ಸಮುದ್ರ ಮಟ್ಟ ಏರಿಕೆಯಿಂದ ಮುಂಬೈ, ಕೋಲ್ಕತ್ತಾದ 1.4 ಕೋಟಿ ಜನರು ಮನೆ ಕಳೆದುಕೊಳ್ಳಬಹುದು : ವಿಶ್ವಸಂಸ್ಥೆ ವರದಿ

ಸಮುದ್ರ ಮಟ್ಟ ಏರಿಕೆ ಮತ್ತು ಶಾಶ್ವತ ಜಲಾವೃತದ ಪರಿಣಾಮವಾಗಿ ಕೋಲ್ಕತ್ತಾ ಮತ್ತು ಮುಂಬೈನ ಲಕ್ಷಾಂತರ ಜನರು ತಮ್ಮ ಮನೆಗಳನ್ನು ಕಳೆದುಕೊಳ್ಳುವ ತಕ್ಷಣದ ಅಪಾಯ ಎದುರಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿಯೊಂದು ಎಚ್ಚರಿಸಿದೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯವರ ಕಚೇರಿ ಬಿಡುಗಡೆ ಮಾಡಿರುವ ‘ಸಮುದ್ರ ಮಟ್ಟದ ಏರಿಕೆಗೆ ಸಂಬಂಧಿಸಿದ ಸವಾಲುಗಳು ಮತ್ತು ಅದನ್ನು ಎದುರಿಸುವ ಮಾರ್ಗಗಳು’ (‘Challenges Related to … Continued

ನೇಪಾಳದಲ್ಲಿ ದುರಂತ ; ಬಿಹಾರದಲ್ಲಿ ಆತಂಕ..! ಪ್ರವಾಹದಲ್ಲಿ ಬಂದ ಅಪರಿಚಿತ ಮೀನುಗಳು ಜೀವಕ್ಕೆ ಕಂಟಕ ? ಸರ್ಕಾರದ ಎಚ್ಚರಿಕೆ

ಪಾಟ್ನಾ: ನೇಪಾಳದಲ್ಲಿ ಸಂಭವಿಸಿದ ಭೀಕರ ಹಠಾತ್‌ ಪ್ರವಾಹದ ಪರಿಣಾಮ ಇದೀಗ ಬಿಹಾರದಲ್ಲಿ ಹೊಸ ಆತಂಕಕ್ಕೆ ಕಾರಣವಾಗಿದೆ. ಪ್ರವಾಹದ ನೀರಿನೊಂದಿಗೆ ನೇಪಾಳದಿಂದ ಹರಿದು ಬಂದಿರುವ ಅಪರಿಚಿತ ಮೀನುಗಳನ್ನು ಹಿಡಿಯುವುದು, ಮಾರಾಟ ಮಾಡುವುದು ಅಥವಾ ತಿನ್ನುವುದು ಅಪಾಯಕಾರಿ ಎಂದು ಬಿಹಾರ ಸರ್ಕಾರ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳುವವರೆಗೆ ಇಂತಹ ಮೀನುಗಳಿಂದ ದೂರವಿರುವಂತೆ ಅಧಿಕಾರಿಗಳು ಮನವಿ … Continued

ಸಿಜೆಪಿ ಪ್ರತಿಭಟನಾಕಾರರ ವಿರುದ್ಧದ ಎಲ್ಲ ಎಫ್‌ಐಆರ್‌ ರದ್ದು ಮಾಡಿದ ಸುಪ್ರೀಂ ಕೋರ್ಟ್‌ ; ಆದರೆ ಕೆಲವರಿಗೆ ವಿನಾಯಿತಿ ಇಲ್ಲ…

ನವದೆಹಲಿ: ಜುಲೈ 20ರಂದು ನಡೆದ ಕಾಕ್ರೋಚ್‌ ಜನತಾ ಪಾರ್ಟಿ (CJP) ಪ್ರತಿಭಟನೆಗಳ ಬಳಿಕ ವಿದ್ಯಾರ್ಥಿ ಪ್ರತಿಭಟನಾಕಾರರ ವಿರುದ್ಧ ದೇಶದ ವಿವಿಧ ಭಾಗಗಳಲ್ಲಿ ದಾಖಲಿಸಲಾಗಿದ್ದ ಎಫ್‌ಐಆರ್‌ಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಂಗಳವಾರ ಮಹತ್ವದ ಆದೇಶ ಮಾಡಿದ್ದು, ಜುಲೈ 20ರಿಂದ 25ರವರೆಗೆ ವಿದ್ಯಾರ್ಥಿಗಳ ವಿರುದ್ಧ ದಾಖಲಾದ ಎಲ್ಲಾ ಪ್ರಕರಣಗಳನ್ನು ರದ್ದುಗೊಳಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ನೇತೃತ್ವದ ಪೀಠವು, ದೇಶದ … Continued

ಎಸ್‌ಸಿಒ ಶೃಂಗಸಭೆಯ ಮುಖ್ಯಸ್ಥರ ಗ್ರುಪ್‌ ಫೋಟೊದಿಂದ ಪ್ರಧಾನಿ ಮೋದಿ ಫೋಟೊ ಕಟ್‌ ಮಾಡಿ ಪ್ರಕಟಿಸಿದ ಪಾಕಿಸ್ತಾನ ಪಿಎಂಒ !

ಬಿಶ್ಕೆಕ್ (ಕಿರ್ಗಿಸ್ತಾನ್): ಶಾಂಘೈ ಸಹಕಾರ ಸಂಘಟನೆ (SCO) ಶೃಂಗಸಭೆಯ ವೇಳೆ ತೆಗೆದ ಅಧಿಕೃತ ಗ್ರೂಪ್ ಫೋಟೋವನ್ನು ಪಾಕಿಸ್ತಾನದ ಪ್ರಧಾನಿ ಕಚೇರಿ (PMO) ಎಡಿಟ್‌ ಮಾಡಿ ಪ್ರಕಟಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಫೋಟೋದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಐವರು ನಾಯಕರನ್ನು ಕತ್ತರಿಸಿ ತೆಗೆದುಹಾಕಲಾಗಿದ್ದು, ಆ ಮೂಲಕ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಚಿತ್ರದ … Continued

ನೌಕಾಪಡೆಗೆ ಐಎನ್ಎಸ್ ನಿಪುಣ್ ಸೇರ್ಪಡೆ : ಭಾರತಕ್ಕೆ ಈ ಆಳ ಸಮುದ್ರ ಡೈವಿಂಗ್ ಹಡಗುಗಳು ಏಕೆ ಬೇಕು? ಇದರ ವಿಶೇಷತೆ ಏನು?

ಮುಂಬೈ: ಭಾರತೀಯ ನೌಕಾಪಡೆಯು ಸೋಮವಾರ (ಆಗಸ್ಟ್‌ 31) ಮುಂಬೈನ ನೌಕಾ ಡಾಕ್‌ಯಾರ್ಡ್‌ನಲ್ಲಿ ನಿಸ್ಟಾರ್‌ ವರ್ಗದ (Nistar-Class) ಎರಡನೇ ಡೈವಿಂಗ್‌ ಸಪೋರ್ಟ್‌ ವೆಸೆಲ್‌ (DSV) ‘ಐಎನ್‌ಎಸ್‌ ನಿಪುಣ್‌’ ಅನ್ನು ಅಧಿಕೃತವಾಗಿ ಸೇವೆಗೆ ಸೇರ್ಪಡೆಗೊಳಿಸಿದೆ. ತನ್ನ ಚಿಹ್ನೆಯಲ್ಲಿ ತಿಮಿಂಗಿಲ (Whale) ಮತ್ತು ಡೈವಿಂಗ್‌ ಹೆಲ್ಮೆಟ್‌ ಹೊಂದಿರುವ ಈ ವಿಶೇಷ ಹಡಗು, ಪಶ್ಚಿಮ ನೌಕಾ ಕಮಾಂಡ್‌ನ ಆಳಸಮುದ್ರ ಡೈವಿಂಗ್‌, ಜಲಾಂತರ್ಗಾಮಿ … Continued

ಪಾಕಿಸ್ತಾನದಲ್ಲಿ 100 ವರ್ಷಗಳಿಗೂ ಹಳೆಯ ಹಿಂದೂ ದೇವಾಲಯ ಧ್ವಂಸ : ವರದಿ

ಇಸ್ಲಾಮಾಬಾದ್: ಪಾಕಿಸ್ತಾನದ ಪೂರ್ವ ಪಂಜಾಬ್ ಪ್ರಾಂತ್ಯದಲ್ಲಿ ಸುಮಾರು 100ರಿಂದ 125 ವರ್ಷಗಳಷ್ಟು ಹಳೆಯದಾದ ಹಿಂದೂ ದೇವಾಲಯವೊಂದನ್ನು ಧ್ವಂಸಗೊಳಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತ ಸಂಘಟನೆಗಳು, ಸ್ಥಳೀಯ ನಿವಾಸಿಗಳು ಹಾಗೂ ರಾಜಕೀಯ ಪಕ್ಷಗಳು ತನಿಖೆಗೆ ಆಗ್ರಹಿಸಿವೆ. ಅಲ್ಲದೆ ದೇವಾಲಯವನ್ನು ಮೂಲ ಸ್ವರೂಪದಲ್ಲಿ ಪುನರ್‌ನಿರ್ಮಿಸಿ, ಅದರ ಭೂಮಿಯ ಮೇಲಿನ  ಅತಿಕ್ರಮಣಗಳನ್ನು ತೆರವುಗೊಳಿಸುವಂತೆ ಶೆಹಬಾಜ್ ಶರೀಫ್ ನೇತೃತ್ವದ  ಸರ್ಕಾರವನ್ನು ಒತ್ತಾಯಿಸಿವೆ. … Continued

ವಿದೇಶ ಪ್ರವಾಸ, ವಿದೇಶದಲ್ಲಿ ಮದುವೆ ಬೇಡ, ಚಿನ್ನ ಖರೀದಿ ತಗ್ಗಿಸಿ : ದಾಖಲೆ ಆರ್ಥಿಕ ಬೆಳವಣಿಗೆ ನಡುವೆ ಮೋದಿ ಸ್ವದೇಶಿ ಮಂತ್ರ

ನವದೆಹಲಿ: ಯುವಸಮೂಹ, ವಿಶೇಷವಾಗಿ ಜನರೇಶನ್-ಝಡ್ (Gen Z) ಸಮುದಾಯದ ಜೊತೆ ಸಂಪರ್ಕ ಸಾಧಿಸುವ ತಮ್ಮ ಪ್ರಯತ್ನಗಳ ಮುಂದುವರಿದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಂನಲ್ಲಿ ಸೆಲ್ಫಿ ಶೈಲಿಯ ವಿಡಿಯೊ ಹಂಚಿಕೊಂಡಿದ್ದು, 2026-27 ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆ ನಿರೀಕ್ಷೆಗೂ ಮೀರಿದ ಬೆಳವಣಿಗೆ ದಾಖಲಿಸಿರುವುದನ್ನು ಉಲ್ಲೇಖಿಸಿದ್ದಾರೆ. ದೇಶದಾದ್ಯಂತ “ಸುಳ್ಳಿನ ಪ್ರತಿಧ್ವನಿ” (ಜೂಠ್ ಕಿ … Continued

ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ನಿವೃತ್ತಿ ಘೋಷಿಸಿದ ಅರ್ಜೆಂಟಿನಾದ ಫುಟ್ಬಾಲ್ ದಂತಕಥೆ ಲಿಯೊನೆಲ್ ಮೆಸ್ಸಿ

ಬ್ಯೂನಸ್ ಐರಿಸ್ : ಅರ್ಜೆಂಟಿನಾದ ಫುಟ್ಬಾಲ್ ದಂತಕಥೆ , ಎಂಟು ಬಾರಿ ಬ್ಯಾಲನ್ ಡಿ’ಓರ್ ಪ್ರಶಸ್ತಿ ವಿಜೇತ ಹಾಗೂ ತಂಡದ ನಾಯಕ ಲಿಯೊನೆಲ್ ಮೆಸ್ಸಿ (39) ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಇದರೊಂದಿಗೆ ಅರ್ಜೆಂಟಿನಾ ರಾಷ್ಟ್ರೀಯ ಫುಟ್ಬಾಲ್‌ ತಂಡದೊಂದಿಗೆ ಅವರ 20 ವರ್ಷಗಳ ಅದ್ಭುತ ಪಯಣ ಅಂತ್ಯಗೊಂಡಿದೆ.  ಇನ್‌ಸ್ಟಾಗ್ರಾಂನಲ್ಲಿ ಸ್ಪ್ಯಾನಿಷ್ ಭಾಷೆಯಲ್ಲಿ ಕೈಬರಹದ ಪತ್ರವನ್ನು ಹಂಚಿಕೊಂಡು … Continued

ಅಣ್ಣಾ ಹಜಾರೆ ಮುಂಬೈ ಆಸ್ಪತ್ರೆಯ ಐಸಿಯುಗೆ ದಾಖಲು

ಮುಂಬೈ: ತೀವ್ರ ವೈರಲ್ ಸೋಂಕಿನಿಂದ  ಬಳಲುತ್ತಿರುವ ಸಾಮಾಜಿಕ ಕಾರ್ಯಕರ್ತ, ಭ್ರಷ್ಟಾಚಾರದ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ (Anna Hazare) ಅವರನ್ನು ಸೋಮವಾರ ಮುಂಬೈನ  ಬಾಂಬೆ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ. ಹಜಾರೆ ಅವರು ಪ್ರಸ್ತುತ ಗೌತಮ್ ಬನ್ಸಾಲಿ ಅವರ ನಿರಂತರ ನಿಗಾದಲ್ಲಿದ್ದಾರೆ. ವೈದ್ಯಕೀಯ ತಜ್ಞರು ವಿವರವಾದ ರೋಗನಿರ್ಣಯ ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ ಮತ್ತು ವರದಿಗಳ ಆಧಾರದ … Continued

ಭಾರತದ ವ್ಯಾಪಕ ಸಂಪರ್ಕ ಬಳಸಿ ಯುದ್ಧದ ಹಾದಿಯಲ್ಲಿರುವ ದೇಶಗಳನ್ನು ಸಂವಾದಕ್ಕೆ ಕರೆತನ್ನಿ : ಪ್ರಧಾನಿ ಮೋದಿಗೆ ಇರಾನ್ ಅಧ್ಯಕ್ಷರ ಮನವಿ

ಬಿಶ್ಕೆಕ್‌ : ಕಿರ್ಗಿಸ್ತಾನದ ರಾಜಧಾನಿ ಬಿಶ್ಕೆಕ್‌ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆ (SCO)ಯ 26ನೇ ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಅವರನ್ನು ಭೇಟಿ ಮಾಡಿದರು. ಈ ವರ್ಷದ ಫೆಬ್ರವರಿಯಲ್ಲಿ ಆರಂಭವಾದ ಇರಾನ್–ಅಮೆರಿಕ ಯುದ್ಧದ ಬಳಿಕ ಉಭಯ ನಾಯಕರು ಮುಖಾಮುಖಿಯಾಗಿ ಭೇಟಿಯಾಗಿರುವುದು ಇದೇ ಮೊದಲ ಬಾರಿ. ಭೇಟಿಯಲ್ಲಿ … Continued