‘ಮಸೂದೆಗೆ ಅಂಕಿತ ಹಾಕಲು ರಾಷ್ಟ್ರಪತಿ, ರಾಜ್ಯಪಾಲರಿಗೆ ಸುಪ್ರೀಂ ಕೋರ್ಟ್ ಗಡುವು ವಿಧಿಸಬಹುದೇ ? ಸುಪ್ರೀಂ ಕೋರ್ಟಿಗೆ ರಾಷ್ಟ್ರಪತಿ ಮುರ್ಮು 14 ಪ್ರಶ್ನೆ

ನವದೆಹಲಿ: ರಾಜ್ಯ ಶಾಸಕಾಂಗ ಅಂಗೀಕರಿಸಿದ ಮಸೂದೆಗಳಿಗೆ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ಅಂಕಿತ ಹಾಕಲು ಗಡುವು ವಿಧಿಸಿ ಸುಪ್ರೀಂ ಕೋರ್ಟ್‌ ಇತ್ತೀಚಿಗೆ ನೀಡಿದ್ದ ತೀರ್ಪಿನ ಬಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂವಿಧಾನದ 143 (1)ನೇ ವಿಧಿಯಡಿ ಸುಪ್ರೀಂ ಕೋರ್ಟ್‌ಗೆ ಪತ್ರ ಬರೆದಿದ್ದು, ಅದರಲ್ಲಿ 14 ಪ್ರಶ್ನೆಗಳನ್ನು ಕೇಳಿದ್ದಾರೆ. ಪತ್ರಕ್ಕೆ ಉತ್ತರ ನೀಡಲು ಸುಪ್ರೀಂ ಕೋರ್ಟ್‌ ಸಾಂವಿಧಾನಿಕ … Continued

ಸೇನೆ ಬರ್ಲಿ ನೋಡ್ಕೊಳ್ತೇನೆ..; ಎನ್‌ಕೌಂಟರಿನಲ್ಲಿ ಸಾಯುವ ಸ್ವಲ್ಪ ಮೊದಲು ತಾಯಿ ಜೊತೆ ಭಯೋತ್ಪಾದಕ ವೀಡಿಯೊ ಕರೆಯಲ್ಲಿ ಮಾತನಾಡಿದ ದೃಶ್ಯ ವೈರಲ್‌…

ಜೈಶ್-ಎ-ಮೊಹಮ್ಮದ್ (ಜೆಇಎಂ) ಭಯೋತ್ಪಾದಕ ಅಮೀರ್ ನಜೀರ್ ವಾನಿ ಮತ್ತು ಆತನ ತಾಯಿಯ ನಡುವಿನ ಮಾತುಕತೆಯನ್ನು ತೋರಿಸುವ ವೀಡಿಯೊ ಕ್ಲಿಪ್ ಹೊರಬಿದ್ದಿದೆ. ಮಾತುಕತೆಯ ಸಮಯದಲ್ಲಿ ತಾಯಿ ತನ್ನ ಮಗನಿಗೆ ಭದ್ರತಾ ಪಡೆಗಳಿಗೆ ಶರಣಾಗುವಂತೆ ಬೇಡಿಕೊಂಡಿದ್ದಾಳೆ. ಗುರುವಾರ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ವಾನಿ ಹತನಾಗುವ ಸ್ವಲ್ಪ ಸಮಯದ ಮೊದಲು ವೀಡಿಯೊ ಕರೆ ಮೂಲಕ … Continued

ಪಹಲ್ಗಾಮ್‌ ದಾಳಿ | ಪಾಕ್ ಬೆಂಬಲಿಸಿದ್ದ ಟರ್ಕಿಗೆ ದೊಡ್ಡ ಹೊಡೆತ ನೀಡಿದ ಭಾರತ : ಸೆಲೆಬಿ ಏರ್‌ಪೋರ್ಟ್‌ ಸರ್ವೀಸಸ್‌ ಗೆ ಭದ್ರತಾ ಅನುಮತಿ ರದ್ದು…

ನವದೆಹಲಿ: ಪಹಲ್ಗಾಮ್‌ ಭಯೋತ್ಪಾದಕ ದಾಳಿಯ (Pahalgam Attack) ನಂಥರ ಪಾಕಿಸ್ತಾನಕ್ಕೆ ಬೆಂಬಲ ನೀಡಿರುವ ಟರ್ಕಿಗೆ ಭಾರತ ದೊಡ್ಡ ಹೊಡೆತ ನೀಡಿದೆ. ವಿಮಾನ ನಿಲ್ದಾಣದಲ್ಲಿ ಗ್ರೌಂಡ್‌ ಹ್ಯಾಂಡ್ಲಿಂಗ್‌ ಸೇವೆಯನ್ನು ನೀಡುತ್ತಿದ್ದ ಟರ್ಕಿ ಮೂಲದ ಸೆಲೆಬಿ ಏರ್‌ಪೋರ್ಟ್‌ ಇಂಡಿಯಾ ಸರ್ವೀಸ್‌ (Celebi Airport Services India) ಕಂಪನಿಗೆ ಕೊಟ್ಟಿದ್ದ ಅನುಮೋದನೆಯನ್ನು ಕೇಂದ್ರ ಸರ್ಕಾರ ರದ್ದುಪಡಿಸಿದೆ. ಟರ್ಕಿ ಮೂಲದ ಸೆಲೆಬಿ … Continued

ನೀವು ಭಾರತದಲ್ಲಿ ಆಪಲ್ ಸಾಧನ ಉತ್ಪಾದನೆ ಮಾಡ್ಬೇಡಿ..; ಆಪಲ್ ಸಿಇಒಗೆ ಡೊನಾಲ್ಡ್ ಟ್ರಂಪ್ ಒತ್ತಡ : ಅಮೆರಿಕ ವರಸೆ ಬದಲಿಸಿದ್ದು ಯಾಕೆ..?

ದೋಹಾ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆಪಲ್ ಸಿಇಒ ಟಿಮ್ ಕುಕ್ ಅವರ ಜೊತೆ ನೇರ ಸಂಭಾಷಣೆ ನಡೆಸಿದ್ದು, ಭಾರತೀಯ ಮಾರುಕಟ್ಟೆಗೆ ಸೇವೆ ಸಲ್ಲಿಸುವ ಉದ್ದೇಶವನ್ನು ಹೊರತುಪಡಿಸಿ, ಭಾರತದಲ್ಲಿ ಆಪಲ್ ಉತ್ಪಾದನಾ ಹೆಜ್ಜೆಗುರುತನ್ನು ವಿಸ್ತರಿಸುವುದು ಬೇಡ ಎಂದು ಹೇಳಿದ್ದಾಗಿ ತಿಳಿಸಿದ್ದಾರೆ. “ಭಾರತದಲ್ಲಿ ನೀವು ನಿರ್ಮಾಣ ಮಾಡುವುದರ ಬಗ್ಗೆ ನಮಗೆ ಆಸಕ್ತಿ ಇಲ್ಲ, ಅವರು … Continued

ಹಣಕ್ಕಾಗಿ ಆನಂದ ಗುರೂಜಿಗೆ ಬ್ಲ್ಯಾಕ್ ಮೇಲ್ ಆರೋಪ ; ಇಬ್ಬರ ವಿರುದ್ಧ ದೂರು ದಾಖಲು

ಬೆಂಗಳೂರು: ಖ್ಯಾತ ಜ್ಯೋತಿಷಿ ಆನಂದ ಗುರೂಜಿ ಅವರಿಗೆ ಬ್ಲಾಕ್ ಮೇಲ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ   ಎಂಬ ಮಾಹಿತಿ ಲಭ್ಯವಾಗಿದೆ. ಆನಂದ ಗುರೂಜಿ ವಿಡಿಯೋ ಮತ್ತು ಜಮೀನು ಖರೀದಿಯ ಬಗ್ಗೆ ಕೋರ್ಟ್‌ನಿಂದ ತಡೆಯಾಜ್ಞೆ ತಂದರೂ ಬೆದರಿಕೆ ಹಾಕಲಾಗಿದೆ. ಅವರ ಕಾರು ಅಡ್ಡಗಟ್ಟಿ ಅವಾಚ್ಯ … Continued

ವೀಡಿಯೊ..| ಕಾಶ್ಮೀರ ; ಪುಲ್ವಾಮಾ ಎನ್ಕೌಂಟರಿನಲ್ಲಿ ಮೂವರು ಭಯೋತ್ಪಾದಕರ ಹತ್ಯೆ ; ಒಬ್ಬನ ಕೊನೆಯ ಕ್ಷಣ ಡ್ರೋನ್ ನಲ್ಲಿ ಸೆರೆ

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದ ನಾಡರ್, ಟ್ರಾಲ್ ಪ್ರದೇಶದಲ್ಲಿ ಗುರುವಾರ ಬೆಳಿಗ್ಗೆ ನಡೆದ ಎನ್ಕೌಂಟರ್‌ನಲ್ಲಿ ಮೂವರು ಭಯೋತ್ಪಾದಕರು ಹತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹತರಾದ ಭಯೋತ್ಪಾದಕರನ್ನು ಆಸಿಫ್ ಅಹ್ಮದ್ ಶೇಖ್, ಅಮೀರ್ ನಜೀರ್ ವಾನಿ ಮತ್ತು ಯಾವರ್ ಅಹ್ಮದ್ ಭಟ್ ಎಂದು ಗುರುತಿಸಲಾಗಿದ್ದು, ಅವರು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಜೊತೆ … Continued

ಇನ್ಮುಂದೆ ಸ್ವಾಧೀನಾನುಭವ ಪ್ರಮಾಣಪತ್ರ ಪಡೆದರೆ ಮಾತ್ರ ಕಟ್ಟಡಗಳಿಗೆ ವಿದ್ಯುತ್‌, ನೀರಿನ ಸಂಪರ್ಕ; ಬಿಬಿಎಂಪಿ

ಬೆಂಗಳೂರು: ಇನ್ನು ಮುಂದೆ ಬೆಂಗಳೂರಿನಲ್ಲಿ ಬಿಬಿಎಂಪಿಯಿಂದ(BBMP) ಸ್ವಾಧೀನಾನುಭವ ಪ್ರಮಾಣ ಪತ್ರ( Occupancy certificates) ಪಡೆದರೆ ಮಾತ್ರ ಕಟ್ಟಡಗಳಿಗೆ ವಿದ್ಯುತ್‌, ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಈ ಕುರಿತು ಬಿಬಿಎಂಪಿ ಮಹತ್ವದ ಮಾಹಿತಿ ಹಂಚಿಕೊಂಡಿದೆ. ಬೆಂಗಳೂರಿನಲ್ಲಿ ವಿದ್ಯುತ್‌ ಸಂಪರ್ಕಕ್ಕೆ ಕೋರಿ ಸುಮಾರು 66,400 ಅರ್ಜಿಗಳು ಬಂದಿವೆ. ಸುಪ್ರೀಂ ಕೋರ್ಟ್‌ ಕಳೆದ ವರ್ಷ ಡಿಸೆಂಬರ್‌ನಲ್ಲಿ ನೀಡಿರುವ … Continued

S-400 ಬಿಡಿ ; ವಾಯು ರಕ್ಷಣೆ ಹೆಚ್ಚಿಸಲು ಭಾರತ ಶೀಘ್ರವೇ ರಷ್ಯಾದ ಘಾತಕ S-500 ಖರೀದಿಸಬಹುದು ; ಎರಡರ ಮಧ್ಯದ ಪ್ರಮುಖ ವ್ಯತ್ಯಾಸ ಇಲ್ಲಿದೆ

ನವದೆಹಲಿ: ಭಾರತದ ವಾಯುದಾಳಿಗಳು ಪಾಕಿಸ್ತಾನದಲ್ಲಿನ ಹಲವಾರು ಭಯೋತ್ಪಾದಕ ನೆಲೆಗಳು ಮತ್ತು ವಾಯುನೆಲೆಗಳಿಗೆ ಗಮನಾರ್ಹ ಹಾನಿಯನ್ನುಂಟುಮಾಡಿದ ನಂತರ, ಭಾರತದ “ಆಪರೇಷನ್ ಸಿಂಧೂರ” ಸೇನಾ ಕಾರ್ಯಾಚರಣೆ ಪಾಕಿಸ್ತಾನದಲ್ಲಿ ಆಘಾತದ ಅಲೆಗಳನ್ನು ಎಬ್ಬಿಸಿದೆ. ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರ, ರಾಜಸ್ಥಾನ ಮತ್ತು ಪಂಜಾಬ್‌ನ ಗಡಿಯ ಸಮೀಪವಿರುವ ನಗರಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿದರೂ ಭಾರತವು ಈ ದಾಳಿಗಳನ್ನು … Continued

ಸುಹಾಸ ಶೆಟ್ಟಿ ಕೊಲೆ ಪ್ರಕರಣ ; ಮತ್ತೆ ಮೂವರು ಆರೋಪಿಗಳ ಬಂಧನ

ಮಂಗಳೂರು : ಕೆಲವು ದಿನಗಳ ಹಿಂದೆ ಬಜ್ಪೆಯಲ್ಲಿ ಬರ್ಬರವಾಗಿ ಕೊಲೆಯಾದ ಸುಹಾಸ ಶೆಟ್ಟಿ ಹತ್ಯೆ (Suhas Shetty) ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕಳವಾರಿನ ಅಜರುದ್ದೀನ್ ಆಲಿಯಾಸ್ ಅಜರ್ ಆಲಿಯಾಸ್ ಅಜ್ಜು(29), ಬಜ್ಪೆ ನಿವಾಸಿ ಅಬ್ದುಲ್ ಖಾದರ್ ಆಲಿಯಾಸ್ ನೌಫಲ್(24), ವಾಮಂಜೂರಿನ ನೌಷದ್ ಆಲಿಯಾಸ್ ಚೊಟ್ಟೆ ನೌಷದ್(39) ಎಂದು ಗುರುತಿಸಲಾಗಿದೆ. … Continued

ಕರ್ನಲ್ ಸೋಫಿಯಾ ಖುರೇಷಿ ಬಗ್ಗೆ ವಿವಾದಾತ್ಮಕ ಹೇಳಿಕೆ : ಕ್ಷಮೆಯಾಚಿಸಿದ ಮಧ್ಯಪ್ರದೇಶದ ಸಚಿವ

ನವದೆಹಲಿ: ಮಹಿಳಾ ಸೇನಾಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕಾಗಿ ಮಧ್ಯಪ್ರದೇಶದ ಕ್ಯಾಬಿನೆಟ್ ಸಚಿವರಾದ ಕುನ್ವರ್ ವಿಜಯ ಶಾ ಬುಧವಾರ (ಮೇ 14) ಕ್ಷಮೆಯಾಚಿಸಿದ್ದಾರೆ. ಬಿಜೆಪಿ ಸಚಿವ ವಿಜಯ ಶಾ ಅವರು ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದು, “ನನ್ನ ಇತ್ತೀಚಿನ ಹೇಳಿಕೆಯಿಂದ ನನಗೆ ನಾಚಿಕೆ ಮತ್ತು ದುಃಖವಾಗಿದೆ, ಇದು ಪ್ರತಿಯೊಂದು ಸಮುದಾಯದ ಭಾವನೆಗಳಿಗೆ … Continued