ವಿಡಿಯೋ | ಕಾಲ್ನಡಿಗೆಯಲ್ಲೇ ತಿರುಪತಿಯ ತಿರುಮಲ ಬೆಟ್ಟದ 3550 ಮೆಟ್ಟಿಲು ಏರಿದ ಕರ್ನಾಟಕದ 116 ವರ್ಷದ ವೃದ್ಧೆ !

ತಿರುಪತಿಯ ತಿರುಮಲ ಶ್ರೀ ವೆಂಕಟೇಶ್ವರ ದೇವರ ಮೇಲಿನ ಅಚಲ ಭಕ್ತಿಯಿಂದ ಕರ್ನಾಟಕದ 116 ವರ್ಷದ ವೃದ್ಧೆಯೊಬ್ಬರು ಕಾಲ್ನಡಿಗೆಯಲ್ಲೇ ತಿರುಮಲ ಬೆಟ್ಟ ಏರಿರುವ ವಿದ್ಯಮಾನ ಈಗ ವ್ಯಾಪಕ ಗಮನ ಸೆಳೆದಿದೆ. ಯಾವುದೇ ಆಯಾಸವಿಲ್ಲದೆ, ಯಾರ ಸಹಾಯವನ್ನೂ ಪಡೆಯದೆ, ಕೈಯಲ್ಲಿ ಕೇವಲ ಒಂದು ಕೋಲನ್ನು ಆಧಾರವಾಗಿಸಿಕೊಂಡು, ಸುಮಾರು 3,550 ಮೆಟ್ಟಿಲುಗಳನ್ನು ಏರಿ ತಿರುಮಲ ತಲುಪಿರುವುದು ಆಶ್ಚರ್ಯಚಕಿತರನ್ನಾಗಿಸಿದೆ. ಈ ವೃದ್ಧೆಯ … Continued

ಜುಲೈ 20ರಿಂದ ಸಂಸತ್ತಿನ ಮಳೆಗಾಲ ಅಧಿವೇಶನ; ಮಹತ್ವದ ಮಸೂದೆಗಳನ್ನು ಮಂಡಿಸಲಿದೆಯೇ ಸರ್ಕಾರ ?

ನವದೆಹಲಿ: ಸಂಸತ್ತಿನ ಮಳೆಗಾಲ (ಮಾನ್ಸೂನ್) ಅಧಿವೇಶನವು 2026ರ ಜುಲೈ 20ರಿಂದ ಆರಂಭವಾಗಿ ಆಗಸ್ಟ್ 13ರ ವರೆಗೆ ನಡೆಯಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ ರಿಜಿಜು ಶನಿವಾರ ಪ್ರಕಟಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ (X) ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ರಿಜಿಜು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೇಂದ್ರ ಸರ್ಕಾರದ ಶಿಫಾರಸಿನ ಮೇರೆಗೆ … Continued

ತೃಣಮೂಲ Vs ತೃಣಮೂಲ ಕದನ ತೀವ್ರ : ಪಕ್ಷದ ಪ್ರಧಾನ ಕಚೇರಿಯನ್ನೇ ತಮ್ಮ ವಶಕ್ಕೆ ತೆಗೆದುಕೊಂಡ ಬಂಡಾಯ ಬಣ

ಕೊಲ್ಕತ್ತಾ: ರಿತಬ್ರತ ಬ್ಯಾನರ್ಜಿ ನೇತೃತ್ವದ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಬಂಡಾಯ ಬಣವು ಕೊಲ್ಕತ್ತಾದ ಮೆಟ್ರೋಪಾಲಿಟನ್ ಪ್ರದೇಶದಲ್ಲಿರುವ ಪಕ್ಷದ ಮುಖ್ಯ ಕಚೇರಿಯನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ಫಿರ್ಹಾದ್ ಹಕೀಮ್, ಸಂದೀಪನ್ ಸಹಾ, ಜಾವೇದ್ ಖಾನ್ ಹಾಗೂ ಪಕ್ಷದ ಖಜಾಂಚಿ ಅಕ್ರುಜ್ಜಮಾನ ಸೇರಿದಂತೆ ಹಲವು ಶಾಸಕರೊಂದಿಗೆ ಕಚೇರಿಗೆ ಆಗಮಿಸಿದ ಬಂಡಾಯ ಬಣದ ನಾಯಕರು, ಕಚೇರಿಯ … Continued

ಇ-ರಿಕ್ಷಾ ಬ್ಯಾಟರಿ ಸ್ಥಗಿತಗೊಳಿಸಬಲ್ಲ ಆ್ಯಪ್‌ಗಳ ತೆರವಿಗೆ ಗೂಗಲ್‌, ಆಪಲ್‌ಗೆ ಕೇಂದ್ರ ಸರ್ಕಾರದ ಸೂಚನೆ

ನವದೆಹಲಿ: ಪ್ರಯಾಣಿಕರ ಸುರಕ್ಷತೆ, ದುರುಪಯೋಗ ಹಾಗೂ ವಿದ್ಯುತ್ ವಾಹನಗಳ (ಇವಿ) ಬ್ಯಾಟರಿ ನಿರ್ವಹಣಾ ವ್ಯವಸ್ಥೆಗಳಿಗೆ (Battery Management System–BMS) ಅನಧಿಕೃತ ಪ್ರವೇಶದ ಬಗ್ಗೆ ವ್ಯಕ್ತವಾಗಿರುವ ಗಂಭೀರ ಆತಂಕದ ಹಿನ್ನೆಲೆಯಲ್ಲಿ, ಇ-ರಿಕ್ಷಾ ಹಾಗೂ ಇತರ ವಿದ್ಯುತ್ ವಾಹನಗಳ ಬ್ಯಾಟರಿಗಳನ್ನು ದೂರದಿಂದಲೇ (ರಿಮೋಟ್ ಮೂಲಕ) ಸ್ಥಗಿತಗೊಳಿಸುವ ಸಾಮರ್ಥ್ಯ ಹೊಂದಿರುವುದಾಗಿ ಆರೋಪಿಸಲಾದ ಏಳು ಮೊಬೈಲ್ ಅಪ್ಲಿಕೇಶನ್‌ಗಳನ್ನು ತೆಗೆದುಹಾಕುವಂತೆ ಕೇಂದ್ರ ಸರ್ಕಾರ … Continued

ವಿಡಿಯೋ | ಅದೇ ಮಾತ್ರೆ ; ಅಮೆರಿಕದಲ್ಲಿ ₹85 ಸಾವಿರ…ಭಾರತದಲ್ಲಿ ₹35 ! ‘ನಮ್ಮನ್ನು ದರೋಡೆ ಮಾಡಲಾಗ್ತಿದೆ ಎಂದ ಅಮೆರಿಕ ಮಹಿಳೆ

ನವದೆಹಲಿ: ಭಾರತ ಮತ್ತು ಅಮೆರಿಕದ ಆರೋಗ್ಯ ಸೇವೆಗಳ ವೆಚ್ಚದ ನಡುವಿನ ಭಾರೀ ವ್ಯತ್ಯಾಸವನ್ನು ತೋರಿಸಿದ ಅಮೆರಿಕದ ಮಹಿಳೆಯೊಬ್ಬರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಗಮನ ಸೆಳೆದಿದೆ. ಇನ್‌ಸ್ಟಾಗ್ರಾಂನಲ್ಲಿ “Indian vs American Healthcare” ಎಂಬ ಶೀರ್ಷಿಕೆಯಲ್ಲಿ ವಿಡಿಯೊ ಹಂಚಿಕೊಂಡಿರುವ ಲಿಜ್ (Liz) ಎಂಬ ಮಹಿಳೆ, ಅಮೆರಿಕದಲ್ಲಿ ಆರೋಗ್ಯ ಸೇವೆಗಳ ಹೆಸರಿನಲ್ಲಿ ಜನರನ್ನು “ದರೋಡೆ” ಮಾಡಲಾಗುತ್ತಿದೆ ಎಂದು … Continued