೬೭ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ: ಕರ್ನಾಟಕ ರಾಜ್ಯದ ರಚನೆಯ ಶ್ರೀಕಾರ ಆಗಿದ್ದು ಉತ್ತರ ಕರ್ನಾಟಕದಲ್ಲಿ

ಕರ್ನಾಟಕ ಉದಯವಾಗಿ (ನವೆಂಬರ್ ೧) ೬೭ ವರ್ಷವಾಯಿತು. ಕನ್ನಡಿಗರ ಸ್ವಾಭಿಮನದ ಸಂಕೇತವಾದ ರಾಜ್ಯೋತ್ಸವ ಮತ್ತು ಕರುನಾಡಿನ ಏಕೀಕರಣದ ಕಥೆಯೇ ಭಾರೀ ರೋಚಕವಾಗಿದೆ. ಈಗ ಕರ್ನಟಕವೆಂದು ಕರೆಯಲ್ಪಡುವ ರಾಜ್ಯ ಸುಮಾರು ಆರು ದಶಕಗಳ ಹಿಂದೆ, ೨೦ ವಿವಿಧ ಪ್ರಾಂತ್ಯಗಳಾಗಿ ಹರಿದು ಹಂಚಿ ಹೋಗಿತ್ತು. ನಮ್ಮ ಅಸ್ತಿತ್ವ ಮತ್ತು ಸ್ವಂತಿಕೆ ಎನ್ನುವುದು ಕನಸಿನ ಮಾತಾಗಿತ್ತು. ವಿಜಯನಗರ ಕಾಲದವರೆಗೂ ದೊಡ್ಡ … Continued

ಜ್ಯೋತಿಷ್ಯದ ಮುನ್ಸೂಚನೆ: ಪ್ರಿಯಕರನಿಗೆ ವಿಷಪ್ರಾಶನ ಮಾಡಿದ್ದನ್ನು ಒಪ್ಪಿಕೊಂಡ ವಿದ್ಯಾರ್ಥಿನಿ…!

ತಿರುವನಂತಪುರಂ: ಕೇರಳದ ಗಡಿಯಲ್ಲಿರುವ ತಮಿಳುನಾಡಿನ ರಾಮವರ್ಮನ್ ಚಿರಾದ ಸ್ನಾತಕೋತ್ತರ ವಿದ್ಯಾರ್ಥಿನಿಯೊಬ್ಬಳು ಆಯುರ್ವೇದ ಔಷಧದಲ್ಲಿ ವಿಷಕಾರಿ ರಾಸಾಯನಿಕವನ್ನು ಬೆರೆಸಿ ತನ್ನ ಪ್ರೇಮಿಗೆ ವಿಷವನ್ನು ನೀಡಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಕೇರಳ ಪೊಲೀಸರು ಭಾನುವಾರ ತಿಳಿಸಿದ್ದಾರೆ. 22 ವರ್ಷದ ಶರೋನ್ ರಾಜ್ ಎಂಬುವವರಿಗೆ ಅಕ್ಟೋಬರ್ 14 ರಂದು ತಾಮ್ರದ ಸಲ್ಫೇಟ್ ಮಿಶ್ರಿತ ಪಾನೀಯವನ್ನು ನೀಡಲಾಯಿತು ಮತ್ತು ಪಾನೀಯವನ್ನು ಸೇವಿಸಿದ ನಂತರ … Continued

ನಾಳೆ ರಾಜ್ಯೋತ್ಸವ ದಿನದಂದು ಮೊಬೈಲ್ ಅಪ್ಲಿಕೇಶನ್ ಆಧಾರಿತ ಕ್ಯೂಆರ್ ಟಿಕೆಟಿಂಗ್ ವ್ಯವಸ್ಥೆ ಆರಂಭಿಸಲಿರುವ ನಮ್ಮ ಮೆಟ್ರೋ

ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ನವೆಂಬರ್ 1ರಿಂದ ಮೊಬೈಲ್ ಅಪ್ಲಿಕೇಶನ್ ಆಧಾರಿತ QR ಟಿಕೆಟಿಂಗ್ ವ್ಯವಸ್ಥೆಯನ್ನು ಪ್ರಾರಂಭಿಸಲು ಸಿದ್ಧವಾಗಿದೆ. ಈ ಉಪಕ್ರಮವು ಸ್ಮಾರ್ಟ್ ಕಾರ್ಡ್ ಅಥವಾ ಟೋಕನ್‌ಗಳನ್ನು ಬಳಸದೆಯೇ ಮೆಟ್ರೋ ಪ್ರಯಾಣ ಮಾಡಲು ಪ್ರಯಾಣಿಕರಿಗೆ ಸಹಾಯ ಮಾಡುತ್ತದೆ. ಹೊಸ ಟಿಕೆಟಿಂಗ್ ವ್ಯವಸ್ಥೆಯನ್ನು ಪ್ರಾರಂಭಿಸಲು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ … Continued

ಬಿಎಸ್‌ಎನ್‌ಎಲ್‌ನಿಂದ 1,198 ರೂ.ಗಳಿಗೆ ಒಂದು ವರ್ಷದ ಅವಧಿಯ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್‌

ಬಿಎಸ್‌ಎನ್‌ಎಲ್‌ (BSNL) ತನ್ನ ಎಲ್ಲಾ ಪ್ರಿಪೇಯ್ಡ್ ಬಳಕೆದಾರರಿಗೆ ಈ ದೀಪಾವಳಿಯಲ್ಲಿ ಹೊಸ ಟ್ಯಾರಿಫ್ ಯೋಜನೆಗಳನ್ನು ಪರಿಚಯಿಸಿದೆ. ಕಂಪನಿಯು ಬಿಎಸ್‌ಎನ್‌ಎಲ್‌ (BSNL) ನ ದೀಪಾವಳಿ ಆಫರ್ 2022 ನೊಂದಿಗೆ 1198 ರೂ. ಮತ್ತು 439 ರೂ.ಗಳ ಎರಡು ಯೋಜನೆಗಳೊಂದಿಗೆ ಬಂದಿದೆ. 1198 ರೂ. ಯೋಜನೆಯು ಒಂದು ವರ್ಷದ ಅವಧಿಗೆ ಮಾನ್ಯವಾಗಿರುತ್ತದೆ ಹಾಗೂ 439 ರೂ. ಯೋಜನೆಯು ಮೂರು … Continued

ಅತ್ಯಾಚಾರ ಸಂತ್ರಸ್ತರಿಗೆ ಎರಡು-ಬೆರಳಿನ ಪರೀಕ್ಷಾ ನಿಷೇಧ ಪುನರುಚ್ಚರಿಸಿದ ಸುಪ್ರೀಂ ಕೋರ್ಟ್‌ : ಪರೀಕ್ಷೆಗೆ ಒಳಪಡಿಸುವವರು ತಪ್ಪಿತಸ್ಥರು ಎಂದ ಸರ್ವೋಚ್ಛ ನ್ಯಾಯಾಲಯ

ನವದೆಹಲಿ: ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಸಂತ್ರಸ್ತ ಮಹಿಳೆಗೆ ಎರಡು ಬೆರಳಿನ ಪರೀಕ್ಷೆ ನಡೆಸುವ ಯಾವುದೇ ವ್ಯಕ್ತಿ ದುರ್ನಡತೆಯ ತಪ್ಪಿತಸ್ಥನಾಗುತ್ತಾನೆ ಎಂದು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಅತ್ಯಾಚಾರ ಸಂತ್ರಸ್ತರು ಹಾಗೂ ಲೈಂಗಿಕ ದೌರ್ಜನಕ್ಕೆ ಒಳಗಾದವರನ್ನು ಎರಡು ಬೆರಳುಗಳ ಪರೀಕ್ಷೆಗೆ ಒಳಪಡಿಸದಂತೆ ತಡೆಯಬೇಕು ಹಾಗೂ ನಿಗಾ ವಹಿಸಬೇಕು ಎಂದು ಸುಪ್ರೀಂ ಕೋರ್ಟ್ ಕೇಂದ್ರ … Continued

ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ : ಬಿಜೆಪಿ ಮೇಲುಗೈ; ಮುಗ್ಗರಿಸಿದ ಕಾಂಗ್ರೆಸ್‌

ವಿಜಯಪುರ: ಇಲ್ಲಿನ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು,  35 ಸ್ಥಾನಗಳಲ್ಲಿ 17 ಸ್ಥಾನ ಗೆಲ್ಲುವ ಮೂಲಕ ಬಿಜೆಪಿ ಮೇಲುಗೈ ಸಾಧಿಸಿದೆ. ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಪ್ರತಿಷ್ಠೆಯ ಕಣವಾಗಿದ್ದ ವಿಜಯ ನಗರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅವರು ತಮ್ಮ ವರ್ಚಸ್ಸು ಹೆಚ್ಚಿಸಿಕೊಂಡಂತಾಗಿದೆ. 35 ವಾರ್ಡುಗಳಲ್ಲಿ ಬಿಜೆಪಿ-17, ಕಾಂಗ್ರೆಸ್‌-10, ಪಕ್ಷೇತರರು-5, ಎಐಎಂಐಎಂ-2, ಜೆಡಿಎಸ್‌-1 … Continued

ಮೊರ್ಬಿ ತೂಗು ಸೇತುವೆ ದುರಂತದಲ್ಲಿ 141 ಜನರು ಸಾವು : ಸೇತುವೆ ಕುಸಿದು ಬೀಳುವ ಕ್ಷಣದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಗುಜರಾತ್‌ನ ಮೊರ್ಬಿ ತೂಗು ಸೇತುವೆ ಭಾನುವಾರ ಕುಸಿದು 141 ಜನರ ಸಾವಿಗೆ ಕಾರಣವಾಯಿತು ಮತ್ತು ಅನೇಕರು ಗಾಯಗೊಂಡರು. ಮೋರ್ಬಿ ಸೇತುವೆ ಕುಸಿದುಬಿದ್ದ ಕ್ಷಣದ ವೀಡಿಯೊವೊಂದು ವೈರಲ್‌ ಆಗಿದ್ದು, ಸೇತುವೆ ಕುಸಿಯುವ ಮುನ್ನ ಜನರು ಅಲುಗಾಡುತ್ತಿರುವುದನ್ನು ಕಾಣಬಹುದು. ಸೆಕ್ಷನ್ 304, 308 ಮತ್ತು 114 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಸೇತುವೆಯನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿರುವ “ಏಜೆನ್ಸಿ” … Continued

ಮೊರ್ಬಿಯಲ್ಲಿ ಕೆಲ ಯುವಕರು ಉದ್ದೇಶಪೂರ್ವಕವಾಗಿ ಸೇತುವೆ ಅಲ್ಲಾಡಿಸುತ್ತಿದ್ದರು…ನಡೆಯಲೂ ಸಾಧ್ಯವಿರಲಿಲ್ಲ, ಅರ್ಧದಲ್ಲೇ ವಾಪಸ್ಸಾದೆವು: ಕುಟುಂಬದ ಹೇಳಿಕೆ | ವೀಡಿಯೊ ವೈರಲ್

ಅಹ್ಮದಾಬಾದ್‌: ಗುಜರಾತ್‌ನ ಮೊರ್ಬಿಯಲ್ಲಿನ ಮಚ್ಚು ಅಣೆಕಟ್ಟಿನ ಮೇಲಿನ ತೂಗು ಸೇತುವೆ ಕುಸಿದಿದ್ದರಿಂದ ಮಕ್ಕಳು ಸೇರಿದಂತೆ 140 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಹಲವರಿಗಾಗಿ ಇನ್ನೂ ಹುಡುಕಾಟ ನಡೆದಿದೆ. ಇದೀಗ ಸೇತುವೆಯ ಮೇಲೆ ನೂರಾರು ಜನರು ಜಿಗಿಯುವುದ, ಓಡುವುದು ಮಾಡುತ್ತಿರುವ ವಿಡಿಯೋವೊಂದು ಹೊರಬಿದ್ದಿದೆ. ಈ ವೇಳೆ ಕೇಬಲ್ ಸೇತುವೆ ಜೋರಾಗಿ ತೂಗಾಡುತ್ತಿರುವುದು ಕಂಡುಬಂದಿದೆ. ಕೆಲವು ಯುವಕರು ತೂಗು … Continued

ಟ್ವಿಟರ್‌ನಲ್ಲಿ ಬ್ಲೂ ಟಿಕ್‌ಗೆ ಪ್ರತಿ ತಿಂಗಳ ಶುಲ್ಕ ಶೀಘ್ರವೇ ಇನ್ನಷ್ಟು ಏರಿಕೆಯಾಗಬಹುದು: ವರದಿ

ನವದೆಹಲಿ: ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರು ಟ್ವಿಟರ್ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಮೈಕ್ರೋಬ್ಲಾಗಿಂಗ್ ಸೈಟ್ ತನ್ನ ಸಂಪೂರ್ಣ ಬಳಕೆದಾರರ ಪರಿಶೀಲನೆ ಪ್ರಕ್ರಿಯೆಯನ್ನು ಪರಿಷ್ಕರಿಸಲು ಯೋಜಿಸುತ್ತಿದೆ ಎಂದು ವರದಿಯಾಗಿದೆ. ಇದನ್ನು ಎಲೋನ್ ಮಸ್ಕ್ ಅವರು ಭಾನುವಾರ ಟ್ವೀಟ್‌ನಲ್ಲಿ ದೃಢಪಡಿಸಿದ್ದಾರೆ, “ಇಡೀ ಪರಿಶೀಲನೆ ಪ್ರಕ್ರಿಯೆಯನ್ನು ಇದೀಗ ನವೀಕರಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಟೆಕ್ ವೆಂಚರ್ ಕ್ಯಾಪಿಟಲಿಸ್ಟ್ ಶ್ರೀರಾಮ … Continued

ಆರ್‌ಎಸ್‌ಎಸ್‌ ಹಿರಿಯ ಪ್ರಚಾರಕ, ಲೇಖಕ ಚಂದ್ರಶೇಖರ ಭಂಡಾರಿ ನಿಧನ

ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಹಿರಿಯ ಪ್ರಚಾರಕ, ಲೇಖಕ ಚಂದ್ರಶೇಖರ ಭಂಡಾರಿ (87) ಅವರು ಭಾನುವಾರ ಬೆಂಗಳೂರಿನಲ್ಲಿ ನಿಧನರಾದರು. ಮೂಲತಃ ಮಂಗಳೂರಿನವರಾದ ಚಂದ್ರಶೇಖರ ಅವರು ಆರ್‌ಎಸ್‌ಎಸ್‌ನ ಪ್ರಚಾರ ಪ್ರಮುಖರಾಗಿ ಕಾರ್ಯನಿರ್ವಹಿಸಿದ್ದರು. ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಲೇಖಕ, ಅನುವಾದಕ, ಕವಿಯಾಗಿಯೂ ಗುರುತಿಸಿಕೊಂಡಿದ್ದ ಅವರು ಅಂಬೇಡ್ಕರ್‌ ಅವರ ಜೀವನದ ಕುರಿತ … Continued