ಎಮ್ಮೆ ಹಾಲು ಕೊಡ್ತಿಲ್ಲ, ಯಾರೋ ಮಾಟ ಮಾಡಿದ್ದಾರೆಂದು ಠಾಣೆಗೆ ಬಂದು ದೂರು ನೀಡಿದ ರೈತ…!

ನವದೆಹಲಿ: ಒಂದು ವಿಲಕ್ಷಣ ಘಟನೆಯಲ್ಲಿ ಮಧ್ಯಪ್ರದೇಶದ ಭಿಂದ್‌ನ ರೈತ ತನ್ನ ಎಮ್ಮೆ ಹಾಲು ಕೊಡುತ್ತಿಲ್ಲವೆಂದು ಪೊಲೀಸ್‌ ಠಾಣೆಗೆ ಬಂದು ದೂರು ದಾಖಲಿದ್ದಾನೆ…! ತನ್ನ ಅಸಾಮಾನ್ಯ ದೂರಿನಲ್ಲಿ ಈ ರೈತ ಯಾರೋ ವಾಮಾಚಾರ ಮಾಡಿದ್ದರಿಂದ ತನ್ನ ಎಮ್ಮೆ ಹಾಲು ಕೊಡುತ್ತಿಲ್ಲ ಎಂದು ತಿಳಿಸಿದ್ದಾನೆ..!! ಶನಿವಾರ ನಯಗಾಂವ್ ಗ್ರಾಮದಲ್ಲಿ ರೈತ ಪೊಲೀಸರಿಂದ ನೆರವು ಕೋರಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ … Continued

ಸಿಬಿಐ, ಇಡಿ ಮುಖ್ಯಸ್ಥರ ಅಧಿಕಾರಾವಧಿ 2ರಿಂದ 5 ವರ್ಷಗಳ ವರೆಗೆ ವಿಸ್ತರಿಸಿ ಸುಗ್ರೀವಾಜ್ಞೆ ಹೊರಡಿಸಿದ ಕೇಂದ್ರ ಸರ್ಕಾರ

ನವದೆಹಲಿ: ಜಾರಿ ನಿರ್ದೇಶನಾಲಯ (ಇಡಿ) ಮತ್ತು ಕೇಂದ್ರ ತನಿಖಾ ದಳ (ಸಿಬಿಐ) ನಿರ್ದೇಶಕರ ಅಧಿಕಾರಾವಧಿಯನ್ನು 5 ವರ್ಷಗಳ ವರೆಗೆ ವಿಸ್ತರಿಸಲು ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ತಂದಿದೆ. ಎರಡೂ ತನಿಖಾ ಸಂಸ್ಥೆಗಳ ಮುಖ್ಯಸ್ಥರ ಪ್ರಸ್ತುತ ಅಧಿಕಾರಾವಧಿ ಎರಡು ವರ್ಷಗಳು. ಅವರ ಅಧಿಕಾರಾವಧಿ ಮುಗಿಯುವ ಮೊದಲು ಅವರನ್ನು ತೆಗೆದುಹಾಕಲಾಗದಿದ್ದರೂ, ಸರ್ಕಾರವು ವಿಸ್ತರಣೆಯನ್ನು ನೀಡಬಹುದು. ತಿದ್ದುಪಡಿಯ ಪ್ರಕಾರ, ಸಿಬಿಐ ಅಥವಾ … Continued

ಎನ್‌ಸಿಎ: ರಾಹುಲ್ ದ್ರಾವಿಡ್ ಜಾಗಕ್ಕೆ ವಿವಿಎಸ್ ಲಕ್ಷ್ಮಣ್ ಆಯ್ಕೆ ಖಚಿತಪಡಿಸಿದ ಗಂಗೂಲಿ

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಧ್ಯಕ್ಷ ಸೌರವ್ ಗಂಗೂಲಿ ಭಾನುವಾರ ಭಾರತದ ಮಾಜಿ ಬ್ಯಾಟರ್ ವಿವಿಎಸ್ ಲಕ್ಷ್ಮಣ್ ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (NCA) ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಖಚಿತಪಡಿಸಿದ್ದಾರೆ. ಲಕ್ಷ್ಮಣ್ ಅವರು ಎನ್‌ಸಿಎ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆಯೇ ಎಂಬ ಬಗ್ಗೆ ಸುದ್ದಿ ಸಂಸ್ಥೆಯೊಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರನ್ನು … Continued

ಕೆರೆಯಲ್ಲಿ ಈಜಲು ಹೋದ ಮೂವರು ಬಾಲಕರು ನೀರುಪಾಲು

ದಾವಣಗೆರೆ: ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದ ದೊಡ್ಡಕೆರೆಯಲ್ಲಿ ಈಜಲು ಹೋದ ಮೂವರು ಬಾಲಕರು ನೀರು ಪಾಲಾದ ಘಟನೆ ನಡೆದಿದೆ. ಜಗಳೂರು ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ಬಾಲಕರು ನೀರುಪಾಲಾದ ಘಟನೆ ಶನಿವಾರ (ನವೆಂಬರ್ 13) ನಡೆದಿದ್ದು, ಮೃತಪಟ್ಟವರನ್ನು ಸೈಯದ್ (10), ಅಶ್ರಫ್ (7) ಮತ್ತು ಆಸೀಫ್ (5) ಎಂದು ಗುರುತಿಸಲಾಗಿದೆ. ಈ ಮೂವರು ಮಕ್ಕಳು ಕೆರೆಯಲ್ಲಿ … Continued

ತಬಲಾ ವಾದಕ ಗಜಾನನ ಹೆಗಡೆ ಗಿಳಿಗುಂಡಿ ನಿಧನ

ಧಾರವಾಡ: ಧಾರವಾಡದ ಕಲ್ಯಾಣ ನಗರದ, ತಬಲಾ ವಾದಕ ಗಜಾನನ ಹೆಗಡೆ ಗಿಳಿಗುಂಡಿ ಅವರು ಇಂದು ಬೆಳಗ್ಗೆ ತಮ್ಮ ಮನೆಯಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ ೫೮ ವರ್ಷ ವಯಸ್ಸಾಗಿತ್ತು. ಬಾಲಬಳಗ ಶಾಲೆಯಲ್ಲಿ ತಬಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು ಇವರು ಇವರು ಹೆಂಡತಿ…ಸಹೋದರ ಸಹೋದರಿಯರು ಮತ್ತು ಅಪಾರ ಶಿಷ್ಯಬಳಗವನ್ನು ಅಗಲಿದ್ದಾರೆ. ಹಿಂದುಸ್ತಾನಿ ತಬಲಾ ಕಲಾವಿದರು ಹಾಗೂ ತಬಲಾ … Continued

ಅದೇನ್‌ ಭಯ-ಭಕ್ತಿ..: ದೇವರ ಪಾದಮುಟ್ಟಿ ನಮಸ್ಕರಿಸಿ ಅದೇ ದೇವರ ಹುಂಡಿ ಕದ್ದ ಕಳ್ಳ…! ಈ ವಿಡಿಯೊ ವೀಕ್ಷಿಸಿ

ಥಾಣೆ: ದೇವಸ್ಥಾನದಲ್ಲಿ ಹುಂಡಿ ಕದಿಯಲು ಬಂದಿದ್ದ ಕಳ್ಳನೊಬ್ಬ ಕಳ್ಳತನಕ್ಕೂ ಮುನ್ನ ಆತ ಮಾಡಿದ ಕೆಲಸಕ್ಕೆ ಅಚ್ಚರಿಪಡಲೇಬೇಕು.. ಕಳ್ಳನಿಗೂ ಭಯ-ಭಕ್ತಿ ಇದೆಯಾ ಎಂದು ಕೇಳಬೇಡಿ. ಯಾಕೆಂದರೆ ಈ ಕಳ್ಳ ಹುಂಡಿ ಕದಿಯುವಾಗ ದೇವರ ಪಾದ ಮುಟ್ಟಿ ನಮಸ್ಕರಿಸಿ ನಂತರ ಅದೇ ದೇವರ ಹುಂಡಿ ಕದ್ದಿದ್ದಾನೆ..! ಈ ದೃಶ್ಯ ದೇಗುಲದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಎಲ್ಲೆಡೆ ವೈರಲ್​ ಆಗುತ್ತಿದೆ. … Continued

ಪಂಜಾಬ್ ಚುನಾವಣೆಯಲ್ಲಿ ನಟ ಸೋನು ಸೂದ್ ಸೋದರಿ ಸ್ಪರ್ಧೆ: ಆದ್ರೆ ಪಕ್ಷ ಯಾವುದೆಂದು ಸಸ್ಪೆನ್ಸ್

ಚಂಡೀಗಡ:: ಬಾಲಿವುಡ್ ನಟ ಸೋನು ಸೂದ್ ಅವರ ಸಹೋದರಿ ಮಾಳವಿಕಾ ಸೂದ್ ಅವರು ಮುಂದಿನ ವರ್ಷ ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಮೊಗಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ನಟ ಸೂದ್‌ ಈ ಕುರಿತು ಘೋಷಣೆ ಮಾಡಿದ್ದು, ಆದರೆ ಅವರು ಯಾವ ಪಕ್ಷ ಸೇರಲಿದ್ದಾರೆ ಎಂಬ ಬಗ್ಗೆ ಮಾಹಿತಿ ಬಹಿರಂಗಪಡಿಸಿಲ್ಲ. “ಮಾಳವಿಕಾ ರೆಡಿ. ಜನರ ಸೇವೆಗೆ ಅವರ ಬದ್ಧತೆ … Continued

ಬಿಟ್‌ ಕಾಯಿನ್ ಹಗರಣದ ಹಿಂದೆ ಯಾರ‍್ಯಾರಿದ್ದಾರೋ ಅವರನ್ನೆಲ್ಲ ಬಲಿ ಹಾಕ್ತೇವೆ: ಸಿಎಂ ಬೊಮ್ಮಾಯಿ

ಬೆಂಗಳೂರು: ಬಿಟ್ ಕಾಯಿನ್ ಹಗರಣದ ಹಿಂದೆ ಯಾರ್ಯಾರು ಇದ್ದಾರೆಯೋ ಅವರ್ಯಾರನ್ನೂಬಿಡುವುದಿಲ್ಲ. ಖಂಡಿತವಾಗಿ ಅವರನ್ನು ಬಲಿ ಹಾಕುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಟ್ ಕಾಯಿನ್ ಹಗರಣ 2016ರಿಂದ ನಡೆಯುತ್ತಿದೆ ಎಂದು ಕಾಂಗ್ರೆಸ್‍ನವರು ಹೇಳುತ್ತಿದ್ದಾರೆ. 2016ರಿಂದ ಕರ್ನಾಟಕದಲ್ಲಿ ಬಿಟ್ ಕಾಯಿನ್ ಹಗರಣ ಇದ್ದಿದ್ದಾದರೆ ರಾಜ್ಯದಲ್ಲೇ ಅವರದ್ದೇ ಸರ್ಕಾರ ಅಧಿಕಾರದಲ್ಲಿತ್ತು. … Continued

ಮನೆ ಗೋಡೆ ಕುಸಿದು ದಂಪತಿ ಸಾವು, ಮತ್ತೊಬ್ಬರಿಗೆ ಗಾಯ

ಚಿತ್ರದುರ್ಗ : ಕಳೆದ ಮೂರು ದಿನಗಳಿಂದಲೂ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪಕ್ಕದ ಮನೆಯ ಗೋಡೆ ಕುಸಿದು ಮಲಗಿದ್ದ ದಂಪತಿ ಜೀವಂತ ಸಮಾಧಿಯಾದ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕಾರೋಬನಹಟ್ಟಿಯಲ್ಲಿ ನಡೆದಿದೆ. ಕಾರೋಬನಹಟ್ಟಿಯ ನಿವಾಸಿ ಚನ್ನಕೇಶವ (26) ಮತ್ತು ಸೌಮ್ಯ (21)ಮೃತ ದಂಪತಿ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಚೆನ್ನಕೇಶವ ಅವರ ತಂದೆ ಕ್ಯಾತಣ್ಣ ಗಂಭೀರವಾಗಿ ಗಾಯಗೊಂಡಿದ್ದಾರೆ. … Continued

1.5 ಕೋಟಿ ರೂ. ಮೋಸ ಮಾಡಿದ ಆರೋಪ: ಶಿಲ್ಪಾ ಶೆಟ್ಟಿ, ರಾಜ್​ ಕುಂದ್ರಾ, ಇತರರ ವಿರುದ್ಧ ದೂರು​ ದಾಖಲು

1.5 ಕೋಟಿ ರೂ. ಮೋಸ ಮಾಡಿದ ಆರೋಪ:ಶಿಲ್ಪಾ ಶೆಟ್ಟಿ, ರಾಜ್​ ಕುಂದ್ರಾ ವಿರುದ್ಧ ದೂರು​ ದಾಖಲು ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರಿಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಅಶ್ಲೀಲ ಸಿನಿಮಾ ನಿರ್ಮಾಣದ ಆರೋಪದಲ್ಲಿ ಅವರ ಪತಿ ರಾಜ್​ ಕುಂದ್ರಾ (Raj Kundra) ಜೈಲು ವಾಸ ಅನುಭವಿಸಿ ಜಾಮೀನಿನ ಮೇಲೆ ಹೊರಬಂದ ಬೆನ್ನಿಗೇ ಈಗ … Continued