ಶಿರಸಿ: ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರರಿಗೆ ‘ಲಕ್ಷ್ಮೀಧರ ಅಮಾತ್ಯ’ನ ಶಾಸನ ಫಲಕದ ಸ್ಮರಣಿಕೆ ಪ್ರದಾನ

ಶಿರಸಿ : ನಗರದ ಜೀವಜಲ ಕಾರ್ಯಪಡೆಯ ಅಧ್ಯಕ್ಷರಾದ ಶ್ರೀನಿವಾಸ ಹೆಬ್ಬಾರ ಅವರ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸುತ್ತಿರುವ ಅನನ್ಯ ಸೇವೆಯನ್ನು ಗೌರವಿಸಿ ಆಪ್ತರು ಗೆಳೆಯರೆಲ್ಲ ಸೇರಿ ಭಾನುವಾರ ವಿಶ್ವಾವಸು ಸಂವತ್ಸರದ ಯುಗಾದಿಯ ಸಂದರ್ಭವನ್ನು ಬಳಸಿ ‘ಲಕ್ಷ್ಮೀಧರ ಅಮಾತ್ಯ’ನ ಶಾಸನವನ್ನುದ್ಧೃತಗೊಳಿಸಿದ ಫಲಕವನ್ನು ಪ್ರದಾನ ಮಾಡಿ ಶುಭ ಹಾರೈಸಿದ್ದಾರೆ. ಫಲಕವನ್ನು ಸಿದ್ಧಪಡಿಸಿದ ಅಶೋಕ ಹಾಸ್ಯಗಾರ ಅವರು ಈ ಸಂಬಂಧವಾಗಿ ಮಾತನಾಡಿ, … Continued

ಶಿರಸಿ | ಅಣ್ಣನನ್ನು ಸುತ್ತಿಗೆಯಿಂದ ಹೊಡೆದು ಕೊಂದ ತಮ್ಮ…!

ಶಿರಸಿ : ಕ್ಷುಲ್ಲಕ ಕಾರಣಕ್ಕೆ ತಮ್ಮನೇ ಅಣ್ಣನನ್ನು ಸುತ್ತಿಗೆಯಲ್ಲಿ ಹೊಡೆದು ಹತ್ಯೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ(sirsi) ತಾಲೂಕಿನ ಹುತ್ಗಾರಿನಲ್ಲಿ ಗುರುವಾರ ರಾತ್ರಿ ನಡೆದಿದೆ ಎಂದು ವರದಿಯಾಗಿದೆ. ಕೊಲೆಯಾದ ವ್ಯಕ್ತಿಯನ್ನು ತ್ಯಾಗರಾಜ ಗಣಪತಿ ಮುಕ್ರಿ (30) ಎಂದು ಗುರುತಿಸಲಾಗಿದ್ದು, ಈತನ ತಮ್ಮನಾದ ಶಿವರಾಜ ಗಣಪತಿ ಮುಕ್ರಿ ಕೊಲೆ ಆರೋಪಿಯಾಗಿದ್ದಾನೆ. ಸಾರಾಯಿ ಕುಡಿದು ಬಂದಿದ್ದ … Continued

ಕರ್ನಾಟಕದಲ್ಲೇ ಅತಿ ಹೆಚ್ಚು 42.9°C ಉಷ್ಣಾಂಶ ಉತ್ತರ ಕನ್ನಡದಲ್ಲಿ ದಾಖಲು…! ಕರಾವಳಿಯ 27 ಕಡೆ 38°Cಗಿಂತ ಹೆಚ್ಚು ತಾಪಮಾನ…!!

ಬೆಂಗಳೂರು : ಕರ್ನಾಟಕದ ಕರಾವಳಿ ಭಾಗ ತಾಪಮಾನ ಹೆಚ್ಚಳದಿಂದ ಬಿಸಿ ಕೆಂಡವಾಗಿ ಮಾರ್ಪಟ್ಟಿದೆ. ಕರಾವಳಿ ಭಾಗದ ಅನೇಕ ಪ್ರದೇಶಗಳಲ್ಲಿ ತಾಪಮಾನ ಬುಧವಾರ ತಾಪಮಾನ 1.6°C ನಿಂದ 3.0°Cರಷ್ಟು ಹೆಚ್ಚಳವಾಗಿದೆ. ಬುಧವಾರ (ಮಾರ್ಚ್ 12) ಬೆಳಿಗ್ಗೆ 8:30ಕ್ಕೆ ಕೊನೆಗೊಂಡಂತೆ 24 ಗಂಟೆಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಾವಂತವಾಡ ಹೋಬಳಿಯಲ್ಲಿ ಕರ್ನಾಟಕದಲ್ಲೇ ಅತಿ ಹೆಚ್ಚು ಅಂದರೆ ಗರಿಷ್ಠ 42.9 … Continued

ಶಿರಸಿ | ನರ್ಮದಾ ಹೆಗಡೆಗೆ ಚೆನ್ನಭೈರಾದೇವಿ ಪ್ರಶಸ್ತಿ ಪ್ರದಾನ

ಶಿರಸಿ : ಮುಂಬೈನ ಮಯೂರ ವರ್ಮ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಕೊಡಮಾಡುವ 2025ನೇ ಸಾಲಿನ ಚೆನ್ನಭೈರಾದೇವಿ ಪ್ರಶಸ್ತಿಯನ್ನು ಶಿರಸಿಯ ಅಜಿತ ಮನೋಚೇತನ ಟ್ರಸ್ಟ್‌ನ ವಿಕಾಸ ವಿಶೇಷ ಶಾಲೆಯ ಮುಖ್ಯಾಧ್ಯಾಪಕಿ ನರ್ಮದಾ ಹೆಗಡೆ ಅವರಿಗೆ ಭಾನುವಾರ ಪ್ರದಾನ ಮಾಡಲಾಯಿತು. ವಿಶೇಷ ಚೇತನ ಮಕ್ಕಳಿಗೆ ನರ್ಮದಾ ಹೆಗಡೆ ಸಲ್ಲಿಸುತ್ತ ಬಂದಿರುವ ಸೇವೆಯನ್ನು ಗುರುತಿಸಿ ಇಲ್ಲಿನ ಗಣೇಶ ನೇತ್ರಾಲಯದ ನಯನಾ ಸಭಾಂಗಣದಲ್ಲಿ … Continued

ಶಿರಸಿ : 51 ವರ್ಷದ ವ್ಯಕ್ತಿಗೆ ಮಂಗನ ಕಾಯಿಲೆ ಸೋಂಕು

ಶಿರಸಿ : ಮಂಗನ ಕಾಯಿಲೆ ಸೋಂಕು ಉತ್ತರ ಕನ್ನಡದಲ್ಲಿಯೂ ಈಗ ಪತ್ತೆಯಾಗಿದ್ದು, ಜಿಲ್ಲೆಯ ಶಿರಸಿ ತಾಲೂಕಿನ 51    ವರ್ಷದ ವ್ಯಕ್ತಿಯೊಬ್ಬರಲ್ಲಿ ಸೋಂಕು ದೃಢಪಟ್ಟಿದೆ ಎಂದು ವರದಿಯಾಗಿದೆ. ಈ ವರ್ಷದಲ್ಲಿ ಇದು ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಕರೆಯಲ್ಪಡುವ ಕ್ಯಾಸನೂರು ಫಾರೆಸ್ಟ್‌ ಡಿಸೀಸ್‌ (KFD) ಸೋಂಕಿನ ಮೊದಲ ಪ್ರಕರಣವಾಗಿದೆ. 15 ದಿನಗಳ ಹಿಂದೆ ಈ … Continued

ಶಿರಸಿ ಸಾರ್ವಜನಿಕ ಆಸ್ಪತ್ರೆಗೆ ಹೈಟೆಕ್‌ ಸೌಲಭ್ಯ | 15 ದಿನದಲ್ಲಿ ಶಾಸಕರ ಪ್ರತಿಕ್ರಿಯೆ ಬೇಕು; ಇಲ್ಲದಿದ್ರೆ ʼಆಸ್ಪತ್ರೆ ಉಳಿಸಿʼ ಸಹಿ ಸಂಗ್ರಹ ಅಭಿಯಾನ ; ಅನಂತಮೂರ್ತಿ ಹೆಗಡೆ

ಶಿರಸಿ : ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ಸಂಬಂಧಿಸಿದಂತೆ ಸರ್ಕಾರ ವೈದ್ಯಕೀಯ ಸಲಕರಣೆಗಳಿಗೆ 30 ಕೋಟಿ ರೂಪಾಯಿ ಕೊಡುತ್ತಿಲ್ಲ ಎಂಬ ಕಾರಣಕ್ಕೆ ಹೈಟೆಕ್ ಅಸ್ಪತ್ರೆಯನ್ನ ಕೆಳದರ್ಜೆಗೆ ತಳ್ಳುವ ಪ್ರಯತ್ನ ಮಾಡುತ್ತಿರುವ ಶಾಸಕರಾದ ಭೀಮಣ್ಣ ನಾಯ್ಕ ಜನತೆಯ ಕ್ಷಮೆ ಕೇಳಬೇಕು ಎಂದು ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಆಗ್ರಹಿಸಿದ್ದಾರೆ. ಶಿರಸಿಯ ಪತ್ರಿಕಾಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, … Continued

ಶಿರಸಿ ಆಸ್ಪತ್ರೆ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ನನಗೆ ಶಾಸಕರಿಂದ ಲೀಗಲ್‌ ನೋಟಿಸ್‌ : ಅನಂತಮೂರ್ತಿ ಹೆಗಡೆ

ಶಿರಸಿ: ಶಿರಸಿಯ ಪಂಡಿತ ಸರ್ಕಾರಿ ಆಸ್ಪತ್ರೆಯ ಬಗ್ಗೆ ನಾನು ಪ್ರಶ್ನೆ ಮಾಡಿದ್ದಕ್ಕೆ ಶಾಸಕ ಭೀಮಣ್ಣ ನಾಯ್ಕ ಅವರು ನನಗೆ ಲೀಗಲ್‌ ನೋಟಿಸ್‌ ಕಳುಹಿಸಿದ್ದಾರೆ ಎಂದು ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಆಸ್ಪತ್ರೆ ವಿಚಾರದಲ್ಲಿ ಶಾಸಕರನ್ನು ಪ್ರಶ್ನಿಸಿದ್ದಕ್ಕೆ ನನ್ನ ಪ್ರತಿಕೃತಿ ದಹಿಸಿದ್ದಾರೆ, ನನ್ನ ಮೇಲೆ ನಾನ್ ಬೇಲೇಬಲ್ … Continued

ಯಲ್ಲಾಪುರ | ಅರಬೈಲ್ ಘಟ್ಟದಲ್ಲಿ ಭೀಕರ ಅಪಘಾತ ; ಒಂದೇ ಕುಟುಂಬದ ಮೂವರು ಸಾವು

ಕಾರವಾರ : ಭೀಕರ ಅಪಘಾತದಲ್ಲಿ (Accident) ಒಂದೇ ಕುಟುಂಬದ ಮೂವರು ಸಾವಿಗೀಡಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ (Uttara Kannada) ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಓವರ್​ಟೇಕ್ ಮಾಡುವ ಭರದಲ್ಲಿ ವೇಗದಲ್ಲಿ ಬಂದ ಲಾರಿ ಕಾರಿಗೆ ಗುದ್ದಿದೆ ಎಂದು ಹೇಳಲಾಗಿದೆ. ಲಾರಿ ಗುದ್ದಿದ ರಭಸಕ್ಕೆ ಕಾರು ನಜ್ಜುಗುಜ್ಜಾಗಿ ಹೋಗಿದೆ.  ಕಾರಿನಲ್ಲಿದ್ದ ಮೂವರು … Continued

ಕಾರವಾರ ನೌಕಾನೆಲೆಯ ಮಾಹಿತಿ ಸೋರಿಕೆ: ಉತ್ತರ ಕನ್ನಡದ ಇಬ್ಬರು ಎನ್​ಐಎ ವಶಕ್ಕೆ

ಕಾರವಾರ : ಕಾರವಾರ ನೌಕಾನೆಲೆಯ ಮಾಹಿತಿ ಸೋರಿಕೆ ಮಾಡುತ್ತಿದ್ದ ಆರೋಪದಲ್ಲಿ ಉತ್ತರ ಕನ್ನಡ ಜಿಲ್ಲೆಯ ಇಬ್ಬರನ್ನು ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಾರವಾರ ತಾಲೂಕಿನ ಮುದುಗಾ ಗ್ರಾಮದ ವೇತನ ತಾಂಡೇಲ ಹಾಗೂ ಅಂಕೋಲಾ ತಾಲೂಕಿನ ಹಳವಳ್ಳಿಯ ಅಕ್ಷಯ ನಾಯ್ಕ ಎಂಬವರನ್ನು ಎನ್​ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಇಬ್ಬರ ಬಗ್ಗೆ … Continued

ವೀಡಿಯೊ…| ಕಾರವಾರ : ಮುರಿದುಬಿದ್ದ ಕಾಳಿ ನದಿಗೆ ಸೇತುವೆಯ ಕಂಬ

ಕಾರವಾರ: ಕಳೆದ ವರ್ಷ ಮಳೆಗಾಲದ ಸಮಯದಲ್ಲಿ ಕೆಲಭಾಗ ಕುಸಿದುಬಿದ್ದಿದ್ದ ಕಾರವಾರದ ಕಾಳಿ ನದಿಯ ಹಳೆಯ ಕಾಳಿ ಸೇತುವೆ ಸೇತುವೆ ಕಂಬ ದಿಢೀರ್​ ಕುಸಿದಿರುವ ಘಟನೆ ಗುರುವಾರ ರಾತ್ರಿ ನಡೆದಿದೆ ಎಂದು ವರದಿಯಾಗಿದೆ. ಕಾರವಾರದ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಸೇತುವೆ ಸಂಪರ್ಕ ಕಲ್ಪಿಸುವ ಈ ಸೇತುವೆಯ ರಾತ್ರಿಹೊತ್ತು ಕಂಬ​ ಮುರಿದು ಬಿದ್ದಿದ್ದರಿಂದ ಬಾರಿ ಅನಾಹುತ ತಪ್ಪಿದೆ. ತಡರಾತ್ರಿ … Continued