ವೀಡಿಯೊ..| ಇರಾನ್ ಮೇಲೆ ದಾಳಿ ಮಾಡಿ ವಾಪಸ್‌ ಆಗುತ್ತಿರುವ ಬಿ -2 ಬಾಂಬರ್‌ ವೀಡಿಯೊ ಹಂಚಿಕೊಂಡ ಅಮೆರಿಕ

ಅಮೆರಿಕವು ಇರಾನಿನ ಮೂರು ಪರಮಾಣು ಕೇಂದ್ರಗಳಾದ ಫೋರ್ಡೋ, ನಟಾಂಜ್ ಮತ್ತು ಎಸ್ಫಹಾನ್ ಮೇಲೆ ಬಾಂಬ್ ದಾಳಿ ನಡೆಸಿದ ನಂತರ ಬಿ -2 ಬಾಂಬರ್‌ಗಳು ಮಿಸೌರಿಯ ವೈಟ್‌ಮ್ಯಾನ್ ವಾಯುಪಡೆ ನೆಲೆಗೆ ಹಿಂತಿರುಗುತ್ತಿರುವ ವೀಡಿಯೊವನ್ನು ಸೋಮವಾರ ಅಮೆರಿಕದ ಶ್ವೇತಭವನ ಹಂಚಿಕೊಂಡಿದೆ. ಒಂದು ನಿಮಿಷದ ದೃಶ್ಯಾವಳಿಯು ಅಮೆರಿಕದ ಅತ್ಯಂತ ಮುಂದುವರಿದ ಕಾರ್ಯತಂತ್ರದ ಶಸ್ತ್ರಾಸ್ತ್ರಗಳ ಸಂಗ್ರಹದಲ್ಲಿ ಒಂದಾದ ಬಿ -2 ಬಾಂಬರ್ … Continued

ಅಮೆರಿಕದ ದಾಳಿ | ಹಾರ್ಮುಜ್ ಜಲಸಂಧಿ ತೈಲ ಕಾರಿಡಾರ್ ಮುಚ್ಚುವ ಬೆದರಿಕೆ ಹಾಕಿದ ಇರಾನ್‌ ; ಜಾಗತಿಕ ತೈಲ ದರದ ಮೇಲೆ ಪರಿಣಾಮ..?

ತೆಹ್ರಾನ್: ಅಮೆರಿಕ ತನ್ನ ಮೂರು ಪರಮಾಣು ಸೌಲಭ್ಯಗಳನ್ನು ಬಾಂಬ್ ದಾಳಿ ಮಾಡಿದ ನಂತರ ಇರಾನ್ ಪ್ರಮುಖ ತೈಲ ಹಡಗು ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಮುಚ್ಚುವ ಬಗ್ಗೆ ಯೋಚಿಸುತ್ತಿದೆ ಎಂದು ಇರಾನಿನ ಮಾಧ್ಯಮ ವರದಿ ಮಾಡಿದೆ. ಇರಾನಿನ ಪರಮಾಣು ಸೌಲಭ್ಯಗಳ ಮೇಲೆ ಅಮೆರಿಕ ನಡೆಸಿದ ವೈಮಾನಿಕ ದಾಳಿಯ ನಂತರ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವಂತೆ, ಜಾಗತಿಕ ತೈಲ ಮಾರುಕಟ್ಟೆಗಳು … Continued

ಇರಾನ್-ಇಸ್ರೇಲ್ ಸಂಘರ್ಷ ಉಲ್ಬಣ | ತಮ್ಮ ಉತ್ತರಾಧಿಕಾರಿ ಪಟ್ಟಕ್ಕೆ ಬಂಕರ್‌ ನಿಂದಲೇ ಮೂವರನ್ನು ಹೆಸರಿಸಿದ ಖಮೇನಿ ; ಮಗನ ಹೆಸರಿಲ್ಲ : ವರದಿ

ನವದೆಹಲಿ: ಇಸ್ರೇಲ್ ಜೊತೆಗಿನ ಮಿಲಿಟರಿ ಸಂಘರ್ಷ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ತಮ್ಮ ಸಂಭಾವ್ಯ ಉತ್ತರಾಧಿಕಾರಿಗೆ ಮೂವರು ಧರ್ಮಗುರುಗಳನ್ನು ಹೆಸರಿಸಿದ್ದಾರೆ, ಆದರೆ ತಮ್ಮ ಮಗ ಮೊಜ್ತಬಾ ಅವರನ್ನು ನಾಮನಿರ್ದೇಶನ ಮಾಡದಿರಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್ ಟೈಮ್ಸ್ ವರದಿಯಲ್ಲಿ ಉಲ್ಲೇಖಿಸಲಾದ ಈ ಬಹಿರಂಗಪಡಿಸುವಿಕೆಯು, ಇಸ್ರೇಲಿ ದಾಳಿಯ ಭಯದಿಂದಾಗಿ ಖಮೇನಿ … Continued

ಇರಾನ್ ವಿರುದ್ಧ ದಾಳಿ: “ನಾನು ಅದನ್ನು ಮಾಡಬಹುದು, ಮಾಡದೆಯೂ ಇರಬಹುದು ಎಂದ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್ ಡಿಸಿ: ಇರಾನ್-ಇಸ್ರೇಲ್ ಸಂಘರ್ಷದಲ್ಲಿ ಮಧ್ಯಪ್ರವೇಶಿಸಿದ್ದಕ್ಕಾಗಿ ಅಮೆರಿಕ ಮತ್ತು ಅದರ ಅಧ್ಯಕ್ಷರಿಗೆ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಭರಿಸಲಾಗದ ಹಾನಿಯನ್ನು ಅನುಭವಿಸುತ್ತದೆ” ಎಂದು ಎಚ್ಚರಿಕೆ ನೀಡಿದ ಕೆಲವು ಗಂಟೆಗಳ ನಂತರ, ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿದ್ದು, ಅಮೆರಿಕವು ಇರಾನ್ ಮೇಲೆ ದಾಳಿ ಮಾಡಬಹುದು ಅಥವಾ ಮಾಡದಿರಬಹುದು ಎಂದು ಹೇಳಿದ್ದಾರೆ. ಶ್ವೇತಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಟ್ರಂಪ್, … Continued

ನೇರ ಪ್ರಸಾರದ ವೇಳೆ ಇರಾನ್‌ ಸರ್ಕಾರಿ ಟಿವಿ ಕೇಂದ್ರದ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ; ಅರ್ಧಕ್ಕೇ ಹೊರನಡೆದ ನಿರೂಪಕಿ ; ದೃಶ್ಯ ವೀಡಿಯೊದಲ್ಲಿ ಸೆರೆ

ಇರಾನ್‌ನ ಬಹುತೇಕ ಭಾಗಗಳಲ್ಲಿ, ವಿಶೇಷವಾಗಿ ಅದರ ರಾಜಧಾನಿ ತೆಹ್ರಾನ್‌ನಲ್ಲಿ ಆಕಾಶದಿಂದ ಇಸ್ರೇಲ್‌ ಕ್ಷಿಪಣಿಗಳ ಮಳೆ ಗೈಯುತ್ತಿದೆ. ಈಗಾಗಲೇ ಇಸ್ರೇಲ್ ತಾನು ಇರಾನ್‌ ಮೇಲೆ ʼಸಂಪೂರ್ಣ ವಾಯು ಪ್ರಾಬಲ್ಯʼವನ್ನು ಹೊಂದಿರುವುದಾಗಿ ಹೇಳಿಕೊಂಡಿದೆ. ಎರಡು ಪ್ರಮುಖ ಪ್ರತಿಸ್ಪರ್ಧಿಗಳ ನಡುವಿನ ಸಂಘರ್ಷವು ಘಾತೀಯವಾಗಿ ಬೆಳೆಯುತ್ತಿದೆ. ಈಗ ಇಸ್ರೇಲಿನ ಅಂತಹ ಒಂದು ವಾಯು ದಾಳಿಯಲ್ಲಿ, ಇಸ್ರೇಲಿ ಕ್ಷಿಪಣಿಯು ನೇರ ಪ್ರಸಾರ ಕಾರ್ಯಕ್ರಮ … Continued

ಇಸ್ರೇಲ್-ಇರಾನ್ ಯುದ್ಧ ಉಲ್ಬಣ | ಭೂಗತ ಬಂಕರ್‌ನಲ್ಲಿ ಅಡಗಿದ ಇರಾನ್‌ ಸರ್ವೋಚ್ಚ ನಾಯಕ ಖಮೇನಿ-ಕುಟುಂಬ : ವರದಿ

ಇಸ್ರೇಲ್‌- ಇರಾನ್‌ನ ಸಂಘರ್ಷದ ಮಧ್ಯೆ ಇರಾನ್‌ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ಈಶಾನ್ಯ ತೆಹ್ರಾನ್‌ನಲ್ಲಿರುವ ಭೂಗತ ಬಂಕರ್‌ಗೆ ಸ್ಥಳಾಂತರಿಸಲಾಗಿದೆ ಎಂದು ಇರಾನ್ ಇಂಟರ್‌ನ್ಯಾಷನಲ್ ವರದಿ ಮಾಡಿದೆ. ಖಮೇನಿ ಅವರ ಮಗ ಮೊಜ್ತಬಾ ಸೇರಿದಂತೆ ಅವರ ಕುಟುಂಬದ ಎಲ್ಲಾ ಸದಸ್ಯರು ಸಹ ಅವರೊಂದಿಗೆ ಇದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿದ ವರದಿ ತಿಳಿಸಿದೆ. ವರದಿಯ ಪ್ರಕಾರ, … Continued

ರಕ್ಷಣಾ ವ್ಯವಸ್ಥೆ ಭೇದಿಸಿ ಇಸ್ರೇಲ್ ರಕ್ಷಣಾ ಕೇಂದ್ರ ಕಚೇರಿಗೆ ಅಪ್ಪಳಿಸಿದ ಇರಾನ್‌ ಕ್ಷಿಪಣಿ : ಅದು ಅಪ್ಪಳಿಸಿದ ಕ್ಷಣದ ದೃಶ್ಯ ವೀಡಿಯೊದಲ್ಲಿ ಸೆರೆ

ಮಧ್ಯಪ್ರಾಚ್ಯ ಉದ್ವಿಗ್ನತೆಯ ನಡುವೆ ಇಸ್ರೇಲ್ ಅನ್ನು ಕ್ಷಿಪಣಿಗಳ ದಾಳಿಯಿಂದ ರಕ್ಷಿಸುತ್ತಿದ್ದ ಐರನ್ ಡೋಮ್ ವಾಯು ರಕ್ಷಣೆಯ ವೈಫಲ್ಯದಲ್ಲಿ ಇರಾನ್ ಟೆಲ್ ಅವಿವ್‌ನಲ್ಲಿರುವ ಇಸ್ರೇಲ್ ರಕ್ಷಣಾ ಪ್ರಧಾನ ಕಚೇರಿಯ ಮೇಲೆ ದಾಳಿ ಮಾಡಿದೆ. 24 ಗಂಟೆಗಳ ಒಳಗೆ ಇರಾನ್ ಮೇಲೆ ಇಸ್ರೇಲ್ ನಡೆಸಿದ ಎರಡು ಅಲೆಗಳ ವಾಯುದಾಳಿಯ ನಂತರ ಇರಾನ್ ಪ್ರತಿದಾಳಿ ನಡೆಸಿದೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ … Continued

ವೀಡಿಯೊಗಳು..| ಪ್ರತೀಕಾರವಾಗಿ ಇರಾನ್​ನಿಂದ ಇಸ್ರೇಲ್​ ಮೇಲೆ 200 ಡ್ರೋನ್-ಕ್ಷಿಪಣಿಗಳಿಂದ ದಾಳಿ : ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಭೀತಿ

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧ ಭೀತಿಯ ಕಾರ್ಮೋಡಗಳು ಸೃಷ್ಟಿಯಾಗಿವೆ. ಪ್ರಮುಖ ಬೆಳವಣಿಗೆಯಲ್ಲಿ ಸಿರಿಯಾದಲ್ಲಿನ ತನ್ನ ದೂತಾವಾಸ ಕಟ್ಟಡದ ಮೇಲಿನ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದ ಇರಾನ್ ಈಗ ಇಸ್ರೇಲ್ ಮೇಲೆ ಅಭೂತಪೂರ್ವ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಿದೆ. ಇಸ್ರೇಲ್ ಮೇಲೆ 200 ಡ್ರೋನ್ ಮತ್ತು ಕ್ಷಿಪಣಿಗಳನ್ನು ಇರಾನ್‌ ಉಡಾಯಿಸಿದೆ. ಇರಾನ್ ಸ್ಫೋಟಕ ಡ್ರೋನ್‌ಗಳ ಸಮೂಹವನ್ನೇ … Continued

ಇಸ್ರೇಲ್‌-ಇರಾನ್‌ ಉದ್ವಿಗ್ನತೆ ನಡುವೆ 17 ಭಾರತೀಯರಿದ್ದ ಹಡಗನ್ನು ಯುಎಇ ಕರಾವಳಿಯಲ್ಲಿ ವಶಪಡಿಸಿಕೊಂಡ ಇರಾನ್ : ಮೂಲಗಳು

ದುಬೈ: ಹೋರ್ಮುಜ್‌ ಜಲಸಂಧಿಯಲ್ಲಿ ಹಡಗೊಂದರ ಮೇಲೆ ಕಮಾಂಡೊಗಳು ದಾಳಿ ನಡೆಸಿದ್ದು, ಇರಾನ್ ಈ ಕೃತ್ಯ ಎಸಗಿದೆ ಎಂದು ಮಧ್ಯಪ್ರಾಚ್ಯದ ರಕ್ಷಣಾ ಅಧಿಕಾರಿಗಳು ಆರೋಪಿಸಿದ್ದಾರೆ. ಯುಎಇ ಕರಾವಳಿಯಲ್ಲಿ ಇರಾನ್‌ನ ರೆವಲ್ಯೂಷನರಿ ಗಾರ್ಡ್‌ಗಳು ಶನಿವಾರ ವಶಪಡಿಸಿಕೊಂಡಿದೆ ಎಂದು ಹೇಳಲಾದ ಕಂಟೇನರ್ ಹಡಗಿನಲ್ಲಿದ್ದ 25 ಸಿಬ್ಬಂದಿಯಲ್ಲಿ 17 ಮಂದಿ ಭಾರತೀಯರು ಎಂದು ಮೂಲಗಳು ತಿಳಿಸಿವೆ. ಹೆಲಿಕಾಪ್ಟರ್‌ ಮೂಲಕ ಬಂದ ಕಮಾಂಡೊಗಳು … Continued