ಇ20 ಪೆಟ್ರೋಲ್‌ನಲ್ಲೇ ಶೇ.30ಕ್ಕೂ ಅಧಿಕ ಎಥೆನಾಲ್ ಮಿಶ್ರಣ: ಲ್ಯಾಬ್‌ ಪರೀಕ್ಷಾ ವರದಿ ಉಲ್ಲೇಖಿಸಿ ಸಚಿವ ರಿಜ್ವಾನ್‌ ಆರೋಪ

ಬೆಂಗಳೂರು: ದೇಶದಲ್ಲಿ ವಾಹನಗಳಿಗೆ ಪೂರೈಸಲಾಗುತ್ತಿರುವ ಪೆಟ್ರೋಲ್‌ನಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ (Ethanol) ಮಿಶ್ರಣ ಮಾಡಲಾಗುತ್ತಿದೆ ಎಂದು ಕರ್ನಾಟಕ ಸರ್ಕಾರ ಗಂಭೀರ ಆರೋಪ ಮಾಡಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಗ್ರಹಿಸಿದ ಪೆಟ್ರೋಲ್ ಮಾದರಿಗಳ ಪರೀಕ್ಷೆಯಲ್ಲಿ ಶೇ.20ರ ಮಿತಿಯನ್ನು ಮೀರಿ ಶೇ.31.2ರಷ್ಟು ಎಥೆನಾಲ್ ಅಂಶ ಪತ್ತೆಯಾಗಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಮತ್ತು ಹಿಂದೂಸ್ತಾನ್ … Continued

ನಾಲ್ವರು ಐಎಎಸ್ ಅಧಿಕಾರಿಗಳ ವರ್ಗಾವಣೆ ; ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳಿಗೆ ನೂತನ ಜಿಲ್ಲಾಧಿಕಾರಿಗಳ ನೇಮಕ

ಬೆಂಗಳೂರು: ರಾಜ್ಯ ಸರ್ಕಾರ ನಾಲ್ವರು ಹಿರಿಯ ಐಎಎಸ್ (IAS) ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಈ ಕುರಿತು ಅಧಿಕೃತ ಅಧಿಸೂಚನೆ ಪ್ರಕಟಿಸಿದ್ದು, ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳ  ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ವರ್ಗಾವಣೆಯ ಆದೇಶದ ಪ್ರಕಾರ, ಇದುವರೆಗೆ ಉತ್ತರ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಲಕ್ಷ್ಮೀಪ್ರಿಯಾ ಕೆ.  … Continued

ಸಿಜೆಐ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ವಿಚಾರ: ಕೇರಳ ಕಾಂಗ್ರೆಸ್‌ಗೆ ಸುಪ್ರೀಂ ಕೋರ್ಟ್‌ ನೋಟಿಸ್

ನವದೆಹಲಿ: ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ ಅವರನ್ನು ಟಾರ್ಗೆಟ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಪೋಸ್ಟ್ ಪ್ರಕಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಅಧ್ಯಕ್ಷ ಸೇರಿದಂತೆ ಸಮಿತಿಯ ಪದಾಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ನ್ಯಾಯಾಂಗ ನಿಂದನೆ ಕಾಯ್ದೆ-1971ರ ಅಡಿಯಲ್ಲಿ ಏಕೆ ಕ್ರಮ ಕೈಗೊಳ್ಳಬಾರದು ಎಂಬುದಕ್ಕೆ ವಿವರಣೆ … Continued

ಕನ್ನಡದ ಖ್ಯಾತ ಸಾಹಿತಿ ಕೆ.ವಿ. ನಾರಾಯಣ ನಿಧನ

ಬೆಂಗಳೂರು: ಕನ್ನಡದ ಖ್ಯಾತ ಸಾಹಿತಿ, ಭಾಷಾಶಾಸ್ತ್ರಜ್ಞ, ವಿಮರ್ಶಕ ಡಾ.ಕೆ.ವಿ. ನಾರಾಯಣ (K.V. Narayana) ಇಂದು, ಶುಕ್ರವಾರ ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ (78) ವರ್ಷ ವಯಸ್ಸಾಗಿತ್ತು. ಅವರು ಪತ್ನಿ ಎಚ್. ಎಸ್. ಶ್ರೀಮತಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಕಂಪಲಾಪುರ ವೀರಣ್ಣ ನಾರಾಯಣ (ಕೆ.ವಿ. ನಾರಾಯಣ) ಅವರು 1948ರ ಅಕ್ಟೋಬರ್ 20ರಂದು ಮೈಸೂರು ಜಿಲ್ಲೆಯ … Continued

ದಾಂಡೇಲಿ : ಕಾಮಗಾರಿ ವೇಳೆ ಮಣ್ಣು ಕುಸಿತ ; ರೈಲ್ವೆ ಸಿಬ್ಬಂದಿ ಸಾವು

 ದಾಂಡೇಲಿ: ರೈಲ್ವೆ ಅಂಡರ್‌ಬ್ರಿಡ್ಜ್ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ವೇಳೆ ಏಕಾಏಕಿ ಮಣ್ಣು ಕುಸಿದು ರೈಲ್ವೆ ಇಲಾಖೆಯ ತಾಂತ್ರಿಕ ಸಿಬ್ಬಂದಿಯೊಬ್ಬರು ಮಣ್ಣಿನಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ರಾತ್ರಿ ದಾಂಡೇಲಿ ತಾಲೂಕಿನ ಬರ್ಚಿ–ಕರ್ಕಾ ರಸ್ತೆಯ ಬೇಡರ ಶಿರಗೂರು ಸಮೀಪ ಸಂಭವಿಸಿದೆ ಎಂದು ವರದಿಯಾಗಿದೆ. ಈ ಘಟನೆಯಲ್ಲಿ ಮತ್ತೊಬ್ಬ ಹಿರಿಯ ರೈಲ್ವೆ ಅಧಿಕಾರಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. … Continued

ಕುಕ್ಕೆ ಸುಬ್ರಹ್ಮಣ್ಯ | ಸಾಯುವುದಕ್ಕಾಗಿ ನದಿಗೆ ಹಾರಿದ ಮಹಿಳೆ ; ಜೀವ ಉಳಿಸಿದ ನದಿಯಲ್ಲಿದ್ದ ಮೊಸಳೆ…!

ಮಂಗಳೂರು: ವೈಯಕ್ತಿಕ ಸಮಸ್ಯೆಗಳಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ನದಿಗೆ ಹಾರಿದ್ದ ಮಹಿಳೆಯೊಬ್ಬರು ಮೊಸಳೆಯ ದಾಳಿಗೆ ತುತ್ತಾದರೂ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಮಾರಧಾರಾ ನದಿಯಲ್ಲಿ ನಡೆದಿದೆ. ಮೊಸಳೆ ಕಚ್ಚಿದ ನೋವಿನಿಂದ ಮಹಿಳೆ ಜೋರಾಗಿ ಕೂಗಿಕೊಂಡಿದ್ದು, ಆಕೆಯ ಆರ್ತನಾದ ಕೇಳಿದ ಸ್ಥಳೀಯರು ಹಾಗೂ ಪೊಲೀಸರು ತಕ್ಷಣ ಧಾವಿಸಿ … Continued

ಬೆಂಗಳೂರಿನಲ್ಲಿ ಭೀಕರ ಹತ್ಯಾಕಾಂಡ : ಪತ್ನಿ ಸೇರಿ ಒಂದೇ ಕುಟುಂಬದ ಏಳು ಮಂದಿಯನ್ನು ಕೊಂದ ಕ್ಯಾಬ್ ಚಾಲಕ

ಬೆಂಗಳೂರು: ಪತ್ನಿಯು ತವರು ಮನೆಯವರ ಜೊತೆ ನಿರಂತರ ಸಂಪರ್ಕದಲ್ಲಿದ್ದಳೆಂಬ ಅಸಮಾಧಾನದಿಂದ ಕ್ಯಾಬ್ ಚಾಲಕನೊಬ್ಬ ತನ್ನ ಪತ್ನಿ ಸೇರಿದಂತೆ ಆಕೆಯ ಕುಟುಂಬದ ಏಳು ಮಂದಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಹತ್ಯೆಗೀಡಾದವರಲ್ಲಿ ಏಳು ವರ್ಷದ ಬಾಲಕನೂ ಸೇರಿದ್ದಾನೆ ಎಂದು ಹೇಳಲಾಗಿದೆ. ರಾಜಾಜಿನಗರದ ಭಾಷ್ಯಂ ವೃತ್ತದ ಸಮೀಪ ವಾಸವಿದ್ದ ಆರೋಪಿ ಇಂದೂಶೇಖರ ಎಂಬಾತ … Continued

ಲಾಸ್ ಏಂಜಲೀಸ್ ಮೇಯರ್ ಚುನಾವಣೆಯಲ್ಲಿ ಭಾರತೀಯ ಮೂಲದ ನಿತ್ಯಾ ರಾಮನ್‌ಗೆ ಭರ್ಜರಿ ಗೆಲುವು

ಲಾಸ್ ಏಂಜಲೀಸ್: ಅಮೆರಿಕದ ಎರಡನೇ ಅತಿದೊಡ್ಡ ನಗರ ಲಾಸ್ ಏಂಜಲೀಸ್‌ನ ಮೇಯರ್ ಚುನಾವಣೆಯಲ್ಲಿ ಭಾರತೀಯ ಮೂಲದ ನಿತ್ಯಾ ರಾಮನ್ (45) ಅವರು ಹಾಲಿ ಮೇಯರ್ ಕರೆನ್ ಬಾಸ್ ಅವರನ್ನು ಸೋಲಿಸಿದ್ದಾರೆ. ಎನ್‌ಬಿಸಿ ನ್ಯೂಸ್ (NBC News) ಚುನಾವಣಾ ಫಲಿತಾಂಶವನ್ನು ಪ್ರಕಟಿಸಿದ್ದು, ಪ್ರಗತಿಪರ ರಾಜಕೀಯ ನಿಲುವು ಹೊಂದಿರುವ ನಿತ್ಯಾ ರಾಮನ್ ಅವರ ಗೆಲುವು ಅಮೆರಿಕ ರಾಜಕೀಯದಲ್ಲಿ ಮಹತ್ವದ … Continued