ಭಾರತದಲ್ಲಿ 90 ಸಾವಿರದ ಸನಿಹ ಬಂದ ದೈನಂದಿನ ಕೊರೊನಾ ಪ್ರಕರಣ, ಸಾವಿನ ಪ್ರಮಾಣದಲ್ಲೂ ಏರಿಕೆ…!!

ನವ ದೆಹಲಿ: ಭಾರತದಲ್ಲಿ ಶುಕ್ರವಾರ ಹೊಸದಾಗಿ 89,129 ಕೊರೊನಾ ಪ್ರಕರಣಗಳು ವರದಿಯಾಗಿದೆ.ಕಳೆದ 24 ಗಂಟೆಗಳಲ್ಲಿ 714 ಸಾವುಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ. ದೇಶದಲ್ಲಿ ಸಕ್ರಿಯ ಪ್ರಕರಣಗಳು 6.58 ಲಕ್ಷಕ್ಕೆ ಏರಿವೆ, ಕನಿಷ್ಠ 1,15,69,241 ಜನರು ಈ ರೋಗದಿಂದ ಚೇತರಿಸಿಕೊಂಡಿದ್ದಾರೆ. ಮುಖ್ಯವಾಗಿ ಮಹಾರಾಷ್ಟ್ರದಲ್ಲಿ ಈ ಹಿಂದೆ ಲೆಕ್ಕವಿಲ್ಲದ ಸಾವುಗಳು ಸೇರ್ಪಡೆಯಾಗಿವೆ. … Continued

ಕೋವಿಡ್ -19 ನಿಗ್ರಹಕ್ಕೆ ಪಾಕಿಸ್ತಾನ, ಬಾಂಗ್ಲಾದೇಶವನ್ನೂ ಪ್ರಯಾಣ ನಿಷೇಧ ಪಟ್ಟಿಗೆ ಸೇರಿಸಿದ ಬ್ರಿಟನ್‌

ಕೊರೊನಾ ವೈರಸ್ ಹರಡುವುದನ್ನು ನಿಯಂತ್ರಿಸಲು ಇಂಗ್ಲೆಂಡ್‌ಗೆ ಮತ್ತು ಅಲ್ಲಿಂದ ಪ್ರಯಾಣ ನಿಷೇಧಿಸಲಾಗಿರುವ ರಾಷ್ಟ್ರಗಳ “ಕೆಂಪು ಪಟ್ಟಿಗೆ” ಸೇರ್ಪಡೆಗೊಂಡ ನಾಲ್ಕು ಹೆಚ್ಚುವರಿ ದೇಶಗಳಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಸೇರಿವೆ. ಶುಕ್ರವಾರ ಘೋಷಿಸಲಾದ ನಿಷೇಧವು ಏಪ್ರಿಲ್ 9ರಿಂದ ಜಾರಿಗೆ ಬರಲಿದೆ ಮತ್ತು ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್‌ನಲ್ಲಿ ಪತ್ತೆಯಾದಂತೆ ಆ ಪ್ರದೇಶಗಳಲ್ಲಿ ಕೋವಿಡ್ -19 ರ ಹೊಸ ರೂಪಾಂತರಗಳ … Continued

ಕೋವಿಡ್ ಎರಡನೇ ಅಲೆ ಏಪ್ರಿಲ್ ಮಧ್ಯದಲ್ಲಿ ಗರಿಷ್ಠ, ಮೇ ತಿಂಗಳಲ್ಲಿ ನಾಟಕೀಯ ಕುಸಿತ: ವಿಜ್ಞಾನಿಗಳ ಊಹೆ

ಗಣಿತದ ಮಾದರಿ ಬಳಸಿಕೊಂಡು ವಿಜ್ಞಾನಿಗಳು ದೇಶಾದ್ಯಂತ ಹರಡುತ್ತಿರುವ ಕೊವಿಡ್‌-19 ಸಾಂಕ್ರಾಮಿಕ ರೋಗದ ಎರಡನೇ ಅಲೆಯು ಏಪ್ರಿಲ್ ಮಧ್ಯದ ವೇಳೆಗೆ ಗರಿಷ್ಠವಾಗಬಹುದು ಎಂದು ಅಂದಾಜಿಸಿದ್ದಾರೆ. ಇದರ ನಂತರ ಮೇ ಅಂತ್ಯದ ವೇಳೆಗೆ ಸೋಂಕುಗಳು ಕುಸಿತ ಕಾಣಬಹುದು ಎಂದು ಹೇಳಿದ್ದಾರೆ. ಭಾರತದಾದ್ಯಂತ ಕೊವಿಡ್‌-19 ಸೋಂಕುಗಳ ಮೊದಲ ಅಲೆಯ ಸಮಯದಲ್ಲಿ, ಸೂತ್ರ ಎಂಬ ಗಣಿತದ ವಿಧಾನ ಬಳಸಿ ಆಗಸ್ಟ್‌ನಲ್ಲಿ ಸೋಂಕಿನ … Continued

ಕೊರೊನಾ ಪ್ರಕರಣ ಏರುತ್ತಲೇ ಇದ್ದರೆ ಲಾಕ್‌ಡೌನ್‌ ವಿಧಿಸದೆ ಬೇರೆ ಮಾರ್ಗವಿಲ್ಲ:ಉದ್ಧವ್ ಠಾಕ್ರೆ

ಮುಂಬೈ; ಕೊರೊನಾ ಪ್ರಕರಣಗಳು ಹೀಗೆ ಏರುಗತಿಯಲ್ಲೇ ಸಾಗುತ್ತಿದ್ದರೆ ಲಾಕ್‌ಡೌನ್ ವಿಧಿಸದೇ ಬೇರೆ ದಾರಿಯೇ ಇಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ. ಶುಕ್ರವಾರ ಮಹಾರಾಷ್ಟ್ರದಲ್ಲಿ 47,827 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, 202 ಮಂದಿ ಮೃತಪಟ್ಟ ಬೆನ್ನಲ್ಲೇ ಮುಖ್ಯಮಂತ್ರಿ ಠಾಕ್ರೆ ಈ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಲಾಕ್‌ಡೌನ್ ಹೇರುವುದಿಲ್ಲ. ಆದರೆ ಪರಿಸ್ಥಿತಿ ಹೀಗೇ ಕೆಟ್ಟದಾಗಿ … Continued

ಮಹಾರಾಷ್ಟ್ರದಲ್ಲಿ 48 ಸಾವಿರದ ಸಮೀಪ ಬಂದ ದೈನಂದಿನ ಕೊರೊನಾ ಪ್ರಕರಣ..!

ಮುಂಬೈ; ಮಹಾರಾಷ್ಟ್ರವು ಶುಕ್ರವಾರ 47827 ಹೊಸ ಕೊವಿಡ್‌ -19 ಪ್ರಕರಣಗಳನ್ನು ದಾಖಲಿಸಿದೆ, ಇದು ಕೊರೊನಾ ಸಾಂಕ್ರಾಮಿಕ ರೋಗ ಪ್ರಾರಂಭವಾದ ನಂತರದ ಗರಿಷ್ಠ ದೈನಂದಿನ ಪ್ರಕರಣವಾಗಿದೆ..! ಹೊಸ ಅಂಕಿ ಅಂಶವು ರಾಜ್ಯದ ಸಕಾರಾತ್ಮಕ ಪ್ರಕರಣಗಳನ್ನು 2904076 ಕ್ಕೆ ತಲುಪಿದೆ ಎಂದು ಆರೋಗ್ಯ ಇಲಾಖೆಯ ಹೇಳಿಕೆ ತಿಳಿಸಿದೆ. ರಾಜ್ಯದಲ್ಲಿ ಶನಿವಾರ 202 ಕೊರೊನಾ ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ … Continued

ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಪ್ರೇಕ್ಷಕರ ಮಿತಿ: ಆದೇಶ ಹಿಂಪಡೆಯಲು ನಟ ಪುನೀತ್‌ ಒತ್ತಾಯ

ಬೆಂಗಳೂರು : ರಾಜ್ಯ ಸರ್ಕಾರ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಪ್ರೇಕ್ಷಕರ ಮಿತಿ ಹೇರಿ ಶುಕ್ರವಾರ ಆದೇಶ ಮಾಡಿದ್ದು, ಇದಕ್ಕೆ ಚಿತ್ರನಟ ಪುನೀತ್‌ ರಾಜಕುಮಾರ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರದ ಆದೇಶ ಹೊರಬೀಳುತ್ತಿದ್ದಂತೆ, ಫೇಸ್‌ಬುಕ್‌ ಮೂಲಕ “ಯುವರತ್ನ’ ಚಿತ್ರದ ನಿರ್ದೇಶಕ ಸಂತೋಷ್‌ ಆನಂದರಾಮ್‌ ಅವರ ಜೊತೆಗೆ ಲೈವ್‌ ಬಂದ ನಟ ಪುನೀತ್‌ ರಾಜಕುಮಾರ್‌ ಸರ್ಕಾರದ ನಿರ್ಧಾರದ ಬಗ್ಗೆ ಅಸಮಾಧಾನ … Continued

ಮಾರ್ಚಿನಲ್ಲಿ ಅಮೆರಿಕ ಉದ್ಯೋಗ ಬೆಳವಣಿಗೆಗೆ ವೇಗ ; ನಿರುದ್ಯೋಗ ದರ 6 % ಕುಸಿತ

ಅಮೆರಿಕದ ಉದ್ಯೋಗದಾತರು ಮಾರ್ಚಿನಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಕಾರ್ಮಿಕರನ್ನು ನೇಮಿಸಿಕೊಂಡಿದ್ದು,, ಹೆಚ್ಚಿದ ವ್ಯಾಕ್ಸಿನೇಷನ್ ಮತ್ತು ಸರ್ಕಾರದಿಂದ ಹೆಚ್ಚಿನ ಸಾಂಕ್ರಾಮಿಕ ಪರಿಹಾರ ಹಣದಿಂದ ಉತ್ತೇಜಿಸಲ್ಪಟ್ಟು ಆರ್ಥಿಕ ಉತ್ಕರ್ಷದ ನಿರೀಕ್ಷೆ ಹೆಚ್ಚಿಸಿದೆ. ನಾನ್‌ಫಾರ್ಮ್‌ ವೇತನದಾರರ ಸಂಖ್ಯೆ ಕಳೆದ ತಿಂಗಳು 9,16,000 ಉದ್ಯೋಗಗಳಷ್ಟು ಹೆಚ್ಚಾಗಿದೆ ಎಂದು ಕಾರ್ಮಿಕ ಇಲಾಖೆ ಶುಕ್ರವಾರ ತಿಳಿಸಿದೆ. ಅದು ಕಳೆದ ಆಗಸ್ಟ್ ನಂತರದ ದೊಡ್ಡ ಹೆಚ್ಚಳವಾಗಿದೆ. ಈ … Continued

ಹೊಸ ಕೊವಿಡ್‌ ಮಾರ್ಗಸೂಚಿ ಪ್ರಕಟ: ರಾಜ್ಯಾದ್ಯಂತ ಜಿಮ್, ಸ್ವಿಮ್ಮಿಂಗ್ ಪೂಲ್, 6 ರಿಂದ 9 ತರಗತಿ ಬಂದ್

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ, ಕೊರೊನಾ ತಡೆಗೆ ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟವಾಗಿದೆ. ಏಪ್ರಿಲ್ 20ರ ವರೆಗೆ ಪ್ರಸ್ತುತ ಮಾರ್ಗಸೂಚಿ ಅನ್ವಯವಾಗಲಿದೆ. ಹೊಸ ಮಾರ್ಗಸೂಚಿ ಪ್ರಕಾರ ಕೆಲ ಜಿಲ್ಲೆಗಳಲ್ಲಿ ಸಿನಿಮಾ ಹಾಲ್​ಗಳಲ್ಲಿ ಶೇ.50ರಷ್ಟಕ್ಕೆ ಮಾತ್ರ ಅವಕಾಶ ನೀಡಲಾಗಿದೆ, 8 ಜಿಲ್ಲೆಗಳಲ್ಲಿ ಬಾರ್, ಪಬ್​, ಕ್ಲಬ್, ರೆಸ್ಟೋರೆಂಟ್​ಗಳನ್ನು ನಿರ್ಬಂಧ ವಿಧಿಸಲಾಗಿದೆ. ಬೆಂಗಳೂರು … Continued

ಕರ್ನಾಟಕದಲ್ಲಿ ಐದು ಸಾವಿರದ ಸಮೀಪ, ಬೆಂಗಳೂರಲ್ಲಿ ಮೂರೂವರೆ ಸಾವಿರ ದಾಟಿದ ದೈನಂದಿನ ಕೊರೊನಾ ಪ್ರಕರಣ..

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಕೊರೋನಾ ಆರ್ಭಟಿಸಿದ್ದು, ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 4,991 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಅಲ್ಲದೆ 6 ಸೋಂಕಿತರು ಮೃತಪಟ್ಟಿದ್ದಾರೆ. ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆ ಕೊರೊನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಯಲ್ಲಿ ಬೆಂಗಳೂರು ನಗರದಲ್ಲಿ 3,509 ಸೇರಿದಂತೆ ರಾಜ್ಯಾಧ್ಯಂತ 4,991 ಜನರಿಗೆ ಕೊರೋನಾ ಸೋಂಕು … Continued

ಏಪ್ರಿಲ್ 4ರ ವರೆಗೆ ತಮಿಳುನಾಡಿನ 27 ಜಿಲ್ಲೆಗಳಲ್ಲಿ ಬಿಸಿ ಗಾಳಿ..ಚೆನ್ನೈಗೆ ಅತಿ ಹೆಚ್ಚು ತಾಪದ ಭೀತಿ..!

ಚೆನ್ನೈ: ಚೆನ್ನೈ ಮತ್ತು ಅದರ ನೆರೆಹೊರೆ ಸೇರಿದಂತೆ ತಮಿಳುನಾಡಿನ ಒಟ್ಟು 27 ಜಿಲ್ಲೆಗಳು ಬಿಸಿಗಾಳಿ(ಶಾಖದ ಅಲೆ)ಯಿಂದ ಬಾಧಿತವಾಗಿವೆ. ಹೀಗಾಗಿ ಇಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 4-6 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಇಲ್ಲಿನ ಪ್ರಾದೇಶಿಕ ಹವಾಮಾನ ಕೇಂದ್ರ ಶುಕ್ರವಾರ ಪ್ರಕಟಿಸಿದೆ. ಏಪ್ರಿಲ್ ತಿಂಗಳಲ್ಲಿ ಚೆನ್ನೈನ ಸರಾಸರಿ ತಾಪಮಾನ 34.5 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಆದರೆ, … Continued