ವಿಶ್ವಕಪ್ 2023: ಬ್ಯಾಟರ್‌ ಶುಭಮನ್ ಗಿಲ್ ಆಸ್ಪತ್ರೆಗೆ ದಾಖಲು

ಚೆನ್ನೈ: ಭಾರತದ ತಂಡದ ಆರಂಭಿಕ ಆಟಗಾರ  ಶುಭಮನ್ ಗಿಲ್ ಅವರನ್ನು ಚೆನ್ನೈನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾರತವು ಅಫ್ಘಾನಿಸ್ತಾನ ವಿರುದ್ಧದ ಪಂದ್ಯಕ್ಕಾಗಿ ದೆಹಲಿಗೆ ಹೊರಡುವ ಮುನ್ನ ಗಿಲ್ ಅವರ ಪ್ಲೇಟ್‌ಲೆಟ್ ಎಣಿಕೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ ಶುಭಮನ್ ಗಿಲ್ ಅವರನ್ನು ಆಸ್ಪತ್ರೆಯಲ್ಲಿ ಇರಿಸಲಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ವಿಶ್ವಕಪ್‌-2023 ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯಾ … Continued

ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ : 5 ರಾಜ್ಯಗಳಲ್ಲಿ ಎಬಿಪಿ-ಸಿವೋಟರ್ ಸಮೀಕ್ಷೆ- ತುರುಸಿನ ಸ್ಪರ್ಧೆಯಲ್ಲಿ ತೆಲಂಗಾಣ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಅಲ್ಪ ಮುಂದೆ, ರಾಜಸ್ಥಾನದಲ್ಲಿ ಬಿಜೆಪಿಗೆ ಬಹುಮತ ಸಾಧ್ಯತೆ

ನವದೆಹಲಿ : ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ತೆಲಂಗಾಣ ಮತ್ತು ಮಿಜೋರಾಂ ಈ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗ ಸೋಮವಾರ ಪ್ರಕಟಿಸಿದೆ. ಮತದಾನವು ನವೆಂಬರ್ 7 ರಂದು ಪ್ರಾರಂಭವಾಗಿ ನವೆಂಬರ್ 30 ರಂದು ಮುಕ್ತಾಯಗೊಳ್ಳಲಿದೆ. ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಮತ್ತು ಮಿಜೋರಾಂನಲ್ಲಿ ಒಂದೇ ಹಂತದಲ್ಲಿ ಮತ್ತು ಛತ್ತೀಸ್‌ಗಢದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. … Continued

ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಎರಡು ದಿನ ಭಾರೀ ಮಳೆ ಮುನ್ಸೂಚನೆ : ಯೆಲ್ಲೋ ಅಲರ್ಟ್ ಘೋಷಣೆ

ಬೆಂಗಳೂರು: ದಕ್ಷಿಣ ಒಳನಾಡಲ್ಲಿ ಹಲವು ಜಿಲ್ಲೆಗಳಲ್ಲಿ ಎರಡು ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಮಂಗಳವಾರ (ಅಕ್ಟೋಬರ್‌ 10) ಚಾಮರಾಜನಗರ, ಕೊಡಗು, ಹಾಸನ , ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ನೀಡಲಾಗಿದೆ. ಅಕ್ಟೋಬರ್‌ 11ರಂದು ಚಾಮರಾಜನಗರ, … Continued

43 ಹೆಚ್ಚುವರಿ ಬರಪೀಡಿತ ತಾಲೂಕು ಘೋಷಿಸಿದ ರಾಜ್ಯ ಸರ್ಕಾರ

ಬೆಂಗಳೂರು : ಈಗ ರಾಜ್ಯ ಸರ್ಕಾರವು 21 ಬರಪೀಡಿತ, 22 ಸಾಧಾರಣ ಬರಪೀಡಿತ ತಾಲೂಕುಗಳನ್ನು ಹೆಚ್ಚುವರಿಯಾಗಿ ಘೋಷಿಸಿದೆ. ರಾಜ್ಯದ ಕಂದಾಯ ಇಲಾಖೆ ವಿಪತ್ತು ನಿರ್ವಹಣೆ ಜಂಟಿ ಕಾರ್ಯದರ್ಶಿ ಟಿ.ಸಿ.ಕಾಂತರಾಜ ಅವರು ಸೋಮವಾರ ಆದೇಶ ಹೊರಡಿಸಿದ್ದಾರೆ. ರಾಜ್ಯದಲ್ಲಿ ಮುಂಗಾರು ಕೊರತೆಯಿಂದ ಭೀಕರ ಬರದ ಛಾಯೆ ಆವರಿಸಿದೆ. ಹೀಗಾಗಿ ರಾಜ್ಯ ಸಚಿವ ಸಂಪುಟ ಉಪ ಸಮಿತಿಯ ಶಿಫಾರಸ್ಸಿನಂತೆ ಸರ್ಕಾರವು … Continued

ಹಮಾಸ್ ಉಗ್ರರ ಸದೆಬಡಿಯಲು ಗಾಜಾ ‘ಸಂಪೂರ್ಣ ಮುತ್ತಿಗೆ’ಗೆ ಇಸ್ರೇಲ್‌ ಆದೇಶ : ಒಳನುಗ್ಗಲು 3 ಲಕ್ಷ ಸೈನಿಕರು ಸಜ್ಜು ; ವಿದ್ಯುತ್, ಆಹಾರ ಪೂರೈಕೆ ಸ್ಥಗಿತ

ಇಸ್ರೇಲಿ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರು ಗಾಜಾದ ಮೇಲೆ ‘ಸಂಪೂರ್ಣ ಮುತ್ತಿಗೆ’ ಆದೇಶ ನೀಡಿದ್ದಾರೆ, ಹಮಾಸ್ ಉಗ್ರಗಾಮಿಗಳ ದಾಳಿಗೆ ಪ್ರತಿಕ್ರಿಯೆಯಾಗಿ ಇಸ್ರೇಲ್‌ ಅಧಿಕಾರಿಗಳು ಪ್ರದೇಶಕ್ಕೆ ವಿದ್ಯುತ್, ಆಹಾರ ಮತ್ತು ಇಂಧನದ ಪೂರೈಕೆ ಕಡಿತಗೊಳಿಸಲಾಗುತ್ತದೆ ಎಂದು ಹೇಳಿದ್ದಾರೆ. ಈಗಾಗಲೇ ಇಸ್ರೇಲ್ ವಾಯು ಪಡೆ ಗಾಜಾ ಪಟ್ಟಿಯಲ್ಲಿ ಇರುವ ಹಮಾಸ್ ಉಗ್ರರ 500ಕ್ಕೂ ಹೆಚ್ಚು ನೆಲೆಗಳ ಮೇಲೆ … Continued

ಪಟಾಕಿ ಘಟಕದಲ್ಲಿ ಬೆಂಕಿ ಅವಘಡ ; ಒಂಬತ್ತು ಸಾವು, ಐವರಿಗೆ ಗಾಯ

ಚೆನ್ನೈ: ತಮಿಳುನಾಡಿನ ಅರಿಯಲೂರು ಜಿಲ್ಲೆಯಲ್ಲಿ ಸೋಮವಾರ ಪಟಾಕಿ ಘಟಕದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಕನಿಷ್ಠ ಒಂಬತ್ತು ಮಂದಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಘಟನೆ ಸೋಮವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಸಂಭವಿಸಿದ್ದು, ಹೊತ್ತಿಕೊಂಡಿದ್ದ ಬೆಂಕಿಯನ್ನು ಅಗ್ನಿಶಾಮಕ ಇಲಾಖೆಯವರು ನಂದಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅರಿಯಲೂರು ಜಿಲ್ಲೆಯ ವೀರಗಳೂರು ಗ್ರಾಮದಲ್ಲಿ ಖಾಸಗಿ ಘಟಕದಲ್ಲಿ ಈ ಘಟನೆ … Continued

ಹೊಸಪೇಟೆ ಬಳಿ ಭೀಕರ ಅಪಘಾತ ; 7 ಜನರು ಸಾವು

ಹೊಸಪೇಟೆ : ಹೊಸಪೇಟೆ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 7 ಜನ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಗಾಯಾಳುಗಳ ಸ್ಥಿತಿ ಗಂಭೀರವಾಗಿದ್ದು, ಅವರನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ನಗರದ ಹೊರವಲಯದ ಸುರಂಗದ ಸಮೀಪ ಎರಡು ಮೈನಿಂಗ್‌ ಟಿಪ್ಪರ್ ಲಾರಿಗಳು ಹಾಗೂ ಕ್ರೂಸರ್‌ ನಡುವೆ ಅಪಘಾತ ಸಂಭವಿಸಿದೆ. ಒಂದು ಮೈನಿಂಗ್‌ ಟಿಪ್ಪರ್‌ ಲಾರಿ ಹೆದ್ದಾರಿ ಪಕ್ಕದ … Continued

ರಾಜಸ್ಥಾನ ವಿಧಾನಸಭೆ ಚುನಾವಣೆ: 41 ಅಭ್ಯರ್ಥಿಗಳ ಬಿಜೆಪಿಯ ಮೊದಲ ಪಟ್ಟಿಯಲ್ಲಿ 7 ಸಂಸದರ ಹೆಸರು, ವಸುಂಧರಾ ರಾಜೆ ನಿಷ್ಠರ ಹೆಸರಿಲ್ಲ…

ನವದೆಹಲಿ: ಮುಂಬರುವ ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿದೆ. 41 ಅಭ್ಯರ್ಥಿಗಳ ಪಟ್ಟಿಯಲ್ಲಿ ಏಳು ಸಂಸದರ ಹೆಸರಿದೆ. ಆದರೆ, ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರ ನಿಷ್ಠಾವಂತರಿಗೆ ಮೊದಲ ಪಟ್ಟಿಯಲ್ಲಿ ಸ್ಥಾನ ಸಿಕ್ಕಿಲ್ಲ. ಶಾಸಕ ನರಪತ್ ಸಿಂಗ್ ರಾಜ್‌ವೀ ಮತ್ತು ರಾಜ್‌ಪಾಲ್ ಸಿಂಗ್ ಶೇಖಾವತ್ … Continued

ಹರ್ದೀಪ್ ನಿಜ್ಜರ್ ಹತ್ಯೆ ಹಿಂದೆ ಚೀನಾ ? ಇದು ಚೀನಾದ ದೊಡ್ಡ ಪಿತೂರಿ ಎಂದು ಆರೋಪಿಸಿದ ಬ್ಲಾಗರ್

ಸ್ವತಂತ್ರ ಬ್ಲಾಗರ್ ಆಗಿರುವ ಜೆನ್ನಿಫರ್ ಜೆಂಗ್ ಅವರು ಕೆನಡಾದಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯಲ್ಲಿ ಚೀನಾದ ಕಮ್ಯುನಿಸ್ಟ್ ಪಕ್ಷ (ಸಿಸಿಪಿ) ಪಾತ್ರವಿದೆ ಎಂದು ಸೂಚಿಸುವ ಆರೋಪವನ್ನು ಮುಂದಿಟ್ಟಿದ್ದಾರೆ. “ಭಾರತ ಮತ್ತು ಪಶ್ಚಿಮದ ನಡುವೆ ಭಿನ್ನಾಭಿಪ್ರಾಯವನ್ನು ಸೃಷ್ಟಿಸಿ ಭಾರತವನ್ನು ದೂಷಿಸುವಂತೆ ಮಾಡುವುದು ಚೀನಾದ ಉದ್ದೇಶವಾಗಿದೆ” ಎಂದು ಝೆಂಗ್ ಆರೋಪಿಸಿದ್ದಾರೆ. ತೈವಾನ್‌ಗೆ ಸಂಬಂಧಿಸಿದಂತೆ ಕ್ಸಿ ಜಿನ್‌ಪಿಂಗ್ … Continued

ಕ್ಲಾಡಿಯಾ ಗೋಲ್ಡಿನ್ ಗೆ 2023ರ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ

ಪ್ರಮುಖ ಕಾರ್ಮಿಕ ಅರ್ಥಶಾಸ್ತ್ರಜ್ಞರಾದ ಪ್ರೊಫೆಸರ್ ಕ್ಲೌಡಿಯಾ ಗೋಲ್ಡಿನ್ ಅವರಿಗೆ 2023 ರ ಆರ್ಥಿಕ ವಿಜ್ಞಾನದ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಘೋಷಿಸಿತು. ಪ್ರಶಸ್ತಿಯು 11 ಮಿಲಿಯನ್ ಸ್ವೀಡಿಷ್ ಬಹುಮಾನವನ್ನು ಹೊಂದಿದೆ. “ಮಹಿಳಾ ಕಾರ್ಮಿಕ ಮಾರುಕಟ್ಟೆಯ ಫಲಿತಾಂಶಗಳ ಬಗ್ಗೆ ನಮ್ಮ ತಿಳುವಳಿಕೆಯನ್ನು ಹೆಚ್ಚಿಸಿದ್ದಕ್ಕಾಗಿ” ಅವರಿಗೆ ಬಹುಮಾನವನ್ನು ನೀಡಲಾಗಿದೆ. 1946 ರಲ್ಲಿ ನ್ಯೂಯಾರ್ಕ್‌ನಲ್ಲಿ ಜನಿಸಿದ ಕ್ಲೌಡಿಯಾ ಗೋಲ್ಡಿನ್, ಗೋಲ್ಡಿನ್ … Continued