ಭೀಕರ ರಸ್ತೆ ಅಪಘಾತ : ನಿಂತಿದ್ದ ಟ್ರೈಲರ್‌ ಗೆ ಟೆಂಪೋ ಟ್ರಾವೆಲರ್ ಡಿಕ್ಕಿ ; 15 ಸಾವು

 ಜೈಪುರ/ಫಲೊಡಿ: ರಾಜಸ್ಥಾನದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ 15 ಜನರು ಸಾವನ್ನಪ್ಪಿದ್ದು ಮತ್ತು ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಿಲ್ಲಿಸಿದ್ದ ಟ್ರೈಲರ್‌ಗೆ ಟೆಂಪೋ ಟ್ರಾವೆಲರ್ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ. ರಾಜಧಾನಿ ಜೈಪುರದಿಂದ ಸುಮಾರು 400 ಕಿ.ಮೀ. ದೂರದಲ್ಲಿರುವ ಫಲೊಡಿ ಜಿಲ್ಲೆಯ ಮಟೋಡಾ ಗ್ರಾಮದ ಬಳಿಯ ಭಾರತ ಮಾಲಾ ಹೆದ್ದಾರಿಯಲ್ಲಿ … Continued

ವೀಡಿಯೊಗಳು | ಪುಷ್ಕರ್ ಮೇಳದಲ್ಲಿ ಧೂಳೆಬ್ಬಿಸಿದ ಈ ಕೋಣದ ಬೆಲೆ ₹23 ಕೋಟಿ..! ಇದರ ತೂಕ 1500 ಕಿಲೋ; ಇದರ ಆಹಾರ..

ಪುಷ್ಕರ್: ಹರಿಯಾಣದ ಹೆಮ್ಮೆಯ, ಅತ್ಯಂತ ಅಮೂಲ್ಯವಾದ ‘ಅನ್ಮೋಲ್’ (Anmol) ಎಂಬ ಕೋಣ ಮತ್ತೊಮ್ಮೆ ಅಂತರ್ಜಾಲದಲ್ಲಿ ಸಂಚಲನ ಸೃಷ್ಟಿಸಿದೆ. ಬರೋಬ್ಬರಿ 1,500 ಕಿಲೋಗ್ರಾಂ ತೂಕ ಮತ್ತು ಅಂದಾಜು ₹23 ಕೋಟಿ ಮೌಲ್ಯದ ಈ ಬೃಹತ್ ಎಮ್ಮೆ ಎಲ್ಲಿ ಹೋದರೂ ಎಲ್ಲರ ಗಮನ ಸೆಳೆಯುವುದರಲ್ಲಿ ಸಂಶಯವಿಲ್ಲ. ಇತ್ತೀಚೆಗೆ, ಪ್ರಸಿದ್ಧ ಪುಷ್ಕರ್ ಮೇಳಕ್ಕೆ ಅನ್ಮೋಲ್ ಭವ್ಯವಾಗಿ ಪ್ರವೇಶಿಸುತ್ತಿರುವ ವೀಡಿಯೊ ಸಾಮಾಜಿಕ … Continued

ಬೆಂಕಿ ಹೊತ್ತಿಕೊಂಡು ಉರಿದ ಬಸ್‌ : 19 ಜನರು ಸಜೀವ ದಹನ

ಜೈಪುರ : ರಾಜಸ್ಥಾನದ ಜೈಸಲ್ಮೇರ್‌ನಿಂದ ಜೋಧಪುರಕ್ಕೆ ಪ್ರಯಾಣಿಸುತ್ತಿದ್ದ ಖಾಸಗಿ ಬಸ್ಸಿನಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿದ ಭೀಕರ ದುರಂತದಲ್ಲಿ 19 ಜನರು ಸಜೀವ ದಹನವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಒಟ್ಟು 57 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಬಸ್, ಮಧ್ಯಾಹ್ನ ಸುಮಾರು 3 ಗಂಟೆಗೆ ಜೈಸಲ್ಮೇರ್‌ನಿಂದ ಹೊರಟಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಸ್ ಜೈಸಲ್ಮೇರ್-ಜೋಧಪುರ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ, … Continued

ವೀಡಿಯೊ…| ಅಸಾಮಾನ್ಯ ಧೈರ್ಯ : ಮನೆಗೆ ನುಗ್ಗಿದ ಚಿರತೆ ಕಾಲಿಗೆ ಹಗ್ಗ ಕಟ್ಟಿ ಬಾಗಿಲ ಹೊರಗೆ ಕೂಡ್ರಿಸಿದ ಮಹಿಳೆ-ವೀಕ್ಷಿಸಿ

ಾಪರೂಪಕ್ಕಾದರೂ ಯಾರೂ ಕಾಡು ಚಿರತೆಯನ್ನು  ಎದುರಿಸುವುದಿಲ್ಲ. ಒಂದು ವೇಳೆ ಅದು ಎದುರಾದರೂ ಅದನ್ನು ಒಂಟಿಯಾಗಿ ಕಟ್ಟಿಹಾಕುವುದು ಅಷ್ಟೇನೂ ಸುಲಭವಲ್ಲ. ಆದರೆ, ರಾಜಸ್ಥಾನದ ಉದಯಪುರದ ಧೈರ್ಯಶಾಲಿ ಮಹಿಳೆಯೊಬ್ಬರು ಮನೆ ನುಗ್ಗಿದ ಚಿರತೆಗೆ ಹೆದರದೆ ಅದನ್ನು ಮನೆಯ ಬಾಗಿಲಲ್ಲೇ ಹಗ್ಗದಿಂದ ಕಟ್ಟಿ ಹಾಕಿದ ಅನಿರೀಕ್ಷಿತ ಘಟನೆ ನಡೆದ ಬಗ್ಗೆ ವರದಿಯಾಗಿದೆ. ಚಿರತೆ ಮನೆಗೆ ನುಗ್ಗಿದ ನಂತರ ಮನೆಯಲ್ಲಿ ಕೋಲಾಹಲ … Continued

ಹೈ ಡ್ರಾಮಾ..: ಪೊಲೀಸ್ ಜೀಪ್‌ ಮೇಲೆ ಹತ್ತಿ ಯುವಕ, ಅಪ್ರಾಪ್ತ ಬಾಲಕಿ ಗಲಾಟೆ

ರಾಜಸ್ಥಾನದ ಕೋಟಾದಲ್ಲಿ ಅಪ್ರಾಪ್ತ ಬಾಲಕಿ ಮತ್ತು ಯುವಕ ಪೊಲೀಸ್ ಜೀಪ್ ಹತ್ತಿ ಗಲಾಟೆ ಮಾಡಿದ ನಾಟಕೀಯ ದೃಶ್ಯಗಳು ವೈರಲ್‌ ಆಗಿವೆ. ಸೆಪ್ಟೆಂಬರ್ 19 ರಂದು ಕೋಟಾದ ರಾಂಪುರ ಪ್ರದೇಶದಲ್ಲಿ ಓಡಿಹೋಗಲು ಯತ್ನಿಸಿದ ಇಬ್ಬರನ್ನು ಕರೆತರಲು ಪ್ರಯತ್ನಿಸಿದಾಗ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. 22 ವರ್ಷದ ಯುವಕ ಕುಡಿದ ಅಮಲಿನಲ್ಲಿದ್ದ ಎಂದು ಹೇಳಲಾಗಿದೆ. 17 ವರ್ಷದ … Continued

3ನೇ ಮಹಡಿಯಿಂದ ಬಿದ್ದರೂ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾದ ವ್ಯಕ್ತಿ ; ವೀಡಿಯೊ ವೈರಲ್‌

ಜೋಧ್ಪುರ : ಮೂರನೇ ಮಹಡಿಯಿಂದ ಬಿದ್ದರೂ 25 ವರ್ಷದ ಒಬ್ಬ ಯುವ ವ್ಯಾಪಾರಿಯೊಬ್ಬರು ಪವಾಡಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ರಾಜಸ್ತಾನದ ಜೋಧ್ಪುರದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಈ ಯುವಕನ ಕಾಲು ಮೂಳೆ ಮುರಿದಿದೆ ಎಂದು ಹೇಳಲಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಘಟನೆ ಕೆಲದಿನಗಳ … Continued

ವೀಡಿಯೊಗಳು…| 60 ಅಡಿ ಎತ್ತರದ ನೀರಿನ ಟ್ಯಾಂಕ್ ಹತ್ತಿದ ಬೃಹತ್‌ ಗೂಳಿ ; ಇದನ್ನು ಕೆಳಗಿಳಿಸಿದ್ದು ಹೇಗೆ ಗೊತ್ತಾ..?

ಅಜ್ಮೀರ್ (ರಾಜಸ್ಥಾನ) : 60 ಅಡಿ ಎತ್ತರದ ನೀರಿನ ಟ್ಯಾಂಕ್ ಮೇಲೆ ಹತ್ತಿದ್ದ ಗೂಳಿಯನ್ನು ದೀರ್ಘ ಕಾರ್ಯಾಚರಣೆಯ ನಂತರ ಕ್ರೇನ್ ಬಳಸಿ ಕೆಳಗೆ ಇಳಿಸಿದ ಘಟನೆ ರಾಜಸ್ಥಾನದ ಅಜ್ಮೀರ್‌ನಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಎತ್ತು ಎತ್ತರದ ಟ್ಯಾಂಕ್ ಮೇಲೆ ನಿಂತಿರುವ ವೀಡಿಯೊ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ನೀರಿನ ಟ್ಯಾಂಕ್‌ನ ಮೆಟ್ಟಿಲುಗಳ ಮೇಲೆ ಕಪ್ಪು ಬಣ್ಣದ ಎತ್ತು … Continued

ತನ್ನ ಮದುವೆಯಾಗುವಂತೆ ಪ್ರಿಯಕರನ ಮನವೊಲಿಸಲು 600 ಕಿಮೀ ಕಾರು ಚಲಾಯಿಸಿದ ಮಹಿಳೆ, ಆದ್ರೆ ಕಾರಿನಲ್ಲೇ ಶವವಾಗಿ ಪತ್ತೆ ; ನಡೆದಿದ್ದೇನು..?

ಬಾರ್ಮರ್ (ರಾಜಸ್ಥಾನ): ತನ್ನ ಪ್ರಿಯಕರನನ್ನು ಭೇಟಿಯಾಗಲು 600 ಕಿ.ಮೀ. ಕಾರು ಚಲಾಯಿಸಿಕೊಂಡ ಹೋಗಿದ್ದ 37 ವರ್ಷದ ಮಹಿಳೆಯೊಬ್ಬರುಮರುದಿನ ತನ್ನ ಕಾರಿನಲ್ಲಿ ಶವವಾಗಿ ಪತ್ತೆಯಾದ ಘಟನೆ ವರದಿಯಾಗಿದೆ. ಕಬ್ಬಿಣದ ರಾಡ್‌ನಿಂದ ಕೊಲೆ ಮಾಡಿದ ಆರೋಪದ ಮೇಲೆ ಆಕೆಯ ಪ್ರಿಯಕರ, ಶಾಲಾ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನದ ಜುನ್ಜುನುವಿನ ಅಂಗನವಾಡಿ ಮೇಲ್ವಿಚಾರಕಿ ಮುಖೇಶಕುಮಾರಿ ಸುಮಾರು ಒಂದು ದಶಕದ ಹಿಂದೆ … Continued

ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುತ್ತಿರುವ ‘ಎಜುಕೇಟ್ ಗರ್ಲ್ಸ್’ ಎನ್‌ ಜಿಒಗೆ 2025ನೇ ಸಾಲಿನ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ

ನವದೆಹಲಿ: ಶಾಲೆಯಿಂದ ಹೊರಗುಳಿದಿರುವ ಹಳ್ಳಿಗಾಡಿನ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುತ್ತಿರುವ ಭಾರತದ ‘ಎಜುಕೇಟ್ ಗರ್ಲ್ಸ್’ ಎಂದು ವ್ಯಾಪಕವಾಗಿ ಕರೆಯಲ್ಪಡುವ ಭಾರತದ ಲಾಭರಹಿತ ಸಂಸ್ಥೆಯಾದ ಫೌಂಡೇಶನ್ ಟು ಎಜುಕೇಟ್ ಗರ್ಲ್ಸ್ ಗ್ಲೋಬಲಿ ಸಂಸ್ಥೆಯು 2025ನೇ ಸಾಲಿನ ಪ್ರತಿಷ್ಠಿತ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಆಯ್ಕೆಯಾಗಿದೆ. ಇದರೊಂದಿಗೆ ಪ್ರತಿಷ್ಠಿತ ಗೌರವ ಪಡೆದ ಭಾರತದ ಮೊದಲ ಸಂಸ್ಥೆ ಎಂಬ ಗೌರವಕ್ಕೆ ಪಾತ್ರವಾಗಿದೆ. ರಾಮೋನ್‌ … Continued

ಆಧುನಿಕ ಗಾಂಧಾರಿ…: 55ನೇ ವರ್ಷದಲ್ಲಿ 17ನೇ ಮಗುವಿಗೆ ಜನ್ಮ ನೀಡಿದ ರಾಜಸ್ಥಾನದ ಮಹಿಳೆ…!

ಜೈಪುರ: ಅಪರೂಪದ ಹಾಗೂ ಅಸಮಾಮಾನ್ಯ ಘಟನೆಯೊಂದರಲ್ಲಿ, ಕವರರಾಮ ಕಲ್ಬೇಲಿಯಾ ಅವರ ಪತ್ನಿ 55 ವರ್ಷದ ರೇಖಾ ಕಲ್ಬೇಲಿಯಾ ಅವರು ಸಮುದಾಯ ಆರೋಗ್ಯ ಕೇಂದ್ರವೊಂದರಲ್ಲಿ ತಮ್ಮ 17 ನೇ ಮಗುವಿಗೆ ಜನ್ಮ ನೀಡಿದ್ದಾರೆ…! ರಾಜಸ್ಥಾನದ ಉದಯಪುರ ಜಿಲ್ಲೆಯ ಜಾಡೋಲ್ ಬ್ಲಾಕ್‌ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಮ್ಮ 17 ನೇ ಮಗುವಿಗೆ ಜನ್ಮ ನೀಡಿರುವ ಅವರು, ಈಗ ದೇಶಾದ್ಯಂತ … Continued