ನೀವು ಇತಿಹಾಸಕಾರರೋ-ಭಾಷಾಶಾಸ್ತ್ರಜ್ಞರೋ..? ಕನ್ನಡ ಕುರಿತ ಹೇಳಿಕೆಗೆ ನಟ ಕಮಲ ಹಾಸನ್ ತರಾಟೆಗೆ ; ಕ್ಷಮೆ ಕೇಳಲು ಮೌಖಿಕವಾಗಿ ಹೇಳಿದ ಹೈಕೋರ್ಟ್‌

ಬೆಂಗಳೂರು :  “ಕನ್ನಡ ತಮಿಳಿನಿಂದ ಜನಿಸಿದ್ದು” ಎಂದು ನಟ ಕಮಲ್ ಹಾಸನ್ ಇತ್ತೀಚೆಗೆ ನೀಡಿದ್ದ ಹೇಳಿಕೆಗೆ ಕರ್ನಾಟಕ ಹೈಕೋರ್ಟ್ ಮಂಗಳವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನೀವು ಜನಸಾಮಾನ್ಯರ ಭಾವನೆಗಳನ್ನು ನೋಯಿಸಲು ಸಾಧ್ಯವಿಲ್ಲ” ಎಂದು ಮಂಗಳವಾರ ಹೇಳಿರುವ ಕರ್ನಾಟಕ ಹೈಕೋರ್ಟ್ ಕಮಲ ಹಾಸನ್ ತಮ್ಮ ಹೇಳಿಕೆಗೆ ಕ್ಷಮೆಯಾಚಿಸುವಂತೆ ಮೌಖಿಕವಾಗಿ ಸೂಚಿಸಿದೆ.. ಈ ಹೇಳಿಕೆಗಳ ಬಗ್ಗೆ ಆಧಾರವನ್ನು ಕೇಳಿತು … Continued

ಹಳೆ ಪಿಂಚಣಿ ಯೋಜನೆ ಬೇಕೆನ್ನುವ ಸರ್ಕಾರಿ ನೌಕರರಿಗೆ ಒಳ್ಳೆಯ ಸುದ್ದಿ ; ರಾಜ್ಯ ಸರ್ಕಾರದಿಂದ ಒಪಿಎಸ್‌ ಪ್ರಸ್ತಾವನೆ ಪರಿಶೀಲನೆಗೆ 3 ತಂಡ ರಚನೆ

ಬೆಂಗಳೂರು : ಹಳೆ ಪಿಂಚಣಿ ಯೋಜನೆ (Old pension Scheme) ನಿರೀಕ್ಷೆಯಲ್ಲಿರುವ ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ಹಳೆ ಪಿಂಚಣಿ ಯೋಜನೆ (OPS) ಪ್ರಸ್ತಾವನೆ ಪರಿಶೀಲಿಸಲು ಮೂರು ತಂಡಗಳ ರಚನೆ ಮಾಡಿ ಆದೇಶ ಹೊರಡಿಸಿದೆ. ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿಗೆ ತರಬೇಕು ಎಂಬುದು ಸರ್ಕಾರಿ ನೌಕರರ ಬಹುದಿನಗಳ ಒತ್ತಾಯವಾಗಿದೆ. ದಿನಾಂಕ: … Continued

ಹೃದಯ ಸ್ಪರ್ಷಿ | ಕಾರ್ಗಿಲ್‌ ಯುದ್ಧದಲ್ಲಿ ಹುತಾತ್ಮ ತನ್ನ ಸೈನಿಕ ಮಗನಿಗೆ ಕೊಟ್ಟಿದ್ದ ಮಾತಿನಂತೆ ಪ್ರತಿವರ್ಷ ದ್ರಾಸ್‌ ಗೆ ಭೇಟಿ ನೀಡುವ ಈ ತಂದೆ

ನವದೆಹಲಿ: ಕೆಲ ವರ್ಷಗಳ ಹಿಂದೆ ತನ್ನ ಮಗನಿಗಾಗಿ ಮಾಡಿದ ವಾಗ್ದಾನವನ್ನು ಪೂರೈಸಲು,ಹಿರಿಯ ವ್ಯಕ್ತಿಯೊಬ್ಬರು ಪ್ರತಿ ವರ್ಷವೂ ತಪ್ಪದೆ ಮೇ ಮತ್ತು ಜೂನ್‌ನಲ್ಲಿ ದೆಹಲಿಯಿಂದ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಕಾರ್ಗಿಲ್‌ನ ದ್ರಾಸ್‌ಗೆ ಹೋಗುತ್ತಾರೆ. ಕರ್ನಲ್ ವೀರೇಂದ್ರ ಥಾಪರ್ ಅವರ ಕಾರ್ಗಿಲ್ ಪಾದಯಾತ್ರೆ ಹೆಮ್ಮೆ, ಪ್ರೀತಿ ಮತ್ತು ಅದ್ಭುತ ತಂದೆ-ಮಗನ ಸಂಬಂಧದ ಕಥೆಯಾಗಿದೆ. ಭಾರತೀಯ ಭೂಪ್ರದೇಶವನ್ನು ಆಕ್ರಮಿಸಿ ಪ್ರಮುಖ … Continued

ದೇಶಭಕ್ತನಾಗುವುದು ಅಷ್ಟು ಕಷ್ಟವೇ?: ಕಾಂಗ್ರೆಸ್ ನಾಯಕರಿಗೆ ಕುಟುಕಿದ ಮಾಜಿ ಸಚಿವ ಸಲ್ಮಾನ್ ಖುರ್ಷಿದ್…!

ನವದೆಹಲಿ: ಏಪ್ರಿಲ್ 22 ರ ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ ನಂತರ ಪಾಲುದಾರ ರಾಷ್ಟ್ರಗಳಿಗೆ ತೆರಳಿರುವ ಸರ್ವಪಕ್ಷಗಳ ನಿಯೋಗದ ಸದಸ್ಯರಾಗಿರುವ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್, ತಮ್ಮ ಪಕ್ಷ ಕಾಂಗ್ರೆಸ್‌ ಸೇರಿದಂತೆ ಟೀಕಾಕಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ, “ಭಯೋತ್ಪಾದನೆಯ ವಿರುದ್ಧದ ಕಾರ್ಯಾಚರಣೆಯಲ್ಲಿ, ಜಗತ್ತಿಗೆ ಭಾರತದ ಸಂದೇಶವನ್ನು ಹೇಳುವುದರ ಬಗ್ಗೆಯೂ ಜನರು ರಾಜಕೀಯ ನಿಷ್ಠೆಯನ್ನು ಲೆಕ್ಕ … Continued

ವಿಜಯಪುರ | ಮನಗೂಳಿ ಕೆನರಾ ಬ್ಯಾಂಕಿನಲ್ಲಿ ಭಾರಿ ಕಳ್ಳತನ ; 59 ಕೆಜಿ ಚಿನ್ನಾಭರಣ ದೋಚಿದ ಕಳ್ಳರು…

ವಿಜಯಪುರ:   ಜಿಲ್ಲೆಯ ಮನಗೂಳಿ ಕೆನರಾ ಬ್ಯಾಂಕಿನಿಂದ ಕಳ್ಳರು 59 ಕೆಜಿ ಚಿನ್ನವನ್ನು ದೋಚಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ. ಬ್ಯಾಂಕಿನಿಂದ ಸಾಲ ಪಡೆದ ಜನರು ಚಿನ್ನವನ್ನು ಠೇವಣಿ ಇಟ್ಟಿದ್ದರು ಎಂದು ವಿಜಯಪುರ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ಬಿ ನಿಂಬರ್ಗಿ ಸುದ್ದಿಗಾರರಿಗೆ ತಿಳಿಸಿದ್ದಾರೆ. 59 ಕೆಜಿ ಚಿನ್ನ ಕಳುವಾಗಿದೆ ಎಂದು ಬ್ಯಾಂಕ್ ಅಧಿಕಾರಿಗಳು ತೀರ್ಮಾನಕ್ಕೆ … Continued

ಹಾನಿಯಾದ ತೂಗು ಸೇತುವೆ ಮೇಲೆ ಭೋರ್ಗರೆವ ನದಿ ದಾಟಲು ಹುಚ್ಚು ಸಾಹಸ ಮಾಡಿದ ವ್ಯಕ್ತಿ : ಮೈ ಜುಂ ಎನ್ನುವ ದೃಶ್ಯದ ವೀಡಿಯೊ ವೈರಲ್‌

ಪ್ರವಾಹದಿಂದ ತತ್ತರಿಸಿದ ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಹಾನಿಗೊಳಗಾದ ತೂಗು ಸೇತುವೆಯ ಮೂಲಕ ಭಾರೀ ಪ್ರವಾಹದಿಂದ ಉಕ್ಕಿ ಹರಿಯುತ್ತಿದ್ದ ನದಿಯನ್ನು ದಾಟಿದ್ದಾನೆ. ಈ ತನ ಹಾನಿಗೊಳಗಾದ ತೂಗು ಸೇತುವೆಯ ಮೂಲಕ ಉಕ್ಕೇರಿದ ನದಿಯನ್ನು ದಾಟಿರುವ ವೀಡಿಯೊ ದೃಶ್ಯಾವಳಿ ಹೊರಹೊಮ್ಮಿದೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು X … Continued

ವೀಡಿಯೊ | ಬೆಂಗಳೂರು : ರಿಕ್ಷಾ ಚಾಲಕನಿಗೆ ಚಪ್ಪಲಿಯಲ್ಲಿ ಹೊಡೆದ ಬಿಹಾರದ ಮಹಿಳೆ ಬಂಧನ ; ಪ್ರಕರಣ ದಾಖಲಾದ ನಂತ್ರ ಚಾಲಕನ ಕಾಲಿಗೆ ಬಿದ್ದು ಕ್ಷಮೆಯಾಚನೆ..!

ಬೆಂಗಳೂರು: ಬೆಂಗಳೂರಿನಲ್ಲಿ ಆಟೋರಿಕ್ಷಾ ಚಾಲಕನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಮಹಿಳೆಯೊಬ್ಬರನ್ನು ಭಾನುವಾರ ಬಂಧಿಸಲಾಗಿದೆ. ಚಾಲಕ ಲೋಕೇಶ ಎಂಬವರಿಗೆ ಚಪ್ಪಲಿಯಿಂದ ಹೊಡೆಯುವವೀಡಿಯೊ ವೈರಲ್ ಆದ ನಂತರ ಪಂಖುರಿ ಮಿಶ್ರಾ (28) ಎಂಬ ಮಹಿಳೆಯನ್ನು ಬಂಧಿಸಲಾಯಿತು. ಈಗ ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಬೆಳ್ಳಂದೂರು ನಿವಾಸಿ ಪಂಖುರಿ ತನ್ನ ಪತಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ಶನಿವಾರ … Continued

ಬಿಜೆಪಿ ಮುಖಂಡ ಅರುಣಕುಮಾರ ಪುತ್ತಿಲಗೆ ಗಡಿಪಾರು ನೋಟಿಸ್

ಮಂಗಳೂರು: ಬಿಜೆಪಿ (BJP) ಮುಖಂಡ ಹಾಗೂ ಪುತ್ತಿಲ ಪರಿವಾರದ ಸಂಸ್ಥಾಪಕ ಅರುಣಕುಮಾರ ಪುತ್ತಿಲ (Arun Kumar Puthila) ವಿರುದ್ಧ ಗಡೀಪಾರು ನೋಟಿಸ್ (Deportation Notice) ನೀಡಲಾಗಿದೆ. ಪುತ್ತೂರು ವಿಭಾಗದ ಸಹಾಯಕ ಆಯುಕ್ತರು ಗಡೀಪಾರು ನೋಟಿಸ್ ನೀಡಿದ್ದು, ಜೂನ್‌ ೬ರಂದು ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ. ಪೊಲೀಸರು ಮತ್ತು ಗೃಹ ಇಲಾಖೆಯ ವಿರುದ್ಧ ಮುಸ್ಲಿಂ ಮುಖಂಡರು ಆಕ್ರೋಶ ವ್ಯಕ್ತಪಡಿಸಿ, … Continued

ಏಕದಿನದ ಕ್ರಿಕೆಟ್‌ ಗೆ ನಿವೃತ್ತಿ ಘೋಷಿಸಿದ ಆಸ್ಟ್ರೇಲಿಯಾದ ಖ್ಯಾತ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್

ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ 36 ವರ್ಷದ ಗ್ಲೆನ್ ಮ್ಯಾಕ್ಸ್‌ವೆಲ್ ಕ್ರಿಕೆಟ್‌ನ ಏಕದಿನದ ಪಂದ್ಯಗಳಿಗೆ ನಿವೃತ್ತಿ ಘೋಷಿಸಿದ್ದಾರೆ.  2026 ರಲ್ಲಿ ನಡೆಯಲಿರುವ T20I ವಿಶ್ವಕಪ್‌ ಗಳ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಲಿದ್ದಾರೆ. ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ 2026 ರ ಐಸಿಸಿ ಪುರುಷರ T20 ವಿಶ್ವಕಪ್, ಬಿಗ್ ಬ್ಯಾಷ್ ಲೀಗ್ ಮತ್ತು ಅವರ ಇತರ ಜಾಗತಿಕ ಬದ್ಧತೆಗಳಿಗೆ … Continued

ಲೇಸರ್ ಆಯುಧ ಬಳಸಿ ಶತ್ರು ಡ್ರೋನ್‌ಗಳನ್ನು ಹೊಡೆದುರುಳಿಸಿದ ಜಗತ್ತಿನ ಮೊದಲ ದೇಶವಾಯ್ತು ಇಸ್ರೇಲ್ – ವೀಡಿಯೊಗಳು

ನವದೆಹಲಿ: ಯುದ್ಧದಲ್ಲಿ ಶತ್ರು ಡ್ರೋನ್‌ಗಳನ್ನು ಹೊಡೆದುರುಳಿಸಲು ಲೇಸರ್ ಆಯುಧವನ್ನು ಯಶಸ್ವಿಯಾಗಿ ಬಳಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಇಸ್ರೇಲ್ ಭಾಜನವಾಗಿದ್ದು, ಇದನ್ನು ಆಧುನಿಕ ಯುದ್ಧದಲ್ಲಿ ಮಹತ್ವದ ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ. ಗಾಜಾದಲ್ಲಿ ನಡೆಯುತ್ತಿರುವ ಇಸ್ರೇಲ್‌-ಹಮಾಸ್‌ ಯುದ್ಧದ ಸಮಯದಲ್ಲಿ ಇಸ್ರೇಲ್‌ ಇದನ್ನು ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ. ಇಸ್ರೇಲಿ ವಾಯುಪಡೆಯ ವೈಮಾನಿಕ ರಕ್ಷಣಾ ವ್ಯವಸ್ಥೆಯು ನೇರ ಯುದ್ಧಭೂಮಿ ಪರಿಸ್ಥಿತಿಗಳಲ್ಲಿ … Continued