ಮುಂಬೈನಲ್ಲಿ ಕೊರೊನಾ ವೈರಸ್‌ ಹರಡುವಿಕೆ ದರ ಆಘಾತಕಾರಿ ಹೆಚ್ಚಳ..ಫೆಬ್ರವರಿಗೆ ಹೋಲಿಸಿದರೆ ಶೇ. 475 ಏರಿಕೆ…!!

ಮುಂಬೈ: ಮುಂಬೈ ನಗರದಲ್ಲಿ ಈ ವರ್ಷದ ಮಾರ್ಚ್‌ನಲ್ಲಿ 88,710 ಕೊರೊನಾವೈರಸ್ ಪ್ರಕರಣಗಳು ವರದಿಯಾಗಿವೆ, ಇದು ಹಿಂದಿನ ತಿಂಗಳ ಸೋಂಕಿನ ಪ್ರಮಾಣಕ್ಕಿಂತ ಶೇಕಡಾ 475 ರಷ್ಟು ಹೆಚ್ಚಾಗಿದೆ ಎಂದು ಬೃಹನ್‌ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಅಂಕಿ ಅಂಶಗಳು ತಿಳಿಸಿವೆ. ನಗರದಲ್ಲಿ ಈ ವರ್ಷದ ಜನವರಿಯಲ್ಲಿ 16,328 ಪ್ರಕರಣಗಳು ಹಾಗೂ ಫೆಬ್ರವರಿಯಲ್ಲಿ 18,359 ಕೊವಿಡ್‌-19 ಪ್ರಕರಣಗಳು ವರದಿಯಾಗಿತ್ತು. … Continued

ಮುಂಬೈ: ಕೊವಿಡ್‌ ಆಸ್ಪತ್ರೆಯಲ್ಲಿ ಬೆಂಕಿ ಅವಘಡ, ಏರಿದ ಸಾವಿನ ಸಂಖ್ಯೆ, 9 ಜನರ ಮರಣ

ಮುಂಬೈ: ಮುಂಬಯಿಯ ಭಂಡಪ್ ಪ್ರದೇಶದ ಖಾಸಗಿ ಕೊವಿಡ್‌ -19 ಆಸ್ಪತ್ರೆಯಲ್ಲಿ ಶುಕ್ರವಾರ ಮುಂಜಾನೆ ಬೆಂಕಿ ಅನಾಹುತದಲ್ಲಿ  ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, 9 ಜನ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಉಪ ಪೊಲೀಸ್ ಆಯುಕ್ತ (ಡಿಸಿಪಿ) ಪ್ರಶಾಂತ್ ಕದಮ್ ಅವರ ಪ್ರಕಾರ, ಸುಮಾರು 22 ಅಗ್ನಿಶಾಮಕ ದಳಗಳು ಆಸ್ಪತ್ರೆಗೆ ತಲುಪಿ ಬೆಂಕಿ ನಂದಿಸುತ್ತಿವೆ. ಮಾಲ್‌ನ ಮೂರನೇ ಮಹಡಿಯಲ್ಲಿರುವ ಆಸ್ಪತ್ರೆಗೆ … Continued

ಕಲಬುರಗಿ-ಮಂಬೈ ವಿಮಾನ ಹಾರಾಟ ಆರಂಭ

ಕಲಬುರಗಿ:ವಾಣಿಜ್ಯ ರಾಜಧಾನಿ ಮುಂಬೈ ಹಾಗೂ ಕಲ್ಯಾಣ ‌ಕರ್ನಾಟಕದ ಪ್ರಮುಖ ‌ನಗರ ಕಲಬುರಗಿ ‌ಮಧ್ಯೆ ಅಲಯನ್ಸ್ ಏರ್ ಸಂಸ್ಥೆಯ ನೇರ ವಿಮಾನ ‌ಸಂಚಾರ ಗುರುವಾರದಿಂದ ಆರಂಭವಾಯಿತು. ಮುಂಬೈನಿಂದ ಹೊರಟ ಮೊದಲ ವಿಮಾನ ಬೆಳಿಗ್ಗೆ 9.07ಕ್ಕೆ ನಗರದ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು. ಎಂಟು ಜನ ಪ್ರಯಾಣಿಕರು ಬಂದರು. 9.40ಕ್ಕೆ ಇಲ್ಲಿಂದ ಹೊರಟ ವಿಮಾನದಲ್ಲಿ 22 ಪ್ರಯಾಣಿಕರು ತೆರಳಿದರು. ಮಹಾರಾಷ್ಟ್ರದಲ್ಲಿ … Continued

ಕಲಬುರಗಿ-ಮುಂಬೈ ವಿಮಾನ ಯಾನ ಮಾರ್ಚ್ 25ರಿಂದ ಆರಂಭ

ಕಲಬುರಗಿ: ಏರ್ ಇಂಡಿಯಾದ ಅಂಗ ಸಂಸ್ಥೆ ಅಲಯನ್ಸ್ ಏರ್ ಇದೇ ಮಾರ್ಚ್ 25ರಿಂದ ಕಲಬುರಗಿ ಹಾಗೂ ಮುಂಬೈ ಮಧ್ಯೆ ವಾರದ ಎಲ್ಲ ದಿನವೂ ನೇರ ವಿಮಾನ ಹಾರಾಟ ಆರಂಭಿಸಲಿದೆ. ಕಲ್ಯಾಣ ಕರ್ನಾಟಕವನ್ನು ದೇಶದ ವಾಣಿಜ್ಯ ರಾಜಧಾನಿ ಮುಂಬೈಯೊಂದಿಗೆ ಸಂಪರ್ಕಿಸಬೇಕೆನ್ನುವ ಈ ಭಾಗದ ಉದ್ಯಮಿಗಳ ಬೇಡಿಕೆ ಈಡೇರಿದಂತಾಗಿದೆ. ಮಾ.25ರಿಂದ ನಿತ್ಯ ಬೆಳಿಗ್ಗೆ 7.20ಕ್ಕೆ ಮುಂಬೈನಿಂದ ಹೊರಡುವ 70 … Continued