ರೈತರ ಪ್ರತಿಭಟನೆ: 1,178 ಖಾತೆ ತೆಗೆಯಲು ಟ್ವಿಟರ್‌ಗೆ ಕೇಂದ್ರ ಸರ್ಕಾರದ ಸೂಚನೆ

ನವ ದೆಹಲಿ: ರೈತರ ಪ್ರತಿಭಟನೆಯ ಸುತ್ತಲಿನ ‘ಟೂಲ್‌ಕಿಟ್’ ವಿವಾದದ ಮಧ್ಯೆ, ರೈತರ ಆಂದೋಲನದ ಬಗ್ಗೆ ತಪ್ಪು ಮಾಹಿತಿ ಮತ್ತು ಪ್ರಚೋದನಕಾರಿ ವಿಷಯ ಹರಡುವ 1,178 “ಪಾಕಿಸ್ತಾನಿ-ಖಲಿಸ್ತಾನಿ ಖಾತೆಗಳನ್ನು ತೆಗೆದುಹಾಕುವಂತೆ ಕೇಂದ್ರ ಸರ್ಕಾರವು ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್‌ಗೆ ನಿರ್ದೇಶನ ನೀಡಿದೆ” ಎಂದು ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ, ಟ್ವಿಟರ್ ಇನ್ನೂ ಆದೇಶಗಳನ್ನು ಸಂಪೂರ್ಣವಾಗಿ ಪಾಲಿಸಿಲ್ಲ. ರೈತ ಸಂಘಗಳ … Continued

ಪುನಃ ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಗೆ ಸೇರಲು ಅಮರಿಕ ನಿರ್ಧಾರ

ವಾಷಿಂಗ್ಟನ್‌: ಸುಮಾರು ಮೂರು ವರ್ಷಗಳ ಹಿಂದೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಯಿಂದ ಹಿಂದೆ ಸರಿದಿದ್ದ ನಿರ್ಧಾರವನ್ನು ಈಗಿನ ಅಧ್ಯಕ್ಷ ಬಿಡೆನ್ ಆಡಳಿತವು ರದ್ದುಪಡಿಸಿ ಪುನಃ ಅದನ್ನು ಸೇರಲು ಸಜ್ಜಾಗಿದೆ. ಹಿಂದಿನ ಟ್ರಂಪ್‌ ಆಡಳಿತದ ಒಂದೊಂದೇ ನಿರ್ಣಯವನ್ನು ಬದಲಿಸುತ್ತಿರುವ ಬಿಡೆನ್‌ ಈಗ ಇದನ್ನು ಬದಲಾಯಿಸಲು ನಿರ್ಧರಿಸಿದ್ದಾರೆ ಎಂದು ಅಮೆರಿಕದ ಅಧಿಕಾರಿಗಳು … Continued

ಗುರ್ಗಾಂವ್‌ ಕೊಲೆ ಪ್ರಕರಣ: ಇನ್ನೂ ಆರಂಭವಾಗದ ವಿಚಾರಣೆ

ನವದೆಹಲಿ: ಗುರ್ಗಾಂವ್‌ನ ಖಾಸಗಿ ಶಾಲೆಯಲ್ಲಿ ಏಳು ವರ್ಷದ ಬಾಲಕನನ್ನು ಕೊಂದು ಪ್ರಕರಣಕ್ಕೆ ಮೂರು ವರ್ಷಗಳಾದರೂ ಇನ್ನೂ ವಿಚಾರಣೆ ಇನ್ನೂ ಆರಂಭವಾಗಿಲ್ಲ. 8 ಸೆಪ್ಟೆಂಬರ್ 2017 ರಂದು ೭ ವರ್ಷದ ಬಾಲಕನನ್ನು ಕೊಲೆ ಮಾಡಿದ ಆರೋಪದ ಮೇಲೆ ಅದೇ ಶಾಲೆಯ 11 ನೇ ತರಗತಿಯ ವಿದ್ಯಾರ್ಥಿಯನ್ನು ಸಿಬಿಐ ಬಂಧಿಸಿತ್ತು.. ಆದಾಗ್ಯೂ, ಸಂಬಂಧಿತ ಪ್ರಕರಣಗಳಲ್ಲಿ ಹಲವಾರು ಕಾನೂನು ತೊಡಕುಗಳಿರುವುದರಿಂದ … Continued

ರೈತರೊಂದಿಗೆ ಮಾತುಕತೆ ಪುನರಾರಂಭಿಸಲು ಸರ್ಕಾರ ಸಿದ್ಧ: ಗೋಯಲ್‌

ನವ ದೆಹಲಿ: ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ಹೋರಾಟ ನಡೆಸುತ್ತಿರುವ ರೈತರೊಂದಿಗೆ ಮಾತುಕತೆ ಪುನರಾರಂಭಿಸಲು ಸರ್ಕಾರ ಸಿದ್ಧವಾಗಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಭಾನುವಾರ ಹೇಳಿದ್ದಾರೆ. ಆದರೆ ಪದೇ ಪದೇ ಪ್ರಸ್ತಾಪಗಳಿದ್ದರೂ ಪ್ರತಿಭಟನಾಕಾರರು ಈವರೆಗೆ ಯಾವುದೇ ಸ್ಪಷ್ಟ ಹಾಗೂ ಪರಿನಾಮಕಾರಿ ಸಲಹೆ ನೀಡಿಲ್ಲ ಎಂದು ಪ್ರತಿಪಾದಿಸಿದರು. ರೈತ ಸಂಘಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ … Continued

ಚೀನಾದ ಮಾನವ ಹಕ್ಕುಗಳ ಹೋರಾಟಗಾರ ನಾಪತ್ತೆ

ಬೀಜಿಂಗ್‌: ದೇಶದಿಂದ ಹೊರಹೋಗದಂತೆ ನಿರ್ಬಂಧಿಸಿದ ನಂತರ ಚೀನಾದ ಮಾನವ ಹಕ್ಕುಗಳ ಹೋರಾಟಗಾರ ಗುವೊ ಫಿಕ್ಸಿಯಾಂಗ್ ಅವರಿಗೆ ತಮ್ಮ ಕುಟುಂಬವನ್ನು ಸೇರಲು ನಿರ್ಬಂಧಿಸಲಾಗಿದೆ ಎಂದು ಅವರ ಸಹೋದರಿ ಹೇಳಿದ್ದಾರೆ. ಅಮೆರಿಕಕ್ಕೆ ತೆರಳಲು ವಿಮಾನ ಹತ್ತಲು ಪ್ರಯತ್ನಿಸುವಾಗ ಶಾಂಘೈನ ಪುಡಾಂಗ್ ವಿಮಾನ ನಿಲ್ದಾಣದಲ್ಲಿ ಅವರು ಬಂಧನಕ್ಕೊಳಗಾದ ನಂತರ ಗುವೊ ಅವರಿಂದಾಗಲೀ ಅಥವಾ ಪೊಲೀಸರಿಂದಅಗಲೀ ಯಾವುದೇ ಮಾಹಿತಿ ಇಲ್ಲ ಎಂದು … Continued

ಅಫ್ಘಾನಿಸ್ಥಾನಕ್ಕೆ ಭಾರತದಿಂದ ೫ ಲಕ್ಷ ಕೊವಿಡ್‌ ಲಸಿಕೆ

  ಅಫ್ಘಾನಿಸ್ಥಾನವು ಭಾನುವಾರ ಭಾರತದಿಂದ ದೊಡ್ಡ ಪ್ರಮಾಣದ COVID-19 ಲಸಿಕೆಗಳನ್ನು ಪಡೆಯಿತು. ಮುಂಬೈನಿಂದ 5,00,000 ಡೋಸ್ ಕೋವಿಶೀಲ್ಡ್ ಲಸಿಕೆ ಹೊತ್ತ ವಿಶೇಷ ಭಾರತೀಯ ವಿಮಾನವು ಕಾಬೂಲ್ ತಲುಪಿತು, ಅಲ್ಲಿ ಅಫ್ಘಾನಿಸ್ತಾನದ ಆರೋಗ್ಯ ಸಚಿವಾಲಯದ ಅಧಿಕಾರಿಗಳು ರವಾನೆಯ ಉಸ್ತುವಾರಿ ವಹಿಸಿಕೊಂಡರು. “ಮೇಡ್ ಇನ್ ಇಂಡಿಯಾ ಲಸಿಕೆಗಳು ಅಫ್ಘಾನಿಸ್ತಾನವನ್ನು ತಲುಪುತ್ತವೆ. (ನಾವು) ಯಾವಾಗಲೂ ನಮ್ಮ ಸ್ನೇಹಿತರೊಂದಿಗೆ ನಿಲ್ಲುತ್ತೇವೆ, ”ಎಂದು … Continued

ಎಸ್‌ಟಿಗೆ ಸೇರಿಸಲು ಒತ್ತಾಯಿಸಿ ಕುರುಬರ ಬಲಪ್ರದರ್ಶನ

ಬೆಂಗಳೂರು: ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಸೇರಿಸುವಂತೆ ಆಗ್ರಹಿಸಿ ಕಾಗಿನೆಲೆ ಕನಕ ಪೀಠದ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ರಾಜಧಾನಿಯಲ್ಲಿ ಕುರುಬ ಸಮುದಾಯದವರ ಬಲಪ್ರದರ್ಶನ ನಡೆಯಿತು. ಬೆಂಗಳೂರು ಹೊರವಲಯದ ಅಂತರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ನಡೆದ ಸಮಾವೇಶದಲ್ಲಿ ಸಚಿವರಾದ ಕೆಎಸ್ ಈಶ್ವರಪ್ಪ, ಬೈರತಿ ಬಸವರಾಜ, ಎಂ ಟಿ ಬಿ ನಾಗರಾಜ್, ಆರ್. ಶಂಕರ್ ಸೇರಿದಂತೆ ಕಾಂಗ್ರೆಸ್ ಬಿಜೆಪಿ … Continued

ಭಾರತ್ ಮಾತಾ ಕೀ ಜೈ ಎಂದು ಕೂಗಿದರೆ ಮಮತಾಗೆ ಕೋಪ:ಪ್ರಧಾನಿ ವಾಗ್ದಾಳಿ

ನವದೆಹಲಿ:ಯಾರಾದರೂ ಭಾರತ್ ಮಾತಾ ಕೀ ಜೈ ಎಂದು ಕೂಗಿದರೆ ಮಮತಾ ಬ್ಯಾನರ್ಜಿ ಅವರಿಗೆ ಕೋಪ ಬರುತ್ತದೆ ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿ‌ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದೇಶದ ವಿರುದ್ಧವಾಗಿ ಮಾತನಾಡಿದಾಗಲೂ ಸುಮ್ಮನಿರುತ್ತಾರೆ ಆದರೆ ಭಾರತ್ ಮಾತಾ ಕೀ ಜೈ ಅಂದರೆ ಅವರಿಗೆ ಕೋಪ ಬರುತ್ತದೆ ಎಂದು … Continued

ಪಾಕಿಸ್ಥಾನ ಸೇನೆಗೆ ಚೀನಾದಿಂದ ೫ ಲಕ್ಷ ಕೊವಿಡ್‌ ಲಸಿಕೆ

ಇಸ್ಲಾಮಾಬಾದ್: ಚೀನಾದಿಂದ 5,00,000 ಡೋಸ್ ಕೊರೋನಾ ಲಸಿಕೆಯನ್ನು ಪಾಕಿಸ್ಥಾನ ಸೈನಿಕರಿಗೆ ನೀಡಲಾಗಿದೆ. ಚೀನಾ ಸೈನ್ಯದಿಂದ ಕೋವಿಡ್ -19 ಲಸಿಕೆ ನೆರವು ಪಡೆದ ಮೊದಲ ವಿದೇಶಿ ಸೈನ್ಯ ಎಂಬ ಹೆಗ್ಗಳಿಕೆಗೆ ಪಾಕಿಸ್ತಾನ ಸೇನೆಯು ಪಾತ್ರವಾಗಿದೆ ಎಂದು ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಹೇಳಿಕೆಯಲ್ಲಿ ತಿಳಿಸಿದೆ. ಆದಾಗ್ಯೂ, ಪಾಕಿಸ್ತಾನ ಸೇನೆಗೆ ಎಷ್ಟು ಲಸಿಕೆಗಳನ್ನು ಸರಬರಾಜು ಮಾಡಲಾಗಿದೆ ಎಂದು ಹೇಳಿಕೆಯಲ್ಲಿ … Continued

ರೈತರ ಬೇಡಿಕೆ ಈಡೇರುವ ವರೆಗೂ ಮನೆಗೆ ಮರಳುವುದಿಲ್ಲ:ಟಿಕಾಯತ

ಫೆಬ್ರವರಿ: ರೈತರ ಬೇಡಿಕೆಗಳನ್ನು ಈಡೇರಿಸುವವರೆಗೆ ಯಾವುದೇ ಮನೆಗೆ ಮರಳುವ ಪ್ರಶ್ನಯೇ ಇಲ್ಲ ಎಂದು ರೈತ ಮುಖಂಡ ರಾಕೇಶ ಟಿಕಾಯತ್‌ ಹೇಳಿದ್ದಾರೆ. ಅವರು ಭಾನುವಾರ ಹರ್ಯಾಣದಲ್ಲಿ ಕಿಸಾನ್‌ ಪಂಚಾಯತ ಉದ್ದೇಶಿಸಿ ಮಾತನಾಡಿದರು. ಕೃಷಿ ಕಾನೂನುಗಳ ವಿರುದ್ಧದ ಅಭಿಯಾನವು ಪ್ರಬಲವಾಗುತ್ತಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ವಕ್ತಾರರು ಹೇಳಿದ್ದಾರೆ. ನಾನು ನನ್ನನ್ನು ಕೊಲ್ಲುತ್ತೇನೆಯೇ ಹೊರತು ಪ್ರತಿಭಟನೆ ಕೊನೆಗೊಳಿಸುವುದಿಲ್ಲ” … Continued