ರಾಜಸ್ಥಾನದಲ್ಲಿ ಜನಿಸಿದ 26 ಬೆರಳುಗಳುಳ್ಳ ಅಪರೂಪದ ಹೆಣ್ಣು ಮಗು : ದೇವತೆಯ ಅವತಾರ ಎಂದ ಕುಟುಂಬ

ಕಮಾನ್ (ರಾಜಸ್ಥಾನ): ರಾಜಸ್ಥಾನದ ಕಮಾನ್ ಪಟ್ಟಣದಲ್ಲಿ 26 ಬೆರಳುಗಳುಳ್ಳ ಹೆಣ್ಣು ಮಗು ಜನಿಸಿದೆ. ಆಕೆಯ ಕುಟುಂಬವು ಅವಳನ್ನು “ದೇವತೆಯ ಅವತಾರ” ಎಂದು ಕರೆದಿದೆ. ಅವಳ ಪ್ರತಿ ಕೈಗೆ ಏಳು ಬೆರಳುಗಳು ಮತ್ತು ಪ್ರತಿ ಕಾಲಿನಲ್ಲಿ ಆರು ಬೆರಳುಗಳಿವೆ. ಈ ಶಿಶುವನ್ನು ಆಕೆಯ ಕುಟುಂಬದವರು ಅವಳನ್ನು ದೇವಿಯ ಅವತಾರವೆಂದು ಪರಿಗಣಿಸಿದ್ದಾರೆ. ಮಗುವನ್ನು ನೋಡಲು ಜನರು ತಂಡೋಪ ತಂಡೋಪವಾಗಿ … Continued

ಏಷ್ಯಾ ಕಪ್ 2023 : W,0,W,W,4,W – ಶ್ರೀಲಂಕಾ ವಿರುದ್ಧ ಭಾರತದ ಮೊಹಮ್ಮದ್ ಸಿರಾಜ್ ಓವರಿಗೆ ಎಲ್ಲರೂ ದಿಗ್ಭ್ರಮೆ | ವೀಕ್ಷಿಸಿ

ಭಾನುವಾರ ಭಾರತ ಮತ್ತು ಶ್ರೀಲಂಕಾ ನಡುವಿನ ಏಷ್ಯಾ ಕಪ್ 2023 ರ ಫೈನಲ್‌ನಲ್ಲಿ ಒಂದೇ ಓವರ್‌ನಲ್ಲಿ ನಾಲ್ಕು ವಿಕೆಟ್ ಸೇರಿದಂತೆ ಆರು ವಿಕೆಟ್‌ಗಳನ್ನು ಪಡೆದ ಮೊಹಮ್ಮದ್ ಸಿರಾಜ್ ನೆನಪಿಡುವ ಬೌಲಿಂಗ್‌ನಲ್ಲಿ ದಾಖಲೆ ಬರೆದರು. ಪಂದ್ಯದ ನಾಲ್ಕನೇ ಓವರ್‌ನಲ್ಲಿ ಸಿರಾಜ್ ಕೇವಲ ನಾಲ್ಕು ರನ್‌ಗಳನ್ನು ಕೊಟ್ಟು ಶ್ರೀಲಂಕಾದ ನಾಲ್ಕು ವಿಕೆಟ್‌ಗಳನ್ನು ಪಡೆದರು. ಆದರೆ ಅವರು ಸ್ವಲ್ಪದರಲ್ಲೇ ಹ್ಯಾಟ್ರಿಕ್‌ನಿಂದ … Continued

ಸೆ.23-24 ರಂದು ಸ್ವರ್ಣವಲ್ಲಿಯಲ್ಲಿ ಯಕ್ಷೋತ್ಸವ, ಮಕ್ಕಳ ತಾಳಮದ್ದಲೆ ಸ್ಪರ್ಧೆ : ಹೊಸ್ತೋಟ, ದಂಟ್ಕಲ್ ಪ್ರಶಸ್ತಿ ಪ್ರದಾನ

ಶಿರಸಿ: ಯಕ್ಷ ಶಾಲ್ಮಲಾ ಸಂಸ್ಥೆ ಕಳೆದ ೧೯ ವರ್ಷದಿಂದ ನಡೆಸುತ್ತಿರುವ ಮಕ್ಕಳ ತಾಳಮದ್ದಲೆ ಸ್ಪರ್ಧೆ, ಹೊಸ್ತೋಟ ಮಂಜುನಾಥ ಭಾಗವತ ಹಾಗೂ ಎಂ.ಎ. ಹೆಗಡೆ ದಂಟ್ಕಲ್ ಪ್ರಶಸ್ತಿ ಪ್ರದಾನ, ತಾಳಮದ್ದಲೆ, ಯಕ್ಷೋತ್ಸವ ಸೆ.೨೩ ಹಾಗೂ ೨೪ ರಂದು ಸೋಂದಾದ ಸ್ವರ್ಣವಲ್ಲೀ ಮಠದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಕಾರ್ಯಾಧ್ಯಕ್ಷ ಆರ್.ಎಸ್. ಹೆಗಡೆ ಭೈರುಂಬೆ ತಿಳಿಸಿದ್ದಾರೆ. ಭಾನುವಾರ ನಗರದ ಯೋಗ … Continued

ಹೊನ್ನಾವರ: ಮತ್ತೊಂದು ಬೃಹತ್‌ ಮೀನಿನ ಕಳೆಬರ ಪತ್ತೆ.. ಇದು ಡಾಲ್ಫಿನ್‌ ಮೀನು…!

ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕದ ಸಮುದ್ರ ದಂಡೆಯಲ್ಲಿ ಅಳವಿನಂಚಿನಲ್ಲಿರುವ ಮತ್ತೊಂದು ಮೀನಿನ ಕಳೆಬರ ಭಾನುವಾರ ಪತ್ತೆಯಾಗಿದೆ. ಈ ಬಾರಿ ತಿಮಿಂಗಿಲವಲ್ಲ, ಬದಲಿಗೆ ಅಳಿವಿನಂಚಿನಲ್ಲಿರುವ  ಡಾಲ್ಫಿನ್‌ನ ಮೃತ ದೇಹ ಭಾನುವಾರ ಪತ್ತೆಯಾಗಿದೆ. ಡಾಲ್ಫಿನ್‌ ಮೀನು ಸುಮಾರು ಮೂರು ಮೀಟರ್ ಗಳಷ್ಟು ಉದ್ದವಿದ್ದು 75-80 ಕೆ.ಜಿ.ಯಷ್ಟು ತೂಕವಿರಬಹುದೆಂದು ಅಂದಾಜಿಸಲಾಗಿದೆ. ಮರಣೋತ್ತರ ಪರೀಕ್ಷೆ ಸೋಮವಾರ … Continued

ಏಷ್ಯಾ ಕಪ್ 2023 : ಮೊಹಮ್ಮದ್ ಸಿರಾಜ್ ಮಾರಕ ಬೌಲಿಂಗ್‌ ಗೆ ಶ್ರೀಲಂಕಾ 50 ರನ್‌ಗಳಿಗೆ ಆಲೌಟ್‌ ; 10 ವಿಕೆಟ್‌ಗಳಿಂದ 8ನೇ ಏಷ್ಯಾ ಕಪ್ ಗೆದ್ದ ಭಾರತ

ಭಾರತ ಹಾಗೂ ಶ್ರೀಲಂಕಾ ನಡುವಿನ ಏಷ್ಯಾ ಕಪ್ 2023 ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತವು 10 ವಿಕೆಟ್‌ಗಳ ಭರ್ಜರಿ ಜಯಗಳಿಸಿದೆ. ಭಾರತ ದಾಖಲೆಯ 8ನೇ ಏಷ್ಯಾಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಏಷ್ಯಾ ಕಪ್ 2023 ರ ಫೈನಲ್‌ನಲ್ಲಿ ಶ್ರೀಲಂಕಾ ಮೊದಲು ಬ್ಯಾಟ್‌ ಮಾಡಿತು. ಭಾರತದ ವೇಗಿ ಮೊಹಮ್ಮದ್‌ … Continued

ಬೈಕ್ ಸವಾರ ದುಪಟ್ಟಾ ಎಳೆದ ನಂತರ ಸೈಕಲ್‌ನಿಂದ ಬಿದ್ದ ಬಾಲಕಿ : ಮತ್ತೊಂದು ಬೈಕ್‌ ಡಿಕ್ಕಿ ಹೊಡೆದು ಸಾವು | ವೀಡಿಯೊ

ಅಂಬೇಡ್ಕರ ನಗರ (ಉತ್ತರ ಪ್ರದೇಶ) : ಕಿಡಿಗೇಡಿಗಳು ಕಿರುಕುಳ ನೀಡುವ ಮತ್ತೊಂದು ಆಘಾತಕಾರಿ ಪ್ರಕರಣದಲ್ಲಿ, ಉತ್ತರ ಪ್ರದೇಶದ ಅಂಬೇಡ್ಕರ್ ನಗರ ಜಿಲ್ಲೆಯಲ್ಲಿ 17 ವರ್ಷದ ಅಪ್ರಾಪ್ತ ಹುಡುಗಿಯೊಬ್ಬಳು ತನ್ನ ಸ್ನೇಹಿತೆಯೊಂದಿಗೆ ಶಾಲೆಯಿಂದ ಸೈಕಲ್‌ನಲ್ಲಿ ಮನೆಗೆ ಹೋಗುತ್ತಿದ್ದಾಗ ಮೋಟಾರ್‌ಸೈಕಲ್‌ನಲ್ಲಿ ಬಂದ ಇಬ್ಬರು ದುಪಟ್ಟಾ ಅವಳ ಎಳೆದಿದ್ದರಿಂದ ಅಪಘಾತ ಸಂಭವಿಸಿ ಅವಳು ಮೃತಪಟ್ಟ ಘಟನೆ ನಡೆದಿದೆ. ದುಷ್ಕರ್ಮಿಗಳು ಆಕೆಯ … Continued

ಗೂಂಡಾ ಕಾಯ್ದೆ ರದ್ದು: ಜೈಲಿನಿಂದ ಪುನೀತ್ ಕೆರೆಹಳ್ಳಿ ಬಿಡುಗಡೆ

ಬೆಂಗಳೂರು: ಹಿಂದೂ ಕಾರ್ಯಕರ್ತ ಹಾಗೂ ರಾಷ್ಟ್ರ ರಕ್ಷಣಾ ಪಡೆ ಅಧ್ಯಕ್ಷ ಪುನೀತ ಕೆರೆಹಳ್ಳಿ ವಿರುದ್ಧ ಗೂಂಡಾ ಕಾಯ್ದೆಯಡಿ ದಾಖಲಿಸಿದ್ದ ಪ್ರಕರಣವನ್ನು ರದ್ದುಪಡಿಸಲಾಗಿದ್ದು, ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಹಾಸನ ಜಿಲ್ಲೆಯ ಆಲೂರು ತಾಲೂಕಿನ ಕೆರೆಹಳ್ಳಿಯ ಪುನೀತ ಅವರು, ಬೆಂಗಳೂರಿನಲ ಜೆಪಿ ನಗರ 7ನೇ ಹಂತದಲ್ಲಿ ವಾಸವಿದ್ದರು. ಅವರ ವಿರುದ್ಧ ರಾಜ್ಯದ 11 ಠಾಣೆಗಳಲ್ಲಿ ಎಫ್ಐಆರ್ ದಾಖಲಾಗಿತ್ತು. … Continued

ದೊಡ್ಡಬಳ್ಳಾಪುರ : ಒಂದೇ ಕುಟುಂಬದ ನಾಲ್ವರು ಮಲಗಿದ್ದಲ್ಲೇ ಶವವಾಗಿ ಪತ್ತೆ

ದೊಡ್ಡಬಳ್ಳಾಪುರ:  ಕೋಳಿಫಾರಂ ಶೆಡ್‌ನಲ್ಲಿ ಕೆಲಸ ಮಾಡುತ್ತಿದ್ದ ನೇಪಾಳ ಮೂಲದ ನಾಲ್ವರು ಶವವಾಗಿ ಪತ್ತೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ (Doddaballapur) ತಾಲೂಕಿನ ದೊಡ್ಡಬೆಳವಂಗಲ ಬಳಿ ಹೊಲೆಯರಹಳ್ಳಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಅನುಮಾನಾಸ್ಪದವಾಗಿ ಮೃತಪಟ್ಟ ನೇಪಾಳ ಮೂಲದ ನಾಲ್ವರನ್ನು ಕಾಲೇ ಸರೇರಾ (60), ಲಕ್ಷ್ಮಿ ಸರೇರಾ (50), ಉಷಾ ಸರೇರಾ (40) ಹಾಗೂ ಫೂಲ್ ಸರೇರಾ … Continued

ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಪ್ರತಿ ತಿಂಗಳು ಜಿಲ್ಲಾ ಮಟ್ಟದಲ್ಲಿ ‘ಜನತಾ ದರ್ಶನ’ : ಸೆ.25ರಂದು ರಾಜ್ಯಾದ್ಯಂತ ಏಕಕಾಲಕ್ಕೆ ಚಾಲನೆ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆಯಂತೆ ಇನ್ಮುಂದೆ ಜಿಲ್ಲೆಗಳಲ್ಲಿ ‘ಜನತಾ ದರ್ಶನ’ ನಡೆಸಲಾಗುತ್ತದೆ. ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿಗಳಾದ ಡಾ. ರಜನೀಶ ಗೋಯಲ್ ಈ ಕುರಿತು ಟಿಪ್ಪಣಿ ಹೊರಡಿಸಿದ್ದಾರೆ. ಎಲ್ಲಾ ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿಗಳು/ ಜಿಲ್ಲಾಧಿಕಾರಿಗಳು/ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಕಾಧಿಕಾರಿಗಳು/ ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿಗಳಿಗೆ … Continued

ನಟ ಕಮಲ್‌ ಹಾಸನ್‌ ಗೆ ಭರ್ಜರಿ ಯಶಸ್ಸು ತಂದುಕೊಟ್ಟ 36 ವರ್ಷಗಳ ಹಿಂದಿನ ಕ್ಲಾಸಿಕ್‌ ಸಿನೆಮಾ ಈಗ ಮರು ಬಿಡುಗಡೆ

ಭಾರತೀಯ ಚಿತ್ರರಂಗದ ಮೇರು ನಟ ಕಮಲ್‌ ಹಾಸನ್‌ ಅವರು, ಈಗ ಸಿನಿ ಪ್ರಿಯರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಅವರ ವೃತ್ತಿ ಜೀವನದ ಕ್ಲಾಸಿಕ್‌ ಸಿನಿಮಾಗಳಲ್ಲಿ ಒಂದಾದ ಪುಷ್ಪಕ ವಿಮಾನ ಸಿನಿಮಾ ಈಗ ಮರು ಬಿಡುಗಡೆ ಆಗಲಿದೆ. ಈ ವಿಚಾರವನ್ನು ಸೋಷಿಯಲ್‌ ಮೀಡಿಯಾದಲ್ಲಿ ಕಮಲ್‌ ಹಾಸನ್‌ ಒಡೆತನದ ರಾಜ್ ಕಮಲ್‌ ಫಿಲಂಸ್‌ ಇಂಟರ್‌ನ್ಯಾಷನಲ್‌ ಹಂಚಿಕೊಂಡಿದೆ. ಸಿಂಗೀತಂ ಶ್ರೀನಿವಾಸ್‌ … Continued