ಮನ ಕಲಕುವ ವೀಡಿಯೊ | ಅಕಾಲಿಕ ಮಳೆಯಿಂದ ಕೊಚ್ಚಿ ಹೋಗುತ್ತಿದ್ದ ಧಾನ್ಯ ಉಳಿಸಲು ರೈತನ ಹತಾಶ ಪ್ರಯತ್ನ ; ನಂತರ ಕೇಂದ್ರ ಸಚಿವರಿಂದ ಕರೆ

ನವದೆಹಲಿ: ಮಹಾರಾಷ್ಟ್ರದ ರೈತನೊಬ್ಬ ತನ್ನ ಬೆಳೆಯನ್ನು ಭಾರೀ ಮಳೆಯಲ್ಲಿ ಕೊಚ್ಚಿ ಹೋಗದಂತೆ ತಡೆಯಲು ಹತಾಶ ಪ್ರಯತ್ನ ನಡೆಸಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಮಹಾರಾಷ್ಟ್ರದ ಹಲವಾರು ಜಿಲ್ಲೆಗಳಲ್ಲಿ ಅಕಾಲಿಕ ಮಳೆಯಿಂದಾಗಿ ರೈತರು ಅನುಭವಿಸುತ್ತಿರುವ ನಷ್ಟವನ್ನು ಈ ವೀಡಿಯೊ ಪ್ರತಿಬಿಂಬಿಸುತ್ತದೆ. ವೀಡಿಯೊದಲ್ಲಿರುವ ರೈತ ಗೌರವ ಪನ್ವಾರ್ ಮಹಾರಾಷ್ಟ್ರದ ವಾಶಿಮ್‌ನ ಮಾರುಕಟ್ಟೆಗೆ ತನ್ನ ಕಡಲೆಕಾಯಿ ಬೆಳೆಯನ್ನು ತಂದಿದ್ದರು. … Continued

ಆಪರೇಶನ್‌ ಸಿಂಧೂರ ಪರಿಣಾಮ : ಪಾಕಿಸ್ತಾನಕ್ಕೆ 11 ಹೊಸ ಷರತ್ತು ವಿಧಿಸಿದ ಐಎಂಎಫ್‌

ಇಸ್ಲಾಮಾಬಾದ್: ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ತನ್ನ ಬೇಲ್‌ಔಟ್ ಕಾರ್ಯಕ್ರಮದ ಮುಂದಿನ ಕಂತನ್ನು ಬಿಡುಗಡೆ ಮಾಡಲು ಪಾಕಿಸ್ತಾನಕ್ಕೆ 11 ಹೊಸ ಷರತ್ತುಗಳನ್ನು ವಿಧಿಸಿದೆ ಮತ್ತು ಭಾರತದ ಜೊತೆಗೆ ಸಂಘರ್ಷವು ಯೋಜನೆಯ ಹಣಕಾಸು, ಬಾಹ್ಯ ಮತ್ತು ಸುಧಾರಣಾ ಉದ್ದೇಶಗಳಿಗೆ ಅಪಾಯ ಹೆಚ್ಚಿಸಬಹುದು ಎಂದು ಭಾನುವಾರ ಮಾಧ್ಯಮ ವರದಿಯೊಂದು ತಿಳಿಸಿದೆ. ಪಾಕಿಸ್ತಾನದ ಮೇಲೆ ವಿಧಿಸಲಾದ ಹೊಸ ಷರತ್ತುಗಳಲ್ಲಿ 17.6 … Continued

ಬೆಂಗಳೂರಿನ ಐಐಎಸ್‌ಸಿ ಮೇಲಿನ ದಾಳಿ ರೂವಾರಿ, ಲಷ್ಕರ್-ಎ-ತೊಯ್ಬಾದ ನೊಟೋರಿಯಸ್‌ ಭಯೋತ್ಪಾದಕ ಸೈಫುಲ್ಲಾ ಖಾಲಿದ್‌ ಹತ್ಯೆ

ಇಸ್ಲಾಮಾಬಾದ್: ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾ (ಎಲ್‌ಇಟಿ) ನ ಉನ್ನತ ಕಮಾಂಡರ್ ಸೈಫುಲ್ಲಾ ಅವರನ್ನು ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಅಪರಿಚಿತ ದಾಳಿಕೋರರು ಕೊಂದಿದ್ದಾರೆ ಎಂದು ವರದಿಯಾಗಿದೆ. ಈತ ಪಾಕಿಸ್ತಾನದ ಸಿಂಧ್‌ನ ಬಾಡಿನ್ ಜಿಲ್ಲೆಯಲ್ಲಿ ಕೊಲ್ಲಲ್ಪಟ್ಟ. ಮೂಲಗಳ ಪ್ರಕಾರ, ಭಾನುವಾರ ಸಿಂಧ್‌ನ ಬಾಡಿನ್ ಜಿಲ್ಲೆಯ ಮಟ್ಲಿ ತಾಲೂಕಿನಲ್ಲಿ ಸೈಫುಲ್ಲಾ ಕೊಲ್ಲಲ್ಪಟ್ಟ. ಈತನ ಸಾವು ಈ ಪ್ರದೇಶದಲ್ಲಿ … Continued

ಹೈದರಾಬಾದ್‌ ಚಾರ್ಮಿನಾರ್ ಬಳಿ ಕಟ್ಟಡದಲ್ಲಿ ಬೆಂಕಿ ಅವಘಡ : 8 ಮಕ್ಕಳು ಸೇರಿ 17 ಮಂದಿ ಸಾವು

ಹೈದರಾಬಾದ್‌ : ಐತಿಹಾಸಿಕ ಸ್ಮಾರಕ ಚಾರ್ಮಿನಾರ್ ಬಳಿಯ ಪ್ರದೇಶವಾದ ಹೈದರಾಬಾದ್ ಓಲ್ಡ್ ಸಿಟಿಯಲ್ಲಿರುವ ಗುಲ್ಜಾರ್ ಹೌಸ್ ಬಳಿ ಶನಿವಾರ ಮುಂಜಾನೆ ಸಂಭವಿಸಿದ ಬೆಂಕಿ ಅವಘಡದಲ್ಲಿ ಎಂಟು ಮಕ್ಕಳು ಸೇರಿದಂತೆ ಹದಿನೇಳು ಜನರು ಮೃತಪಟ್ಟಿದ್ದಾರೆ. ತೆಲಂಗಾಣ ಸಚಿವ ಪೊನ್ನಮ್ ಪ್ರಭಾಕರ್ ಅವರ ಪ್ರಕಾರ, ಮೃತಪಟ್ಟವರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರು. ಮೃತರನ್ನು ಪ್ರಹ್ಲಾದ (70), ಮುನ್ನಿ (70), ರಾಜೇಂದರ … Continued

ನರಕ -ಪಾಕಿಸ್ತಾನದ ನಡುವೆ ಆಯ್ಕೆ ಮಾಡುವ ಪರಿಸ್ಥಿತಿ ಬಂದ್ರೆ ನಾನು ಆಯ್ಕೆ ಮಾಡುವುದು ನರಕವನ್ನೇ… ; ಜಾವೇದ್‌ ಅಖ್ತರ್‌

ಮುಂಬೈ: ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯ ಬಗ್ಗೆ ಮಾತನಾಡುವಾಗ ಬಾಲಿವುಡ್‌ನ ಖ್ಯಾತ ಬರಹಗಾರ ಜಾವೇದ್ ಅಖ್ತರ್ ಅವರು, ಒಂದು ವೇಳೆ ನರಕ ಮತ್ತು ಪಾಕಿಸ್ತಾನದ ನಡುವೆ ಆಯ್ಕೆ ಮಾಡುವ ಪರಿಸ್ಥಿತಿ ಬಂದರೆ, ನಾನು ನರಕವನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆಯೇ ಹೊರತು ಪಾಕಿಸ್ತಾನವನಲ್ಲ ಎಂದು … Continued

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂದಿನ 3 ದಿನ ಜೋರಾಗಿ ಮಳೆ; ಮುನ್ಸೂಚನೆ

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಜೋರಾಗಿ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಮೇ 20 ಹಾಗೂ ಕರಾವಳಿ ಜಿಲ್ಲೆಗಳಿಗೆ ಮೇ 21ರವರೆಗೆ ಹವಾಮಾನ ಇಲಾಖೆಯು ಯೆಲ್ಲೋ ಅಲರ್ಟ್‌ ಘೋಷಿಸಿದೆ. ಮೇ 19ರಂದು ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಊಡುಪಿ ಹಾಗೂ ದಕ್ಷಿಣ ಕನ್ನಡ ಉತ್ತರ ಒಳನಾಡಿನ … Continued

ವೀಡಿಯೊ…| ಆಪರೇಷನ್ ಸಿಂಧೂರ : ಪಾಕಿಸ್ತಾನದ ಮೇಲೆ ಮತ್ತೊಂದು ಯಶಸ್ವಿ ದಾಳಿಯ ವೀಡಿಯೊ ಬಿಡುಗಡೆ ಮಾಡಿದ ಭಾರತೀಯ ಸೇನೆ

ನವದೆಹಲಿ: ಭಾರತೀಯ ಸೇನೆಯ ಪಶ್ಚಿಮ ಕಮಾಂಡ್ ಭಾನುವಾರ (ಮೇ 18) ‘ಆಪರೇಷನ್ ಸಿಂಧೂರ’ ಸೇನಾ ಕಾರ್ಯಾಚರಣೆಯನ್ನು ನ್ಯಾಯ ಒದಗಿಸಲು ಯೋಜಿಸಲಾಗಿದೆ, ತರಬೇತಿ ನೀಡಲಾಗಿದೆ ಮತ್ತು ಕಾರ್ಯಗತಗೊಳಿಸಲಾಗಿದೆ ಎಂದು ಹೇಳಿದೆ. ಪಶ್ಚಿಮ ಕಮಾಂಡ್ ‘ಆಪರೇಷನ್ ಸಿಂಧೂರ’ ಯಶಸ್ಸಿನ ಬಗ್ಗೆ ಸೈನಿಕರು ವಿಶ್ವಾಸದಿಂದ ಹೇಳುತ್ತಿರುವುದನ್ನು ತೋರಿಸುವ ವೀಡಿಯೊವನ್ನು X ನಲ್ಲಿ ಪೋಸ್ಟ್ ಮಾಡಿದೆ. ಪೋಸ್ಟ್‌ನಲ್ಲಿ “ಯೋಜಿಸಲಾಗಿದೆ, ತರಬೇತಿ ನೀಡಲಾಗಿದೆ … Continued