ಜಸ್ಟಿನ್ ಟ್ರುಡೊ ಬದಲಿಗೆ ಕೆನಡಾದ ಪ್ರಧಾನಿ ಹುದ್ದೆಗೆ ಮಾರ್ಕ್ ಕಾರ್ನಿ ಆಯ್ಕೆ ಮಾಡಿದ ಲಿಬರಲ್ ಪಕ್ಷ

ಒಟ್ಟಾವಾ (ಕೆನಡಾ) : ಕೆನಡಾದ ಲಿಬರಲ್ ಪಕ್ಷವು ಭಾನುವಾರ ದೇಶದ ಮುಂದಿನ ಪ್ರಧಾನ ಮಂತ್ರಿಯಾಗಿ ಮಾರ್ಕ್ ಕಾರ್ನಿ ಅವರನ್ನು ಆಯ್ಕೆ ಮಾಡಿದೆ. ಅಂತಿಮ ಲೆಕ್ಕಾಚಾರದ ಪ್ರಕಾರ ಲಿಬರಲ್ ಪಕ್ಷದ ನಾಯಕತ್ವದ ಮತದಲ್ಲಿ 59 ವರ್ಷದ ಕಾರ್ನಿ ಅವರು 85.9 ಪ್ರತಿಶತ ಮತಗಳನ್ನು ಗೆದ್ದಿದ್ದಾರೆ, . ಕಾರ್ನಿ ಮುಂದಿನ ದಿನಗಳಲ್ಲಿ ಪ್ರಧಾನಿ ಹುದ್ದೆ ತ್ಯಜಿಸಲಿರುವ ಪಕ್ಷದ ನಾಯಕ … Continued

ಕೆನಡಾದ ಪ್ರಧಾನಿ ಹುದ್ದೆಯ ರೇಸ್‌ ನಲ್ಲಿ ಕರ್ನಾಟಕ ಮೂಲದ ಚಂದ್ರ ಆರ್ಯ

ನವದೆಹಲಿ: ಕರ್ನಾಟಕ ಮೂಲದ ಕೆನಡಾ ಸಂಸದ ಚಂದ್ರ ಆರ್ಯ ಅವರು ಕೆನಡಾದ ಮುಂದಿನ ಪ್ರಧಾನಿಯಾಗುವ ನಿಟ್ಟಿನಲ್ಲಿ ಅಧಿಕೃತವಾಗಿ ರೇಸ್ ಪ್ರವೇಶಿಸಿದ್ದಾರೆ. ನೇಪಿಯನ್ ಪ್ರತಿನಿಧಿಸುವ ಲಿಬರಲ್ ಸಂಸದ, ಚಂದ್ರ ಆರ್ಯ ಅವರು ಕೆನಡಾವನ್ನು “ಸಾರ್ವಭೌಮ ಗಣರಾಜ್ಯ” ಮಾಡಲು, ನಿವೃತ್ತಿ ವಯಸ್ಸನ್ನು ಹೆಚ್ಚಿಸುವ, ಪೌರತ್ವ ಆಧಾರಿತ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತರುವ ಮತ್ತು ಪ್ಯಾಲೆಸ್ಟೈನ್ ರಾಜ್ಯವನ್ನು ಅಧಿಕೃತವಾಗಿ ಗುರುತಿಸುವ … Continued

ಜಸ್ಟಿನ್ ಟ್ರುಡೊ ಬದಲಿಗೆ ಕೆನಡಾದ ಪ್ರಧಾನಿ ಹುದ್ದೆಗೆ ಅನಿತಾ ಆನಂದ ಮುಂಚೂಣಿಯಲ್ಲಿ ; ಭಾರತೀಯ ಮೂಲದ ಇವರು ಯಾರು ಗೊತ್ತೆ..?

ಒಟ್ಟಾವಾ (ಕೆನಡಾ): ಕೆನಡಾದ ರಾಜಕಾರಣಿ ಭಾರತೀಯ ಮೂಲದ ಅನಿತಾ ಆನಂದ ಅವರು ಪ್ರಸ್ತುತ ಜಸ್ಟಿನ್ ಟ್ರುಡೊ ಅವರ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದು, ಪ್ರಧಾನಿ ಸ್ಥಾನಕ್ಕೆ ಸೋಮವಾರ ರಾಜೀನಾಮೆ ನೀಡಿರುವ ಟ್ರುಡೊ ಅವರ ಬದಲಿಗೆ ಪ್ರಧಾನಿ ಹುದ್ದೆಗೆ ಪ್ರಬಲ ಅಭ್ಯರ್ಥಿಯಾಗಿ ಪರಿಗಣಿಸಲಾಗಿದೆ. ಸೋಮವಾರ, ಜಸ್ಟಿನ್ ಟ್ರುಡೊ ಮಾರ್ಚ್ 24 ರೊಳಗೆ ಹೊಸ ನಾಯಕನನ್ನು ಆಯ್ಕೆ ಮಾಡಲು ನಿಗದಿಪಡಿಸಿ … Continued

ಪಕ್ಷದೊಳಗೆ ಭಿನ್ನಮತ ; ಕೆನಡಾ ಪ್ರಧಾನಿ ಹುದ್ದೆಗೆ ರಾಜೀನಾಮೆ ಘೋಷಿಸಿದ ಜಸ್ಟಿನ್ ಟ್ರುಡೊ

ಒಟ್ಟಾವಾ (ಕೆನಡಾ): ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಸೋಮವಾರ (ಜನವರಿ 6) ಕೆನಡಾದ ಲಿಬರಲ್ ಪಾರ್ಟಿ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಆ ಮೂಲಕ ಕೆನಡಾದ ಪ್ರಧಾನಿಯಾಗಿ ಒಂಬತ್ತು ವರ್ಷಗಳ ಅಧಿಕಾರಾವಧಿಗೆ ಅಂತ್ಯ ಹಾಡಿದ್ದಾರೆ. ಅವರ ವಿರುದ್ಧ ಪಕ್ಷದೊಳಗೆ ಭಿನ್ನಾಭಿಪ್ರಾಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಿದ್ದಾರೆ. ಅವರು ಒಟ್ಟಾವಾದ ರೈಡೋ ಕಾಟೇಜ್‌ನಲ್ಲಿರುವ ತಮ್ಮ ನಿವಾಸದ ಹೊರಗೆ … Continued

ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಈ ವಾರ ರಾಜೀನಾಮೆ…?

ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಲಿಬರಲ್ ಪಕ್ಷದ ನಾಯಕತ್ವಕ್ಕೆ ರಾಜೀನಾಮೆ ನೀಡುವುದಾಗಿ ಸೋಮವಾರ ಪ್ರಕಟಿಸುವ ನಿರೀಕ್ಷೆಯಿದೆ ಎಂದು ಮೂರು ಮೂಲಗಳನ್ನು ಉಲ್ಲೇಖಿಸಿ ದಿ ಗ್ಲೋಬ್ & ಮೇಲ್ ಭಾನುವಾರ ವರದಿ ಮಾಡಿದೆ. ಟ್ರೂಡೊ ಅವರು ಯಾವಾಗ ರಾಜೀನಾಮೆ ನೀಡುತ್ತಾರೆ ಎಂಬುದು ಖಚಿತವಾಗಿ ತಿಳಿದಿಲ್ಲ ಆದರೆ ಬುಧವಾರದ ಪ್ರಮುಖ ರಾಷ್ಟ್ರೀಯ ಕಾಕಸ್ ಸಭೆಯ ಮೊದಲು ಅವರು … Continued

ಕೆನಡಾ ಉಪಪ್ರಧಾನಿ ಕ್ರಿಸ್ಟಿಯಾ ಫ್ರೀಲ್ಯಾಂಡ್ ರಾಜೀನಾಮೆ ; ಪ್ರಧಾನಿ ಜಸ್ಟಿನ್ ಟ್ರುಡೊಗೆ ಹಿನ್ನಡೆ

ಒಟ್ಟಾವಾ: ಕೆನಡಾದಲ್ಲಿ ಸೋಮವಾರ (ಡಿ. 16) ನಡೆದ ಅನಿರೀಕ್ಷಿತ ರಾಜಕೀಯ ಬೆಳವಣಿಗೆಯಲ್ಲಿ ಉಪ ಪ್ರಧಾನಿ ಕ್ರಿಸ್ಟಿಯಾ ಫ್ರೀಲ್ಯಾಂಡ್ (Chrystia Freeland) ರಾಜೀನಾಮೆ ನೀಡಿದ್ದಾರೆ. ಪ್ರಧಾನಿ ಜಸ್ಟಿನ್ ಟ್ರುಡೊ (Justin Trudeau) ಅವರೊಂದಿಗಿನ ಭಿನ್ನಾಭಿಪ್ರಾಯವನ್ನು ಉಲ್ಲೇಖಿಸಿ ಅವರು ರಾಜೀನಾಮೆ ಸಲ್ಲಿಸಿದ್ದು, ಕೆನಡಾ ಚುನಾವಣೆ ಹೊಸ್ತಿಲಲ್ಲಿರುವಾಗ ಇದನ್ನು ಪ್ರಧಾನಿ ಜಸ್ಟಿನ್ ಟ್ರುಡೊ ಅವರಿಗೆ ಹಿನ್ನಡೆ ಎಂದೇ ವಿಶ್ಲೇಷಿಸಲಾಗಿದೆ. ಕ್ರಿಸ್ಟಿಯಾ … Continued

ಖಲಿಸ್ತಾನಿ ಉಗ್ರ ನಿಜ್ಜರ್‌ ಹತ್ಯೆಯಲ್ಲಿ ಮೋದಿ-ದೋವಲ್‌ ಕೈವಾಡದ ಆರೋಪ : ತಮ್ಮದೇ ಅಧಿಕಾರಿಗಳನ್ನು ‘ಅಪರಾಧಿಗಳು’ ಎಂದು ಕರೆದ ಪ್ರಧಾನಿ ಟ್ರೂಡೊ…!

ಟೊರೊಂಟೊ: ಭಾರತ ಮತ್ತು ಕೆನಡಾ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊಗೆ ಸಂಕಷ್ಟ ಕಡಿಮೆಯಾಗುತ್ತಿಲ್ಲ. ಈಗ ಮತ್ತೊಂದು ಪ್ರಸಂಗದಲ್ಲಿ ಟ್ರೂಡೊ ಮತ್ತೆ ಮುಜುಗರಕ್ಕೆ ಒಳಗಾಗಿದ್ದು, ಮುಜುಗರ ತಪ್ಪಿಸಿಕೊಳ್ಳಲು ತಮ್ಮದೇ ದೇಶದ ಗುಪ್ತಚರ ಸಂಸ್ಥೆ ಅಧಿಕಾರಿಗಳನ್ನು ‘ಅಪರಾಧಿಗಳು’ ಎಂದು ಕರೆದಿದ್ದಾರೆ. ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರು ತಮ್ಮದೇ ದೇಶದ ರಾಷ್ಟ್ರೀಯ … Continued

ಕೊನೆಗೂ ಕೆನಡಾದಲ್ಲಿ ʼಖಲಿಸ್ತಾನಿ ಪ್ರತ್ಯೇಕತಾವಾದಿಗಳುʼ ಇರುವುದನ್ನು ಒಪ್ಪಿಕೊಂಡ ಪ್ರಧಾನಿ ಜಸ್ಟಿನ್‌ ಟ್ರುಡೊ…!

ಒಟ್ಟಾವಾ : ಕೆನಡಾದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿಗಳು ಇದ್ದಾರೆ ಎಂಬುದನ್ನು ಪ್ರಧಾನಿ ಜಸ್ಟಿನ್ ಟ್ರುಡೊ ಒಪ್ಪಿಕೊಂಡಿದ್ದಾರೆ. ಆದರೆ ಖಲಿಸ್ತಾನಿ ಪ್ರತ್ಯೇಕತಾವಾದಿಗಳು ಕೆನಡಾದಲ್ಲಿನ ಸಿಖ್ ಸಮುದಾಯವನ್ನು ಒಟ್ಟಾರೆಯಾಗಿ ಪ್ರತಿನಿಧಿಸುವುದಿಲ್ಲ ಎಂದು ಹೇಳಿದ್ದಾರೆ. ಒಟ್ಟಾವಾದಲ್ಲಿರುವ ಪಾರ್ಲಿಮೆಂಟ್ ಹಿಲ್‌ನಲ್ಲಿ ಇತ್ತೀಚೆಗೆ ನಡೆದ ದೀಪಾವಳಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುವಾಗ ಕೆನಡಾದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿಗಳು ಇದ್ದಾರೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಕೆನಡಾದಲ್ಲಿ ಹಿಂದೂಗಳಲ್ಲಿ ಪ್ರಧಾನಿ … Continued

ಖಲಿಸ್ತಾನಿಗಳು-ಟ್ರುಡೊ ವಿರುದ್ಧ ನಿರ್ಣಯ ಅಂಗೀಕರಿಸಿದ ಕೆನಡಾದ 36 ಹಿಂದೂ-ಸಿಖ್ ಗುಂಪುಗಳು…

ಕೆನಡಾದ ಹಿಂದೂ ಮತ್ತು ಸಿಖ್ ಗುಂಪುಗಳು ಖಲಿಸ್ತಾನಿ ಗುಂಪುಗಳ ವಿರುದ್ಧ ನಿರ್ಣಯವನ್ನು ಅಂಗೀಕರಿಸಲು ಸೋಮವಾರ ಒಗ್ಗೂಡಿ ಸಭೆ ನಡೆಸಿವೆ. ಮೂಲಗಳ ಪ್ರಕಾರ, ಖಾಲ್ಸಾ ದಿವಾನ್ ಸೊಸೈಟಿ ರಾಸ್ ಸ್ಟ್ರೀಟ್ ವ್ಯಾಂಕೋವರ್ ಗುರುದ್ವಾರದಿಂದ ಸಭೆಯನ್ನು ಆಯೋಜಿಸಲಾಗಿತ್ತು, ಅಲ್ಲಿ 36 ಹಿಂದೂ ಸೊಸೈಟಿಗಳು ಮತ್ತು ಸಿಖ್ ಗುಂಪುಗಳ ಸುಮಾರು 1,000 ಜನರು ಭಾಗವಹಿಸಿದ್ದರು. ಈ ಗುಂಪುಗಳು ಖಲಿಸ್ತಾನಿ ಉಗ್ರಗಾಮಿಗಳು … Continued

ವೀಡಿಯೊ..| ಕೆನಡಾದ ಹಿಂದೂ ದೇವಾಲಯದಲ್ಲಿ ಭಕ್ತರ ಮೇಲೆ ದೊಣ್ಣೆಗಳಿಂದ ದಾಳಿ ನಡೆಸಿದ ಖಾಲಿಸ್ತಾನಿ ಪ್ರತ್ಯೇಕತಾವಾದಿಗಳು

ಕೆನಡಾದ ಬ್ರಾಂಪ್ಟನ್‌ನಲ್ಲಿರುವ ಹಿಂದೂ ದೇವಾಲಯವೊಂದರಲ್ಲಿ ಖಾಲಿಸ್ತಾನಿ ಪ್ರತ್ಯೇಕವಾದಿಗಳ ಗುಂಪೊಂದು ಭಾನುವಾರ ಭಕ್ತರ ಮೇಲೆ ಹಲ್ಲೆ ನಡೆಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋಗಳಲ್ಲಿ, ಹಿಂದೂ ಸಭಾ ಮಂದಿರದ ಹೊರಗೆ ಖಲಿಸ್ತಾನಿ ಧ್ವಜಗಳನ್ನು ಹಿಡಿದಿರುವ ವ್ಯಕ್ತಿಗಳ ಗುಂಪೊಂದು ದೊಣ್ಣೆಗಳಿಂದ ಜನರನ್ನು ಥಳಿಸುತ್ತಿರುವುದನ್ನು ಕಾಣಬಹುದು. ಹಿಂಸಾಚಾರವನ್ನು ಖಂಡಿಸಿದ ಕೆನಡಾದ ಸಂಸತ್ ಸದಸ್ಯ ಚಂದ್ರ ಆರ್ಯ ಅವರು ಖಲಿಸ್ತಾನಿಗಳು “ಕೆಂಪು ಗೆರೆಯನ್ನು … Continued