಗಿದ್ದು, ದೇಶದ ಆರ್ಥಿಕತೆ ಪುನಶ್ಚೇತನದತ್ತ ಸಾಗುತ್ತಿರುವುದನ್ನು ಇದು ಬಿಂಬಿಸುತ್ತದೆ ಎಂದು ಇಂಧನ ಸಚಿವಾಲಯ ಹೇಳಿದೆ. ಕಳೆದ ವರ್ಷ ಮಾರ್ಚ್‌ ೧ರಿಂದ ೧೨ರವರೆಗೆ ೪೦.೯೨ ಶತಕೋಟಿ ಯುನಿಟ್‌ ಬಳಕೆಯಾಗಿದ್ದರೆ, ಇದೇ ಅವಧಿಯಲ್ಲಿ ಈ ವರ್ಷ ೪೭.೬೭ ಶತಕೋಟಿ ಯುನಿಟ್‌ … Continued

ಮತ್ತೆ ೨೫ ಸಾವಿರ ದಾಟಿದ ಭಾರತದ ದಿನವೊಂದರ ಕೊರೊನಾ ಸೋಂಕು..!

ನವದೆಹಲಿ: ದೇಶದಲ್ಲಿ ದಿನವೊಂದರ ಕೊರೊನಾ ಪ್ರಕರಣಗಳ ಸಂಖ್ಯೆ ಕಳೆದ ೨೪ ತಾಸಿನಲ್ಲಿ ೨೫ ಸಾವಿರವನ್ನು ದಾಟಿದೆ..! ಭಾನುವಾರ ಬೆಳಿಗ್ಗೆ 8 ಗಂಟೆಗೆ ಮುಕ್ತಾಯವಾದ ೨೪ ತಾಸುಗಳ ಅವಧಿಯಲ್ಲಿ ೨೫, ೩೨೦ ಹೊಸ ಪ್ರಕರಣಗಳು ದಾಖಲಾಗಿದ್ದು, ಇದು ಕಳೆದ ವರ್ಷದ ಡಿಸೆಂಬರ್‌ ೨೦ರ ನಂತರ ಅಂದರೆ ೮೪ ದಿನಗಳಲ್ಲೇ ಗರಿಷ್ಠ ಪ್ರಮಾಣವಾಗಿದೆ.ಕಳೆದ ವರ್ಷ ಡಿಸೆಂಬರ್ 20 ರಂದು … Continued

ವಿಮಾನ ಪ್ರಯಾಣಿಕರಿಗೆ ಹೊಸ ಕೊವಿಡ್‌ ಮಾ‌ರ್ಗಸೂಚಿ ಪ್ರಕಟ

ನವ ದೆಹಲಿ: ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಶನಿವಾರ (ಮಾ.೧೩) ವಿಮಾನ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಈ ಮಾರ್ಗಸೂಚಿಯಂತೆ, ಪ್ರಯಾಣಿಕರು ಮಾಸ್ಕ್ ಧರಿಸದಿದ್ದರೆ ಅಥವಾ ಸೂಕ್ತ ಕೋವಿಡ್ ಸೂಚನೆ ಅನುಸರಿಸದಿದ್ದರೆ ಅವರನ್ನು ವಿಮಾನ ನಿಲ್ದಾಣದಿಂದ ಹೊರಗೆ ಕಳುಸಲಾಗುವುದು ಎಂದು ಖಡಕ್‌ ಸೂಚನೆ ನೀಡಿದೆ. ವಿಮಾನ ನಿಲ್ದಾಣಗಳಲ್ಲಿ ನಿಯೋಜಿಸಲಾಗಿರುವ ಭದ್ರತಾ ಸಿಬ್ಬಂದಿ ಪ್ರಯಾಣಿಕರು ಕೋವಿಡ್-19 … Continued

೨೫ ಸಾವಿರದ ಸಮೀಪ ತಲುಪಿದ ದೇಶದ ದಿನವೊಂದರ ಕೊರೋನಾ ಪ್ರಕರಣಗಳ ಸಂಖ್ಯೆ ..!

ನವದೆಹಲಿ: ಕಳೆದ 24 ತಾಸಿನಲ್ಲಿ ದೇಶದಲ್ಲಿ 24,882 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಇದು ಈ ವರ್ಷದಲ್ಲಿ ದಿನವೊಂದಕ್ಕೆ ದಾಖಲಾಗಿರುವ ಅತೀ ಹೆಚ್ಚು ಸಂಖ್ಯೆಯ ಪ್ರಕರಣಗಳಾಗಿವೆ. ಇದರಲ್ಲಿ ಮಾಹಾರಷ್ಟ್ರದ ಪ್ರಕರಣಗಳೇ ಅಧಿಕ. ಕಳೆದ ಒಂದು ದಿನದಲ್ಲಿ 140 ಸೋಂಕಿತರುಮೃತಪಟ್ಟಿದ್ದಾರೆ. ಈವರೆಗೆ ವರದಿಯಾದ ಒಟ್ಟಾರೆ ಕೊರೊನಾ ಪ್ರಕರಣಗಳ ಸಂಖ್ಯೆ 1,13,33,728 … Continued

ದೇಶದಲ್ಲಿ ಒಂದೇ ದಿನ 22,854 ಕೊರೋನಾ ಸೋಂಕು…!

ನವ ದೆಹಲಿ : ಕೊರೊನಾ ವೈರಸ್ ಅಬ್ಬರ ಮತ್ತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಳೆದ ೨೪ ತಾಸಿನಲ್ಲಿ ಒಂದೇ ದಿನದಲ್ಲಿ 22,854 ಹೊಸ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಬುಲೆಟಿನ್ ಗುರುವಾರ ತಿಳಿಸಿದೆ. ಈ ಸೋಂಕಿನಿಂದ 126 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 1,58,189ಕ್ಕೆ ಏರಿಕೆಯಾಗಿದೆ. .ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದವರ ಸಂಖ್ಯೆ 10,938,146ಕ್ಕೆ … Continued

ಒಂದು ವರ್ಷದಲ್ಲಿ ಅತಿ ಹೆಚ್ಚು ಇಂಟರ್ನೆಟ್‌ ಸ್ಥಗಿತ: ವಿಶ್ವದಲ್ಲಿ ಭಾರತ ನಂ.೧…!

ಒಂದು ವರ್ಷದಲ್ಲಿ ವಿಶ್ವದಲ್ಲಿ ಅತಿ ಹೆಚ್ಚು ಸಲ ಇಂಟರ್‌ನೆಟ್‌ ಸ್ಥಗಿತಗೊಳಿಸಿದ್ದು ಮಾಡಿದ್ದು ಭಾರತ…! ಲಾಭರಹಿತ ಸಂಸ್ಥೆ ಆಕ್ಸೆಸ್ ನೌ ಅವರ ವರದಿಯ ಪ್ರಕಾರ, 2020ರ ಅವಧಿಯಲ್ಲಿ 29 ದೇಶಗಳಲ್ಲಿ ಕನಿಷ್ಠ 155 ಸಲ ಅಂತರ್ಜಾಲ ಸ್ಥಗಿತಗೊಳಿಸುವಿಕೆ ದಾಖಲಿಸಲಾಗಿದೆ. ಮತ್ತು ಒಟ್ಟಾರೆ ಸಂಖ್ಯೆ 2019ಕ್ಕಿಂತ ಕಡಿಮೆಯಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದ್ದರೂ, ಎರಡೂ ವರ್ಷಗಳಲ್ಲಿ ಭಾರತವು ಅಗ್ರಸ್ಥಾನದಲ್ಲಿದೆ ಎಂದು … Continued