ವೀಡಿಯೊ..| ಅನಾರೋಗ್ಯ ಪೀಡಿತ ಪತ್ನಿ ನೋಡಿಕೊಳ್ಳಲು ಸ್ವಯಂ ನಿವೃತ್ತಿ ಪಡೆದ ಗಂಡ ; ಆದರೆ ಆತನ ಬೀಳ್ಕೊಡುಗೆ ಸಮಾರಂಭದಲ್ಲೇ ಪ್ರಾಣಬಿಟ್ಟ ಪತ್ನಿ…!

ಸರ್ಕಾರಿ ನೌಕರನ ನಿವೃತ್ತಿಯ ಬೀಳ್ಕೊಡುಗೆ ಸಮಾರಂಭವು ದುರಂತವಾಗಿ ಮಾರ್ಪಟ್ಟ ಘಟನೆ ನಡೆದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿಯ ಸಲುವಾಗಿ ಸ್ವಯಂ ನಿವೃತ್ತಿ ಪಡೆದ ನಂತರ ನೌಕರನಿಗೆ ಏರ್ಪಡಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಹಾಜರಿದ್ದ ಪತ್ನಿ ಅವರ ಕಣ್ಣೆದುರೇ ಸಾವಿಗೀಡಾಗಿದ್ದಾಳೆ…! ರಾಜಸ್ಥಾನದ ಕೋಟಾದಲ್ಲಿ ನಡೆದ ಘಟನೆಯ ಮನಕಲಕುವ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ. ಪತಿಯ ಬೀಳ್ಕೊಡುಗೆ ಸಮಾರಂಭದಲ್ಲಿ ಪತಿ-ಪತ್ನಿಯರಿಬ್ಬರಿಗೂ … Continued

ವೀಡಿಯೊಗಳು…| ಕೌಟುಂಬಿಕ ಕಲಹ : ನೂತನ ಮಹಾರಾಣಾಗೆ ಪ್ರವೇಶ ನಿರಾಕರಿಸಿದ ನಂತರ ಉದಯಪುರ ಅರಮನೆ ಹೊರಗೆ ಘರ್ಷಣೆ, ಕಲ್ಲು ತೂರಾಟ

ಉದಯಪುರ : ರಾಜಸಮಂದ್‌ನ ಬಿಜೆಪಿ ಶಾಸಕ ವಿಶ್ವರಾಜ ಸಿಂಗ್ ಮೇವಾರ್ ಮತ್ತು ಅವರ ಬೆಂಬಲಿಗರಿಗೆ ಅರಮನೆಗೆ ಪ್ರವೇಶ ನಿರಾಕರಿಸಿದ ನಂತರ ಸೋಮವಾರ ರಾತ್ರಿ ರಾಜಸ್ಥಾನದ ಉದಯಪುರದ ಸಿಟಿ ಪ್ಯಾಲೇಸ್‌ನ ಹೊರಗೆ ಘರ್ಷಣೆಗಳು ಮತ್ತು ಕಲ್ಲು ತೂರಾಟಗಳು ನಡೆದವು. ಈ ತಿಂಗಳ ಆರಂಭದಲ್ಲಿ ಅವರ ತಂದೆ ಮಹೇಂದ್ರ ಸಿಂಗ್ ಮೇವಾರ್ ಅವರ ಮರಣದ ನಂತರ ವಿಶ್ವರಾಜ ಸಿಂಗ್ … Continued

ಅಂತ್ಯಕ್ರಿಯೆ ನಡೆಸುವಾಗ ಕಣ್ಣು ಬಿಟ್ಟ ಚಿತೆ ಮೇಲಿಟ್ಟ ಶವ …! ಮೂವರು ವೈದ್ಯರು ಅಮಾನತು..!!

ಜೈಪುರ : ಅಂತ್ಯಕ್ರಿಯೆ ನಡೆಸಲು ಚಿತೆ ಮೇಲೆ ಮಲಗಿಸಿದ್ದ 25 ವರ್ಷದ ಯುವಕನೊಬ್ಬ ಕಣ್ಣು ಬಿಟ್ಟ ಘಟನೆ ರಾಜಸ್ಥಾನದ ಜುಂಜುನು ಜಿಲ್ಲೆಯಲ್ಲಿ ನಡೆದಿದೆ.ಈ ಘಟನೆ ಸಂಬಂಧ ಆಸ್ಪತ್ರೆಯ ಪ್ರಧಾನ ವೈದ್ಯಾಧಿಕಾರಿ ಸೇರಿದಂತೆ ನಾಲ್ವರು ವೈದ್ಯರನ್ನು ಅಮಾನತುಗೊಳಿಸಲಾಗಿದೆ. ಆತ ಎಚ್ಚರಗೊಂಡ ತಕ್ಷಣ ಆಂಬುಲೆನ್ಸ್ ಕರೆಸಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆತನ ಸ್ಥಿತಿ ಸ್ಥಿರವಾಗಿದೆ ಎಂದು … Continued

ವೀಡಿಯೊ..| ಚುನಾವಣೆ : ಕರ್ತವ್ಯ ನಿರತ ಹಿರಿಯ ಅಧಿಕಾರಿಗೆ ಕಪಾಳಮೋಕ್ಷ ಮಾಡಿ ದರ್ಪ ತೋರಿದ ಅಭ್ಯರ್ಥಿ…!

ಜೈಪುರ: ರಾಜಸ್ತಾನದ  ಟೋಂಕ್ ಜಿಲ್ಲೆಯ ಡಿಯೋಲಿ-ಉನಿಯಾರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮತಗಟ್ಟೆಯ ಹೊರಗೆ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಅವರಿಗೆ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದ್ದು, ಸ್ವತಂತ್ರ ಅಭ್ಯರ್ಥಿ ನರೇಶ ಮೀನಾ ಅವರನ್ನು ರಾಜಸ್ಥಾನ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಗ್ರಾಮೀಣ ರಸ್ತೆಯಲ್ಲಿ ಮೆರವಣಿಗೆ ನಡೆಸುತ್ತಿದ್ದಾಗ ರಕ್ಷಣಾ ಕವಚಗಳು ಮತ್ತು ಹೆಲ್ಮೆಟ್‌ಗಳನ್ನು ಧರಿಸಿದ್ದ ಹಿರಿಯ ಪೊಲೀಸ್ ಅಧಿಕಾರಿಗಳು ನಡೆಸಿದ … Continued

ಅಲ್-ಖೈದಾ ಭಯೋತ್ಪಾದನಾ ಜಾಲ ಭೇದಿಸಿದ ಪೊಲೀಸರು; 14 ಮಂದಿ ಬಂಧನ

ನವದೆಹಲಿ : ಭಾರತದಲ್ಲೇ ಪ್ರತ್ಯೇಕ ಮುಸ್ಲಿಂ ರಾಜ್ಯ ಸ್ಥಾಪನೆ ಉದ್ದೇಶ ಹೊಂದಿದ್ದ 14 ಜನರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ ಖೈದಾ ಪ್ರೇರಿತ ಭಯೋತ್ಪಾದನಾ ಘಟಕ ಭೇದಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಗುಪ್ತಚರ ಮಾಹಿತಿ ಪಡೆದ ನಂತರ, ವಿವಿಧ ರಾಜ್ಯಗಳ ಪೊಲೀಸ್ ಪಡೆಗಳೊಂದಿಗೆ ಕಾರ್ಯಾಚರಣೆ ನಡೆಸಲಾಯಿತು. ಈ ಸಂಬಂಧ ಜಾರ್ಖಂಡ್, ರಾಜಸ್ಥಾನ ಮತ್ತು ಉತ್ತರ ಪ್ರದೇಶದ … Continued

ಚುನಾವಣೆ ವೇಳೆ ಮಾಡಿದ್ದ ವಾಗ್ದಾನದಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ರಾಜಸ್ಥಾನದ ಸಚಿವ ಕಿರೋಡಿ ಲಾಲ ಮೀನಾ

ಜೈಪುರ: ಬಿಜೆಪಿ ನಾಯಕ ಕಿರೋಡಿ ಲಾಲ ಮೀನಾ ಅವರು ರಾಜಸ್ಥಾನದ ತಮ್ಮ ಸಚಿವ ರಾಜೀನಾಮೆ ನೀಡಿರುವುದಾಗಿ ಗುರುವಾರ ಹೇಳಿದ್ದಾರೆ. ಬಿಜೆಪಿ ಪಕ್ಷವು ತನ್ನ ಉಸ್ತುವಾರಿಯಲ್ಲಿರುವ ಏಳು ಲೋಕಸಭಾ ಸ್ಥಾನಗಳಲ್ಲಿ ಯಾವುದಾದರು ಒಂದು ಸ್ಥಾನ ಕಳೆದುಕೊಂಡರೆ ರಾಜೀನಾಮೆ ನೀಡುವುದಾಗಿ ಾವರು ಹೇಳಿದ್ದರು. ಅದರಂತೆ ಅವರು ರಾಜೀನಾಮೆ ನೀಡಿದ್ದಾರೆ ಎಂದು ಅವರ ಸಹಾಯಕ ಗುರುವಾರ ತಿಳಿಸಿದ್ದಾರೆ. ಲೋಕಸಭೆ ಚುನಾವಣೆ … Continued

ಸಭೆಗೆ ಆಹ್ವಾನಿಸದೇ ಇರುವುದಕ್ಕೆ ಹನುಮಾನ್ ಬೇನಿವಾಲ್ ತೀವ್ರ ಅಸಮಾಧಾನ : ಇಂಡಿಯಾ ಮೈತ್ರಿಕೂಟದ ಆಂತರಿಕ ಬಿರುಕು ಬಹಿರಂಗ…

ನವದೆಹಲಿ : ಲೋಕಸಭೆ ಚುನಾವಣೆಯಲ್ಲಿ ರಾಜಸ್ಥಾನದ ನಾಗೌರ್ ಕ್ಷೇತ್ರವನ್ನು ಗೆದ್ದ ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷದ (RLP) ನಾಯಕ ಹನುಮಾನ ಬೇನಿವಾಲ್, ದೆಹಲಿಯಲ್ಲಿ ನಡೆದ ಕಾಂಗ್ರೆಸ್‌ ನೇತೃತ್ವದ ವಿಪಕ್ಷಗಳ ಇಂಡಿಯಾ ಮೈತ್ರಿಕೂಟದ ಸಭೆಗೆ ತಮ್ಮನ್ನು ಆಹ್ವಾನಿಸದೇ ಇರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 2024 ರ ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷೆಗಿಂತ ಉತ್ತಮ ಪ್ರದರ್ಶನದ ನಂತರ ಇಂಡಿಯಾ ಮೈತ್ರಿಕೂಟ ತನ್ನ … Continued

ವೀಡಿಯೊ..| ರಾಜಸ್ಥಾನದಲ್ಲಿ ತಾಪಮಾನ ಈಗ ನಿಗಿನಿಗಿ ಕೆಂಡ : ಬಿಕಾನೇರ್‌ ಮರಳಿನಲ್ಲಿ ಹಪ್ಪಳ ಹುರಿದ ಬಿಎಸ್​ಎಫ್​ ಯೋಧ…!

ಉತ್ತರ ಭಾರತದ ಹಲವಾರು ಪ್ರದೇಶಗಳಲ್ಲಿ ಗರಿಷ್ಠ ತಾಪಮಾನವು 47 ಡಿಗ್ರಿ ಸೆಲ್ಸಿಯಸ್ ದಾಟಿ ಶಾಖದ ಅಲೆಗೆ ಕಾರಣವಾಗುತ್ತಿದ್ದು, ದೆಹಲಿ, ಪಂಜಾಬ್, ಉತ್ತರ ಪ್ರದೇಶ, ಹರಿಯಾಣ ಮತ್ತು ರಾಜಸ್ಥಾನದ ಕೆಲವು ಭಾಗಗಳ ವಾಯುವ್ಯ ಬಯಲು ಪ್ರದೇಶಗಳಿಗೆ ಬಿಸಿಗಾಳಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ‘ರೆಡ್ ಅಲರ್ಟ್’ ನೀಡಿದೆ. ಹವಾಮಾನ ಇಲಾಖೆಯು ಮೇ 25 ರವರೆಗೆ ಈ … Continued

3 ವರ್ಷದ ಮಗುವನ್ನು ಕಾರಿನಲ್ಲೇ ಮರೆತು ಮದುವೆಗೆ ಹೋದ ದಂಪತಿ ; ಉಸಿರುಗಟ್ಟಿ ಪುಟ್ಟ ಬಾಲಕಿ ಸಾವು

ಕೋಟ : ತಂದೆ-ತಾಯಿಯ ನಿರ್ಲಕ್ಷಕ್ಕೆ ಮೂರು ವರ್ಷದ ಬಾಲಕಿಯೊಬ್ಬಳು ಕಾರಿನಲ್ಲಿ ಉಸಿರುಗಟ್ಟಿ ಸಾವಿಗೀಡಾದ ಘಟನೆ ರಾಜಸ್ಥಾನದ ಕೋಟದಲ್ಲಿ ನಡೆದಿದೆ. ಆಕೆಯ ಪೋಷಕರು ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದಾಗ ಲಾಕ್ ಮಾಡಿದ ಕಾರಿನಲ್ಲಿ ಮಗು ಉಸಿರುಗಟ್ಟಿ ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಘಟನೆ ಬುಧವಾರ ಸಂಜೆ ಸಂಭವಿಸಿದೆ ಮತ್ತು ಮೃತ ಮಗುವನ್ನು ಗೋರ್ವಿಕಾ ನಗರ ಎಂದು … Continued

ಲೋಕಸಭಾ ಚುನಾವಣೆ: ಈ ಕ್ಷೇತ್ರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗೇ ಮತ ಹಾಕಬೇಡಿ ಎಂದು ಮತದಾರರಿಗೆ ಮನವಿ ಮಾಡುತ್ತಿರುವ ಕಾಂಗ್ರೆಸ್‌…!

ಬನ್ಸ್ವಾರಾ (ರಾಜಸ್ಥಾನ) : ಬುಡಕಟ್ಟು ಜನಾಂಗದ ಪ್ರಾಬಲ್ಯವಿರುವ ರಾಜಸ್ಥಾನದ ಬನ್ಸ್ವಾರಾ-ಡುಂಗರಪುರ ಲೋಕಸಭಾ ಕ್ಷೇತ್ರವು ವಿಲಕ್ಷಣವಾದ ಚುನಾವಣಾ ಕದನಕ್ಕೆ ಸಾಕ್ಷಿಯಾಗಿದ್ದು, ಕಾಂಗ್ರೆಸ್ ಪಕ್ಷವು ತನ್ನ ಅಭ್ಯರ್ಥಿಗೇ ಮತ ನೀಡದಂತೆ ಜನರಲ್ಲಿ ಮನವಿ ಮಾಡುತ್ತಿದೆ…! ಈ ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ಸ್ವಂತ ಅಭ್ಯರ್ಥಿ ಅರವಿಂದ ದಾಮೋರ್ ಅವರನ್ನು ಕಣಕ್ಕಿಳಿಸಿದರೂ ನಾಮಪತ್ರಗಳನ್ನು ಹಿಂತೆಗೆದುಕೊಳ್ಳುವ ಕೊನೆಯ ದಿನಾಂಕದ ಒಂದು ದಿನ ಮೊದಲು … Continued