ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗೆ ದಿನಾಂಕಗಳ ಘೋಷಣೆ

ನವದೆಹಲಿ: ಛತ್ತೀಸ್‌ಗಢ, ರಾಜಸ್ಥಾನ, ಮಧ್ಯಪ್ರದೇಶ, ತೆಲಂಗಾಣ ಮತ್ತು ಮಿಜೋರಾಂನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗಳ ಚುನಾವಣಾ ದಿನಾಂಕವನ್ನು ಭಾರತೀಯ ಚುನಾವಣಾ ಆಯೋಗ (ಇಸಿಐ) ಸೋಮವಾರ ಪ್ರಕಟಿಸಿದೆ. ಈ ಐದು ರಾಜ್ಯಗಳ ಚುನಾವಣೆಗಳು ನವೆಂಬರ್ 7ರಿಂದ ನಡೆಯಲಿದ್ದು, ಮತಗಳ ಎಣಿಕೆ ಡಿಸೆಂಬರ್ 3, 2023 ರಂದು ನಡೆಯಲಿದೆ. ಚುನಾವಣಾ ಆಯೋಗ ಬಿಡುಗಡೆ ಮಾಡಿದ ವೇಳಾಪಟ್ಟಿಯ ಪ್ರಕಾರ, ಸುಗಮ ಮತ್ತು … Continued

ರಾಜಸ್ಥಾನದಲ್ಲಿ 17,000 ಶತಾಯುಷಿ ಮತದಾರರು…! ಪುರುಷರಿಗೆ ಹೋಲಿಸಿದರೆ ಮಹಿಳಾ ಶತಾಯುಷಿಗಳ ಸಂಖ್ಯೆ ನಾಲ್ಕು ಪಟ್ಟು ಹೆಚ್ಚು..!!

ಜೈಪುರ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜಸ್ಥಾನವು ಇದೇ ಮೊದಲ ಬಾರಿಗೆ ಮತದಾನ ಮಾಡುವ 22 ಲಕ್ಷ ಹೊಸ ಮಾತದಾರರನ್ನು ಹೊಂದಿದೆ ಮತ್ತು ಅದೇ ಸಮಯದಲ್ಲಿ 100 ವರ್ಷಕ್ಕಿಂತ ಮೇಲ್ಪಟ್ಟ 17,241 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ವಿಧಾನಸಭಾ ಚುನಾವಣೆ-2023ರ ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗ ಅಂತಿಮಗೊಳಿಸಿದೆ. 2018ರ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ ಈ ಬಾರಿ 48,91,545 … Continued

ರಾಜಸ್ಥಾನ ವಿಧಾನಸಭೆ ಚುನಾವಣೆ : ಇಟಿಜಿ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ತೀವ್ರ ಹಣಾಹಣಿಯಲ್ಲಿ ಕಾಂಗ್ರೆಸ್‌ಗಿಂತ ಬಿಜೆಪಿ ಸ್ವಲ್ಪ ಮುಂದೆ

ರಾಜಸ್ಥಾನದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವಿನ ಜಿದ್ದಾಜಿದ್ದಿ ಸ್ಪರ್ಧೆಯಲ್ಲಿ ಪ್ರಸ್ತುತ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ನೇತೃತ್ವದ ಸರ್ಕಾರವು ಹಿನ್ನಡೆ ಎದುರಿಸಬಹುದು, ಇದೇ ವೇಳೆ ಭಾರತೀಯ ಜನತಾ ಪಕ್ಷವು (ಬಿಜೆಪಿ) ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆಯಿದೆ ಎಂದು ಇಟಿಜಿ ಚುನಾವಣಾ ಪೂರ್ವ ಸಮೀಕ್ಷೆ ಭವಿಷ್ಯ ನುಡಿದಿದೆ. ರಾಜ್ಯದಲ್ಲಿ ಸರ್ಕಾರ ರಚನೆಗೆ ಸರಳ … Continued

ರಾಜಸ್ಥಾನದಲ್ಲಿ ಜನಿಸಿದ 26 ಬೆರಳುಗಳುಳ್ಳ ಅಪರೂಪದ ಹೆಣ್ಣು ಮಗು : ದೇವತೆಯ ಅವತಾರ ಎಂದ ಕುಟುಂಬ

ಕಮಾನ್ (ರಾಜಸ್ಥಾನ): ರಾಜಸ್ಥಾನದ ಕಮಾನ್ ಪಟ್ಟಣದಲ್ಲಿ 26 ಬೆರಳುಗಳುಳ್ಳ ಹೆಣ್ಣು ಮಗು ಜನಿಸಿದೆ. ಆಕೆಯ ಕುಟುಂಬವು ಅವಳನ್ನು “ದೇವತೆಯ ಅವತಾರ” ಎಂದು ಕರೆದಿದೆ. ಅವಳ ಪ್ರತಿ ಕೈಗೆ ಏಳು ಬೆರಳುಗಳು ಮತ್ತು ಪ್ರತಿ ಕಾಲಿನಲ್ಲಿ ಆರು ಬೆರಳುಗಳಿವೆ. ಈ ಶಿಶುವನ್ನು ಆಕೆಯ ಕುಟುಂಬದವರು ಅವಳನ್ನು ದೇವಿಯ ಅವತಾರವೆಂದು ಪರಿಗಣಿಸಿದ್ದಾರೆ. ಮಗುವನ್ನು ನೋಡಲು ಜನರು ತಂಡೋಪ ತಂಡೋಪವಾಗಿ … Continued

2 ಬಿಜೆಪಿ ಚುನಾವಣಾ ಸಮಿತಿಗಳಲ್ಲಿ ವಸುಂಧರಾ ರಾಜೆ, ಮೂವರು ಇತರ ಪ್ರಮುಖ ನಾಯಕರಿಗೆ ಸಿಗದ ಸ್ಥಾನ

ಜೈಪುರ: ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನಕ್ಕೆ ಬಿಜೆಪಿಯು ಗುರುವಾರ ಎರಡು ಪ್ರಮುಖ ಚುನಾವಣಾ ಸಮಿತಿಗಳನ್ನು ಪ್ರಕಟಿಸಿದ್ದು, ಈ ಎರಡೂ ಸಮಿತಿಗಳಲ್ಲೂ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರ ಹೆಸರಿಲ್ಲ. ಅವರಲ್ಲದೆ, ಮಾಜಿ ರಾಜ್ಯಾಧ್ಯಕ್ಷ ಮತ್ತು ವಿರೋಧ ಪಕ್ಷದ ಉಪನಾಯಕ ಸತೀಶ್ ಪೂನಿಯಾ, ವಿರೋಧ ಪಕ್ಷದ ನಾಯಕ ರಾಜೇಂದ್ರ ರಾಥೋಡ್ ಮತ್ತು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ … Continued

ಕಾಂಗ್ರೆಸ್ ಶಾಸಕ ನನಗೆ ಬೂಟು ನೆಕ್ಕುವಂತೆ ಮಾಡಿದ, ಪೋಲೀಸ್ ಅಧಿಕಾರಿ ನನ್ನ ಮೇಲೆ ಮೂತ್ರ ವಿಸರ್ಜಸಿದ: ದಲಿತ ವ್ಯಕ್ತಿಯಿಂದ ದೂರು ದಾಖಲು

ಜೈಪುರ: ಜೈಪುರ ಪೊಲೀಸರು ದಲಿತ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ, ಮೂತ್ರ ವಿಸರ್ಜನೆ ಮತ್ತು ಶಾಸಕರ ಪಾದರಕ್ಷೆ ನೆಕ್ಕುವಂತೆ ಮಾಡಿದ ಆರೋಪದ ಮೇಲೆ ಕಾಂಗ್ರೆಸ್ ಶಾಸಕ ಗೋಪಾಲ ಮೀನಾ ಮತ್ತು ಹಿರಿಯ ಪೊಲೀಸ್ ಅಧಿಕಾರಿ ವಿರುದ್ಧ ದೂರು ದಾಖಲಿಸಿದ್ದಾರೆ. ಘಟನೆ ಜೂನ್ 30 ರಂದು ಸಂಭವಿಸಿದೆ, ಆದರೆ ಸಂತ್ರಸ್ತ ‘ಭಯ’ದಿಂದ ಜುಲೈ 27 ರಂದು ದೂರು ದಾಖಲಿಸಿದ್ದಾರೆ. … Continued

ಟೊಮೆಟೊ ತುಂಬಿಕೊಂಡು ಕೋಲಾರದಿಂದ ರಾಜಸ್ಥಾನಕ್ಕೆ ಹೊರಟಿದ್ದ ಲಾರಿ ನಾಪತ್ತೆ

ಕೋಲಾರ : ಇಡೀ ದೇಶದಲ್ಲಿ ಟೊಮೆಟೊಗೆ ಬಂಗಾರದ ಬೆಲೆ ಬಂದ ಬೆನ್ನಿಗೇ ಈಗ ಟೊಮೆಟೊ ಕಳ್ಳತನ ಜಾಸ್ತಿಯಾಗಿದೆ. ಈಗ ಕೋಲಾರದಿಂದ ರಾಜಸ್ಥಾನಕ್ಕೆ 21 ಲಕ್ಷ ರೂ. ಮೌಲ್ಯದ ಟೊಮೆಟೊ ಲೋಡ್‌ ಮಾಡಿಕೊಂಡು ಹೊರಟಿದ್ದ ಲಾರಿ ಮಾರ್ಗ ಮಧ್ಯದಲ್ಲಿಯೇ ನಾಪತ್ತೆಯಾಗಿದೆ ಎಂದು ವರದಿಯಾಗಿದೆ. ಈ ಕುರಿತು ಪೊಲೀಸ್‌ ದೂರು ದಾಖಲಾಗಿದೆ. ಕೋಲಾರ ಮಾರುಕಟ್ಟೆಯಿಂದ ರಾಜಸ್ಥಾನ ರಾಜ್ಯದ ಜೈಪುರ … Continued

ಪೊಲೀಸರ ಕಣ್ಣಿಗೆ ಖಾರದ ಪುಡಿ ಎರಚಿ ಕಸ್ಟಡಿಯಲ್ಲಿದ್ದ ಗ್ಯಾಂಗ್‌ಸ್ಟರಗೆ ಗುಂಡಿಕ್ಕಿ ಹತ್ಯೆ ಮಾಡಿದ ದುಷ್ಕರ್ಮಿಗಳು

ಜೈಪುರ: ರಾಜಸ್ಥಾನದ ಭರತಪುರದಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದ ಕೊಲೆ ಪ್ರಕರಣದ ಆರೋಪಿ ಗ್ಯಾಂಗ್‌ಸ್ಟರ್ ಕುಲದೀಪ್ ಜಘೀನಾ ಎಂಬಾತನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಆತನನ್ನು ನ್ಯಾಯಾಲಯಕ್ಕೆ ಕರೆದೊಯ್ಯುತ್ತಿದ್ದಾಗ ದುಷ್ಕರ್ಮಿಗಳು ಪೊಲೀಸರ ಕಣ್ಣಿಗೆ ಖಾರದ ಪುಡಿ ಎರಚಿ ದರೋಡೆಕೋರನನ್ನು ಗುಂಡಿಕ್ಕಿ ಕೊಂದಿದ್ದಾರೆ. ಪೊಲೀಸರು ಗ್ಯಾಂಗ್‌ಸ್ಟರ್ ಕುಲದೀಪ್ ಜಘೀನಾನನ್ನು ಜೈಪುರ ಜೈಲಿನಿಂದ ಭರತಪುರ ನ್ಯಾಯಾಲಯಕ್ಕೆ ಕರೆದೊಯ್ಯುತ್ತಿದ್ದಾಗ ಈ ಗುಂಡಿನ ದಾಳಿ ನಡೆದಿದೆ. … Continued

ಬ್ಯಾಂಕ್‌ ದರೋಡೆಗೆ ಬಂದ ಮಾರಕಾಸ್ತ್ರ ಹಿಡಿದ ದರೋಡೆಕೋರನ ವಿರುದ್ಧ ಇಕ್ಕಳ ಹಿಡಿದು ಧೈರ್ಯದಿಂದ ಹೋರಾಡಿದ ಮಹಿಳಾ ಬ್ಯಾಂಕ್ ಮ್ಯಾನೇಜರ್ | ವೀಕ್ಷಿಸಿ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವೀಡಿಯೊವೊಂದು ಮಹಿಳಾ ಉದ್ಯೋಗಿಯೊಬ್ಬರು ಬ್ಯಾಂಕ್ ದರೋಡೆಯನ್ನು ಎದುರಿಸುತ್ತಿರುವುದನ್ನು ತೋರಿಸುತ್ತದೆ. ಬ್ಯಾಂಕಿನಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ಸೆರೆಹಿಡಿಯಲಾದ ಕ್ಲಿಪ್, ಬ್ಯಾಂಕ್ ಮ್ಯಾನೇಜರ್ ಇಕ್ಕಳವನ್ನು  ಹಿಡಿದುಕೊಂಡು ಚಾಕು ಹಿಡಿದ ದರೋಡೆಕೋರನನ್ನು ಎದುರಿಸಿದ್ದಾರೆ. ಶನಿವಾರ ರಾಜಸ್ಥಾನದ ಗಂಗಾನಗರದಲ್ಲಿ ಮರುದಾರ ಗ್ರಾಮೀಣ ಬ್ಯಾಂಕ್‌ನಲ್ಲಿ ಈ ಘಟನೆ ನಡೆದಿದ್ದು, ಧೈರ್ಯದಿಂದ ದರೋಡೆಕೋರನನ್ನು ಎದುರಿಸಿದ ಶಾಖೆಯ ವ್ಯವಸ್ಥಾಪಕರನ್ನು ಪೂನಂ ಗುಪ್ತಾ … Continued

ಮುಂಬೈನಲ್ಲಿ ಹಣ ಉಳಿಯಲ್ಲ ಎಂಬ ಹೇಳಿಕೆಗೆ ಕ್ಷಮೆಯಾಚಿಸಿದ ಮಹಾರಾಷ್ಟ್ರ ರಾಜ್ಯಪಾಲರು

ಮುಂಬೈ: ಮಹಾರಾಷ್ಟ್ರದ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ಈ ವಾರದ ಆರಂಭದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನೀಡಿದ ಹೇಳಿಕೆಗೆ ಸೋಮವಾರ ಕ್ಷಮೆಯಾಚಿಸಿದ್ದಾರೆ. ಅವರ ಹೇಳಿಕೆ ರಾಜ್ಯದಲ್ಲಿ ರಾಜಕೀಯ ಗದ್ದಲಕ್ಕೆ ಕಾರಣವಾಗಿತ್ತು. ಜುಲೈ 29 ರಂದು ನಡೆದ ಸಾರ್ವಜನಿಕ ಸಮಾರಂಭದಲ್ಲಿ ಮುಂಬೈನ ಅಭಿವೃದ್ಧಿಗೆ ಕೆಲವು ಸಮುದಾಯಗಳ ಕೊಡುಗೆಯನ್ನು ಶ್ಲಾಘಿಸುವ ಭರದಲ್ಲಿ ನಾನು ತಪ್ಪು ಮಾತಾಡಿದೆ. ಮಹಾರಾಷ್ಟ್ರ ಮಾತ್ರವಲ್ಲ, … Continued