ವೀಡಿಯೊ..| ಬಾಹ್ಯಾಕಾಶಕ್ಕೆ ಹಾರಿದ ಶುಭಾಂಶು ಶುಕ್ಲಾ ; 41 ವರ್ಷಗಳ ನಂತರ ಈ ಸಾಧನೆ ಮಾಡಿದ ಎರಡನೇ ಭಾರತೀಯ

ನವದೆಹಲಿ: ಭಾರತವು ತನ್ನ ಕಾಸ್ಮಿಕ್ ಜಿಗಿತವನ್ನು ಮಾಡಿದೆ. ಭಾರತೀಯ ವಾಯುಪಡೆಯ ಪೈಲಟ್ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ, ಫ್ಲೋರಿಡಾದ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿರುವ ಲಾಂಚ್ ಕಾಂಪ್ಲೆಕ್ಸ್ 39A ನಿಂದ ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿದ ಫಾಲ್ಕನ್ 9 ರಾಕೆಟ್‌ನಲ್ಲಿ ಸ್ಪೇಸ್‌ಎಕ್ಸ್ ಕ್ರೂ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿದ್ದಾರೆ. 1969 ರಲ್ಲಿ ಅಪೊಲೊ 11 ರಲ್ಲಿ ನೀಲ್ ಆರ್ಮ್‌ಸ್ಟ್ರಾಂಗ್ … Continued

ಭಾರತೀಯ ಗಗನಯಾತ್ರಿ ಒಳಗೊಂಡ ಆಕ್ಸಿಯಮ್ -4 ಮಿಷನ್ ಉಡಾವಣೆ ಮುಂದೂಡಿಕೆ

ನವದೆಹಲಿ: ಹವಾಮಾನ ವೈಪರೀತ್ಯದಿಂದಾಗಿ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಅವರನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯುವ ಆಕ್ಸಿಯಮ್ -4 ಮಿಷನ್ ಉಡಾವಣೆಯನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಗಿದೆ. ಟ್ವಿಟರ್‌ನಲ್ಲಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಪೋಸ್ಟ್‌ನಲ್ಲಿ ಈ ವಿಷಯ ತಿಳಿಸಿದೆ. “ಹವಾಮಾನ ವೈಪರೀತ್ಯದಿಂದಾಗಿ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭಾರತೀಯ ಗಗನಯಾತ್ರಿಯನ್ನು ಕಳುಹಿಸುವ ಆಕ್ಸಿಯಮ್ -4 ಮಿಷನ್‌ನ ಉಡಾವಣೆಯನ್ನು … Continued

ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣುತ್ತದೆ? “ಹಿಮಾಲಯ, ಮುಂಬೈ…ಮೀನುಗಾರಿಕೆ…: ವಿವರ ಹಂಚಿಕೊಂಡ ಗಗನಯಾತ್ರಿ ಸುನಿತಾ ವಿಲಿಯಮ್ಸ್​

ವಾಷಿಂಗ್ಟನ್ : ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣುತ್ತದೆ? ಭಾರತೀಯ ಮೂಲದ ಬಾಹ್ಯಾಕಾಶ ಪರಿಶೋಧಕಿ ಸುನೀತಾ ವಿಲಿಯಮ್ಸ್ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ “ನಂಬಲಾಗದಂತಹ” ಅದ್ಭುತ ಹಿಮಾಲಯದ ಮೇಲೆ ಹಾದುಹೋದ ಬಗ್ಗೆ ನೆನಪಿಸಿಕೊಂಡಿದ್ದಾರೆ. ಬಾಹ್ಯಾಕಾಶದಲ್ಲಿ 286 ದಿನಗಳ ವಾಸ್ತವ್ಯದ ನಂತರ ಭಾರತವು ಬಾಹ್ಯಾಕಾಶದಿಂದ ಹೇಗೆ ಕಾಣುತ್ತದೆ ಎಂಬ ಪ್ರಶ್ನೆಗೆ “ಅದ್ಭುತವಾಗಿದೆ, ಅದ್ಭುತವಾಗಿದೆ” ಎಂದು ಅವರು ಉತ್ತರಿಸಿದರು. “ಭಾರತ … Continued

ವೀಡಿಯೊ…| ಸುನಿತಾ ವಿಲಿಯಮ್ಸ್, ಇತರ ಗಗನಯಾತ್ರಿಗಳನ್ನು ಸ್ವಾಗತಿಸಲು ಬಾಹ್ಯಾಕಾಶ ನೌಕೆ ಸುತ್ತಲೂ ಸೇರಿದ ಡಾಲ್ಫಿನ್‌ ಗಳ ಗುಂಪು…!

ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಒಂಬತ್ತು ತಿಂಗಳ ನಂತರ ಭೂಮಿಗೆ ಮರಳಿದ್ದಾರೆ. ಇಬ್ಬರು ಗಗನಯಾತ್ರಿಗಳಾದ ನಾಸಾದ ನಿಕ್ ಹೇಗ್ ಮತ್ತು ರೋಸ್ಕೊಸ್ಮೊಸ್ ಗಗನಯಾತ್ರಿ ಅಲೆಕ್ಸಾಂಡರ್ ಗೊರ್ಬುನೊವ್ ಅವರೊಂದಿಗೆ ಭೂಮಿಗೆ ಬಂದಿಳಿದಿದ್ದಾರೆ. ಸ್ಪೇಸ್‌ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯು ಗಗನಯಾತ್ರಿಗಳನ್ನು ಮರಳಿ ಕರೆತಂದಿತು ಮತ್ತು ಇದು ಅಮೆರಿಕದ ಫ್ಲೋರಿಡಾ ಕರಾವಳಿಯ … Continued

ವೀಡಿಯೊಗಳು…| ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡು 9 ತಿಂಗಳ ನಂತರ ಭೂಮಿಗೆ ಬಂದಿಳಿದ ಸುನೀತಾ ವಿಲಿಯಮ್ಸ್, ವಿಲ್ಮೋರ್

9 ತಿಂಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಸಿಲುಕಿಕೊಂಡಿದ್ದ ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ (Sunita Williams) ಮತ್ತು ಅಮೆರಿಕದ ಬುಚ್‌ ವಿಲ್ಮೋರ್‌ (Butch Wilmore) ಅವರನ್ನು ಅತ್ಯಂತ ಸುರಕ್ಷಿತರವಾಗಿ ಭೂಮಿಗೆ ಕರೆತರಲಾಗಿದೆ. ಸುನೀತಾ ವಿಲಿಯಮ್ಸ್, ಬುಚ್‌ವಿಲ್ಮೋರ್ ಸೇರಿ ನಾಲ್ವರು ಗಗನಯಾತ್ರಿಗಳನ್ನು ಹೊತ್ತಿದ್ದ ಸ್ಪೇಸ್ ಎಕ್ಸ್‌ ಕ್ರೂ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಭೂಮಿಯಿಂದ … Continued

ಭೂಮಿಯತ್ತ ಸುನಿತಾ ವಿಲಿಯಮ್ಸ್ ; ಬಾಹ್ಯಾಕಾಶ ನಿಲ್ದಾಣದಿಂದ ಬೇರ್ಪಟ್ಟ ಕ್ರ್ಯೂ-9 ಬಾಹ್ಯಾಕಾಶ ನೌಕೆ; ವೀಡಿಯೊ ಹಂಚಿಕೊಂಡ ನಾಸಾ

ಬಾಹಾಕಾಶ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಮರಳಿ ಕರೆತರುವ ಬಾಹ್ಯಾಕಾಶ ನೌಕೆಯು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಅನ್‌ಡಾಕ್ ಮಾಡಿದೆ. ಒಂಬತ್ತು ತಿಂಗಳ ಕಾಲ ಬಾಹ್ಯಾಕಾಶದಲ್ಲಿ ಸಿಲುಕಿದ ನಂತರ ಅವರ ವಾಪಸಾತಿ ಪ್ರಯಾಣವನ್ನು ಪ್ರಾರಂಭಿಸಿದೆ. ಮಂಗಳವಾರ 10:35 am (IST) ಕ್ಕೆ ಕ್ರ್ಯೂ-9 ಅನ್ನು ಅನ್‌ಡಾಕ್ ಮಾಡಲಾಗಿದೆ ಎಂದು ನಾಸಾ … Continued

ವೀಡಿಯೊ..| ಇಂದು ಚಂದ್ರನ ಅಮೆರಿಕದ ಬಾಹ್ಯಾಕಾಶ ನೌಕೆ ಲ್ಯಾಂಡಿಂಗ್‌ ; ಅದು ತೆಗೆದ ಚಂದ್ರನ ಮೇಲ್ಮೈನ ಅದ್ಭುತ ವೀಡಿಯೊ ಹಂಚಿಕೊಂಡ ಫೈರ್‌ ಫ್ಲೈ ಏರೋಸ್ಪೇಸ್‌

ಸುದೀರ್ಘ ಪ್ರಯಾಣದ ನಂತರ, ಅಮೆರಿಕದ ಕಂಪನಿಯೊಂದು ಚಂದ್ರನ ಮೇಲೆ ಇಳಿಯಲು ಕೆಲವೇ ಗಂಟೆಗಳ ದೂರದಲ್ಲಿದೆ. ಅದು ಯಶಸ್ವಿಯಾಗಿ ಚಂದ್ರನ ಮೇಲೆ ಲ್ಯಾಂಡ್‌ ಮಾಡುವ ಎರಡನೇ ಖಾಸಗಿ ಲ್ಯಾಂಡರ್ ಆಗಲಿದೆ. ಫೈರ್‌ಫ್ಲೈ ಏರೋಸ್ಪೇಸ್‌ನ ಬ್ಲೂ ಘೋಸ್ಟ್ ಮಿಷನ್ 1 ಭಾನುವಾರ ಅಮೆರಿಕದ ಈಸ್ಟರ್ನ್ ಸಮಯ (0834 GMT) 3:34 ಕ್ಕಿಂತ ಮುಂಚೆಯೇ ಲ್ಯಾಂಡಿಂಗ್ ಮಾಡಲು ಸಮಯ ನಿಗದಿಪಡಿಸಿಕೊಂಡಿದೆ. … Continued

1981ರ ತಂತ್ರಜ್ಞಾನ ಬಳಸಿಕೊಂಡು 1500 ಕೋಟಿ ಮೈಲುಗಳಷ್ಟು ದೂರದಲ್ಲಿರುವ ವಾಯೇಜರ್ 1 ಬಾಹ್ಯಾಕಾಶ ನೌಕೆಗೆ ಜೀವಕೊಟ್ಟ ನಾಸಾ…!

ನಾಸಾ(NASA)ದ 47 ವರ್ಷ ವಯಸ್ಸಿನ ವಾಯೇಜರ್ 1 ಬಾಹ್ಯಾಕಾಶ ನೌಕೆಯು ಇತ್ತೀಚೆಗೆ 1981ರಿಂದಲೂ ಬಳಸದ ರೇಡಿಯೋ ಟ್ರಾನ್ಸ್‌ಮಿಟರ್‌ನ ಸಹಾಯದಿಂದ ಕಳೆದುಕೊಂಡಿದ್ದ ಭೂಮಿಯ ಸಂಪರ್ಕವನ್ನು ಮತ್ತೆ ಸ್ಥಾಪಿಸಿದೆ. ಕ್ಯಾಲಿಫೋರ್ನಿಯಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ (JPL) ನಲ್ಲಿರುವ ನಾಸಾದ (NASA) ಇಂಜಿನಿಯರ್‌ಗಳು ಬಾಹ್ಯಾಕಾಶ ನೌಕೆಯೊಂದಿಗೆ ಕಳೆದುಕೊಂಡಿದ್ದ ಭೂಮಿಯ ಸಂಪರ್ಕವನ್ನು ಅಕ್ಟೋಬರ್ 24 ರಂದು ಮರುಸ್ಥಾಪಿಸಿದ್ದಾರೆ. 1500 ಕೋಟಿ ಮೈಲುಗಳಷ್ಟು … Continued

ಮಂಗಳ ಗ್ರಹದ ಮೇಲ್ಮೈನ 20 ಕಿಮೀ ಕೆಳಗೆ ನೀರಿದೆಯೇ ? ಅಧ್ಯಯನವು ಏನು ಹೇಳುತ್ತದೆ..? ಅದರ ಅರ್ಥವೇನು..?

ಸಿಂಗಾಪುರ: ನಾಸಾದ ಮಾರ್ಸ್ ಇನ್‌ಸೈಟ್ ಲ್ಯಾಂಡರ್‌ ದತ್ತಾಂಶವನ್ನು ಬಳಸಿಕೊಂಡು ಬಿಡುಗಡೆಯಾದ ಅಧ್ಯಯನವು ನಾಲ್ಕನೇ ಗ್ರಹವಾದ ಮಂಗಳನ ಮೇಲ್ಮೈಗಿಂತ ಕೆಳಗಿರುವ ದ್ರವವು ನೀರಿನ ಪುರಾವೆಗಳನ್ನು ತೋರಿಸುತ್ತದೆ ಎಂದು ಹೇಳಿದೆ. 2018 ರಿಂದ ಮಂಗಳ ಗ್ರಹದಲ್ಲಿರುವ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಲ್ಯಾಂಡರ್, ನಾಲ್ಕು ವರ್ಷಗಳಿಂದ ಭೂಕಂಪನ ಡೇಟಾವನ್ನು ಅಳೆಯುತ್ತಿದೆ, ಭೂಕಂಪಗಳು ಹೇಗೆ ನೆಲವನ್ನು ಅಲುಗಾಡಿಸಿದವು ಮತ್ತು ಮೇಲ್ಮೈ … Continued

ಇಂಡೋ-ಅಮೆರಿಕ ಮಿಷನ್‌ನಲ್ಲಿ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಲು ಆಯ್ಕೆಯಾದ ಭಾರತದ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ; ಇವರು ಯಾರು?

ನವದೆಹಲಿ : ಮುಂಬರುವ ಇಂಡೋ-ಅಮೆರಿಕ ಕಾರ್ಯಾಚರಣೆಯಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್) ಹಾರಲು ಶುಕ್ರವಾರ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಆಯ್ಕೆಯಾಗಿದ್ದಾರೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪ್ರಕಟಿಸಿದೆ. ಮಿಷನ್‌ನಲ್ಲಿ ಹಾರಲು ಶುಕ್ಲಾ ಅವರನ್ನು ಪ್ರಧಾನ ಗಗನಯಾತ್ರಿ ಎಂದು ಗೊತ್ತುಪಡಿಸಲಾಗಿದೆ, ಹಾಗೂ ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ನಾಯರ್ ಬ್ಯಾಕಪ್ ಗಗನಯಾತ್ರಿಯಾಗಿರುತ್ತಾರೆ ಎಂದು … Continued