ಪುಣ್ಯಕೋಟಿ ದತ್ತು ಯೋಜನೆಗೆ ದೇಣಿಗೆ ನೀಡಲು ನಿರ್ಧಾರ ಮಾಡಿದ ಸರ್ಕಾರಿ ನೌಕರರು

ಬೆಂಗಳೂರು: ಪುಣ್ಯಕೋಟಿ ದತ್ತು ಯೋಜನೆಗೆ ಸಹಕಾರ ನೀಡುವ ನಿಟ್ಟಿನಲ್ಲಿ ಒಂದು ದಿನದ ವೇತನ ನೀಡಲು ಸರ್ಕಾರಿ ನೌಕರರು ನಿರ್ಧರಿಸಿದ್ದಾರೆ. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಈ ನಿರ್ಧಾರ ಪ್ರಕಟಿಸಿದ್ದಾರೆ. ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸರ್ಕಾರಿ ನೌಕರರ ಸಂಘದವರು ಭೇಟಿ ಮಾಡಿದ ಸಂದರ್ಭದಲ್ಲಿ ಪುಣ್ಯಕೋಟಿ ದತ್ತು ಯೋಜನೆಗೆ ಮುಖ್ಯಮಂತ್ರಿ ಬೊಮ್ಮಾಯಿ ಈ ಬಗ್ಗೆ … Continued

ಹೊಸೂರು: ಕೆಮಿಕಲ್‌ ಬಾಯ್ಲರ್‌ ಸ್ಪೋಟ, ಹಲವು ಮಕ್ಕಳು ಆಸ್ಪತ್ರೆಗೆ ದಾಖಲು-ವರದಿ

ಹೊಸೂರು: ಕರ್ನಾಟಕ-ತಮಿಳುನಾಡಿನ ಗಡಿಭಾಗದ ಹೊಸೂರಿನಲ್ಲಿ ಕೆಮಿಕಲ್‌ ಬಾಯ್ಲರ್‌ ಸ್ಫೋಟಗೊಂಡು ಫ್ಯಾಕ್ಟರಿಯ ಮುಂಭಾಗದಲ್ಲಿರುವ ಕಾರ್ಪೊರೇಷನ್‌ ಶಾಲೆಯ ನೂರಾರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಮಕ್ಕಳು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಹೊಸೂರಿನಲ್ಲಿರುವ ಖಾಸಗಿ ಕಂಪನಿಯ ಕೆಮಿಕಲ್‌ ಬಾಯ್ಲರ್‌ ಸ್ಫೋಟಗೊಂಡ ಬಳಿಕ ರಾಸಾಯನಿಕ ಸೋರಿಕೆಯಾಗಿದೆ. ಸುತ್ತಲಿನ ಪ್ರದೇಶದಲ್ಲಿ, ಗಾಳಿಯಲ್ಲಿ ಈ ರಾಸಾಯನಿಕ ವ್ಯಾಪಿಸಿ ಕಾರ್ಖಾನೆಯ ಮುಂಭಾಗದಲ್ಲಿರುವ ಶಾಲಾ … Continued

ಗುಜರಾತ್‌: ತಾಂತ್ರಿಕ ಆಚರಣೆ ನೆಪದಲ್ಲಿ 3 ದಿನ ಅನ್ನ ನೀರು ಕೊಡದೆ ಚಿತ್ರಹಿಂಸೆ ನೀಡಿ 14 ವರ್ಷದ ಮಗಳನ್ನೇ ಕೊಂದ ತಂದೆ, ಚಿಕ್ಕಪ್ಪ…!

ಗುಜರಾತ್‌ನ ತಲಾಲಾ ತಾಲೂಕಿನಲ್ಲಿ ನಡೆದ ಭೀಕರ ಘಟನೆಯೊಂದರಲ್ಲಿ ತಂದೆಯೊಬ್ಬ ತನ್ನ ಮಗಳನ್ನೇ ಬಲಿಕೊಟ್ಟು ಕೊಂದಿದ್ದಾನೆ. ಹತ್ಯೆಗೀಡಾದ ಬಾಲಕಿಯನ್ನು 14 ವರ್ಷದ ಧೈರ್ಯ ಎಂದು ಗುರುತಿಸಲಾಗಿದ್ದು, ಆಕೆ 9ನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು. ಪೊಲೀಸರು ನಡೆಸಿದ ತನಿಖೆಯಲ್ಲಿ ಬಾಲಕಿಯ ತಂದೆ ಭವೇಶ್ ಅಕಬರಿ ಹಾಗೂ ಆತನ ಅಣ್ಣ ದಿಲೀಪ್ ಅಕಬರಿ ಇಬ್ಬರೂ ಬಾಲಕಿಯನ್ನು ಭೂತದ ಕಾಟದಿಂದ ಅವಳನ್ನು ಹೊರಗೆ … Continued

ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಾದ ನಂತರ ಮೊದಲ ಪ್ರಕರಣ ದಾಖಲು

ಬೆಂಗಳೂರು: ಮತಾಂತರ ನಿಷೇಧ ಕಾಯ್ದೆ ಜಾರಿ ನಂತರ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಮೊದಲ ಪ್ರಕರಣ ದಾಖಲಾಗಿದೆ. ಕರ್ನಾಟಕ ಮತಾಂತರ ನಿಷೇಧ ಕಾಯ್ದೆಯಡಿ ಯಶವಂತಪುರದ ಬಿ.ಕೆ. ನಗರ ನಿವಾಸಿ ಸೈಯದ್ ಮೊಹಿನ್ (23) ಎಂಬ ಯುವಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಉತ್ತರ ಪ್ರದೇಶ ಮೂಲದ 19 ವರ್ಷದ ಯುವತಿಯನ್ನು ಕರೆದೊಯ್ದು ಮೊಹಿನ್ ಆಂಧ್ರಪ್ರದೇಶದಲ್ಲಿ ಮತಾಂತರ ಮಾಡಿದ್ದ … Continued

ಅಮೆರಿಕ ವಿಮಾನ ನಿಲ್ದಾಣದಲ್ಲಿ ಪಾಕಿಸ್ತಾನದ ಹಣಕಾಸು ಸಚಿವ ಇಶಾಕ್ ದಾರ್ ವಿರುದ್ಧ ‘ಕಳ್ಳ ಕಳ್ಳ ಎಂದು ಘೋಷಣೆ | ವೀಕ್ಷಿಸಿ

ಅಮೆರಿಕ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪಾಕಿಸ್ತಾನದ ಹಣಕಾಸು ಸಚಿವ ಇಶಾಕ್ ದಾರ್ ವಿರುದ್ಧ ‘ಚೋರ್-ಚೋರ್’ ಎಂಬ ಘೋಷಣೆಗಳನ್ನು ಕೂಗಲಾಯಿತು.ಪಾಕಿಸ್ತಾನದ ಹಣಕಾಸು ಸಚಿವರ ಮೇಲೆ ವಿರುದ್ಧ ವ್ಯಕ್ತಿಯೊಬ್ಬರು ಚೋರ್‌ ಚೋರ್‌ ಎಂದು ಕೂಗಿ ಅವಹೇಳನ ಮಾಡಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಾಷಿಂಗ್ಟನ್‌ನಲ್ಲಿ ಐಎಂಎಫ್‌ನಿಂದ ಸಾಲ ಪಡೆಯುವುದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಪಾಲ್ಗೊಳ್ಳಲು ದಾರ್ ಅಲ್ಲಿದ್ದರು. … Continued

ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಿಸಿದ ಚುನಾವಣಾ ಆಯೋಗ

ನವದೆಹಲಿ: ಹಿಮಾಚಲ ಪ್ರದೇಶದಲ್ಲಿ ನವೆಂಬರ್ 12 ರಂದು ವಿಧಾನಸಭೆ ಚುನಾವಣೆ ನಡೆಯಲಿದೆ ಮತ್ತು ಡಿಸೆಂಬರ್ 8 ರಂದು ಮತಗಳನ್ನು ಎಣಿಕೆ ಮಾಡಲಾಗುತ್ತದೆ ಎಂದು ಚುನಾವಣಾ ಆಯೋಗ ಶುಕ್ರವಾರ  ತಿಳಿಸಿದೆ. ಆದರೆ ಗುಜರಾತ್‌ನ ಚುನಾವಣಾ ದಿನಾಂಕಗಳನ್ನು ಪ್ರಕಟಿಸಲಾಗಿಲ್ಲ, ಅಾಲ್ಲಿಯೂ ಕೂಡ ಶೀಘ್ರವೇ ಚುನಾವಣಾ ದಿನಾಂಕವನ್ನು ಪ್ರಕಟಿಸುವ ನಿರೀಕ್ಷೆಯಿದೆ. ಒಟ್ಟು 68 ಸ್ಥಾನಗಳನ್ನು ಹೊಂದಿರುವ ಹಿಮಾಚಲ ಪ್ರದೇಶ ವಿಧಾನಸಭೆಯ … Continued

ನವೆಂಬರ್ 10ರಿಂದ ಮೈಸೂರು-ಬೆಂಗಳೂರು- ಚೆನ್ನೈ ಮಾರ್ಗದಲ್ಲಿ ‘ವಂದೇ ಭಾರತ್ ರೈಲು’ ಸಂಚಾರ

ನವದೆಹಲಿ: ದೀಪಾವಳಿಯ ನಂತರ ನವೆಂಬರ್ 10ರಿಂದ ಭಾರತದಲ್ಲಿ ಐದನೇ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಆರಂಭಗೊಳ್ಳಲಿದ್ದು, ಇದು ಬೆಂಗಳೂರು-ಚೆನ್ನೈ ಮಧ್ಯೆ ಸಂಚರಿಸಲಿದೆ. 5ನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ನವೆಂಬರ್ 10 ರಂದು ಚೆನ್ನೈ, ಬೆಂಗಳೂರು ಮತ್ತು ಮೈಸೂರಿಗೆ ಸಂಪರ್ಕ ಕಲ್ಪಿಸಲಿದೆ. ಚೆನ್ನೈನಿಂದ ಬೆಂಗಳೂರಿನ ಮೂಲಕ ಮೈಸೂರಿಗೆ ಸಂಚರಿಸುವ ರೈಲು ನವೆಂಬರ್ 5 ರಂದು … Continued

ಜ್ಞಾನವಾಪಿ ಮಸೀದಿ ವಿವಾದ: ‘ಶಿವಲಿಂಗ’ ರಚನೆಯ ಕಾರ್ಬನ್ ಪರೀಕ್ಷೆಗೆ ಅನುಮತಿ ನಿರಾಕರಿಸಿದ ವಾರಾಣಸಿ ಕೋರ್ಟ್

ವಾರಾಣಸಿ: ಜ್ಞಾನವಾಪಿ ಮಸೀದಿ ಆವರಣದಲ್ಲಿ ‘ಶಿವಲಿಂಗ’ದ ಯಾವುದೇ ಕಾರ್ಬನ್ ಡೇಟಿಂಗ್‌ಗೆ ಅನುಮತಿಸಲಾಗುವುದಿಲ್ಲ ಎಂದು ವಾರಾಣಸಿ ಜಿಲ್ಲಾ ನ್ಯಾಯಾಲಯವು ಆದೇಶ ನೀಡಿದೆ. ಜ್ಞಾನವಾಪಿ ಮಸೀದಿಯ ವಝುಖಾನಾ ಅಥವಾ ಜಲಾಶಯದೊಳಗೆ ಪತ್ತೆಯಾದ ಶಿವಲಿಂಗ ಎಂದು ಹೇಳಿಕೊಳ್ಳುವ ರಚನೆಯ ಕಾರ್ಬನ್ ಡೇಟಿಂಗ್‌ಗೆ ಒತ್ತಾಯಿಸಿ ಹಿಂದೂ ಕಡೆಯವರು ಸಲ್ಲಿಸಿದ ಮನವಿಯನ್ನು ವಾರಣಾಸಿ ನ್ಯಾಯಾಲಯ ಶುಕ್ರವಾರ ತಿರಸ್ಕರಿಸಿದೆ. ಜಿಲ್ಲಾ ನ್ಯಾಯಾಧೀಶ ಡಾ.ಎ.ಕೆ.ವಿಶ್ವೇಶ ಆದೇಶ … Continued

ಮಹಿಳೆಯ ಕಣ್ಣಿನಲ್ಲಿತ್ತು 23 ಕಾಂಟ್ಯಾಕ್ಟ್ ಲೆನ್ಸ್‌ಗಳು…!! ಹೊರತೆಗೆದ ವೈದ್ಯರು

ಕಣ್ಣಿನ ತೊಂದರೆಗಾಗಿ ಮಹಿಳೆಯೊಬ್ಬರು ವೈದ್ಯರ ಬಳಿ ಭೇಟಿ ನೀಡಿದಾಗ ಆಕೆಯ ಕಣ್ಣಿನ ರೆಪ್ಪೆಯ ಕೆಳಗೆ ಕಾಂಟ್ಯಾಕ್ಟ್ ಲೆನ್ಸ್‌ಗಳ ಆತಂಕಕಾರಿ ಪ್ರಮಾಣದಲ್ಲಿ ಕಂಡುಬಂದಿದೆ…! ಈ ಮಹಿಳೆ ಸತತವಾಗಿ 23 ರಾತ್ರಿಗಳವರೆಗೆ ಪ್ರತಿ ರಾತ್ರಿ ಮಲಗುವ ಮೊದಲು ತನ್ನ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ತೆಗೆದುಹಾಕಲು ‘ಮರೆತಿದ್ದಾಳೆ’…!! ಆ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ತೆಗೆದುಹಾಕುವ ಪ್ರಕ್ರಿಯೆಯ ವೀಡಿಯೊ ಈಗ ವೈರಲ್‌ ಆಗಿದ್ದು, ಡಾ … Continued

ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ ಪೂಂಜಾ ಕಾರು ಅಡ್ಡಗಟ್ಟಿ ತಲವಾರ್‌ ಝಳಪಿಸಿದ ದುಷ್ಕರ್ಮಿಗಳು

ಮಂಗಳೂರು: ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ ಪೂಂಜಾ ಕಾರಿಗೆ ಅಡ್ಡಗಟ್ಟಿ ದುಷ್ಕರ್ಮಿಯೊಬ್ಬ ತಲವಾರು ಝಳಪಿಸಿದ ಘಟನೆ ಮಂಗಳೂರು ಹೊರವಲಯದ ಪರಂಗಿಪೇಟೆಯಲ್ಲಿ ನಡೆದ ಬಗ್ಗೆ ವರದಿಯಾಗಿದೆ. ನಿನ್ನೆ ರಾತ್ರಿ ಸುಮಾರು 11:30 ಗಂಟೆ ಶಾಸಕರು ತೆರಳುತ್ತಿದ್ದ ಕಾರು ಅಡ್ಡಗಟ್ಟಿ ಬೆದರಿಕೆ ಹಾಕಿದ್ದಾರೆ ಎಂದು ದೂರು ದಾಖಲಾಗಿದೆ. ಬೆಳ್ತಂಗಡಿಗೆ ಶಾಸಕ ಹರೀಶ ಪೂಂಜಾ ತನ್ನ ಕಾರನ್ನು ಬಿಟ್ಟು ಸಂಬಂಧಿಯೋರ್ವರ … Continued