ಪಾಕ್ ಪರ ಘೋಷಣೆ : ಭಾರತದ ಸಾರ್ವಭೌಮತ್ವ ಅಂಗೀಕಾರ-ಸಂವಿಧಾನಕ್ಕೆ ನಿಷ್ಠೆಯ ಪ್ರಮಾಣಪತ್ರ ಸಲ್ಲಿಸಿ : ನ್ಯಾಶನಲ್‌ ಕಾನ್ಫರೆನ್ಸ್‌ ನಾಯಕನಿಗೆ ಸುಪ್ರೀಂಕೋರ್ಟ್‌ ಸೂಚನೆ

ನವದೆಹಲಿ: 2018 ರಲ್ಲಿ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿದ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಮೊಹಮ್ಮದ್ ಅಕ್ಬರ್ ಲೋನ್ ಅವರಿಗೆ ಭಾರತದ ಸಂವಿಧಾನಕ್ಕೆ ನಿಷ್ಠೆ ಮತ್ತು ದೇಶದ ಸಾರ್ವಭೌಮತ್ವವನ್ನು ಅಂಗೀಕರಿಸುವ ಪ್ರಮಾಣ ಪತ್ರವನ್ನು ಸಲ್ಲಿಸುವಂತೆ ಸೂಚಿಸಿದೆ. ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ಹಿಂದಿನ ಜಮ್ಮು … Continued

30 ವರ್ಷಗಳ ನಂತರ ʼವರ್ಡ್‌ಪ್ಯಾಡ್ ಅಪ್ಲಿಕೇಶನ್ʼಗೆ ವಿಂಡೋಸ್‌ನಿಂದ ʼಗೇಟ್‌ಪಾಸ್‌ʼ ನೀಡಲಿರುವ ಮೈಕ್ರೋಸಾಫ್ಟ್

ವರ್ಡ್‌ ಪ್ಯಾಡ್‌ (WordPad) ನೆನಪಿದೆಯೇ? ಬರವಣಿಗೆ ಮತ್ತು ಸಂಪಾದನೆಗೆ ಸಂಬಂಧಿಸಿದ ಎಲ್ಲಾ ಮೂಲಭೂತ ಕಾರ್ಯಗಳನ್ನು ನಿರ್ವಹಿಸಲು ಅನುಮತಿಸುವ OG ಅಪ್ಲಿಕೇಶನ್? ಹೌದು, ಇದು ಎಂಎಸ್‌ ವರ್ಡಡ(MS Word)ನಷ್ಟು ಜನಪ್ರಿಯವಾಗಿಲ್ಲ ಅಥವಾ ವೈಶಿಷ್ಟ್ಯ ಸಮೃದ್ಧವಾಗಿಲ್ಲ. ಆದರೆ ಅದು ಕೆಲಸವನ್ನು ಪೂರ್ಣಗೊಳಿಸುತ್ತದೆ. ಮತ್ತು ಇದು ಸಂಪೂರ್ಣವಾಗಿ ಉಚಿತವಾಗಿದೆ. ಆದಾಗ್ಯೂ, ಅಪ್ಲಿಕೇಶನ್ ದೀರ್ಘಕಾಲದಿಂದ ಯಾವುದೇ ನವೀಕರಣವನ್ನು ಸ್ವೀಕರಿಸಿಲ್ಲ ಮತ್ತು ಇತ್ತೀಚಿನ … Continued

ವೀಡಿಯೊ | ಚಂದ್ರಯಾನ-3ರ ಹಾಪ್ ಪ್ರಯೋಗ ಯಶಸ್ವಿ : ಮೇಲಕ್ಕೆ ಜಿಗಿದು ಮತ್ತೆ ಚಂದ್ರನ ಮೇಲ್ಮೈ ಸ್ಪರ್ಶಿಸಿದ ವಿಕ್ರಂ ಲ್ಯಾಂಡರ್

ನವದೆಹಲಿ: ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ಮೇಲೆ ಲ್ಯಾಂಡಿಂಗ್‌ ಮಾಡಿದ ನಂತರ ವಿಕ್ರಂ ಲ್ಯಾಂಡರ್ ಮತ್ತೆ ಚಂದ್ರನ ಮೇಲ್ಮೈಗೆ ಸ್ಪರ್ಶಿಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಇಂದು, ಸೋಮವಾರ ತಿಳಿಸಿದೆ. ಚಂದ್ರಯಾನ-3 ಮಿಷನ್‌ನ ಭಾಗವಾಗಿರುವ ವಿಕ್ರಂ ಲ್ಯಾಂಡರ್ ಚಂದ್ರನ ಮೇಲ್ಮೈಯಲ್ಲಿ ಹಾಪ್ ಪ್ರಯೋಗವನ್ನು ಯಶಸ್ವಿಯಾಗಿ ನಡೆಸುವ ಮೂಲಕ ತನ್ನ ಮಿಷನ್ ಉದ್ದೇಶಗಳನ್ನು ಮೀರಿದೆ ಎಂದು ಇಸ್ರೋ … Continued

‘ನಾನು ನಿರಾಸೆಗೊಂಡಿದ್ದೇನೆ, ಆದರೆ…”: ದೆಹಲಿಯ ಜಿ20 ಶೃಂಗಸಭೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅನುಪಸ್ಥಿತಿ ಬಗ್ಗೆ ಅಮೆರಿಕ ಅಧ್ಯಕ್ಷ ಬೈಡನ್‌

ಜಿ 20 ಶೃಂಗಸಭೆಯಲ್ಲಿ ಭಾಗವಹಿಸಲು ಈ ವಾರ ಭಾರತ ಭೇಟಿಯನ್ನು ಎದುರು ನೋಡುತ್ತಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ನವದೆಹಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಪಾಲ್ಗೊಳ್ಳದಿರುವ ಬಗ್ಗೆ ಅವರು ನಿರಾಸೆ ವ್ಯಕ್ತಪಡಿಸಿದ್ದಾರೆ. ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಬೈಡನ್‌ ಸೆಪ್ಟೆಂಬರ್ 7 ರಂದು ಭಾರತಕ್ಕೆ ಪ್ರಯಾಣಿಸಲಿದ್ದಾರೆ ಎಂದು ಶ್ವೇತಭವನವು … Continued

ಚಂದ್ರಯಾನ-3ರ ಉಡಾವಣೆ ಕೌಂಟ್‌ಡೌನ್‌ಗೆ ಧ್ವನಿ ನೀಡಿದ್ದ ಇಸ್ರೋ ವಿಜ್ಞಾನಿ ವಲರ್ಮತಿ ಹೃದಯಾಘಾತದಿಂದ ನಿಧನ

ಬೆಂಗಳೂರು : ಶ್ರೀಹರಿಕೋಟಾದಲ್ಲಿ ರಾಕೆಟ್ ಉಡಾವಣೆಗಾಗಿ ಕ್ಷಣಗಣನೆಯಲ್ಲಿ ಧ್ವನಿ ನೀಡುತ್ತಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿ ವಲರ್ಮತಿ ಅವರು ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ. ದೇಶದ ಮೂರನೇ ಚಂದ್ರಯಾನವಾದ ಚಂದ್ರಯಾನ-3 (Chandrayaan-3) ರಾಕೆಟ್ ಉಡಾವಣೆಯ ಸಂದರ್ಭದಲ್ಲೂ ಸಹಾ ಕೌಂಟ್‌ಡೌನ್‌ಗೆ ಅವರು ಧ್ವನಿ ನೀಡಿದ್ದು, ಇಸ್ರೋದಲ್ಲಿ ಅದು ಅವರ ಕೊನೆಯ ಧ್ವನಿಯಾಗಿತ್ತು. ಜುಲೈ 14 ರಂದು … Continued

ಚಿತ್ರದುರ್ಗ: ಭೀಕರ ಅಪಘಾತ, ನಾಲ್ವರು ಸ್ಥಳದಲ್ಲೇ ಸಾವು

ಚಿತ್ರದುರ್ಗ: ತಾಲೂಕಿನ ಮಲ್ಲಾಪುರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ-13ರಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಮೃತಪಟ್ಟ ಘಟನೆ ನಡೆದಿದೆ ಎಂದು ವರದಿಯಾಗಿದೆ. ವೇಗವಾಗಿ ಬಂದ ಕಾರು, ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಇದರಿಂದ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ಕಾರಿನಲ್ಲಿದ್ದ ಇತರ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ … Continued

ಆದಿತ್ಯ-L1 ಯೋಜನೆಯಲ್ಲಿ ಕೆಲಸ ಮಾಡುವ ವಿಜ್ಞಾನಿಗಳು ಪರ್ಫ್ಯೂಮ್‌ ಸಹ ಬಳಸಿರಲಿಲ್ಲವಂತೆ : ಯಾಕೆಂದರೆ….

ಬೆಂಗಳೂರಿನ ಆದಿತ್ಯ L-1 ಬಾಹ್ಯಾಕಾಶ ನೌಕೆಯ ಸೌರ ಮಿಷನ್‌ಗಾಗಿ ಮುಖ್ಯ ಪೇಲೋಡ್‌ನಲ್ಲಿ ಕೆಲಸ ಮಾಡುತ್ತಿದ್ದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (IIA)ಯ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳು ಸುಗಂಧ ದ್ರವ್ಯಗಳು ಮತ್ತು ಸ್ಪ್ರೇಗಳನ್ನು ಸಹ ಬಳಸಿರಲಿಲ್ಲವಂತೆ. ಅಷ್ಟು ಕಟ್ಟುನಿಟ್ಟಾದ ನಿಯಮವನ್ನು ಅವರು ಪಾಲಿಸಿದ್ದರಂತೆ. ವಿಸಿಬಲ್ ಎಮಿಷನ್ ಲೈನ್ ಕರೋನಾಗ್ರಾಫ್ (VELC) ಎಂದು ಕರೆಯಲ್ಪಡುವ ಆದಿತ್ಯನ ಮುಖ್ಯ ಪೇಲೋಡ್‌ನಲ್ಲಿ … Continued

“ಇದು ನನಗೆ ಮೂರನೇ ಜನ್ಮ”: ಪಾರ್ಶ್ವವಾಯುವಿನಿಂದ ಚೇತರಿಸಿಕೊಂಡ ನಂತರ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಪಾರ್ಶ್ವವಾಯುವಿಗೆ ತುತ್ತಾಗಿ ಸಕಾಲಕ್ಕೆ ಚಿಕಿತ್ಸೆ ಪಡೆದು ಚೇತರಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಭಾನುವಾರ ಇದು ‘ತಮ್ಮ ಮೂರನೇ ಜನ್ಮ’ ಎಂದು ಹೇಳಿದ್ದಾರೆ. ದೇವರು ಮತ್ತು ತಮಗೆ ಚಿಕಿತ್ಸೆ ನೀಡಿದ ವೈದ್ಯರ ತಂಡಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ರಾಜ್ಯದ ಜನರ ಮಧ್ಯೆ ಇರಲು ಹೊಸ ಜೀವನ ಸಿಕ್ಕಿದೆ ಎಂದು ಹೇಳಿದ್ದಾರೆ. ಡಿಸ್ಚಾರ್ಜ್ ಆಗುವ ಮೊದಲು, … Continued

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಮಹಿಳೆಯನ್ನು ಕಲ್ಲಿನಿಂದ ಹೊಡೆದು ಕೊಂದರು…!

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ವ್ಯಭಿಚಾರ ಮಾಡಿದ ಆರೋಪದ ಮೇಲೆ ಮಹಿಳೆಯೊಬ್ಬರನ್ನು ಕಲ್ಲಿನಿಂದ ಹೊಡೆದು ಕೊಲ್ಲಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಲಾಹೋರ್‌ನಿಂದ 500 ಕಿಮೀ ದೂರದಲ್ಲಿರುವ ಪಂಜಾಬ್‌ನ ರಾಜನ್‌ಪುರ ಜಿಲ್ಲೆಯಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಮಹಿಳೆಯ 20 ರ ಹರೆಯದ ಪತಿ ವ್ಯಭಿಚಾರದ ಆರೋಪ ಮಾಡಿದ್ದಾನೆ. ಶುಕ್ರವಾರ, ವ್ಯಕ್ತಿ ತನ್ನ ಇಬ್ಬರು … Continued

ಅಮೆರಿಕ ಓಪನ್ ಟೆನಿಸ್‌ ಪಂದ್ಯಾವಳಿಯಲ್ಲಿ ಮಹಿಳೆಯರ ಡಬಲ್ ಪಂದ್ಯಕ್ಕೆ ಅಡ್ಡಿಪಡಿಸಿದ ಅಳಿಲು | ವೀಕ್ಷಿಸಿ

ಅಳಿಲೊಂದು ಅಂಕಣವನ್ನು ಆಕ್ರಮಿಸಿದಾಗ ಅಮೆರಿಕ ಓಪನ್ ಟೆನಿಸ್‌ ಡಬಲ್ಸ್ ಪಂದ್ಯವನ್ನು ನಿಲ್ಲಿಸಬೇಕಾಯಿತು. ಕೋರ್ಟ್ 5 ರಂದು ಶನಿವಾರ ರಾತ್ರಿ ನಡೆದ ಎರಡನೇ ಸುತ್ತಿನ ಮಹಿಳಾ ಡಬಲ್ಸ್ ಪಂದ್ಯದಲ್ಲಿ ಗ್ರೀಟ್ ಮಿನ್ನೆನ್ ಮತ್ತು ಯಾನಿನಾ ವಿಕ್‌ಮೇಯರ್ ಹಾಗೂ ಲಾರಾ ಸೀಗೆಮಂಡ್ ಮತ್ತು ವೆರಾ ಜ್ವೊನಾರೆವಾ ವಿರುದ್ಧ ಪಂದ್ಯ ನಡೆಯುತ್ತಿತ್ತು. ಪಂದ್ಯದ ಎರಡನೇ ಸೆಟ್‌ಗೆ ಅಳಿಲು ಅಡ್ಡಿಪಡಿಸಿತು. ಅಳಿಲು … Continued