ಹಿಮಾಚಲ ಪ್ರದೇಶದಲ್ಲಿ ಭೂಕುಸಿತ : 6 ಮಂದಿ ಸಾವು, ಐವರಿಗೆ ಗಂಭೀರ ಗಾಯ

ಕುಲ್ಲು: ಹಿಮಾಚಲ ಪ್ರದೇಶದ ಕುಲ್ಲುವಿನ ಗುರುದ್ವಾರ ಮಣಿಕರಣ್ ಸಾಹಿಬ್ ಎದುರಿನ ಪಿಡಬ್ಲ್ಯೂಡಿ ರಸ್ತೆಯ ಬಳಿ ಭಾನುವಾರ ಸಂಜೆ ಸಂಭವಿಸಿದ ಭೂಕುಸಿತದಲ್ಲಿ ಆರು ಜನ ಸಾವಿಗೀಡಾಗಿದ್ದು, ಐವರು ಗಾಯಗೊಂಡಿದ್ದಾರೆ. ಮೃತರಲ್ಲಿ ಮೂವರು ಮಹಿಳೆಯರು ಇದ್ದಾರೆ. ಭಾನುವಾರ ಸಂಜೆ 5 ಗಂಟೆ ಸುಮಾರಿಗೆ ದೊಡ್ಡ ಮರವೊಂದು ಉರುಳಿ ಬಿದ್ದ ಪರಿಣಾಮ ರಸ್ತೆಯ ಅಂಚಿನಲ್ಲಿ ಕುಳಿತಿದ್ದ ಜನರು ಮೃತಪಟ್ಟಿದ್ದಾರೆ. ಗಾಯಾಳುಗಳನ್ನು … Continued

ವೀಡಿಯೊ…| ಅಣೆಕಟ್ಟಿನ ವಿದ್ಯುತ್‌ ಸ್ಥಾವರವನ್ನೇ ಆಪೋಶನ ತೆಗೆದುಕೊಂಡ ಭಾರಿ ಭೂ ಕುಸಿತ | ವೀಕ್ಷಿಸಿ

ಸಿಕ್ಕಿಂ: ಮಂಗಳವಾರ ಬೆಳಗ್ಗೆ ಭಾರೀ ಭೂಕುಸಿತ ಸಂಭವಿಸಿ ಸಿಕ್ಕಿಂನಲ್ಲಿರುವ ನ್ಯಾಷನಲ್ ಹೈಡ್ರೊಎಲೆಕ್ಟ್ರಿಕ್ ಪವರ್ ಕಾರ್ಪೊರೇಷನ್‌ನ (ಎನ್‌ಎಚ್‌ಪಿಸಿ) ತೀಸ್ತಾ ಸ್ಟೇಜ್ 5 ಅಣೆಕಟ್ಟಿನ ವಿದ್ಯುತ್ ಕೇಂದ್ರ ನಾಶವಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾದ ವರದಿಯಾಗಿಲ್ಲ. ಕಳೆದ ಕೆಲವು ವಾರಗಳಲ್ಲಿ, 510 ಮೆಗಾವ್ಯಾಟ್ ವಿದ್ಯುತ್ ಕೇಂದ್ರದ ಪಕ್ಕದಲ್ಲಿರುವ ಬೆಟ್ಟದಲ್ಲಿ ಆಗಾಗ್ಗೆ ಸಣ್ಣ ಕುಸಿತ ಸಂಭವಿಸಿದ ನಂತರ ಅಪಾಯದಲ್ಲಿದೆ ಎಂದು ಅರಿತು … Continued

ಅಂಕೋಲಾ | ಶಿರೂರು ಗುಡ್ಡ ಕುಸಿತ ; ಹಾನಿಗೀಡಾದ ಉಳುವರೆಗೆ ಡಾ.ವೀರೇಂದ್ರ ಹೆಗ್ಗಡೆ ಭೇಟಿ

ಅಂಕೋಲಾ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತದಿಂದ ಗಂಗಾವಳಿ ನದಿಯಲ್ಲಿ ಎದ್ದ ಅಲೆಗೆ ಮನೆ ಮಠ ಕಳೆದುಕೊಂಡ ನದಿ ದಂಡೆಯ ಉಳುವರೆ ಗ್ರಾಮಕ್ಕೆ ರಾಜ್ಯಸಭಾ ಸದಸ್ಯರು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮಂಗಳವಾರ ಭೇಟಿ ನೀಡಿದರು. ನದಿ ತಟದಲ್ಲಿರುವ ಮೋಹನ ನಾರಾಯಣ ಅಂಬಿಗ ಅವರ … Continued

ಪ್ರೀತಿಯ ಭಾರತೀಯ ಸೇನೆ…: ವಯನಾಡಿನ ಭೂಕುಸಿತದಲ್ಲಿ ಸಂತ್ರಸ್ತರ ರಕ್ಷಣೆಗೆ ನಿಂತ ಯೋಧರಿಗೆ ಹೃದಯಸ್ಪರ್ಶಿ ಪತ್ರ ಬರೆದ 3ನೇ ತರಗತಿ ಬಾಲಕ

ತಿರುವನಂತಪುರಂ : ವಿನಾಶಕಾರಿ ಭೂಕುಸಿತದಿಂದ ತತ್ತರಿಸಿರುವ ವಯನಾಡಿನಲ್ಲಿ ಅವಶೇಷಗಳಡಿ ಸಿಲುಕಿದವರು ಹಾಗೂ ಸಂತ್ರಸ್ತರ ರಕ್ಷಣೆಗೆ ಟೊಂಕ ಕಟ್ಟಿ ನಿಂತ ಭಾರತೀಯ ಯೋಧರಿಗೆ 3ನೇ ತರಗತಿ ಬಾಲಕನೊಬ್ಬ ಹೃದಯಸ್ಪರ್ಶಿ ಪತ್ರ ಬರೆದಿದ್ದಾನೆ ಹಾಗೂ ಮುಂದೊಂದು ದಿನ ತಾನೂ ಭಾರತೀಯ ಸೇನೆ ಸೇರಲು ಇಚ್ಛಿಸುತ್ತೇನೆ ಎಂದು ಹೇಳಿದ್ದಾನೆ. ಮಂಗಳವಾರ ಬೆಳಗಾಗುವ ಮುನ್ನ ವಯನಾಡು ಜಿಲ್ಲೆಯಲ್ಲಿ ಅವಳಿ ಭೂಕುಸಿತಗಳು ಸಂಭವಿಸಿ … Continued

ಕಾರವಾರ : ಬೈತಖೋಲ-ಬಿಣಗಾ ಹಳೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ; ಸಂಚಾರ ಬಂದ್‌

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ನಗರದಿಂದ ಬೈತಖೋಲ ಮಾರ್ಗವಾಗಿ ಬಿಣಗಾದ ಕಡೆ ಸಾಗುವ ಹಳೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತವಾಗಿದ್ದು ಈ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯ ಅವರ ಆದೇಶ ಹೊರಡಿಸಿದ್ದಾರೆ. ಸುರಂಗಮಾರ್ಗದ ನಿರ್ಮಾಣದ ಬಳಿಕ ನಗರದಿಂದ ಬಿಣಗಾ ಸಂಪರ್ಕಿಸುತ್ತಿದ್ದ ಈ ಹಿಂದಿನ ರಾಷ್ಟ್ರೀಯ ಹೆದ್ದಾರಿಯಲ್ಲಿಯೂ … Continued

ಶಿರಾಡಿಘಾಟ್ ಭೂಕುಸಿತ ಪ್ರದೇಶಕ್ಕೆ ಭೇಟಿ | ಅವೈಜ್ಞಾನಿಕ ಕಾಮಗಾರಿಗೆ ಬಗ್ಗೆ ಕೇಂದ್ರ ಸಚಿವ ಗಡ್ಕರಿಗೆ ಪತ್ರ -ಸಿಎಂ ಸಿದ್ದರಾಮಯ್ಯ

ಮಡಿಕೇರಿ: ಶಿರಾಡಿಘಾಟ್ ಭೂಕುಸಿತ ಪ್ರದೇಶಕ್ಕೆ ಶನಿವಾರ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವೈಜ್ಞಾನಿಕ ಕಾಮಗಾರಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸ್ಥಳದಲ್ಲಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಪ್ರಾದೇಶಿಕ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಗುಡ್ಡ ಕುಸಿತದ ಸ್ಥಳ ಪರಿಶೀಲನೆಗೆ ಅಧಿಕಾರಿಗಳ ತಂಡದೊಂದಿಗೆ ರಸ್ತೆ ಮಾರ್ಗವಾಗಿ ಘಟನಾ ಸ್ಥಳಕ್ಕೆ ತೆರಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಸ್ತೆ ನಿರ್ಮಾಣಕ್ಕಾಗಿ ಗುಡ್ಡಗಳನ್ನು 90 … Continued

ವಯನಾಡು ವಿನಾಶಕಾರಿ ಭೂಕುಸಿತ | ಸಾವಿನ ಸಂಖ್ಯೆ 282ಕ್ಕೆ ಏರಿಕೆ; 240ಕ್ಕೂ ಹೆಚ್ಚು ಜನ ನಾಪತ್ತೆ

ವಯನಾಡು : ಕೇರಳದ ವಯನಾಡು ಜಿಲ್ಲೆಯ ಮೆಪ್ಪಾಡಿ ಬಳಿಯ ಗುಡ್ಡಗಾಡು ಪ್ರದೇಶಗಳಲ್ಲಿ ಸಂಭವಿಸಿದ ವಿನಾಶಕಾರಿ ಭೂಕುಸಿತದ ನಂತರ ಸಾವಿನ ಸಂಖ್ಯೆ 282ಕ್ಕೆ ಏರಿದೆ ಹಾಗೂ ಗುರುವಾರ ಬೆಳಿಗ್ಗೆ 240 ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. 1,500 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ವಿವಿಧ ರಕ್ಷಣಾ ತಂಡಗಳು ಮತ್ತು ಸಶಸ್ತ್ರ … Continued

ವಯನಾಡ್ ಭೂಕುಸಿತ ದುರಂತ : ಸಾವಿನ ಸಂಖ್ಯೆ 239ಕ್ಕೆ ಏರಿಕೆ, ಇನ್ನೂ ಹಲವಾರು ಮಂದಿ ಮಣ್ಣಿನಡಿ ಸಿಲುಕಿರುವ ಶಂಕೆ

ತಿರುವನಂತಪುರಂ: ಕೇರಳದ ವಯನಾಡಿನಲ್ಲಿ ಜೀವ ಉಳಿಸಲು ರಕ್ಷಣಾ ತಂಡಗಳು ಸಮಯದ ವಿರುದ್ಧ ಓಡುತ್ತಿರುವಾಗ, ಬದುಕುಳಿದವರನ್ನು ಹುಡುಕುವ ಸಾಧ್ಯತೆಗಳು ಕ್ಷೀಣಿಸುತ್ತಿವೆ. ಮಂಗಳವಾರ ಜಿಲ್ಲೆಯಲ್ಲಿ ಸಂಭವಿಸಿದ ಭಾರೀ ಭೂಕುಸಿತದಲ್ಲಿ ಸಾವಿನ ಸಂಖ್ಯೆ 239 ಕ್ಕೆ ಏರಿದೆ, 150 ಕ್ಕೂ ಹೆಚ್ಚು ಜನರು ಇನ್ನೂ ನಾಪತ್ತೆಯಾಗಿದ್ದಾರೆ. ಮುಂಡಕ್ಕೈ, ಚೂರಲ್ಮಲಾ ಮತ್ತು ಅಟ್ಟಮಾಲದ ವಿಪತ್ತು ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ತಂಡಗಳು ಅವಿರತವಾಗಿ … Continued

ವಯನಾಡು ಭೂಕುಸಿತ ದುರಂತ : ಸಾವಿನ ಸಂಖ್ಯೆ 123 ಕ್ಕೆ ಏರಿಕೆ

ವಯನಾಡು : ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ವಿಕೋಪಗಳಲ್ಲಿ ಸಾವಿನ ಸಂಖ್ಯೆ 123 ಕ್ಕೆ ಏರಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ವಯನಾಡಿನಲ್ಲಿ ಧಾರಾಕಾರ ಮಳೆಯಿಂದ ಉಂಟಾದ ಭಾರೀ ಭೂಕುಸಿತದಲ್ಲಿ 128 ಮಂದಿ ಗಾಯಗೊಂಡಿದ್ದಾರೆ. ದುರಂತದಲ್ಲಿ ಇದುವರೆಗೆ 123 ಮಂದಿ ಸಾವಿಗೀಡಾಗಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. … Continued

ಶಿರಾಡಿ ಘಾಟಿಯಲ್ಲಿ ಭೂಕುಸಿತ ; ಮಣ್ಣಿನಲ್ಲಿ ಸಿಲುಕಿದ ವಾಹನಗಳು : ಸಂಚಾರ ಬಂದ್

ಹಾಸನ: ಕೇರಳದ ವಯನಾಡಿನ ಬೆನ್ನಲ್ಲೇ ಕರ್ನಾಟಕದ ಹಾಸನದ ಶಿರಾಡಿ ಘಾಟ್ ರಸ್ತೆಯಲ್ಲೂ ಮಂಗಳವಾರ ಅಪರಾಹ್ನ ಭಾರೀ ಭೂಕುಸಿತ ಸಂಭವಿಸಿದ್ದು ಹಲವು ವಾಹನಗಳು ಮಣ್ಣಿನಡಿ ಸಿಲುಕಿಕೊಂಡಿವೆ ಎಂದು ವರದಿಯಾಗಿವೆ. ಬೆಂಗಳೂರು- ಮಂಗಳೂರು ಅನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿಯ ಸಕಲೇಶಪುರ ತಾಲೂಕಿನ ದೊಡ್ಡತಪ್ಲು ಬಳಿ ಮತ್ತೆ ಬೃಹತ್‌ ಭೂಕುಸಿತವಾಗಿದೆ. ಎರಡು ಕಾರು, ಒಂದು ಟ್ಯಾಂಕರ್ … Continued