ಭೋವಿ ನಿಗಮ ಅಕ್ರಮ ; ಹಿಂದಿನ ಪ್ರಧಾನ ವ್ಯವಸ್ಥಾಪಕನ ಬಂಧಿಸಿದ ಇ.ಡಿ.

ಬೆಂಗಳೂರು : ಶೋಧ ಕಾರ್ಯಾಚರಣೆಯ ನಂತರ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ (ಕೆಬಿಡಿಸಿ) ಮಾಜಿ ಪ್ರಧಾನ ವ್ಯವಸ್ಥಾಪಕರನ್ನು ಬಂದಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ.)ಭಾನುವಾರ ತಿಳಿಸಿದೆ. ಬಿ ಕೆ ನಾಗರಾಜಪ್ಪ ಅವರನ್ನು ಏಪ್ರಿಲ್ 5 ರಂದು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಬೆಂಗಳೂರಿನ ವಿಶೇಷ ಪ್ರಿವೆನ್ಶನ್ ಆಫ್ ಮನಿ … Continued

ಕೇರಳದ ನಾಯಕ ಎಂ ಎ ಬೇಬಿ ಸಿಪಿಐ(ಎಂ)ನ ನೂತನ ಪ್ರಧಾನ ಕಾರ್ಯದರ್ಶಿ

ಮದುರೈ : ೭೧ ವರ್ಷ ವಯಸ್ಸಿನ ಹಿರಿಯ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ನಾಯಕ ಮತ್ತು ಕೇರಳದ ಪಾಲಿಟ್‌ಬ್ಯೂರೋ ಸದಸ್ಯ ಎಂಎ ಬೇಬಿ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಶನಿವಾರ (ಏಪ್ರಿಲ್ 5) ತಮಿಳುನಾಡಿನ ಮಧುರೈನಲ್ಲಿ ನಡೆದ ಪಾಲಿಟ್‌ಬ್ಯೂರೋ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ. ಬೇಬಿ ಹೆಸರನ್ನು ಹಿರಿಯ ನಾಯಕ ಪ್ರಕಾಟ ಕಾರಟ್ ಪ್ರಸ್ತಾಪಿಸಿದರು. ಇವರು … Continued

ವೀಡಿಯೊ..| ಕಾಲೇಜಿನ ಸಮಾರಂಭದಲ್ಲಿ ಭಾಷಣ ಮಾಡುತ್ತಿರುವಾಗಲೇ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು

ಮುಂಬೈ: ಮಹಾರಾಷ್ಟ್ರದ ಧಾರಶಿವ ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡುತ್ತಿದ್ದ 20 ವರ್ಷದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಭಾಷಣ ಮಾಡುತ್ತಿದ್ದಾಗಲೇ ಕುಸಿದುಬಿದ್ದು ಸಾವಿಗೀಡಾಗಿದ್ದಾಳೆ. ಕುಸಿದುಬಿದ್ದ ವಿದ್ಯಾರ್ಥಿನಿಯನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು ಎಂದು ಹೇಳಲಾಗಿದೆ. ಈ ಘಟನೆಯ ವೀಡಿಯೊ ವೈರಲ್ ಆಗಿದ್ದು, ಪರಂದ ತಾಲೂಕಿನ ಮಹರ್ಷಿ ಗುರುವರ್ಯ ಆರ್.ಜಿ.ಶಿಂಧೆ ಮಹಾವಿದ್ಯಾಲಯದಲ್ಲಿ ಈ … Continued

ಏಕರೂಪ ನಾಗರಿಕ ಸಂಹಿತೆ ಕಾಯಿದೆ ಜಾರಿಗೆ ಸಂಸತ್ತು, ವಿಧಾನಸಭೆಗಳಿಗೆ ಕರ್ನಾಟಕ ಹೈಕೋರ್ಟ್‌ ಸಲಹೆ

ಬೆಂಗಳೂರು: ಸಂವಿಧಾನದ ಪೀಠಿಕೆಯಲ್ಲಿ ಉಲ್ಲೇಖಿಸಿರುವ ಮೂಲ ತತ್ವಗಳನ್ನು ಸಾಕಾರಗೊಳಿಸಲು ಏಕರೂಪ ನಾಗರಿಕ ಸಂಹಿತೆಗೆ (ಯುಸಿಸಿ) ಜಾರಿಗೆ ತರುವಂತೆ ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳು ಎಲ್ಲಾ ಪ್ರಯತ್ನ ಮಾಡಬೇಕು ಎಂದು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಅಭಿಪ್ರಾಯಪಟ್ಟಿದೆ. ಕುಟುಂಬದ ಆಸ್ತಿ ವಿಭಾಗ ದಾವೆಯೊಂದಕ್ಕೆ ಸಂಬಂಧಿಸಿದಂತೆ ಬೆಂಗಳೂರು ವಿವೇಕ ನಗರದ ಸಮೀವುಲ್ಲಾ ಖಾನ್‌ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಪುರಸ್ಕರಿಸಿದ … Continued

ವೀಡಿಯೊ | ರಾಮನವಮಿಯಂದು ಅಯೋಧ್ಯೆ ರಾಮಂದಿರದಲ್ಲಿ ರಾಮಲಲ್ಲಾನ ಹಣೆಗೆ ಸ್ಪರ್ಷಿಸಿದ ʼಸೂರ್ಯ ತಿಲಕʼ : ವೀಕ್ಷಿಸಿ

ಅಯೋಧ್ಯಾ : ಇಂದು ರಾಮನವಮಿಯ ಶುಭ ಸಂದರ್ಭದಲ್ಲಿ, ಉತ್ತರ ಪ್ರದೇಶದ ಪವಿತ್ರ ನಗರವಾದ ಅಯೋಧ್ಯೆ ರಾಮಮಂದಿರವು ರಾಮ ಲಲ್ಲಾ ವಿಗ್ರಹದ ಹಣೆಯ ಮೇಲೆ ಸೂರ್ಯನ ಕಿರಣವು ನೇರವಾಗಿ ಬೀಳುವ ‘ಸೂರ್ಯ ತಿಲಕ’ ಎಂದು ಕರೆಯಲ್ಪಡುವ ವಿದ್ಯಮಾನದ ಒಂದು ದೈವಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಇದು ಸಾಂಕೇತಿಕವಾಗಿ ಭಗವಾನ್ ರಾಮನ ಜನ್ಮವನ್ನು ಆಚರಿಸಿತು. ಅಯೋಧ್ಯೆಯ ರಾಮಮಂದಿರದಲ್ಲಿ ಪುರೋಹಿತರು ರಾಮಲಲ್ಲಾನಿಗೆ … Continued

ಕರ್ನಾಟಕದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

 ಬೆಂಗಳೂರು : ಬೆಂಗಳೂರು ಸೇರಿ ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಎರಡ್ಮೂರು ದಿನ ಮಳೆ(Rain)ಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಾಮರಾಜನಗರ, ಕೊಡಗು, ಮೈಸೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ದಾವಣಗೆರೆ, ಚಿತ್ರದುರ್ಗ, ವಿಜಯನಗರ, … Continued

2025-26ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ಮೇ 29 ರಿಂದ ಶಾಲೆಗಳು ಆರಂಭ, ದಸರಾ, ಬೇಸಿಗೆ ರಜೆಗಳ ಮಾಹಿತಿ ಇಲ್ಲಿದೆ…

ಬೆಂಗಳೂರು : ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆಯು 2025- 26ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಬಿಡುಗಡೆ ಮಾಡಿದೆ. ರಾಜ್ಯಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ಇದು ಅನ್ವಯವಾಗಲಿದೆ ಎಂದು ತಿಳಿಸಿದೆ. ಮೇ 29ರಿಂದ ಶಾಲೆಗಳು ಆರಂಭವಾಗಲಿದೆ. ಮೇ 29 ರಿಂದ ಸೆಪ್ಟೆಂಬರ್ 19 ರವರೆಗೆ ಮೊದಲ ಅವಧಿ ಹಾಗೂ … Continued

ಸಂಸತ್ತಿನಲ್ಲಿ ಅಂಗೀಕಾರಗೊಂಡ ವಕ್ಫ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಮುರ್ಮು ಅಂಕಿತ

ನವದೆಹಲಿ: ಎರಡು ದಿನಗಳ ಮ್ಯಾರಥಾನ್ ಚರ್ಚೆಯ ನಂತರ ಈ ವಾರ ಸಂಸತ್ತಿನ ಉಭಯ ಸದನಗಳಿಂದ ಅಂಗೀಕರಿಸಲ್ಪಟ್ಟ ವಕ್ಫ್ (ತಿದ್ದುಪಡಿ) ಮಸೂದೆಯು ಶನಿವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ ಹಾಕಿದ್ದಾರೆ. ಇದು ಈಗ ಕಾಯ್ದೆಯಾಗಲಿದೆ. ವಕ್ಫ್ ಮಂಡಳಿ ಮತ್ತು ಆಸ್ತಿಗಳ ಕಾರ್ಯನಿರ್ವಹಣೆಯಲ್ಲಿ ಬದಲಾವಣೆ ತರಲು ಪ್ರಯತ್ನಿಸುವ ವಕ್ಫ್ (ತಿದ್ದುಪಡಿ) ಮಸೂದೆಯ ಬಗ್ಗೆ 13 ಗಂಟೆಗಳ ಚರ್ಚೆಯ ನಂತರ … Continued

19 ವರ್ಷದ ಯುವತಿ ಮೇಲೆ ಅತ್ಯಾಚಾರ ಪ್ರಕರಣ ; ದಿಗಂಬರ ಜೈನಮುನಿಗೆ 10 ವರ್ಷ ಜೈಲು ಶಿಕ್ಷೆ

ಸೂರತ್‌ : ಗುಜರಾತಿನ ಸೂರತ್‌ನ ಸೆಷನ್ಸ್ ನ್ಯಾಯಾಲಯವು 2017 ರಲ್ಲಿ 19 ವರ್ಷದ ಹುಡುಗಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈನ ದಿಗಂಬರ ಪಂಗಡದ ಸನ್ಯಾಸಿ ಶಾಂತಿಸಾಗರಜಿ ಮಹಾರಾಜಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ನ್ಯಾಯಾಲಯವು ತಪ್ಪಿತಸ್ಥ ಸನ್ಯಾಸಿಗೆ 25,000 ರೂಪಾಯಿ ದಂಡವನ್ನೂ ವಿಧಿಸಿದೆ. ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಎ.ಕೆ. ಶಾಂತಿಸಾಗರಜಿ ಮಹಾರಾಜ … Continued