ಕ್ರಿಕೆಟ್‌ ವಿಶ್ವಕಪ್ 2023 : ʼಪ್ಲೇಯರ್ ಆಫ್ ದಿ ಟೂರ್ನಮೆಂಟ್‌ʼ ರೇಸ್‌ನಲ್ಲಿ ನಾಲ್ವರು ಭಾರತದ ಆಟಗಾರರು ಸೇರಿ 9 ಆಟಗಾರರ ಹೆಸರು ಪ್ರಕಟಿಸಿದ ಐಸಿಸಿ

ನವದೆಹಲಿ: ಭಾನುವಾರ ಅಹಮದಾಬಾದಿನಲ್ಲಿ ನಡೆಯಲಿರುವ ಕ್ರಿಕೆಟ್‌ ವಿಶ್ವಕಪ್ 2023 ಅಂತಿಮ ಪಂದ್ಯದ ಮೊದಲು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಪಂದ್ಯಾವಳಿ ಆಟಗಾರ ಪ್ರಶಸ್ತಿ (Player of the tournament award)ಗಾಗಿ ಸ್ಪರ್ಧಿಗಳನ್ನು ಪ್ರಕಟಿಸಿದೆ. ಐಸಿಸಿ(ICC)ಯು ಪ್ರತಿಷ್ಠಿತ ಪ್ರಶಸ್ತಿಗಾಗಿ ಒಂಬತ್ತು ಸ್ಪರ್ಧಿಗಳ ಹೆಸರನ್ನು ಬಹಿರಂಗಪಡಿಸಿದೆ. ನಾಲ್ಕು ಸೆಮಿಫೈನಲಿಸ್ಟ್ ತಂಡಗಳ ಒಂಬತ್ತು ಆಟಗಾರರನ್ನು ಪ್ರಶಸ್ತಿಗಾಗಿ ಪಟ್ಟಿ ಮಾಡಲಾಗಿದೆ. ಈ … Continued

ವಿಶ್ವಕಪ್ 2023 ರ ಫೈನಲ್ ಸಮಾರಂಭ: ಏರ್ ಶೋನಿಂದ ಸಂಗೀತ ಕಾರ್ಯಕ್ರಮಗಳವರೆಗೆ… ಅಹಮದಾಬಾದ್‌ನಲ್ಲಿ ಐಸಿಸಿಯ‌ ಅದ್ಭುತ ವಿದಾಯ ಕಾರ್ಯಕ್ರಮ

ಅಭೂತಪೂರ್ವ ಸಮಾರೋಪ ಸಮಾರಂಭದೊಂದಿಗೆ ವಿಶ್ವಕಪ್ 2023 ಪಂದ್ಯಾವಳಿಗೆ ವಿದಾಯ ಹೇಳಲು ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಮತ್ತು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯು ಕೈಜೋಡಿಸಿದೆ. ಅಹಮದಾಬಾದಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ನಡೆಯಲಿರುವ ಅಂತಿಮ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗುತ್ತಿದ್ದು, ಬಿಸಿಸಿಐ ವಿವಿಧ ಕಾರ್ಯಕ್ರಮಗಳೊಂದಿಗೆ ಅಭಿಮಾನಿಗಳನ್ನು ರಂಜಿಸಲು ನೋಡುತ್ತಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ … Continued

ವಿಶ್ವಕಪ್‌ನಲ್ಲಿ 4ನೇ ಬಾರಿಗೆ 5 ವಿಕೆಟ್ ಉರುಳಿಸಿ ಹೊಸ ದಾಖಲೆ ನಿರ್ಮಿಸಿದ ಮೊಹಮ್ಮದ್ ಶಮಿ

ಬುಧವಾರ ನಡೆದ ಐಸಿಸಿ 50 ಓವರ್‌ಗಳ ಪಂದ್ಯಾವಳಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಭಾರತದ ಅನುಭವಿ ವೇಗಿ ಮೊಹಮ್ಮದ್ ಶಮಿ ಈ ವಿಶ್ವಕಪ್‌ನಲ್ಲಿ ನಾಲ್ಕನೇ ಬಾರಿಗೆ 5 ವಿಕೆಟ್ ಕಬಳಿಸಿದರು. ವಿಶ್ವಕಪ್‌ನಲ್ಲಿ ತನ್ನ 4ನೇ ಸಲ 5-ವಿಕೆಟ್‌ಗಳ ಸಾಧನೆಯೊಂದಿಗೆ, ಶಮಿ ಏಕದಿನದ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಅವರ ದಾಖಲೆಯನ್ನು ಮುರಿದರು. … Continued

ವಿಶ್ವಕಪ್‌ 2023 : ಸಚಿನ್ ತೆಂಡೂಲ್ಕರ್ ವಿಶ್ವ ದಾಖಲೆ ಮುರಿದ ವಿರಾಟ್ ಕೊಹ್ಲಿ : 50 ನೇ ಏಕದಿನ ಶತಕ ಹೊಡೆದು ನೂತನ ದಾಖಲೆ ನಿರ್ಮಾಣ

ಭಾರತದ ಅಗ್ರಮಾನ್ಯ ಬ್ಯಾಟರ್‌ ವಿರಾಟ್ ಕೊಹ್ಲಿ ಭಾರತದ ಲೆಜೆಂಡರಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಅಂತಾಷ್ಟ್ರೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಕ್ರಿಕೆಟ್ ವಿಶ್ವಕಪ್ 2023 ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ಬೌಲಿಂಗ್ ದಾಳಿಯ ವಿರುದ್ಧ ಮಾಜಿ ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ … Continued

ವಿಶ್ವಕಪ್ ಲೀಗ್‌ ಪಂದ್ಯದಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರರು…: ಬ್ಯಾಟಿಂಗ್‌, ಬೌಲಿಂಗ್‌ ನಲ್ಲಿ ಇವರೇ ಟಾಪರ್‌…

ಬೆಂಗಳೂರು: ಈ ಬಾರಿಯ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಮುಕ್ತಾಯವಾಗಿವೆ. ಭಾರತ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ ತಂಡಗಳು ಸೆಮಿಫೈನಲ್‌ಗೆ ಪ್ರವೇಶಿವೆ. ಸೆಮಿಫೈನಲ್‌ ಪಂದ್ಯಗಳು ನವೆಂಬರ್‌ 15, 16ರಂದು ಕ್ರಮವಾಗಿ ಮುಂಬೈ ಮತ್ತು ಕೋಲ್ಕತ್ತದಲ್ಲಿ ನಡೆಯಲಿವೆ. ರೌಂಡ್‌ ರಾಬಿನ್‌ ಮಾದರಿಯ ಲೀಗ್‌ ಹಂತದಲ್ಲಿ ಎಲ್ಲ ತಂಡಗಳು ತಲಾ 9 ಪಂದ್ಯಗಳಲ್ಲಿ … Continued

ವಿಶ್ವಕಪ್‌ ನಲ್ಲಿ ವೇಗದ ಶತಕ : ರೋಹಿತ್‌ ಶರ್ಮಾರ ದಾಖಲೆ ಮುರಿದ ಕೆ.ಎಲ್‌. ರಾಹುಲ್‌

ಬೆಂಗಳೂರು: ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆದರ್ಲ್ಯಾಂಡ್‌ ವಿರುದ್ಧದ ವಿಶ್ವಕಪ್‌ ಪಂದ್ಯದಲ್ಲಿ ಭಾರತ ತಂಡದ ಕೆ.ಎಲ್‌. ಕೇವಲ 62 ಎಸೆತಗಳಲ್ಲಿ ಶತಕ ಬಾರಿಸಿ ವಿಶ್ವಕಪ್‌ನಲ್ಲಿ ವೇಗದ ಶತಕ ಸಿಡಿಸಿದ ಭಾರತೀಯ ಬ್ಯಾಟರ್‌ ಎನಿಸಿಕೊಂಡಿದ್ದಾರೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ ದಾಖಲೆಯನ್ನು ಅವರು ಮುರಿದಿದ್ದಾರೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ … Continued

ವಿಶ್ವಕಪ್‌ 2023 : ನೆದರ್ಲ್ಯಾಂಡ್‌ ವಿರುದ್ಧದ ಪಂದ್ಯದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿಸಿದ ರೋಹಿತ ಶರ್ಮಾ

ನವದೆಹಲಿ: ಭಾರತದ ನಾಯಕ ರೋಹಿತ್ ಶರ್ಮಾ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಂತ ಯಶಸ್ವಿ ಆರಂಭಿಕ ಆಟಗಾರನಾಗಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ್ದಾರೆ. 36ರ ಹರೆಯದ ಶರ್ಮಾ ಅವರು ವಿಶ್ವಕಪ್ ನಲ್ಲಿ ನೆದರ್ಲೆಂಡ್ಸ್ ವಿರುದ್ಧದ ಪಂದ್ಯಾವಳಿಯ 9 ನೇ ಹಣಾಹಣಿಯಲ್ಲಿ ಈ ಮೈಲಿಗಲ್ಲನ್ನು ಸಾಧಿಸಿದರು. ಆರಂಭಿಕ ಆಟಗಾರನಾಗಿ ರೋಹಿತ ಶರ್ಮಾ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 14000 ರನ್ ಗಳಿಸಿದ … Continued

ಅಸಾಧ್ಯವಾದ ಗೆಲುವನ್ನು ಅಫ್ಘಾನಿಸ್ತಾನದಿಂದ ಕಸಿದುಕೊಂಡ ಮ್ಯಾಕ್ಸ್‌ವೆಲ್ : ನೋವಿನಲ್ಲೂ ಏಕಾಂಗಿ ಹೋರಾಟ, ಅಜೇಯ 201 ರನ್, ಹಲವು ದಾಖಲೆಗಳು ಪುಡಿಪುಡಿ..

ಮುಂಬೈ: ಮಂಗಳವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ಅಜೇಯ 201 ರನ್ ಗಳಿಸುವ ಮೂಲಕ ಗ್ಲೆನ್ ಮ್ಯಾಕ್ಸ್‌ವೆಲ್ ಅವರು ತಮ್ಮ ಹೆಸರನ್ನು ಇತಿಹಾಸ ಪುಸ್ತಕಗಳಲ್ಲಿ ಬರೆದಿದ್ದಾರೆ. ಅವರು ಆಸ್ಟ್ರೇಲಿಯಾ ನಿಶ್ಚಿತವಾಗಿಯೂ ಭಾರೀ ಅಂತರದಲ್ಲಿ ಸೋಲುತ್ತದೆ ಎಂದು ಭಾವಿಸಲಾಗಿದ್ದ ಪಂದ್ಯವನ್ನು ಏಕಾಂಗಿ ಹೋರಾಟದ ಮೂಲಕ ಗೆಲ್ಲಿಸಿದ್ದಾರೆ. ಬೆನ್ನು ನೋವಿನ ಸಮಸ್ಯೆಗಳು, … Continued

ವಿಶ್ವಕಪ್ 2023 : ರೋಹಿತ್‌ ಪಡೆಗಳ ಮುಂದೆ ಮಂಡಿಯೂರಿದ ದಕ್ಷಿಣ ಆಫ್ರಿಕಾ ; ಭಾರತಕ್ಕೆ 243 ರನ್ನುಗಳ ಭರ್ಜರಿ ಗೆಲುವು

ಕೋಲ್ಕತ್ತಾ: ವಿಶ್ವಕಪ್ 2023ರ ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ 243 ರನ್ ಗಳ ಭಜರ್ರಿ ಗೆಲುವು ಸಾಧಿಸಿದೆ. ಈಡೆನ್ ಗಾರ್ಡನ್ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 326 ರನ್ ಗಳಿಸಿತು. ಇದಕ್ಕೆ ಪ್ರತ್ಯುತ್ತರವಾಗಿ ದಕ್ಷಿಣ ಆಫ್ರಿಕಾ ಕೇವಲ 27.1 ಓವರ್‌ಗಳಲ್ಲಿ … Continued

ವಿಶ್ವಕಪ್‌ 2023 : ಏಕದಿನದ ಪಂದ್ಯದಲ್ಲಿ 49ನೇ ಶತಕ ಸಿಡಿಸಿ ತೆಂಡೂಲ್ಕರ್ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ : ಅತಿಹೆಚ್ಚು ಶತಕಗಳಿಸಿದ ಟಾಪ್‌-5 ಆಟಗಾರರು ಇವರು

ಕೋಲ್ಕತ್ತಾ : ಕೋಲ್ಕತ್ತಾದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ 49ನೇ ಏಕದಿನ ಅಂತಾರಾಷ್ಟ್ರೀಯ ಶತಕವನ್ನು ಬಾರಿಸುವ ಮೂಲಕ ಏಕದಿನದ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಅವರ ಶತಕದ ದಾಖಲೆಯನ್ನು ದಾಖಲೆಯನ್ನು ಸರಿಗಟ್ಟಿದ್ದಾರೆ. ವಿರಾಟ್‌ ಕೊಹ್ಲಿ ತಮ್ಮ 35ನೇ ಜನ್ಮದಿನದಂದು 121 ಎಸೆತಗಳಲ್ಲಿ 101 ರನ್ ಗಳಿಸಿ ಕಿಕ್ಕಿರಿದು ತುಂಬಿದ್ದ ಈಡನ್ … Continued