ವೀಡಿಯೊ…| ವಿಶ್ವಶಾಂತಿಗಾಗಿ ತಮಿಳುನಾಡಿನ ದೇವಸ್ಥಾನದಲ್ಲಿ ವಿಶೇಷ ಯಾಗ ಮಾಡಿದ ಜಪಾನಿಯರು

ಚೆನ್ನೈ : ಜಪಾನಿಯರು ವಿಶ್ವಶಾಂತಿಗಾಗಿ ತಮಿಳುನಾಡಿನ ತಿರುವಣೈಕೋಲಿ ಅರುಲ್ಮಿಗು ಜಂಬುಕೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಜಪಾನಿನಿಂದ ಆಗಮಿಸಿದ ಸುಮಾರು 120 ಮಂದಿ ವಿಶ್ವ ಶಾಂತಿಗಾಗಿ ಅರುಲ್ಮಿಗು ಜಂಬುಕೇಶ್ವರ ದೇವಸ್ಥಾನದಲ್ಲಿ ವಿಶೇಷ ಯಾಗ ಮಾಡಿದ್ದಾರೆ. ಸಯೋಕಾ ಕಿಮುರಾ ಎಂಬವರು ಮಾತನಾಡಿ, ವಿಶ್ವಶಾಂತಿಗಾಗಿ ನಾವು ಜಪಾನಿನಿಂದ ಬಂದ ಸುಮಾರು 120 ಮಂದಿ ಅರುಲ್ಮಿಗು ಜಂಬುಕೇಶ್ವರ ದೇವಸ್ಥಾನದಲ್ಲಿ ವಿಶೇಷ … Continued

ಸ್ಟಾಲಿನ್ ಜೊತೆ ಬೆಳಗಿನ ವಾಕಿಂಗ್‌ ನಂತರ ಎನ್‌ ಡಿಎ ಜೊತೆ ಮೈತ್ರಿ ಕೊನೆಗೊಳಿಸಿದ ತಮಿಳುನಾಡು ಮಾಜಿ ಸಿಎಂ ಪನ್ನೀರಸೆಲ್ವಂ

ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಮತ್ತು ಎಐಎಡಿಎಂಕೆಯಿಂದ ಹೊರಹಾಕಲ್ಪಟ್ಟ ನಾಯಕ ಓ ಪನ್ನೀರಸೆಲ್ವಂ (ಒಪಿಎಸ್) ಅವರು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಜೊತೆಗಿನ ಸಂಬಂಧ ಕಡಿದುಕೊಳ್ಳುವ ತಮ್ಮ ಬಣದ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ಬೆಳಗಿನ ವಾಕಿಂಗ್‌ ಸಮಯದಲ್ಲಿ ಭೇಟಿಯಾದ ಸ್ವಲ್ಪ ಸಮಯದ ನಂತರ ಅವರಿಂದ ಈ ನಿರ್ಧಾರ ಹೊರಬಿದ್ದಿದೆ. … Continued

ಪರಾರಿಯಾಗುತ್ತಿದ್ದ ಕೊಲೆ ಆರೋಪಿ ಹಿಡಿಯಲು ಕಾರಿನ ಬಾಗಿಲಿಗೆ ನೇತಾಡಿ ತಡೆಯಲು ಯತ್ನಿಸಿದ ಪೊಲೀಸ್‌ ಅಧಿಕಾರಿ; ವೀಡಿಯೊ ವೈರಲ್‌

ತಮಿಳುನಾಡಿನ ತಿರುವಲ್ಲೂರು ಜಿಲ್ಲೆಯ ತಿರುಪತಿ ಹೆದ್ದಾರಿಯಲ್ಲಿ ಪೊಲೀಸರಿಗೆ ಬೇಕಾಗಿದ್ದ ವ್ಯಕ್ತಿಯನ್ನು ಬಂಧಿಸಲು ಪೊಲೀಸ್‌ ಅಧಿಕಾರಿಯೊಬ್ಬರು ಚಲಿಸುತ್ತಿದ್ದ ಕಾರಿನ ಬಾಗಿಲೆಗೆ ಜೋತುಬಿದ್ದು ಆತನನ್ನು ಹಿಡಿಯಲು ಪ್ರಯತ್ನಿಸುತ್ತಿರುವ ಸಾಹಸದ ವೀಡಿಯೊ ವೈರಲ್‌ ಆಗಿದೆ. ವ್ಯಕ್ತಿಯೊಬ್ಬರು ಈ ವೀಡಿಯೊ ಮಾಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಪೊಲೀಸರು ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲವಾದರೂ, ಆರೋಪಿ ವ್ಯಕ್ತಿ ಅಲಗುರಾಜ ಎಂಬಾತ … Continued

ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿ ನೈನಾರ್ ನಾಗೇಂದ್ರನ್ ಆಯ್ಕೆ

ಚೆನ್ನೈ ‌: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರ ಅವಧಿ ಮುಗಿದ ಹಿನ್ನೆಲೆಯಲ್ಲಿ ಆ ಸ್ಥಾನಕ್ಕೆ ಬಿಜೆಪಿಯ ತಿರುನಲ್ವೇಲಿ ಶಾಸಕ ನೈನಾರ್ ನಾಗೇಂದ್ರನ್ ಅವರನ್ನು ಆಯ್ಕೆ ಮಾಡಲಾಗಿದೆ. ನೈನಾರ್ ನಾಗೇಂದ್ರನ್ ಅವರನ್ನು ತಮಿಳುನಾಡು ಬಿಜೆಪಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಈ ಹುದ್ದೆಗೆ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವರನ್ನು ಅವಿರೋಧವಾಗಿ ಆಯ್ಕೆ … Continued

ಮಸೂದೆಗಳನ್ನು ತಡೆಹಿಡಿಯಲು ರಾಜ್ಯಪಾಲರಿಗೆ ವಿಟೋ ಅಧಿಕಾರವಿಲ್ಲ : ತಮಿಳುನಾಡು ರಾಜ್ಯಪಾಲರಿಗೆ ಸುಪ್ರೀಂ ಕೋರ್ಟ್‌ ತರಾಟೆ

ಬೆಂಗಳೂರು : ರಾಜ್ಯ ಶಾಸಕಾಂಗ ಕಳುಹಿಸುವ ಮಸೂದೆಗಳನ್ನು ತಡೆಹಿಡಿದು ಕೂಡ್ರಲು ಇರುವುದಕ್ಕೆ ರಾಜ್ಯಪಾಲರಿಗೆ ಯಾವುದೇ ರೀತಿಯ ವಿಟೋ ಅಧಿಕಾರವಿಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ತೀರ್ಪು ನೀಡಿದೆ. ತಮಿಳುನಾಡು ಶಾಸಕಾಂಗವು ಮಂಡಿಸಿದ 10 ಮಸೂದೆಗಳಿಗೆ ಸಂಬಂಧಿಸಿದಂತೆ ರಾಜ್ಯಪಾಲ ಆರ್.ಎನ್. ರವಿ ಅವರ ನಿರ್ಧಾರಗಳು ಕಾನೂನುಬಾಹಿರ ಎಂದು ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಮತ್ತು ಆರ್.ಮಹಾದೇವನ್ ಅವರ ಪೀಠ ಹೇಳಿತು. … Continued

ವೀಡಿಯೊ…| 6 ತಿಂಗಳ ಶಿಶುವನ್ನು ಎತ್ತಿಕೊಂಡು ನಿಗಿನಿಗಿ ಕೆಂಡ ಹಾಯಲು ಹೋಗಿ ಮುಗ್ಗರಿಸಿ ಬಿದ್ದ ವ್ಯಕ್ತಿ…!

ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯ ಅವರಂಗಾಡುನಲ್ಲಿರುವ ಅಗ್ನಿ ಮರಿಯಮ್ಮನ್ ದೇವಾಲಯದ ಉತ್ಸವದಲ್ಲಿ ಆರು ತಿಂಗಳ ಮಗುವನ್ನು ಎತ್ತಿಕೊಂಡು ಕೆಂಡ ಹಾಯಲು ಹೋಗಿ ವ್ಯಕ್ತಿಯೊಬ್ಬ ಮುಗ್ಗರಿಸಿ ಬಿದ್ದಿದ್ದು, ಅಲ್ಲಿದ್ದವರು ತಕ್ಷಣವೇ ಸಹಾಯಕ್ಕೆ ಧಾವಿಸಿ ಮುಗುವನ್ನು ಸುರಕ್ಷಿತವಾಗಿ ಮೇಲೆಕ್ಕೆತ್ತಿದ್ದಾರೆ. ಈ ಘಟನೆಯ ವೀಡಿಯೊ ಈಗ ವೈರಲ್‌ ಆಗಿದೆ. ವ್ಯಕ್ತಿಯೊಬ್ಬರು ಆರು ತಿಂಗಳಿನ ಶಿಶುವನ್ನು ಎತ್ತಿಕೊಂಡು ಕೆಂಡ ಹಾಯಲು ಮುಂದಾಗಿದ್ದಾರೆ, ಜೋರಾಗಿ … Continued

ತಮಿಳುನಾಡಿನ 12 ಜಿಲ್ಲೆಗಳಿಗೆ ಭಾರೀ ಮಳೆ ಮುನ್ನೆಚ್ಚರಿಕೆ ನೀಡಿದ ಹವಾಮಾನ ಇಲಾಖೆ

ಚೆನ್ನೈ : ಮುಂದಿನ ನಾಲ್ಕು ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿರುವ ತಮಿಳುನಾಡಿನ ಹಲವು ಜಿಲ್ಲೆಗಳಿಗೆ ಐಎಂಡಿ ಆರೆಂಜ್ ಮತ್ತು ಹಳದಿ ಎಚ್ಚರಿಕೆ ನೀಡಿದೆ. ಹವಾಮಾನದಲ್ಲಿನ ಬದಲಾವಣೆಯು ಸಮುದ್ರದ ಮೇಲೆ ಚಂಡಮಾರುತದ ಪರಿಚಲನೆಗೆ ಕಾರಣವಾಗಿದೆ. ಆರ್‌ಎಂಸಿ ಚೆನ್ನೈ ದಕ್ಷಿಣ ತಮಿಳುನಾಡಿನ ನಾಲ್ಕು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದ್ದು, ಭಾರಿ ಮಳೆಯಾಗುವ ಎಚ್ಚರಿಕೆ ನೀಡಿದೆ. ಹವಾಮಾನ ಇಲಾಖೆಯು ತಮಿಳುನಾಡಿನ … Continued

ಕಳುವು ಮಾಡಿದ ಬೈಕ್ ಅನ್ನು ಮಾಲೀಕರಿಗೆ ಹಿಂದಿರುಗಿಸಲು 450 ಕಿಮೀ ಪ್ರಯಾಣ ಮಾಡಿದ ಕಳ್ಳ..! ಕ್ಷಮಾಪಣೆ ಪತ್ರದ ಜೊತೆಗೆ ಹಣವನ್ನೂ ಇಟ್ಟು ಹೋದ…!!

ಇತ್ತೀಚೆಗೆ ತಮಿಳುನಾಡಿನ ಶಿವಗಂಗಾ ಜಿಲ್ಲೆಯಲ್ಲಿ ನಡೆದ ವಿಲಕ್ಷಣ ಘಟನೆಯೊಂದು ಎಲ್ಲರ ಗಮನ ಸೆಳೆದಿದೆ. ಅಪರೂಪದ ಘಟನೆಯೊಂದರಲ್ಲಿ, ತಮಿಳುನಾಡಿನ ವ್ಯಕ್ತಿಯೊಬ್ಬ ಕಳುವು ಮಾಡಿದ ಬೈಕ್‌ ಅನ್ನು ಕದ್ದ ಸ್ಥಳದಲ್ಲಿಯೇ ತಂದಿಟ್ಟಿದ್ದಲ್ಲದೆ, ಕ್ಷಮೆಯಾಚನೆಯ ಪತ್ರ ಬರೆದಿಟ್ಟು, ಅದರ ಜೊತೆಗೆ ಹಣವನ್ನೂ ಇಟ್ಟು ಹೋದ ಘಟನೆ ನಡೆದಿದೆ. ತಿತಮಿಳನಾಡಿನ ರುಪ್ಪುವನಂ ಬಳಿಯ ಡಿ ಪಲಯ್ಯೂರ್ ಎಂಬಲ್ಲಿ ಇಂತಹ ಅಪರೂಪದ ಘಟನೆ … Continued

ಮಾಜಿ ಸಿಎಂ ಜಯಲಲಿತಾರ ಆಸ್ತಿ, ಬೆಲೆಬಾಳುವ ವಸ್ತುಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸಲು ದಿನಾಂಕ ನಿಗದಿ

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಂದ ವಶಪಡಿಸಿಕೊಳ್ಳಲಾದ ಬೆಲೆಬಾಳುವ ವಸ್ತುಗಳು ಮತ್ತು ಆಸ್ತಿಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸಲು ಬೆಂಗಳೂರಿನ ವಿಶೇಷ ನ್ಯಾಯಾಲಯವು ಫೆಬ್ರವರಿ 14 ಮತ್ತು 15 ರಂದು ಎರಡು ದಿನಗಳನ್ನು ನಿಗದಿಪಡಿಸಿದೆ. ಸಿಬಿಐ/ಇಡಿ ಪ್ರಕರಣಗಳ ವಿಚಾರಣೆ ನಡೆಸಲು ಸ್ಥಾಪನೆಯಾಗಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಮೋಹನ ಎಚ್‌.ಎ. … Continued

ದೇಗುಲದ ಹುಂಡಿಯಲ್ಲಿ ಆಕಸ್ಮಿಕವಾಗಿ ಐಫೋನ್ ಬೀಳಿಸಿಕೊಂಡ ವ್ಯಕ್ತಿ ; ಅದನ್ನು ವಾಪಸ್‌ ಕೊಡಲ್ಲ ಎಂದ ಆಡಳಿತ ಮಂಡಳಿ ; ಯಾಕೆಂದರೆ…

ಚೆನ್ನೈ: ತಮಿಳುನಾಡಿನ ದೇವಸ್ಥಾನದ ಹುಂಡಿಯಲ್ಲಿ ಆಕಸ್ಮಿಕವಾಗಿ ಐಫೋನ್ ಬಿದ್ದ ವ್ಯಕ್ತಿಯೊಬ್ಬ ತನ್ನ ಫೋನ್ ಅನ್ನು ಮರಳಿ ಪಡೆಯಲು ಸಾಧ್ಯವಾಗಿಲ್ಲ. ಯಾಕೆಂದರೆ ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯು ಅವರ ಮನವಿಯನ್ನು ನಯವಾಗಿ ತಿರಸ್ಕರಿಸಿದ್ದು, ದೇವಾಲಯದ ಹುಂಡಿಗೆ ಬಿದ್ದಿದ್ದು ಈಗ ಅದು ದೇವಾಲಯದ ಆಸ್ತಿ ಎಂದು ಹೇಳಿದೆ. ಹುಂಡಿ ನಿಯಮಗಳ ಸ್ಥಾಪನೆ, ಸುರಕ್ಷತೆ ಮತ್ತು ಲೆಕ್ಕಪತ್ರ … Continued