ವೀಡಿಯೊ…| 80 ಜನರಿದ್ದ ಡೆಲ್ಟಾ ಏರ್ಲೈನ್ಸ್ ವಿಮಾನ ಲ್ಯಾಂಡಿಂಗ್‌ ಮಾಡುವಾಗ ಪಲ್ಟಿಯಾದ ಕ್ಷಣದ ವೀಡಿಯೊ ವೈರಲ್‌

76 ಪ್ರಯಾಣಿಕರು ಮತ್ತು ನಾಲ್ಕು ಸಿಬ್ಬಂದಿ ಸೇರಿ 80 ಜನರನ್ನು ಹೊತ್ತ ಡೆಲ್ಟಾ ಏರ್ಲೈನ್ಸ್ ವಿಮಾನವು ಟೊರೊಂಟೊದ ಪಿಯರ್ಸನ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್‌ ಆಗುವಾಗ ಪಲ್ಟಿ ಹೊಡೆಯಿತು. ಅದು ಇಳಿಯಲು ಪ್ರಯತ್ನಿಸುತ್ತಿರುವಾಗ, ವಿಮಾನವು ಪಲ್ಟಿಯಾಗಿದ್ದು, ಅದೃಷ್ವಶಾತ್‌. ಎಲ್ಲಾ ಪ್ರಯಾಣಿಕರು ಬದುಕುಳಿದಿದ್ದಾರೆ. ಆದರೂ 18 ಮಂದಿ ಸಣ್ಣಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ವಿಮಾನವು ಮಿನ್ನಿಯಾಪೋಲಿಸ್‌ನಿಂದ ಹೊರಟಿತು … Continued

ವೀಡಿಯೊ | ಫಿಲಡೆಲ್ಫಿಯಾದಲ್ಲಿ ವಿಮಾನ ಪತನ; ಕನಿಷ್ಠ 6 ಮಂದಿ ಸಾವಿನ ಶಂಕೆ

ಅಮೆರಿಕದ ವಾಷಿಂಗ್ಟನ್ ಡಿ.ಸಿ.ಯಲ್ಲಿ ಪ್ರಯಾಣಿಕರ ಜೆಟ್ ವಿಮಾನ ಮತ್ತು ಸೇನಾ ಹೆಲಿಕಾಪ್ಟರ್ ನಡುವಿನ ಡಿಕ್ಕಿಯಲ್ಲಿ 60 ಕ್ಕೂ ಹೆಚ್ಚು ಜನರು ಸಾವಿಗೀಡಾದ ಘಟನೆ ನಡೆದ ಎರಡು ದಿನಗಳ ನಂತರ, ಮತ್ತೊಂದು ಜೆಟ್ ಶುಕ್ರವಾರ ಫಿಲಡೆಲ್ಫಿಯಾದ ಹೊರ ವಲಯದಲ್ಲಿ ಪತನಗೊಂಡಿದೆ. ವೈದ್ಯಕೀಯ ಸಾರಿಗೆ ಈ ಜೆಟ್ ಟೇಕ್-ಆಫ್ ಆದ ಸುಮಾರು 30 ಸೆಕೆಂಡುಗಳ ನಂತರ ಶಾಪಿಂಗ್ ಮಾಲ್ … Continued

ರಷ್ಯಾಕ್ಕೆ ಹೋಗುತ್ತಿದ್ದ ಅಜರ್‌ ಬೈಜಾನ್ ಏರ್‌ ಲೈನ್ಸ್ ವಿಮಾನ ಪತನ ; 38 ಮಂದಿ ಸಾವು | ವಿಮಾನ ನೆಲಕ್ಕೆ ಅಪ್ಪಳಿಸಿದ ಕ್ಷಣದ ದೃಶ್ಯ ವೀಡಿಯೊದಲ್ಲಿ ಸೆರೆ

ಬುಧವಾರ ಕಝಾಕಿಸ್ತಾನ್‌ನ ಅಕ್ಟೌ ಪ್ರದೇಶದ ಬಳಿ ರಷ್ಯಾಕ್ಕೆ ತೆರಳುತ್ತಿದ್ದ ಅಜರ್‌ಬೈಜಾನಿ ವಿಮಾನ ಪತನಗೊಂಡಿದ್ದು, 38 ಜನರು ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನ ಅಪಘಾತಕ್ಕೀಡಾದ ಭಯಾನಕ ಕ್ಷಣವನ್ನು ಸಾಮಾಜಿಕ ಮಾಧ್ಯಮದಲ್ಲಿನ ದೃಶ್ಯಗಳು ತೋರಿಸಿವೆ. ರಷ್ಯಾದ ಸುದ್ದಿ ಸಂಸ್ಥೆ ಇಂಟರ್‌ಫ್ಯಾಕ್ಸ್ ಪ್ರಕಾರ, ಅಜೆರ್ಬೈಜಾನಿ ಅಧಿಕಾರಿಗಳನ್ನು ಭೇಟಿಯಾದ ನಂತರ ಉಪ ಪ್ರಧಾನಿ ಮಂತ್ರಿ ಕನತ್ ಬೊಜುಂಬಾವ್ ಸಾವಿನ ಸಂಖ್ಯೆಯನ್ನು … Continued

ವೀಡಿಯೊ..| ಗಿರಗಿಟ್ಟಿ ಹೊಡೆಯುತ್ತ ನೆಲಕ್ಕೆ ಅಪ್ಪಳಿಸಿದ ವಿಮಾನ ; ಎಲ್ಲ 62 ಮಂದಿ ಸಾವು

62 ಜನರನ್ನು ಹೊತ್ತೊಯ್ಯುತ್ತಿದ್ದ ಪ್ರಾದೇಶಿಕ ಟರ್ಬೊಪ್ರೊಪ್ ವಿಮಾನವು ಶುಕ್ರವಾರ ಬ್ರೆಜಿಲ್‌ನ ಸಾವೊ ಪಾಲೊ ಬಳಿ ಅಪಘಾತಕ್ಕೀಡಾಗಿದ್ದು, ಅದರಲ್ಲಿದ್ದ ಎಲ್ಲರೂ ಸಾವಿಗೀಡಾಗಿದ್ದಾರೆ ಎಂದು ಅಪಘಾತದ ಸ್ಥಳದ ಬಳಿಯ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ವೀಡಿಯೊವು ಎಟಿಆರ್ ನಿರ್ಮಿತ ವಿಮಾನವು ನಿಯಂತ್ರಣ ತಪ್ಪಿ ಗಿರಕಿ ಹೊಡೆಯುತ್ತಿರುವುದನ್ನು ತೋರಿಸಿದೆ, ಅದು ಮನೆಗಳ ಸಮೀಪವಿರುವ ಮರಗಳ ಸಮೂಹದ ಹಿಂದೆ … Continued

ಜಿಂಬಾಬ್ವೆಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ಭಾರತೀಯ ಗಣಿ ಉದ್ಯಮಿ, ಪುತ್ರ ಸೇರಿ ಆರು ಮಂದಿ ಸಾವು

ಜಿಂಬಾಬ್ವೆ: ಖಾಸಗಿ ವಿಮಾನವೊಂದು ತಾಂತ್ರಿಕ ದೋಷದಿಂದ ಪತನಗೊಂಡು ಭಾರತೀಯ ಗಣಿ ಕಂಪನಿಯ ಮಾಲೀಕ ಹರ್ಪಾಲ್ ರಾಂಧವಾ (Harpal Randhawa) ಹಾಗೂ ಅವರ ಮಗ ಸೇರಿದಂತೆ ಆರು ಮಂದಿ ಮೃತಪಟ್ಟಿರುವ ಘಟನೆ ಜಿಂಬಾಬ್ವೆಯಲ್ಲಿ ನಡೆದಿದೆ. ನೈಋತ್ಯ ಜಿಂಬಾಬ್ವೆಯ ಜ್ವಾಮಹಂಡೆ ಪ್ರದೇಶದ ಬಳಿ ಈ ಘಟನೆ ನಡೆದಿದೆ. ರಿಯೊಜಿಮ್‌ (RioZim) ಕಂಪನಿಯ ಮಾಲೀಕರಾದ ರಾಂಧವಾ ಅವರು ಚಿನ್ನ, ಕಲ್ಲಿದ್ದಲು, … Continued