ಭಾರತ ನಮ್ಮ ಸ್ನೇಹಿತ, ಆದ್ರೆ..: ಭಾರತದ ಮೇಲೆ ಶೇ. 25 ಸುಂಕ, ರಷ್ಯಾದ ಜೊತೆ ವ್ಯಾಪಾರಕ್ಕೆ ದಂಡ ವಿಧಿಸುವುದಾಗಿ ಘೋಷಿಸಿದ ಟ್ರಂಪ್‌ ; ಆ.1ರಿಂದ ಜಾರಿಗೆ

ನವದೆಹಲಿ: ಆಗಸ್ಟ್ 1 ರಿಂದ ಜಾರಿಗೆ ಬರುವಂತೆ ಭಾರತೀಯ ಆಮದುಗಳ ಮೇಲೆ 25% ಸುಂಕ ಮತ್ತು ಹೆಚ್ಚುವರಿ ದಂಡ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಘೋಷಿಸಿದ್ದಾರೆ. ರಷ್ಯಾದಿಂದ ಭಾರತದ ನಿರಂತರ ತೈಲ ಆಮದು ಮತ್ತು ದೀರ್ಘಕಾಲದ ವ್ಯಾಪಾರ ಅಡೆತಡೆಗಳು ಈ ಕ್ರಮದ ಹಿಂದಿನ ಪ್ರಮುಖ ಕಾರ ಎಂದು ಅವರು ಉಲ್ಲೇಖಿಸಿದ್ದಾರೆ. ತಮ್ಮ ಟ್ರೂತ್ … Continued

ಭಾರತದ ಜೊತೆ ಪಾಕಿಸ್ತಾನದ ಕದನ ವಿರಾಮದ ಬಗ್ಗೆ ಚೀನಾ ಅಸಮಾಧಾನ? ಇದಕ್ಕೆ ಕಾರಣ ಏನು ಗೊತ್ತೆ…?

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಯೋತ್ಪಾದಕರು ಮತ್ತು ಅವರ ಬೆಂಬಲಿಗರನ್ನು ಗುರಿಯಾಗಿಸಿಕೊಂಡು ಭಾರತ ನಡೆಸಿದ ಆಪರೇಶನ್‌ ಸಿಂಧೂರ ಸೇನಾ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಹಲವಾರು ವಾಯುನೆಲೆಗಳು ಮತ್ತು ಇತರ ಮಿಲಿಟಿರಿ ನೆಲೆಗಳು ಹಾನಿಗೊಳಗಾದವು. ಅದರ ನಂತರ ಪಾಕಿಸ್ತಾನ ಅಮೆರಿಕಕ್ಕೆ ಮಧ್ಯಪ್ರವೇಶಿಸುವಂತೆ ದುಂಬಾಲು ಬಿದ್ದ ನಂತರ ಕದನ ವಿರಾಮ ಘೋಷಣೆಯಾಯಿತು. ಅಮೆರಿಕ ಈ ಕದನ ವಿರಾಮದ ಕ್ರೆಡಿಟ್‌ … Continued

ವೀಡಿಯೊ…| ರ್‍ಯಾಲಿ ವೇಳೆ ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್‌ ಮೇಲೆ ಗುಂಡಿನ ದಾಳಿ

ಅಮೆರಿಕದ ಮಾಜಿ ಅಧ್ಯಕ್ಷ ಮತ್ತು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಮೇಲೆ ಶನಿವಾರ (ಸ್ಥಳೀಯ ಕಾಲಮಾನ) ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ಅವರ ರ್ಯಾಲಿಯಲ್ಲಿ ಗುಂಡಿನ ದಾಳಿ ನಡೆದ ನಂತರ ಗಾಯಗೊಂಡಿದ್ದಾರೆ. ಘಟನೆಯ ನಂತರ ಭದ್ರತಾ ಸಿಬ್ಬಂದಿ ಅವರನ್ನು ವೇದಿಕೆಯಿಂದ ಹೊರಗೆ ಕರೆದೊಯ್ಯುವಾಗ ಅವರ ಮುಖದ ಮೇಲೆ ರಕ್ತ ಕಂಡುಬಂದಿದೆ. ಟ್ರಂಪ್‌ ಅವರು “ಉತ್ತಮ” … Continued

ಮತ್ತೊಮ್ಮೆ ಅಮೆರಿಕ ಅಧ್ಯಕ್ಷನಾದರೆ ಭಾರತದ ಉತ್ಪನ್ನದ ಮೇಲೆಯೂ ದುಬಾರಿ ತೆರಿಗೆ ವಿಧಿಸುವ ಎಚ್ಚರಿಕೆ ನೀಡಿದ ಟ್ರಂಪ್

ವಾಷಿಂಗ್ಟನ್‌ : ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೆಲವು ಅಮೆರಿಕನ್ ಉತ್ಪನ್ನಗಳ ಮೇಲೆ ನಿರ್ದಿಷ್ಟವಾಗಿ ಐಕಾನಿಕ್ ಹಾರ್ಲೆ-ಡೇವಿಡ್ಸನ್ ಬೈಕ್‌ಗಳಿಗೆ ಭಾರತದಲ್ಲಿ ಹೆಚ್ಚಿನ ತೆರಿಗೆ ವಿಧಿಸುತ್ತಿರುವ ಬಗ್ಗೆ ಮತ್ತೊಮ್ಮೆ ಪ್ರಸ್ತಾಪಿಸಿದ್ದಾರೆ ಮತ್ತು 2024 ರ ಅಧ್ಯಕ್ಷೀಯ ಚುನಾವಣೆಯಲ್ಲಿ ತಾವು ಅಧಿಕಾರಕ್ಕೆ ಬಂದರೆ ಭಾರತದ ಉತ್ಪನ್ನಗಳ ಮೇಲೆ ಹೆಚ್ಚಿನ ತೆರಿಗೆಗಳನ್ನು ವಿಧಿಸುವುದಾಗಿ ಎಚ್ಚರಿಸಿದ್ದಾರೆ. ಅಮೆರಿಕ ಅಧ್ಯಕ್ಷರಾಗಿ … Continued

ಸೆನೆಟ್ ದೋಷಾರೋಪಣೆ ವಿಚಾರಣೆಗೆ ಟ್ರಂಪ್‌ ಹಾಜರಾಗಲ್ಲ

ವಾಷಿಂಗ್ಟನ್‌: ಅಮೆರಿಕದ ರಾಜಧಾನಿಯಲ್ಲಿ ನಡೆದ ಗಲಭೆಗೆ ಪ್ರಚೋದನೆ ನೀಡಿದ ಕುರಿತು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಸೆನೆಟ್ ದೋಷಾರೋಪಣೆ ವಿಚಾರಣೆಗೆ ಸಾಕ್ಷ್ಯ ನುಡಿಯುವಂತೆ ಕೋರಿದ್ದು, ಮಾಜಿ ಅಧ್ಯಕ್ಷರು ಯಾವುದೇ ಸಾಕ್ಷ್ಯ ಹೇಳುವುದಿಲ್ಲ ಎಂದು ಟ್ರಂಪ್‌ ಸಲಹೆಗಾರರು ತಿಳಿಸಿದ್ದಾರೆ. ಟ್ರಂಪ್‌ರ ಸಾಕ್ಷ್ಯವನ್ನು ಒತ್ತಾಯಿಸಲು ಡೆಮೋಕ್ರಾಟ್‌ಗಳಿಗೆ ಅಧಿಕಾರವಿಲ್ಲದಿದ್ದರೂ, ಜನವರಿ 6 ರಂದು ನಡೆದ ಹಿಂಸಾತ್ಮಕ ಘಟನೆಗಳಿಗೆ ಟ್ರಂಪ್‌ರನ್ನು … Continued