ದಿಶಾ ರವಿಗೆ ಮೂರು ದಿನಗಳ ನ್ಯಾಯಾಂಗ ಬಂಧನ

ನವ ದೆಹಲಿ: ‘ಟೂಲ್ಕಿಟ್’ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು 22 ವರ್ಷದ ಹವಾಮಾನ ಕಾರ್ಯಕರ್ತೆ ದಿಶಾ ರವಿ ಅವರನ್ನು ಮೂರು ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ದಿಶಾ ಅವರ ಐದು ದಿನಗಳ ಪೊಲೀಸ್ ಕಸ್ಟಡಿ ಶುಕ್ರವಾರ ಕೊನೆಗೊಂಡಿತ್ತು ಮತ್ತು ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಪಟಿಯಾಲ ಹೌಸ್ ಕೋರ್ಟ್‌ಗೆ ಹಾಜರುಪಡಿಸಲಾಯಿತು. ದೆಹಲಿ ಪೊಲೀಸರ ಪರ ಹಾಜರಾದ … Continued

ಎಂದಿಗೂ ನನ್ನನ್ನು ಮರೆಯಬೇಡ : ಮಗನಿಗೆ ಸ್ವತಂತ್ರ ಭಾರತದ ಗಲ್ಲಿಗೇರುವ ಮೊದಲ ಮಹಿಳೆ ಸಲಹೆ

ನವ ದೆಹಲಿ : 2008ರಲ್ಲಿ ಅವರ ಕುಟುಂಬದ ಏಳು ಸದಸ್ಯರನ್ನು ನಿದ್ರಾಜನಕಗಳನ್ನು ಬೆರೆಸಿದ ಹಾಲನ್ನು ಕುಡಿಸಿ ಮತ್ತು ಭರಿಸಿ ನಂತರ ಗಂಟಲು ಕತ್ತರಿಸಿ ಕೊಲೆ ಮಾಡಿದ ಆರೋಪದಲ್ಲಿ ಮರಣದಂಡನೆಗೆ ಗುರಿಯಾಗಿರುವ ಸ್ವತಂತ್ರ ಭಾರತದ ಮೊದಲ ಮಹಿಳೆ ೩೮ ವರ್ಷದ ಶಬ್ನಮ್‌ಳನ್ನು ಮಹಿಳೆಯರನ್ನು ಗಲ್ಲಿಗೇರಿಸುವ ಏಕೈಕ ಸ್ಥಳವಾದ ಉತ್ತರ ಪ್ರದೇಶದ ಮಥುರಾ ಜಿಲ್ಲಾ ಜೈಲಿನಲ್ಲಿ ಗಲ್ಲಿಗೇರಿಸುವ ಸಿದ್ಧತೆಗಳನ್ನು … Continued

ಕರ್ನಾಟಕದಲ್ಲಿ ಮುಂದಿನ ೨೪ ತಾಸಿನಲ್ಲಿ ಮಳೆ ಸಾಧ್ಯತೆ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ, ಮಧ್ಯ ಮತ್ತು ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಮಳೆಯಾಗುವ ಸಾಧ್ಯತೆಗಳಿವೆ. ಕರ್ನಾಟಕ, ಕೇರಳ, ವಿದರ್ಭ, ಛತ್ತೀಸಗಡ, ಮಧ್ಯ ಮಹಾರಾಷ್ಟ್ರ, ತಮಿಳುನಾಡು, ಪುದುಚೇರಿ ಹಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಕುರಿತಂತೆ ಭಾರತೀಯ ಹವಾಮಾನ ಇಲಾಖೆ ಮಾಹಿತಿ … Continued

ಬಿಜೆಪಿ ಅಧಿಕಾರಕ್ಕೆ ಬಂದ್ರೆ ಸಿಎಂ ಆಗಲು ಸಿದ್ಧ: ಮೆಟ್ರೋಮ್ಯಾನ್‌ ಶ್ರೀಧರನ್‌

ಕೇರಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ತಾನು ಮುಖ್ಯಮಂತ್ರಿ ಹುದ್ದೆಗೇರಲು ಆಸಕ್ತಿ ಹೊಂದಿದ್ದಾಗಿ ಮೆಟ್ರೋಮ್ಯಾನ್‌ ಇ. ಶ್ರೀಧರನ್‌ ಹೇಳಿದ್ದಾರೆ. ಬಿಜೆಪಿ ಸೇರಲು ಉತ್ಸುಕತೆ ಹೊಂದಿರುವುದಾಗಿ ಹೇಳಿಕೆ ನೀಡಿದ ಮರುದಿನವೇ ಸಿಎಂ ಹುದ್ದೆ ವಹಿಸಿಕೊಳ್ಳಲು ಮುಕ್ತನಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಕೇರಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದರೆ ರಾಜ್ಯವನ್ನು ಸಾಲದ ಬಲೆಯಿಂದ ಹೊರಗೆ ತರುವುದು ಮತ್ತು ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಗಮನ … Continued

ಮಧ್ಯಪ್ರದೇಶ ಹೈಕೋರ್ಟಿಗೆ ಹೋಗಿ: ಅರ್ಜಿದಾರರಿಗೆ ಸುಪ್ರೀಂಕೋರ್ಟ್‌ ಸೂಚನೆ

ನವದೆಹಲಿ: ಅಂತರ್-ಧರ್ಮೀಯ ವಿವಾಹಗಳ ಕಾರಣದಿಂದಾಗಿ ಮತಾಂತರಗಳನ್ನು ನಿಯಂತ್ರಿಸುವ ವಿವಾದಾತ್ಮಕ ಮಧ್ಯಪ್ರದೇಶದ ಸುಗ್ರೀವಾಜ್ಞೆಯ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಿದ ಮನವಿಯನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಸಿದ ವಿಚಾರಣೆಯಲ್ಲಿ ಮುಖ್ಯ ನ್ಯಾಯಮೂರ್ತಿ ಎಸ್. ಎ. ಬೊಬ್ಡೆ ನೇತೃತ್ವದ ನ್ಯಾಯಪೀಠವು ಅರ್ಜಿದಾರರ ವಕೀಲ ವಿಶಾಲ್ ಠಾಕ್ರೆ ಅವರನ್ನು ಈ ಬಗ್ಗೆ ಮಧ್ಯಪ್ರದೇಶ ಹೈಕೋರ್ಟ್‌ಗೆ … Continued

ಸುಭಾಸಚಂದ್ರ ಬೋಸ್ ಮರೆಸಲು ವ್ಯವಸ್ಥಿತ ಯತ್ನ: ಅಮಿತ್‌ ಶಾ

ನೇತಾಜಿ ಸುಭಾಸಚಂದ್ರ ಬೋಸ್‌ ಅವರನ್ನು ಮರೆಯುವಂತೆ ವ್ಯವಸ್ಥಿತ ಯತ್ನ ನಡೆಯಿತು, ಆದರೆ ಅವರ ಧೈರ್ಯ, ದೇಶಭಕ್ತಿ ಹಾಗೂ ನಿಸ್ವಾರ್ಥ ಸೇವೆಯಿಂದಾಗಿ ಅವರ ಹೆಸರು ಶಾಶ್ವತವಾಗಿರುತ್ತದೆ, ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದರು. ಬಂಗಾಳಿ ಕ್ರಾಂತಿಕಾರಿಗಳಿಗೆ ಗೌರವ ಸಲ್ಲಿಸುವ ಶೌರ್ಯಾಂಜಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರಿಂದ … Continued

ಗಾಲ್ವಾನ್‌ ಕಣಿವೆ ಸಂಘರ್ಷದಲ್ಲಿ ತಮ್ಮ ಐವರು ಸೈನಿಕರ ಸಾವು: ಚೀನಾ

ಬೀಜಿಂಗ್: ಕಳೆದ ವರ್ಷ ಪೂರ್ವ ಲದಾಕ್‌ನ ಗಾಲ್ವಾನ್‌ ಕಣಿವೆಯಲ್ಲಿ ಭಾರತೀಯ ಸೇನೆಯೊಂದಿಗೆ ನಡೆದ ಘರ್ಷಣೆಯಲ್ಲಿ ಐವರು ಚೀನಾದ ಮಿಲಿಟರಿ ಅಧಿಕಾರಿಗಳು ಮತ್ತು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಶುಕ್ರವಾರ ಮೊದಲ ಬಾರಿಗೆ ಒಪ್ಪಿಕೊಂಡಿದೆ. 2020 ರ ಜೂನ್‌ನಲ್ಲಿ ಗಾಲ್ವಾನ್ ಕಣಿವೆಯಲ್ಲಿ ಸಂಭವಿಸಿದ ಘರ್ಷಣೆಯಲ್ಲಿ ತಮ್ಮ ದೇಶದ ಮಿಲಿಟರಿ ಅಧಿಕಾರಿಗಳು ಹಾಗೂ ಸೈನಿಕರು … Continued

ಮಾ.೨೦ರಿಂದ ರಾಜ್ಯದಲ್ಲಿ ರೈತರ ಸಮಾವೇಶ

ದೆಹಲಿಯಲ್ಲಿ ರೈತ ಹೋರಾಟ ಬೆಂಬಲಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮಾರ್ಚ್‌ ೨೦ರಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರೈತ ಸಮಾವೇಶ ಆಯೋಜಿಸಲಾಗುವುದು ಎಂದು ರೈತ ಸಂಘದ ವರಿಷ್ಠೆ ಚುಕ್ಕಿ ನಂಜುಂಡಸ್ವಾಮಿ ಹೇಳಿದ್ದಾರೆ. ಮಾ.೨೦ರಂದು ಶಿವಮೊಗ್ಗ, ಮಾ.೨೧ರಂದು ಹಾವೇರಿ, ಮಾ.೨೨ರಂದು ಬೆಳಗಾವಿಯಲ್ಲಿ ರೈತ ಸಮಾವೇಶ ನಡೆಯಲಿದೆ. ಸಮಾವೇಶಗಳಲ್ಲಿ ಭಾರತೀಯ ಕಿಸಾನ ಯೂನಿಯನ್‌ ಮುಖಂಡ … Continued

ಕಾಂಗ್ರೆಸ್‌ ಆಂತರಿಕ ತಿಕ್ಕಾಟ ಮೊದಲು ಬಗೆಹರಿಸಿಕೊಳ್ಳಲಿ: ಸಿದ್ದುಗೆ ಬಿಜೆಪಿ ಟಾಂಗ್‌

ಬೆಂಗಳೂರು: ನಿಮ್ಮ ಪಕ್ಷದೊಳಗಿನ ಆಂತರಿಕ ಹೋರಾಟವನ್ನು ಮೊದಲು ಬಗೆಹರಿಸಿಕೊಳ್ಳಿ ಎಂದು ಬಿಜೆಪಿ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದೆ. ಕಾಂಗ್ರೆಸ್‌ನಲ್ಲಿ ಅಹಿಂದ ವಿಚಾರವಾಗಿ ಪರ ಹಾಗೂ ವಿರೋಧ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಟ್ವೀಟ್ ಮೂಲಕ ಟಾಂಗ್ ನೀಡಿದೆ. ಅಹಿಂದ ಎಂದು ಹೊರಟಿದ್ದ ಸಿದ್ದರಾಮಯ್ಯ ದಿಢೀರನೆ ಅಲ್ಪಸಂಖ್ಯಾತರನ್ನು ಕೈಬಿಟ್ಟು ಹಿಂದ ಎನ್ನುತ್ತಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪರಾಭವಗೊಂಡಾಗಲೇ ಜಾತಿ, … Continued

ಬೆಂಗಳೂರು ವಿಮಾನ ನಿಲ್ದಾಣದಿಂದ 5 ಹೊಸ ಮಾರ್ಗಗಳಿಗೆ ವಿಮಾನ ಸೇವೆ

ಫೆಬ್ರವರಿ ಅಂತ್ಯಕ್ಕೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಐದು ಹೊಸ ಮಾರ್ಗಗಳಿಗೆ ವಿಮಾನಯಾನ ಸೇವೆ ಆರಂಭಗೊಳ್ಳಲಿದೆ. ಆಗ್ರಾ, ಕರ್ನೂಲ, ರಾಜಕೋಟ್‌, ದುರ್ಗಾಪುರ, ದಿಬ್ರೂಗಢ ನಗರಗಳಿಗೆ ಫೆಬ್ರವರಿ ಅಂತ್ಯದಿಂದ ವಿಮಾನಯಾನ ಸೇವೆ ಆರಂಭವಾಗುವುದು. ರಾಜಕೋಟ್‌, ದುರ್ಗಾಪುರಕ್ಕೆ ಸ್ಪೈಸ್‌ ಜೆಟ್‌ ಹಾಗೂ ದಿಬ್ರೂಗಢಕ್ಕ ಇಂಡಿಗೊ, ಆಗ್ರಾ ಮತ್ತು ಕರ್ನೂಲ್‌ಗೆ ಮಾರ್ಚ್‌ ಮೊದಲ ವಾರದಿಂದ ವಿಮಾನಸೇವೆ ಶುರುವಾಗಲಿದೆ. ಇದರಿಂದಾಗಿ ಬೆಂಗಳೂರಿನಿಂದ … Continued