ಮಂಗಳೂರು | ಸುಹಾಸ ಶೆಟ್ಟಿ ಹತ್ಯೆ ಪ್ರಕರಣದ ತನಿಖೆ ಎನ್‌ಐಎ ಹೆಗಲಿಗೆ

ಮಂಗಳೂರು: ರೌಡಿಶೀಟರ್ ಹಾಗೂ ಹಿಂದೂಪರ ಕಾರ್ಯಕರ್ತ ಸುಹಾಸ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಯನ್ನು ಕೇಂದ್ರ ಗೃಹ ಇಲಾಖೆಯು ರಾಷ್ಟ್ರೀಯ ತನಿಖಾ ದಳಕ್ಕೆ ( NIA ) ವಹಿಸಿದೆ. ಸುಹಾಸ ಶೆಟ್ಟಿಯನ್ನು ದುಷ್ಕರ್ಮಿಗಳು ಬಜಪೆಯ ಕಿನ್ನಿಪದವು ಎಂಬಲ್ಲಿ ಮೇ 1ರಂದು ತಲವಾರಿನಿಂದ ಕೊಚ್ಚಿ ಹತ್ಯೆ ಮಾಡಿದ್ದರು. ಈ ಪ್ರಕರಣದ ತನಿಖೆ ನಡೆಸುತ್ತಿರುವ ಮಂಗಳೂರು ಪೊಲೀಸ್‌ ಸಿಸಿಬಿ ಘಟಕ … Continued

ಬೆಂಗಳೂರು ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ನೀಡಿರುವ ಪರಿಹಾರದ ಮೊತ್ತ ಹೆಚ್ಚಿಸಿದ ರಾಜ್ಯ ಸರ್ಕಾರ

ಬೆಂಗಳೂರು : ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ನೀಡಿದ್ದ ಪರಿಹಾರ ಮೊತ್ತವನ್ನು 10 ಲಕ್ಷ ರೂ.ಗಳಿಂದ 25 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ರಾಜ್ಯ ಸರ್ಕಾರ ಶನಿವಾರ ಪ್ರಕಟಿಸಿದೆ. ಜೂನ್ 4 ರಂದು ಐಪಿಎಲ್ 2025 ವಿಜೇತರಾದ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ತಂಡಕ್ಕೆ ಸನ್ಮಾನ ಸಮಾರಂಭದ ವೇಳೆ ಬೆಂಗಳೂರಿನ ಎಂ. … Continued

ವಿಮಾನ ಹಾರಿಸಲು ನಿರಾಕರಿಸಿದ ಪೈಲಟ್…45 ನಿಮಿಷ ಕಾಯ್ದ ಮಹಾರಾಷ್ಟ್ರ ಡಿಸಿಎಂ ; ನಂತರ ಸಂಭವಿಸಿತು ಜೀವ ಉಳಿಸುವ ಟ್ವಿಸ್ಟ್‌…!

ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ನಿಗದಿತ ಸಮಯಕ್ಕಿಂತ ತಡವಾಗಿ ತಲುಪಿದ ನಂತರ ಜಲಗಾಂವ್ ವಿಮಾನ ನಿಲ್ದಾಣದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಕಾಯಬೇಕಾಯಿತು. ಅವರು ಶುಕ್ರವಾರ ರಾತ್ರಿ 9:15 ಕ್ಕೆ ವಿಮಾನ ನಿಲ್ದಾಣ ತಲುಪಿದರು, ಆದರೆ ಪೈಲಟ್ ವಿಮಾನ ಟೇಕ್ ಆಫ್ ಮಾಡಲು ನಿರಾಕರಿಸಿದರು. ಶಿಂಧೆ ಅವರ ವಿಳಂಬ ಉಲ್ಲೇಖಿಸಿ, ಇದು ತಮ್ಮ … Continued

ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರುಪೇರು

ಶಿಮ್ಲಾ: ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರಿಗೆ ಅಧಿಕ ರಕ್ತದೊತ್ತಡದ (high blood) ಹೆಚ್ಚಾದ ನಂತರ ಶನಿವಾರ ಶಿಮ್ಲಾದ ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಪಕ್ಷದ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ. ತಮ್ಮ ಪುತ್ರಿ ಪ್ರಿಯಾಂಕಾ ಗಾಂಧಿ ಅವರೊಂದಿಗೆ ಶಿಮ್ಲಾಕ್ಕೆ ವೈಯಕ್ತಿಕ ಪ್ರವಾಸದಲ್ಲಿದ್ದ ಸೋನಿಯಾ ಗಾಂಧಿ (78) ಅವರನ್ನು ಆಸ್ಪತ್ರೆಯಲ್ಲಿ ಕೆಲವು ಪರೀಕ್ಷೆಗಳಿಗೆ … Continued

ವೀಡಿಯೊ..| ಪರಸ್ಪರ ಒಂದನ್ನೊಂದು ದಾಟುವ ‘ವಂದೇ ಭಾರತ’ ರೈಲುಗಳ ವೀಡಿಯೊ ಭಾರಿ ವೈರಲ್‌ : ಕೌತುಕದ ಈ ವೀಡಿಯೊ ‘ವಿಜ್ಞಾನವೇ? ಗೇಮಿಂಗ್ ಸೈಟೆ…?

ರೈಲ್ವೆ ಜಂಕ್ಷನ್‌ನಲ್ಲಿ ಮೂರು ಹೈಸ್ಪೀಡ್ ರೈಲುಗಳು ಸರಾಗವಾಗಿ ಪರಸ್ಪರ ದಾಟುತ್ತಿರುವುದನ್ನು ತೋರಿಸುವ ಅದ್ಭುತ ಅನಿಮೇಟೆಡ್ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದು ಆಕರ್ಷಣೆ ಮತ್ತು ಚರ್ಚೆಗೆ ಕಾರಣವಾಗಿದೆ. ವ್ಯಾಪಕವಾಗಿ ಹಂಚಿಕೊಳ್ಳಲಾದ ಈ ವೀಡಿಯೊ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಪ್ರಶಂಸಿಸುತ್ತಾ ಭಾರತದ ಮುಂದುವರಿದ ರೈಲ್ವೆ ಮೂಲಸೌಕರ್ಯವನ್ನು ಪ್ರದರ್ಶಿಸುತ್ತದೆ ಎಂದು ಹೇಳುತ್ತದೆ. ಆದರೆ, ಇದು … Continued

ಭಾರತದಲ್ಲಿ ತೀವ್ರ ಬಡತನದ ಪ್ರಮಾಣ 27.1%ರಿಂದ 5.3%ಕ್ಕೆ ಇಳಿಕೆ ; ವಿಶ್ವಬ್ಯಾಂಕ್ ವರದಿ

ನವದೆಹಲಿ: ಭಾರತವು ಕಳೆದ ದಶಕದಲ್ಲಿ ತನ್ನ ತೀವ್ರ ಬಡತನದ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪ್ರಗತಿ ಸಾಧಿಸಿದೆ, ಇದು 2011-12ರಲ್ಲಿ ಶೇಕಡಾ 27.1ರಷ್ಟು ಇದ್ದಿದ್ದು, 2022-23ರಲ್ಲಿ ಶೇಕಡಾ 5.3 ಕ್ಕೆ ಇಳಿದಿದೆ ಎಂದು ವಿಶ್ವಬ್ಯಾಂಕ್‌ನ ಇತ್ತೀಚಿನ ದತ್ತಾಂಶವು ಬಹಿರಂಗಪಡಿಸಿದೆ. 2022-23ರ ಅವಧಿಯಲ್ಲಿ ಭಾರತದಲ್ಲಿ ಸುಮಾರು 7.52 ಕೋಟಿ ಜನರು ತೀವ್ರ ಬಡತನದಲ್ಲಿ ವಾಸಿಸುತ್ತಿದ್ದಾರೆ. ಇದು 2011-12ರಲ್ಲಿ … Continued

ಮಂಗಳೂರು | ಸೆಮಿನಾರ್ ತಪ್ಪಿಸಿಕೊಳ್ಳಲು ಆಸ್ಪತ್ರೆಗೆ ಬಾಂಬ್ ಬೆದರಿಕೆ ಕರೆ ಮಾಡಿ ಕೊನೆಗೂ ಸಿಕ್ಕಿಬಿದ್ದ ವೈದ್ಯಕೀಯ ವಿದ್ಯಾರ್ಥಿನಿ…!

 ಮಂಗಳೂರು : ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ನಡೆದ ಬಾಂಬ್ ಬೆದರಿಕೆ ಪ್ರಕರಣ ನಾಟಕೀಯ ತಿರುವು ಪಡೆದುಕೊಂಡಿದ್ದು, ವಿಚಾರ ಸಂಕಿರಣವನ್ನು ತಪ್ಪಿಸಿಕೊಳ್ಳಲು ಹುಸಿ ಕರೆ ಮಾಡಿದ ಆರೋಪದ ಮೇಲೆ ಸ್ನಾತಕೋತ್ತರ (ಪಿಜಿ) ವೈದ್ಯಕೀಯ ವಿದ್ಯಾರ್ಥಿನಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಜೂನ್ 4 ರಂದು ಬೆಳಿಗ್ಗೆ 8:45 ರ ಸುಮಾರಿಗೆ ಆಸ್ಪತ್ರೆಯ ಆವರಣದಲ್ಲಿ ಬಾಂಬ್ ಇಡಲಾಗಿದೆ … Continued

ಬೆಂಗಳೂರು | ಪತ್ನಿಯ ಶಿರಚ್ಛೇದ ಮಾಡಿದ ಗಂಡ; ರುಂಡ ಹಿಡಿದುಕೊಂಡು ಪೊಲೀಸ್ ಠಾಣೆಗೆ ಬಂದ…!

 ಬೆಂಗಳೂರು: ಬೆಂಗಳೂರಿನ ಆನೇಕಲ್ ಪ್ರದೇಶದಲ್ಲಿ 28 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಶಿರಚ್ಛೇದ ಮಾಡಿ, ಕತ್ತರಿಸಿದ ತಲೆಯನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡು ಬಂದಿದ್ದಾನೆ ಎಂದು ಆರೋಪಿಸಲಾಗಿದೆ. ಆರೋಪಿ ಶಂಕರ ಎಂಬಾತ ತನ್ನ 26 ವರ್ಷದ ಪತ್ನಿ ಮಾನಸಾಳ  ಜೊತೆ ನಡೆದ ತೀವ್ರ ಜಗಳದಲ್ಲಿ ಆಕೆಯನ್ನು ಕೊಲೆ ಮಾಡಿದ್ದಾನೆ. ಪೊಲೀಸ್ ಮೂಲಗಳ ಪ್ರಕಾರ, ವಿವಾಹಿತ ದಂಪತಿ ಶಂಕರ … Continued

ಕರ್ನಾಟಕದಲ್ಲಿ ಜೂನ್‌ 10 ರಿಂದ ಮತ್ತೆ ಭಾರಿ ಮಳೆ ಮುನ್ಸೂಚನೆ ; ಹಲವು ಜಿಲ್ಲೆಗಳಿಗೆ ಆರೆಂಜ್‌, ಯೆಲ್ಲೋ ಅಲರ್ಟ್‌ ಘೋಷಣೆ

ಬೆಂಗಳೂರು : ಮೇ 21 ರಿಂದ ಜೂನ್ 2 ರವರೆಗೂ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿತ್ತು. ಕಳೆದ ನಾಲ್ಕೈದು ದಿನಗಳಿಂದ ರಾಜ್ಯಾದ್ಯಂತ ಮಳೆಯ ಅಬ್ಬರ ಕಡಿಮೆಯಾಗಿದೆ. ಜೂನ್ 11ರಿಂದ ರಾಜ್ಯದಲ್ಲಿ ಮತ್ತೆ ಮುಂಗಾರು ತೀವ್ರವಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸೂಚನೆಯಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ … Continued

ವೀಡಿಯೊಗಳು…| ವಿಶ್ವದ ಅತಿ ಎತ್ತರದ ಸೇತುವೆ ಜಮ್ಮು-ಕಾಶ್ಮೀರದ ಚೆನಾಬ್ ರೈಲ್ವೆ ಸೇತುವೆ ನಿರ್ಮಾಣದ ಹಿಂದಿದೆ ಐಐಎಸ್ಸಿ ಪ್ರಾಧ್ಯಾಪಕಿಯ 17 ವರ್ಷಗಳ ಪರಿಶ್ರಮ…

ನವದೆಹಲಿ: ವಿಶ್ವದ ಅತಿ ಎತತರದ ಸೇತುವೆಯಾದ ಜಮ್ಮು ಮತ್ತು ಕಾಶ್ಮೀರದ ಚೆನಾಬ್ ರೈಲ್ವೆ ಸೇತುವೆಯು ನಿರ್ಮಾಣದ ಅದ್ಭುತ. ಇದನ್ನು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ಭಾರತೀಯ ಎಂಜಿನಿಯರಿಂಗ್‌ನ ಗಮನಾರ್ಹ ಸಾಧನೆಯಾದ ಚೆನಾಬ್ ಸೇತುವೆಯು ವಿಶ್ವದ ಅತಿ ಎತ್ತರದ ಕಮಾನು ಸೇತುವೆಯಾಗಿದೆ. ಯೋಜನೆಯ ಯಶಸ್ಸಿಗೆ ಅನೇಕರು ಕಾರಣರಾಗಿದ್ದರೂ, ಅದರ ರಚನಾತ್ಮಕ ಸಮಗ್ರತೆ ಮತ್ತು ಸ್ಥಿರತೆಗೆ ಬೆಂಗಳೂರಿನ … Continued