ಮಾ.೬ರ ನಂತರ ಆದ್ಯತಾ ಗುಂಪುಗಳಿಗೆ ಕೊವಿಡ್‌ ಲಸಿಕೆ

ನವ ದೆಹಲಿ: ಮಾರ್ಚ್‌ ೬ರ ನಂತರ ದೇಶದ ಜನಸಂಖ್ಯೆಯ ಆದ್ಯತೆಯ ಗುಂಪುಗಳಿಗೆ ಕೋವಿಡ್‌-೧೯ ಲಸಿಕೆ ಹಾಕುವ ಅಭಿಯಾನ ಆರಂಭವಾಗಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ವೈದ್ಯಕೀಯ ಸಿಬ್ಬಂದಿಗೆ ಮೊದಲ ಹಂತದಲ್ಲಿ ಮಾರ್ಚ್‌ ೬ರವರೆಗೆ ಕೋವಿಡ್-‌೧೯ ಲಸಿಕೆ ನೀಡಲಾಗುವುದು. 50 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ದೀರ್ಘಕಾಲದ ಆರೋಗ್ಯ ಅಸ್ವಸ್ಥತೆ ಹೊಂದಿರುವವರಿಗೆ … Continued

ಗಡಿ ಸಮಸ್ಯೆ ಬಗೆಹರಿಯಲು ಪರಸ್ಪರ ನಂಬಿಕೆ ಹೆಚ್ಚಬೇಕು: ಚೀನಾ ರಾಯಭಾರಿ

ಚೀನಾ ಹಾಗೂ ಭಾರತ ಗಡಿ ಸಮಸ್ಯೆಗಳನ್ನು ಬಗೆಹರಿಸಲು ಪರಸ್ಪರ ಗೌರವ, ನಂಬಿಕೆ ಹೆಚ್ಚಬೇಕು, ರಚನಾತ್ಮಕ ರೀತಿಯಲ್ಲಿ ಭಿನ್ನಾಭಿಪ್ರಾಯಗಳನ್ನು ನಿವಾರಿಸಿಕೊಳ್ಳಬೇಕು ಎಂದು ಚೀನಾದ ರಾಯಭಾರಿ ಸನ್‌ ವೀಡಾಂಗ್‌ ಹೇಳಿದ್ದಾರೆ. ಗಡಿ ಸಮಸ್ಯೆ ಬಗೆಹರಿಸಿಕೊಳ್ಳುವ ದಿಸೆಯಲ್ಲಿ ಎರಡೂ ದೇಶಗಳು ಒಂದೊಂದು ಹೆಜ್ಜೆ ಮುಂದಿಡಬೇಕು ಎಂದು ತಿಳಿಸಿದ್ದಾರೆ. ಲದಾಖ್‌ ಸೆಕ್ಟರ್‌ನಲ್ಲಿ ವಾಸ್ತವ ನಿಯಂತ್ರಣ ಗಡಿರೇಖೆ ಕುರಿತು ವಿವಾದ ಉಂಟಾಗಿರುವ ಸಂದರ್ಭದಲ್ಲಿ … Continued

ಗಣರಾಜ್ಯೋತ್ಸವ ಹಿಂಸಾಚಾರ: ಮತ್ತೊಬ್ಬ ಆರೋಪಿ ಬಂಧನ

ಗಣರಾಜ್ಯೋತ್ಸವದಂದು ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಪಂಜಾಬ್‌ ವ್ಯಕ್ತಿಯೊಬ್ಬರನ್ನು ಬಂಧಿಸಿದ್ದಾರೆ. ಇಕ್ಬಾಲ್‌ ಸಿಂಗ್‌ನನ್ನು ಹೋಶಿಯಾರ್ಪುರದಿಂದ ಬಂಧಿಸಲಾಗಿದೆ ಎಂದು ಉಪ ಪೊಲೀಸ್‌ ಆಯುಕ್ತ ಸಂಜೀವಕುಮಾರ ಯಾದವ ತಿಳಿಸಿದ್ದಾರೆ. ಇಕ್ಬಾಲ್ ಸಿಂಗ್ ಅವರು ಕಥಾ ವಚಕ್ ಆಗಿ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು ಧಾರ್ಮಿಕ ಪ್ರಾರ್ಥನೆ ನಡೆಸುತ್ತಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಜನವರಿ … Continued

ಟ್ವಿಟ್ಟರ್‌ ಕ್ರಮ ತೃಪ್ತಿ ತಂದಿಲ್ಲ

ನವ ದೆಹಲಿ: ಟ್ವಿಟ್ಟರ್‌ ಬ್ಲಾಗ್‌ ಪೋಸ್ಟ್‌ ಸರ್ಕಾರದ ಆದೇಶಕ್ಕೆ ಅನುಗುಣವಾಗಿ ನಡೆದುಕೊಡಿಲ್ಲ ಎಂದು ಎಲೆಕ್ಟ್ರಾನಿಕ್ಸ್‌ ಹಾಗೂ ಐಟಿ ಸಚಿವರು ಹೇಳಿದ್ದಾರೆ. ಟ್ವಿಟ್ಟರ್‌ಗೆ ಸರಿಸುಮಾರು ೧೮೦೦ ಖಾತೆಗಳನ್ನು ತಡೆಹಿಡಿಯಬೇಕು ಎಂದು ಕೇಂದ್ರ ಸರ್ಕಾರ ಮೊನ್ನೆ ಆದೇಶ ಮಾಡಿತ್ತು. ಇದಾದ ನಂತರ ಟ್ವಿಟ್ಟರ್‌ ೫೦೦ ಟ್ವಿಟ್ಟರ್‌ ಖಾತೆಗಳನು ತಡೆಹಿಡಿದಿದೆ.  ಪತ್ರಕರ್ತರು, ಮಾಧ್ಯಮ ಸಂಸ್ಥೆಗಳು, ಸಾಮಾಜಿಕ ಕಾರ್ಯಕರ್ತರು ಹಾಗೂ ರಾಜಕಾರಣಿಗಳು … Continued

ಯೋಜನೆಗಳೊಂದಿಗೆ ಪ್ರಧಾನಿ ಪಶ್ಚಿಮ ಬಂಗಾಳಕ್ಕೆ ಬರ್ತಾರೆ: ನಡ್ಡಾ

ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ ಸಂದರ್ಭಗಳಲ್ಲಿ ಹಲವು ಯೋಜನೆಗಳನ್ನು ನೀಡಿದ್ದಾರೆ ಆದರೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜ್ಯಕ್ಕೆ ಪ್ರಧಾನಿ ಭೇಟಿಯನ್ನು ಆಕ್ಷೇಪಿಸುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು. ದ್ವಿತಿಯ ಹಂತದ ಪರಿವರ್ತನ ಯಾತ್ರೆಗೆ ಚಾಲನೆ ನೀಡಿದ ನಡ್ಡಾ, ಮಮತಾ ಪ್ರಧಾನಿ ಹಾಗೂ ಗೃಹಸಚಿವರ ರಾಜ್ಯದ ಭೇಟಿಯ ಬಗ್ಗೆ ಆಕ್ಷೇಪ … Continued

ಮುಂಬೈ ಸೆಲೆಬ್ರಿಟಿಗಳ ಟ್ವೀಟ್‌ಗಳ ತನಿಖೆ ನಿರ್ಧಾರವೂ…ಮಹಾರಾಷ್ಟ್ರದ ಸರ್ಕಾರದ ತುಘಲಕ್‌ ದರ್ಬಾರವೂ..

ಮೂರು ಪಕ್ಷಗಳು ಸೇರಿ ರಚನೆಯಾಗಿರುವ ಮಹಾರಾಷ್ಟ್ರ ವಿಕಾಸ್ ಅಘಾಡಿ ಸರ್ಕಾರವು ಮೂರು ಕುದುರೆಗಳ ಮೇಲೆ ನಡೆಯುತ್ತಿದೆ. ಆದರೆ ಪ್ರತಿ ಕುದುರೆಯೂ ಒಂದೊಂದು ದಿಕ್ಕಿನತ್ತ ಸಾಗಿದರೆ ಸರ್ಕಾರದ ನಿಲುವುಗಳು ಹಾಗೂ ನಿರ್ಧಾರಗಳು ಸಹ ಅಸಂಭದ್ಧವಾಗಿಯೇ ಇರುತ್ತದೆ ಎಂಬುದಕ್ಕೆ ತಾಜಾ ಉದಾಹರಣೆ ಮಹಾರಾಷ್ಟ್ರದ ಉದ್ಧವ ಠಾಕ್ರೆ ಸರ್ಕಾರ ಎರಡು ದಿನಗಳ ಹಿಂದೆ ಮುಂಬೈ ಸೆಲೆಬ್ರಿಟಿಗಳು ಕೇಂದ್ರ ಸರ್ಕಾರ ಬೆಂಬಲಿಸಿ … Continued

ಮುಂದಿನ ವರ್ಷ ಟಿಸಿಎಸ್‌ನಿಂದ ಬ್ರಿಟನ್‌ನಲ್ಲಿ ೧೫೦೦ ಟೆಕ್ಕಿಗಳ ನೇಮಕ

ಭಾರತೀಯ ಮೂಲದ ಜಾಗತಿಕ ಐಟಿ ಸಂಸ್ಥೆ, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಮುಂದಿನ ವರ್ಷದಲ್ಲಿ ಬ್ರಿಟನ್ಯಾದ್ಯಂತ 1,500 ತಂತ್ರಜ್ಞಾನ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಿದೆ. ಬ್ರಿಟನ್‌ ವ್ಯಾಪಾರ ಕಾರ್ಯದರ್ಶಿ ಲಿಜ್ ಟ್ರಸ್ ಮತ್ತು ಟಿಸಿಎಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ್ ಗೋಪಿನಾಥನ್ ಅವರೊಂದಿಗಿನ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದೆ. ಚರ್ಚೆಯ ಸಮಯದಲ್ಲಿ ಬ್ರಿಟನ್ನಿನ ಆರ್ಥಿಕತೆ, ನಾವೀನ್ಯತೆ, ತಂತ್ರಜ್ಞಾನ ಕ್ಷೇತ್ರ … Continued

500ಕ್ಕೂ ಹೆಚ್ಚು ಖಾತೆ ತಡೆಹಿಡಿದ ಟ್ವಟ್ಟರ್‌

ನವ ದೆಹಲಿ: ಸರ್ಕಾರ ನೀಡಿದ ನೋಟಿಸ್‌ನಲ್ಲಿ ಗುರುತಿಸಲಾದ ಕೆಲವು ಖಾತೆಗಳನ್ನು ತಡೆಹಿಡಿಯಲಾಗಿದೆ ಎಂದು ಟ್ವಿಟ್ಟರ್‌ ಬುಧವಾರ ತಿಳಿಸಿದೆ. ಆದಾಗ್ಯೂ, ಸುದ್ದಿ ಮಾಧ್ಯಮ ಸಂಸ್ಥೆಗಳು, ಪತ್ರಕರ್ತರು, ಕಾರ್ಯಕರ್ತರು ಮತ್ತು ರಾಜಕಾರಣಿಗಳ ಖಾತೆಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ; ತಡೆಹಿಡಿಯಲಾದ ಖಾತೆಗಳು ಭಾರತದ ಹೊರಗೆ ಲಭ್ಯವಿದೆ. ಟ್ವಿಟರ್ ನಿಯಮಗಳ ಸ್ಪಷ್ಟ ಉಲ್ಲಂಘನೆಗಾಗಿ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ಆದೇಶಗಳಂತೆ … Continued

ಟ್ವಿಟ್ಟರ್‌ ಬದಲಾಗಿ ದೇಶೀಯ ಕೂ ಬಳಸಲಾರಂಭಿಸಿದ ಸಚಿವರು, ಅಧಿಕಾರಿಗಳು

ನವ ದೆಹಲಿ: ರೈತರ ಪ್ರತಿಭಟನೆಗೆ ಸಂಬಂಧಿಸಿದ ವಿಷಯ ಮತ್ತು ಖಾತೆಗಳನ್ನು ನಿರ್ಬಂಧಿಸುವುದರ ಕುರಿತು ಸರ್ಕಾರ ಮತ್ತು ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್ ನಡುವೆ ನಡೆಯುತ್ತಿರುವ ಸಂಘರ್ಷದ ಮಧ್ಯೆ, ಕೇಂದ್ರ ಸಚಿವರು ಮತ್ತು ಸರ್ಕಾರಿ ಇಲಾಖೆಗಳು ಟ್ವಿಟರ್‌ಗೆ ಮೇಡ್-ಇನ್-ಇಂಡಿಯಾ ಪರ್ಯಾಯವಾದ ಕೂನಲ್ಲಿ ಖಾತೆಗಳನ್ನು ತೆರೆಯಲು ಆರಂಭಿಸಿದ್ದಾರೆ. ಕೇಂದ್ರ ಸಚಿವ ಪಿಯೂಷ್ ಗೋಯಲ್ ಮಂಗಳವಾರ ಟ್ವಿಟ್ಟರ್ ನಲ್ಲಿ, “ನಾನು ಈಗ … Continued

ಮಂಗಳನ ಕಕ್ಷೆ ಸುತ್ತಲಾರಂಭಿಸಿದ ಯುಎಇ ಬಾಹ್ಯಾಕಾಶ ನೌಕೆ

ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್‌ ಬಾಹ್ಯಾಕಾಶ ನೌಕೆ ಮಂಗಳವಾರ ಮಂಗಳ ಗ್ರಹದ ಸುತ್ತ ಕಕ್ಷೆಗೆ ತಿರುಗಿತು. ದುಬೈನ ಯುಎಇಯ ಬಾಹ್ಯಾಕಾಶ ಕೇಂದ್ರದಲ್ಲಿನ ಏಲ್ಲರೂ ಚಪ್ಪಾಳೆ ತಟ್ಟಿದರು, ಫಾರ್ ಹೋಪ್ ಎಂದು ಅರೆಬಿಕ್‌ ಶಬ್ದದಲ್ಲಿ ಕರೆಯಲ್ಪಡುವ ಅಮಲ್, ತನ್ನ ಏಳು ತಿಂಗಳ, 300 ಮಿಲಿಯನ್ ಮೈಲಿ ಪ್ರಯಾಣದ ಅಂತ್ಯ ತಲುಪಿದೆ ಮತ್ತು ಕೆಂಪು ಗ್ರಹಸುತ್ತಲು ಆರಮಭಿಸಿದೆ. ಅಲ್ಲಿ … Continued