ವೀಡಿಯೊ | ಕುಮಟಾ : ಸಮುದ್ರ ತೀರದಲ್ಲಿ ಬೃಹತ್‌ ತಿಮಿಂಗಿಲದ ಮೃತದೇಹ ಪತ್ತೆ

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ವಕ್ಕನಳ್ಳಿ ಬಂದರಿನ ಸಮುದ್ರ ತೀರದಲ್ಲಿ ಬೃಹತ್‌ ಗಾತ್ರದ ತಿಮಿಂಗಿಲದ ಮೃತದೇಹ ಬುಧವಾರ ಪತ್ತೆಯಾಗಿದೆ. ಸುಮಾರು 40 ಅಡಿಗಳಷ್ಟು ಉದ್ದವಿರುವ ಈ ತಿಮಿಂಗಿಲವು ಸತ್ತು 10-15 ದಿನಗಳಾಗಿರಬಹುದು ಎಂದು ಅಂದಾಜಿಸಲಾಗಿದೆ. ತಿಮಿಂಗಿಲದ ಮೃತದೇಹವು ಬುಧವಾರ (ಜೂನ್‌ 15) ಸಮುದ್ರ ತೀರಕ್ಕೆ ಬಂದು ಬಿದ್ದಿದ್ದರೂ ಅದು ಕೊಳೆತ ಸ್ಥಿತಿಯಲ್ಲಿ ಕಂಡುಬಂದಿದ್ದು, … Continued

ಶಿರಸಿ-ಕುಮಟಾ ರಸ್ತೆಯಲ್ಲಿ ರಾತ್ರಿ ಸಂಚಾರ ನಿಷೇಧ

ಶಿರಸಿ : ಉತ್ತರ ಕನ್ನಡ ಜಿಲ್ಲೆಯ ಶಿರಸಿ-ಕುಮಟಾ ರಸ್ತೆಯ ದೇವಿಮನೆ ಘಟ್ಟ ಪ್ರದೇಶದಲ್ಲಿ ಮೂರ್ನಾಲ್ಕು ದಿನಗಳ ಅವಧಿಯಲ್ಲಿ ಮೂರ್ನಾಲ್ಕು ಬಾರಿ ಗುಡ್ಡ ಕುಸಿತ ಉಂಟಾಗಿದೆ. ಬಹುತೇಕ ರಾತ್ರಿ ವೇಳೆಯೇ ಗುಡ್ಡ ಕುಸಿತ ಆಗುವುದನ್ನು ಪರಿಗಣಿಸಿ ಈ ಮಾರ್ಗವಾಗಿ ರಾತ್ರಿ ಸಂಚಾರ ನಿಷೇಧಿಸಲಾಗಿದೆ. ಈ ಮಾರ್ಗದ ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿರುವುದರಿಂದ ಹಾಗೂ ಮತ್ತೆ ಕುಸಿಯುವ ಆತಂಕವಿರುವುದರಿಂದ … Continued

ಕುಮಟಾ | ವಕೀಲರ ಸಂಘದ ಮಾಜಿ ಅಧ್ಯಕ್ಷ ಆರ್.ಎ. ಹೆಗಡೆ ನಿಧನ

ಕುಮಟಾ : ಖ್ಯಾತ ವಕೀಲರಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಲನಗದ್ದೆಯ ಆರ್.ಎ. ಹೆಗಡೆ (84)ಅಲ್ಪ ಕಾಲದ ಅನಾರೋಗ್ಯದಿಂದ ಮಂಗಳವಾರ ನಿಧನರಾದರು. ಆರ್.ಎ. ಹೆಗಡೆ ಅವರು ಅನೇಕ ವರ್ಷಗಳ ಕಾಲ ಮುಂಬೈ ನ್ಯಾಯಾಲಯದಲ್ಲಿ ವಕೀಲರಾಗಿ ಸೇವೆ ಸಲ್ಲಿಸಿ ನಂತರ ಕುಮಟಾ ನ್ಯಾಯಾಲಯದಲ್ಲಿ ಸುಧೀರ್ಗ ಕಾಲ ವಕೀಲರಾಗಿ, ಕುಮಟಾ ವಕೀಲರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. … Continued

ವೀಡಿಯೊಗಳು | ಒಂದು ಅಡಿ ಉದ್ದದ ಚಾಕು ನುಂಗಿ ಒದ್ದಾಡಿದ ನಾಗರಹಾವು ; ಯಶಸ್ವಿಯಾಗಿ ಹೊರತೆಗೆದ ಪಶುವೈದ್ಯ-ಉರಗ ತಜ್ಞ ; ವೀಕ್ಷಿಸಿ

ಕುಮಟಾ: ನಾಗರಹಾವು ಇಲಿ, ಕೋಳಿ ಮೊಟ್ಟೆ, ಹಾಗೆಯೇ ಹಾವುಗಳನ್ನೇ ನುಂಗುವುದನ್ನು ಕೇಳಿದ್ದೇವೆ. ಆದರೆ ಚಾಕುವನ್ನೇ ತನ್ನ ಆಹಾರ ಎಂದು ಭ್ರಮಿಸಿ ನುಂಗಿದರೆ ಅದರ ಕತೆ ಏನಾಗಬಹುದು..? ಆದರೆ ಇಂಥದ್ದೇ ಘಟನೆಯೊಂದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೆಗಡೆಯ ಗೋವಿಂದ ನಾಯ್ಕ ಎಂಬವರ ಮನೆಯಲ್ಲಿ ನಡೆದಿರುವುದು ವರದಿಯಾಗಿದೆ. ಚಾಕುವನ್ನು ನುಂಗಿದ ನಾಗರ ಹಾವು ಅದನ್ನು ಜೀರ್ಣಿಸಿಕೊಳ್ಳಲೂ … Continued

ಎಸ್‌ ಎಸ್‌ ಎಲ್‌ ಸಿ | ಕುಮಟಾ ಗಿಬ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿನಿ ಭೂಮಿಕಾ ಹೆಗಡೆ ರಾಜ್ಯಕ್ಕೆ ದ್ವಿತೀಯ

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಕೆನರಾ ಎಜ್ಯಕೇಶನ್ ಸೊಸೈಟಿಯ ಗಿಬ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಭೂಮಿಕಾ ನಾಗರಾಜ ಹೆಗಡೆ ಶೇ. ೯೯.೮೪ ಅಂಕದೊಂದಿಗೆ ರಾಜ್ಯಕ್ಕೆ ದ್ವಿತೀಯ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ. ಗಿಬ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಎಸ್‌ಎಸ್‌ಎಲ್‌ಸಿಯಲ್ಲಿ ಒಟ್ಟು ಶೇ. ೯೮.೧೪ ಫಳಿತಾಂಶ ದಾಖಲಿಸಿದ್ದು ೨೫ ಮಂದಿ … Continued

ಎಸ್‌ ಎಸ್‌ ಎಲ್‌ ಸಿ ; ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಪ್ರೌಢಶಾಲೆ ಶೇ.100 ಫಲಿತಾಂಶ; ಟಾಪ್‌ 10 ರ‍್ಯಾಂಕ್‌ ಪಟ್ಟಿಯಲ್ಲಿ 18 ವಿದ್ಯಾರ್ಥಿಗಳು

 ಕುಮಟಾ : ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸಿ.ವಿ.ಎಸ್.ಕೆ ಪ್ರೌಢಶಾಲಾ ವಿದ್ಯಾರ್ಥಿಗಳು ಅನುಪಮ ಸಾಧನೆ ತೋರಿದ್ದಾರೆ. ಶಾಲೆ ಶೇಕಡಾ ನೂರರ ಫಲಿತಾಂಶ ಪಡೆದಿದ್ದು, ರಾಜ್ಯದ ಟಾಪ್ 10 ರ‍್ಯಾಂಕ್‌ ನಲ್ಲಿ ಶಾಲೆಯ 18 ವಿದ್ಯಾರ್ಥಿಗಳು ಗುರುತಿಸಿಕೊಳ್ಳುವ ಮೂಲಕ ಶಾಲೆಯ ಹಾಗೂ … Continued

ಗೋಕರ್ಣ : ಸಮುದ್ರ ಅಲೆಗಳಿಗೆ ಸಿಲುಕಿ ಕೊಚ್ಚಿ ಹೋದ ಇಬ್ಬರು ವೈದ್ಯ ವಿದ್ಯಾರ್ಥಿನಿಯರು

ಕುಮಟಾ : ಇಬ್ಬರು ವಿದ್ಯಾರ್ಥಿನಿಯರು ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ಗುರುವಾರ ಸಂಜೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಜಟಾಯುತೀರ್ಥ ಗುಡ್ಡದ ಬಳಿ ನಡೆದಿದೆ. ತಮಿಳುನಾಡಿನ ತಿರುಚಿಯ ಎಸ್.ಆರ್.ಎಂ ಮೆಡಿಕಲ್ ಕಾಲೇಜಿನ ಎಂಬಿಬಿಎಸ್ ಅಂತಿಮ ವರ್ಷದ ವಿದ್ಯಾರ್ಥಿನಿಯರಾದ ಕನ್ನಿಮೋಳಿ ಈಶ್ವರನ್(23) ಮತ್ತು ಹಿಂದುಜಾ ನಟರಾಜನ್(23) ಮೃತರು ಎಂದು ಗುರುತಿಸಲಾಗಿದೆ. ತಿರುಚಿಯ ಎಸ್.ಆರ್.ಎಂ ಮೆಡಿಕಲ್ ಕಾಲೇಜಿನ 23 … Continued

ಕುಮಟಾ | ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿದ್ದನ್ನು ಖಂಡಿಸಿ ಪ್ರತಿಭಟನೆ ; ಇದು ಷಡ್ಯಂತ್ರ-ದಿನಕರ ಶೆಟ್ಟಿ

ಕುಮಟಾ : ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿ ಅವಮಾನ ಮಾಡಿದ್ದನ್ನು ಖಂಡಿಸಿ ಉತ್ತರ ಕನ್ನಡದ ಕುಮಟಾದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು. ನಂತರ ತಪ್ಪಿತಸ್ಥರನ್ನು ತಕ್ಷಣವೇ ವಜಾಗೊಳಿಸಬೇಕು ಎಂದು ಒತ್ತಾಯಿಸಿ ಮಿನಿ ವಿಧಾನಸೌಧಕ್ಕೆ ತೆರಳಿ ತಹಶೀಲ್ದಾರರ ಮೂಲಕ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕುಮಟಾ ಶಾಸಕ ದಿನಕರ ಶೆಟ್ಟಿ ಾವರು, … Continued

ಕುಮಟಾ | ದ್ವಿತೀಯ ಪಿಯು ಫಲಿತಾಂಶ ; ಡಾ. ಬಾಳಿಗಾ ವಾಣಿಜ್ಯ ಪಿಯು ಕಾಲೇಜಿನ ವಿದ್ಯಾರ್ಥಿಗಳ ಉತ್ತಮ ಸಾಧನೆ

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಡಾ. ಎ. ವಿ. ಬಾಳಿಗಾ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದ ಫಲಿತಾಂಶ ಪ್ರಕಟಿತವಾಗಿದ್ದು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಕಾಲೇಜಿನ ನವ್ಯಾ ಹೆಬ್ಬಾರ ಶೇ. 97.33% ಅಂಕ ಮತ್ತು ಅನನ್ಯ ಭಟ್ಟ (97.33%)ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಪ್ರಣತಿ ಭಟ್ಟ ಶೇ. 95.33% ಹಾಗೂ … Continued

ಕುಮಟಾ | ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆ ; ಶಾಸ್ತ್ರೀಯ ಶೈಲಿಯಲ್ಲಿ ಕುಮಟಾದ ಸ್ವರಧಾರಾ ತಂಡ, ಸಾಂಪ್ರದಾಯಿಕ ಶೈಲಿಯಲ್ಲಿ ಬಳ್ಕೂರಿನ ಮಹಾವಿಷ್ಣು ಭಜನಾ ಮಂಡಳಿ ಪ್ರಥಮ

ಕುಮಟಾ: ಯುಗಾದಿ ಹಬ್ಬದ ಪ್ರಯುಕ್ತ ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಮಹಾಸತಿ ಸಭಾಭವನದಲ್ಲಿ ನಡೆಯಿತು. ಕುಮಟಾ, ಹೊನ್ನಾವರ, ಶಿರಸಿ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಿಂದ ವಿವಿಧ ಭಜನಾ ತಂಡಗಳು ಪಾಲ್ಗೊಂಡಿದ್ದವು. ಈ ವರ್ಷದ ಭಜಾ ಸ್ಪರ್ಧೆಯಲ್ಲಿ ಶಾಸ್ತ್ರೀಯ ಶೈಲಿಯ ಭಜಾ ಸ್ಪರ್ಧೆ ಹಾಗೂ ಸಾಂಪ್ರದಾಯಿಕ ಶೈಲಿಯ ಭಜನಾ … Continued