ದಾಂಡೇಲಿ : ಕಾಳಿ ನದಿಯಲ್ಲಿ ವ್ಯಕ್ತಿ ಮೇಲೆ ಮೊಸಳೆ ದಾಳಿ ; ಗಂಭೀರ ಗಾಯ

ಕಾರವಾರ : ಕಾಳಿನದಿಗೆ ಇಳಿದಿದ್ದ ವ್ಯಕ್ತಿಯೊಬ್ಬನ ಮೇಲೆ ಮೊಸಳೆಯೊಂದು ದಾಳಿ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಮೊಸಳೆ ದಾಳಿಯಿಂದ ಗಾಯಗೊಂಡ ವ್ಯಕ್ತಿಯನ್ನು ದಾಂಡೇಲಿಯ ಕುಳಗಿ ರಸ್ತೆಯ ನಿವಾಸಿ ಆನಂದ (42) ಎಂದು ಹೇಳಲಾಗಿದೆ. ಶೌಚಕ್ಕೆ ಕಾಳಿ ನದಿಗೆ ಹೋದಾಗ ಮೊಸಳೆಯೊಂದು ಏಕಾಏಕಿ ದಾಳಿ ನಡೆಸಿ, ಹೊತ್ತೊಯ್ಯಲು ಮುಂದಾಗಿದೆ. ಮೊಸಳೆಯ … Continued

ಎಮರ್ಜೆನ್ಸಿ ಬಾಗಿಲು ತೆರೆದು ಚಲಿಸುತ್ತಿದ್ದ ವಿಮಾನದಿಂದ ಜಿಗಿದ ಪ್ರಯಾಣಿಕ…!

ಚೆನ್ನೈ: ಶಾರ್ಜಾದಿಂದ ಚೆನ್ನೈಗೆ ಆಗಮಿಸುತ್ತಿದ್ದ ಏರ್ ಅರೇಬಿಯಾ ವಿಮಾನದಲ್ಲಿದ್ದ 34 ವರ್ಷದ ಪ್ರಯಾಣಿಕನೊಬ್ಬ, ವಿಮಾನವು ಲ್ಯಾಂಡ್ ಆಗಿ ನಿಧಾನವಾಗಿ ಚಲಿಸುತ್ತಿರುವಾಗ ತುರ್ತು ನಿರ್ಗಮನ ಬಾಗಿಲನ್ನು ತೆರೆದು ಕೆಳಗೆ ಹಾರಿದ ಘಟನೆಯೊಂದು ಭಾನುವಾರ ಬೆಳಿಗ್ಗೆ ವರದಿಯಾಗಿದೆ. ಈ ಆಘಾತಕಾರಿ ಘಟನೆಯಿಂದ ವಿಮಾನದಲ್ಲಿದ್ದ ಇತರ ಪ್ರಯಾಣಿಕರು ದಂಗಾಗಿದ್ದಾರೆ. ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, 231 ಪ್ರಯಾಣಿಕರನ್ನು ಹೊತ್ತಿದ್ದ ಈ … Continued

ಟರ್ಕಿಯಲ್ಲಿ 1.5 ವರ್ಷದಿಂದ ರೂಮಿನಿಂದ ಹೊರಬರದೆ ಅಡಗಿಕೊಂಡಿದ್ದ ದಾವೂದ್ ಆಪ್ತ : ಆದ್ರೆ ಒಂದೇ ಒಂದು ಸಣ್ಣ ತಪ್ಪಿನಿಂದ ಸಿಕ್ಕಿಬಿದ್ದ…!

ನವದೆಹಲಿ: ತಲೆಮರೆಸಿಕೊಂಡಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಆಪ್ತ ಹಾಗೂ ಅಂತಾರಾಷ್ಟ್ರೀಯ ಮಾದಕ ದ್ರವ್ಯ ಸಾಗಣೆದಾರ ಮೊಹಮ್ಮದ್ ಸಲೀಂ ಡೋಲಾನನ್ನು ಇತ್ತೀಚೆಗೆ ಟರ್ಕಿಯಿಂದ ಭಾರತಕ್ಕೆ ಹಸ್ತಾಂತರಿಸಲಾಗಿದೆ. ಮುಂಬೈನ ಡೋಂಗ್ರಿ ನಿವಾಸಿಯಾದ 59 ವರ್ಷದ ಸಲೀಂ ಡೋಲಾ, ಭಾರತದಲ್ಲಿ ದಾಖಲಾಗಿರುವ ಹಲವಾರು ಮಾದಕ ದ್ರವ್ಯ ಸಾಗಣೆ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಭಾರತದ ಮನವಿಯ ಮೇರೆಗೆ 2024ರಲ್ಲಿ ಇಂಟರ್‌ಪೋಲ್ … Continued

ವಿಡಿಯೊ | ಕೇರಳಂ ದೇವಾಲಯಗಳಲ್ಲಿ ರೊಚ್ಚಿಗೆದ್ದ ಆನೆಗಳಿಂದ ದಾಳಿ : ಇಬ್ಬರು ಸಾವು ; ಕಾರು, ಸ್ಕೂಟರ್‌ ಜಖಂ

ತಿರುವನಂತಪುರಂ: ಕೇರಳದ ದೇವಾಲಯಗಳಲ್ಲಿ ನಡೆಯುತ್ತಿದ್ದ ಉತ್ಸವದ ವೇಳೆ ಶುಕ್ರವಾರ (ಮೇ 1) ಎರಡು ಪ್ರತ್ಯೇಕ ಆನೆ ದಾಳಿ ಪ್ರಕರಣಗಳು ಸಂಭವಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಎರ್ನಾಕುಲಂ ಮತ್ತು ತ್ರಿಶ್ಶೂರು ಜಿಲ್ಲೆಗಳಲ್ಲಿ ನಡೆದ ಈ ಭೀಕರ ಘಟನೆಗಳಲ್ಲಿ ಓರ್ವ ಲಾರಿ ಚಾಲಕ ಹಾಗೂ ಒಬ್ಬ ಯುವ ಮಾವುತ ಪ್ರಾಣ ಕಳೆದುಕೊಂಡಿದ್ದು, ಹಲವರು ಗಾಯಗೊಂಡಿದ್ದಾರೆ. ಈ ದುರಂತಗಳು ಧಾರ್ಮಿಕ ಆಚರಣೆಗಳಲ್ಲಿ … Continued

ವಿಡಿಯೋ | ಅಂಡಮಾನ್‌ ಬೀಚ್‌ನಲ್ಲಿ ಇತಿಹಾಸ : ಸಾಗರದ ನೀರಿನೊಳಗೆ ರಾರಾಜಿಸಿದ ವಿಶ್ವದ ಅತಿದೊಡ್ಡ ರಾಷ್ಟ್ರಧ್ವಜ ; ಗಿನ್ನೆಸ್ ದಾಖಲೆ

ಶ್ರೀ ವಿಜಯಪುರಂ: ಭಾರತದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಸಮೂಹವು ಶನಿವಾರದಂದು ಜಾಗತಿಕ ಮಟ್ಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಸ್ವರಾಜ್ ದ್ವೀಪದ (ಹ್ಯಾವ್ಲಾಕ್ ಐಲೆಂಡ್) ವಿಶ್ವಪ್ರಸಿದ್ಧ ರಾಧಾನಗರ ಬೀಚ್‌ನಲ್ಲಿ ವಿಶ್ವದ ಅತಿದೊಡ್ಡ ‘ಅಂಡರ್ ವಾಟರ್’ (ನೀರೊಳಗಿನ) ರಾಷ್ಟ್ರಧ್ವಜವನ್ನು ಅನಾವರಣಗೊಳಿಸುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದೆ. ಸಮುದ್ರದಾಳದಲ್ಲಿ ಅನಾವರಣಗೊಂಡ ಈ ಬೃಹತ್ ತ್ರಿವರ್ಣ ಧ್ವಜವು ಸುಮಾರು 60 … Continued

ನಿವಾಸದಲ್ಲಿ ನ್ಯಾಯಾಧೀಶರು ಶವವಾಗಿ ಪತ್ತೆ ; ಆತ್ಮಹತ್ಯೆಯ ಶಂಕೆ

ನವದೆಹಲಿ: ದಕ್ಷಿಣ ದೆಹಲಿಯ ಗ್ರೀನ್ ಪಾರ್ಕ್‌ನಲ್ಲಿರುವ ತಮ್ಮ ನಿವಾಸದಲ್ಲಿ 30 ವರ್ಷದ ನ್ಯಾಯಾಧೀಶರೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ಪೊಲೀಸರು ಶಂಕಿಸಿದ್ದು, ಪ್ರಕರಣದ ತನಿಖೆ ಚುರುಕುಗೊಂಡಿದೆ. ಮೃತರನ್ನು ಅಮನ್ ಕುಮಾರ ಶರ್ಮಾ ಎಂದು ಗುರುತಿಸಲಾಗಿದೆ. ಇವರು ಈಶಾನ್ಯ ದೆಹಲಿಯ ಕರ್ಕರ್ಡೂಮಾ ನ್ಯಾಯಾಲಯದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ (DLSA) ಕಾರ್ಯದರ್ಶಿಯಾಗಿ … Continued

ಯೋಗೇಶ ಗೌಡ ಕೊಲೆ ಪ್ರಕರಣ : ವಿನಯ ಕುಲಕರ್ಣಿ ಶಾಸಕತ್ವ ರದ್ದು

ಬೆಂಗಳೂರು: ಬಿಜೆಪಿ ಮುಖಂಡ ಯೋಗೇಶ ಗೌಡ ಕೊಲೆ ಪ್ರಕರಣದಲ್ಲಿ ದೋಷಿಯಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಧಾರವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ವಿಧಾನಸಭಾ ಸದಸ್ಯತ್ವವನ್ನು ರದ್ದುಗೊಳಿಸಿ ಕರ್ನಾಟಕ ವಿಧಾನಸಭೆ ಶನಿವಾರ (ಮೇ 2) ಅಧಿಕೃತ ಅಧಿಸೂಚನೆ ಹೊರಡಿಸಿದೆ. ನ್ಯಾಯಾಲಯವು ಶಿಕ್ಷೆ ಪ್ರಕಟಿಸಿದ ದಿನಾಂಕವಾದ ಏಪ್ರಿಲ್ 15, 2026 ರಿಂದಲೇ ಜಾರಿಗೆ ಬರುವಂತೆ ವಿನಯ ಕುಲಕರ್ಣಿ … Continued

ಪ್ರಸಾರ ಭಾರತಿ ನೂತನ ಅಧ್ಯಕ್ಷರಾಗಿ ಪ್ರಸೂನ್ ಜೋಶಿ ನೇಮಕ

ನವದೆಹಲಿ: ಭಾರತದ ಸಾರ್ವಜನಿಕ ಸೇವಾ ಪ್ರಸಾರ ಸಂಸ್ಥೆಯಾದ ‘ಪ್ರಸಾರ ಭಾರತಿ’ಯ ನೂತನ ಅಧ್ಯಕ್ಷರಾಗಿ ಖ್ಯಾತ ಗೀತೆ ರಚನೆಕಾರ, ಬರಹಗಾರ ಮತ್ತು ಸಂವಹನ ತಜ್ಞ ಪ್ರಸೂನ್ ಜೋಶಿ ಅವರು ಶನಿವಾರ ನೇಮಕಗೊಂಡಿದ್ದಾರೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. 54 ವರ್ಷದ ಪ್ರಸೂನ್ ಜೋಶಿ ಅವರು ಸಾಹಿತ್ಯ, ಜಾಹೀರಾತು, ಸಿನಿಮಾ ಮತ್ತು … Continued

ವಿಡಿಯೋ | ತುತ್ತು ಅನ್ನ ನೀಡಿದ ಮೃತ ಮಹಿಳೆಯ ಸಮಾಧಿ ಬಿಟ್ಟು ಕದಲದ ಬೀದಿ ನಾಯಿ; ಹೃದಯ ಕಲಕುತ್ತಿದೆ ಈ ದೃಶ್ಯ

ಮನುಷ್ಯರಿಗಿಂತ ಪ್ರಾಣಿಗಳೇ ಹೆಚ್ಚು ಹಚ್ಚಿಕೊಳ್ಳುತ್ತವೆ ಎಂಬ ಮಾತನ್ನು ನಾವು ಆಗಾಗ ಕೇಳುತ್ತಿರುತ್ತೇವೆ. ಇದಕ್ಕೆ ಪುಷ್ಠಿ ನೀಡುವಂತಹ ಮನಮಿಡಿಯುವ ಘಟನೆಯೊಂದು ಕೇರಳದಲ್ಲಿ ನಡೆದಿದೆ. ತನಗೆ ತುತ್ತು ಅನ್ನ ನೀಡುತ್ತಿದ್ದ ಒಡತಿ ಮೃತಪಟ್ಟ ನಂತರ ಅವಳ ಸಮಾಧಿಯನ್ನೇ  ಕಾಯುತ್ತಾ ಕುಳಿತಿರುವ ಬೀದಿನಾಯಿಯ ನಿಷ್ಠೆಯ ಸುದ್ದಿ ಈಗ ಎಲ್ಲರ ಕಣ್ಣು ಒದ್ದೆ ಮಾಡುತ್ತಿದೆ. ಕೇರಳದ ಪತಪ್ಪಿರಿಯಂ ಪೆರುವಿಲ್ಕುಂಡು ಪಳಿಯಪೀಡಿಯಕ್ಕಲ್ ನಿವಾಸಿ … Continued

ಪಶ್ಚಿಮ ಬಂಗಾಳ ಮತ ಎಣಿಕೆಗೆ ಕೇಂದ್ರ ಸರ್ಕಾರಿ ನೌಕರರ ನೇಮಕ ವಿಚಾರ ; ಟಿಎಂಸಿಗೆ ಸುಪ್ರೀಂ ಕೋರ್ಟಿನಲ್ಲಿ ಹಿನ್ನಡೆ

ನವದೆಹಲಿ: ಪಶ್ಚಿಮ ಬಂಗಾಳದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರಿ ನೌಕರರನ್ನು ನಿಯೋಜಿಸುವ ಚುನಾವಣಾ ಆಯೋಗದ (EC) ನಿರ್ಧಾರವನ್ನು ಪ್ರಶ್ನಿಸಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶನಿವಾರ ತಿರಸ್ಕರಿಸಿದೆ. ಚುನಾವಣಾ ಆಯೋಗದ ನಿರ್ಧಾರದಲ್ಲಿ ಯಾವುದೇ ಅಕ್ರಮ ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿರುವ ನ್ಯಾಯಾಲಯ, ಈ ವಿಷಯದಲ್ಲಿ ಹೆಚ್ಚಿನ ಆದೇಶಗಳನ್ನು … Continued