ಕಳಪೆ ರಸ್ತೆಗಳಿಂದ ‘ಯಾತನೆʼ ; ಬಿಬಿಎಂಪಿಗೆ ಬೆಂಗಳೂರು ವ್ಯಕ್ತಿಯಿಂದ ನೋಟಿಸ್ : 50 ಲಕ್ಷ ರೂ. ಪರಿಹಾರಕ್ಕೆ ಆಗ್ರಹ

ಬೆಂಗಳೂರು : ಬೆಂಗಳೂರಿನ 43 ವರ್ಷದ ವ್ಯಕ್ತಿಯೊಬ್ಬರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP)ಗೆ ಕಾನೂನು (ಲೀಗಲ್) ನೋಟಿಸ್ ಕಳುಹಿಸಿದ್ದು, ನಗರದಲ್ಲಿನ ವಾಹನ ಚಲಾಯಿಸಲು ಯೋಗ್ಯವಲ್ಲದ ರಸ್ತೆಗಳಿಂದ ಉಂಟಾದ “ದೈಹಿಕ ಯಾತನೆ ಮತ್ತು ಭಾವನಾತ್ಮಕ ಆಘಾತ”ಕ್ಕೆ 50 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಕೋರಿದ್ದಾರೆ. ರಿಚ್ಮಂಡ್ ಟೌನ್ ನಿವಾಸಿ ದಿವ್ಯ ಕಿರಣ ಎಂಬವರು ತಮ್ಮ ನೋಟಿಸ್‌ನಲ್ಲಿ, ತೆರಿಗೆ … Continued

ಭಾರಿ ಮಳೆ ಮುನ್ನೆಚ್ಚರಿಕೆ : ಉತ್ತರ ಕನ್ನಡ ಜಿಲ್ಲೆ ಅಂಗನಾಡಿಗಳಿಗೆ ಮೇ 21 ರಂದು ರಜೆ ಘೋಷಣೆ

ಕಾರವಾರ: ಹವಾಮಾನ ಇಲಾಖೆಯು ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಬೀಳುವ ಮುನ್ಸೂಚನೆ ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಜಿಲ್ಲೆಯಾದ್ಯಂತ ಇರುವ ಎಲ್ಲ ಅಂಗನವಾಡಿಗಳಿಗೆ ಮೇ 21 ರಂದು ಬುಧವಾರ ರಜೆ ಘೋಷಣೆ ಮಾಡಿದ್ದಾರೆ. ಭಾರತೀಯ ಹವಾಮಾನ ಇಲಾಖೆಯಿ ಮೇ 22ರ ಬೆಳಿಗ್ಗೆ 8:30 ವರೆಗೂ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಸದ್ಯ ಕಿರಿಯ … Continued

ಆಪರೇಷನ್ ಸಿಂಧೂರ | ಭಾರತದ ವಿರುದ್ಧ ಸೋಲಿನ ನಂತರವೂ ಪಾಕಿಸ್ತಾನದ ಸೇನಾ ಮುಖ್ಯಸ್ಥನಿಗೆ ಅತ್ಯುನ್ನತ ಮಿಲಿಟರಿ ಹುದ್ದೆಗೆ ಬಡ್ತಿ…!

ನವದೆಹಲಿ: ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರನ್ನು ಫೀಲ್ಡ್ ಮಾರ್ಷಲ್ ಎಂಬ ಅತ್ಯುನ್ನತ ಮಿಲಿಟರಿ ಹುದ್ದೆಗೆ ಬಡ್ತಿ ನೀಡಲಾಗಿದೆ – ಇದು ಅಪರೂಪದ ಸಂದರ್ಭಗಳಲ್ಲಿ ಮತ್ತು ಸಶಸ್ತ್ರ ಪಡೆಗಳಲ್ಲಿ ತಮ್ಮ ವೃತ್ತಿಜೀವನದುದ್ದಕ್ಕೂ ಅದ್ಭುತ ಕಾರ್ಯಾಚರಣೆ ದಾಖಲೆಯನ್ನು ಸಾಧಿಸಿದ ನಂತರ ಮಾತ್ರ ನೀಡಲಾಗುವ ಗೌರವವಾಗಿದೆ. ಆದರೆ ಭಾರತದ ಆಪರೇಶನ್‌ ಸಿಂಧೂರ ಕಾರ್ಯಾಚರಣೆಯಲ್ಲಿ ಸೈನ್ಯದ ಹಿನ್ನಡೆಯ … Continued

ನಾಳೆ (ಮೇ21) ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಅತ್ಯಂತ ಭಾರಿ ಮಳೆ ; 4 ಜಿಲ್ಲೆಗಳಿಗೆ ರೆಡ್ ಅಲರ್ಟ್‌, 6 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ

ಬೆಂಗಳೂರು: ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಮಳೆ ಅಬ್ಬರಿಸುತ್ತಿದ್ದು, ಮೇ 21ರ ಹೊತ್ತಿಗೆ ಕರ್ನಾಟಕ ಕರಾವಳಿಗೆ ಹತ್ತಿರದ ಪೂರ್ವ ಮಧ್ಯ ಅರಬ್ಬಿ ಸಮುದ್ರದ ಮೇಲೆ ಮೇಲ್ಮಟ್ಟದ ವಾಯುಭಾರ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಮೇ 21 ರಂದು ರಾಜ್ಯ ನಾಲ್ಕು ಜಿಲ್ಲೆಗಳಲ್ಲಿ ಅತ್ಯಂತ ಭಾರಿಮಳೆಯಾಗುವ ಮುನ್ಸೂಚನೆ ನೀಡಲಾಗಿದ್ದು, ಈ ಜಿಲ್ಲೆಗಳಿಗೆ ರೆಡ್ ಅಲರ್ಟ್‌ ಘೋಷಿಸಲಾಗಿದೆ. 6 ಜಿಲ್ಲೆಗಳಿಗೆ … Continued

ಸಚಿವೆ ಹೆಬ್ಬಾಳ್ಕರ ವಿರುದ್ಧ ಅಶ್ಲೀಲ ಪದ ಬಳಕೆ: ಬಿಜೆಪಿ ಶಾಸಕ ಸಿ ಟಿ ರವಿ ವಿರುದ್ಧದ ವಿಚಾರಣೆಗೆ ಸುಪ್ರೀಂ ಕೋರ್ಟ್‌ ತಡೆ

ನವದೆಹಲಿ : ಬೆಳಗಾವಿಯಲ್ಲಿ ನಡೆದಿದ್ದ ಅಧಿವೇಶನದ ಸಂದರ್ಭದಲ್ಲಿ ಸದನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ್ದ ಸಂಬಂಧ ಬಿಜೆಪಿಯ ವಿಧಾನ ಪರಿಷತ್‌ ಸದಸ್ಯ ಸಿ ಟಿ ರವಿ ವಿರುದ್ಧ ಬೆಳಗಾವಿಯ ಬಾಗೇವಾಡಿ ಠಾಣೆಯಲ್ಲಿ ದಾಖಲಾಗಿರುವ ಕಿರುಕುಳ ಮತ್ತು ಮಹಿಳೆಯ ಘನತೆಗೆ ಹಾನಿ ಮಾಡಿದ ಆರೋಪದ ಪ್ರಕರಣದ … Continued

ಚುನಾವಣಾ ರಾಜಕೀಯಕ್ಕೆ ದಿಢೀರ್‌ ನಿವೃತ್ತಿ ಘೋಷಿಸಿದ ಸಹಕಾರ ಸಚಿವ ಕೆ. ಎನ್‌ ರಾಜಣ್ಣ…!

ಬೆಂಗಳೂರು : ಚುನಾವಣಾ ರಾಜಕೀಯಕ್ಕೆ ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಅವರು ಚುನಾವಣಾ ರಾಜಕಾರಣಕ್ಕೆ ದಿಢೀರ್‌ ನಿವೃತ್ತಿ ಘೋಷಿಸಿದ್ದಾರೆ. ಹುಣಸೂರಿನಲ್ಲಿ ಮಾತನಾಡಿದ ಅವರು, ನನಗೆ 75 ವರ್ಷ ಆಯಿತು, ಇನ್ನು ಮುಂದೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಆದರೆ ಸಹಕಾರಿ ಕ್ಷೇತ್ರ, ರಾಜಕಾರಣದಲ್ಲಿ ಇರುತ್ತೇನೆ ಎಂದು ತಿಳಿಸಿದ್ದಾರೆ. ಮುಂದಿನ ಚುನಾವಣೆ ಬರುವ ವೇಳೆಗೆ ನನಗೆ 78 ವರ್ಷ … Continued

ಆಮಿಷ…ಮದುವೆ.. ನಂತರ ಚಿನ್ನಾಭರಣ-ಹಣದೊಂದಿಗೆ ಪಲಾಯನ…: ಕೊನೆಗೂ ಬಲೆಗೆಬಿದ್ದ 25 ಪುರುಷರನ್ನು ವಂಚಿಸಿದ್ದ ‘ಲೂಟಿಕೋರ ವಧು’…!

ಜೈಪುರ: ವಿವಾಹವಾಗಬೇಕು ಎಂದು ಬಯಸುತ್ತಿದ್ದ ಅಮಾಯಕರನ್ನು ವಂಚಿಸಿ ಲಕ್ಷಾಂತರ ಮೌಲ್ಯದ ಆಭರಣ ಮತ್ತು ನಗದು ಜೊತೆ ಪರಾರಿಯಾಗಿದ್ದಕ್ಕಾಗಿ ‘ಲೂಟಿಕೋರ ವಧು’ ಎಂದೇ ಕುಖ್ಯಾತಿ ಪಡೆದಿದ್ದ ಅನುರಾಧಾ ಪಾಸ್ವಾನ್ ಎಂಬ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಆಕೆ ಹೊಸ ಹೆಸರು ಇಟ್ಟುಕೊಂಡು, ಅನೇಕ ಶಹರ ಮತ್ತು ಗುರುತನ್ನು ಬದಲಿಸಿಕೊಂಡು ಅನೇಕ ಬಾರಿ ಮದುವೆಯಾಗಿ ಆಭರಣ ಮತ್ತು ನಗದು ಜೊತೆ … Continued

ಜೈಲಿನಲ್ಲಿ ಸುಹಾಸ ಶೆಟ್ಟಿ ಕೊಲೆಯ ಪ್ರಮುಖ ಆರೋಪಿ ಮೇಲೆ ಸಹಕೈದಿಗಳಿಂದ ಹಲ್ಲೆ ಯತ್ನ

ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ (Suhas Shetty) ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಪ್ರಮುಖ ಆರೋಪಿ ಚೊಟ್ಟೆ ನೌಷಾದ್ ಮೇಲೆ ಮಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಜೈಲಿನ ಕೈದಿಗಳಿಂದ ಹಲ್ಲೆಗೆ ಯತ್ನ ನಡೆದಿದೆ ಎಂದು ವರದಿಯಾಗಿದೆ. ಚೊಟ್ಟೆ ನೌಷಾದ್‌ನನ್ನು ಮೈಸೂರು ಕೇಂದ್ರ ಕಾರಾಗೃಹಕ್ಕೆ ವರ್ಗಾವಣೆ ಮಾಡುವ ವೇಳೆ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ವಿಷಯ ತಿಳಿಯುತ್ತಿದ್ದಂತೆ … Continued

ಬೆಂಗಳೂರಿನಲ್ಲಿ ಮಳೆ ಅವಾಂತರಕ್ಕೆ ಮೂವರು ಸಾವು

ಬೆಂಗಳೂರು: ಬೆಂಗಳೂರಿನ ಅಪಾರ್ಟ್‌ಮೆಂಟ್ ಸಂಕೀರ್ಣವೊಂದರಲ್ಲಿ ನೀರು ತುಂಬಿದ್ದ ನೆಲಮಾಳಿಗೆಯಲ್ಲಿ ವೃದ್ಧ ಮತ್ತು ಬಾಲಕ ವಿದ್ಯುತ್ ಆಘಾತದಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. 63 ವರ್ಷದ ಮನಮೋಹನ ಕಾಮತ್ ಅವರು ನೆಲಮಾಳಿಗೆಯಿಂದ ನೀರನ್ನು ಹೊರಹಾಕಲು ಬಾಹ್ಯ ಮೋಟಾರ್ ಬಳಸುತ್ತಿದ್ದಾಗ ಶಾರ್ಟ್ ಸರ್ಕ್ಯೂಟ್‌ನಿಂದ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾರೆ. ಈ ವೇಳೆ ವಿದ್ಯುತ್‌ ಪ್ರವಾಹಕ್ಕೆ ಸಿಲುಕಿದ ನೆಲಮಾಳಿಗೆಯೊಳಗೆ ನಿಂತಿದ್ದ ದಿನೇಶ (12) … Continued

ಪಾಕಿಸ್ತಾನದಿಂದ ಪರಮಾಣು ಬೆದರಿಕೆ ಇಲ್ಲ ; ಅಮೆರಿಕ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿಲ್ಲ : ವಿದೇಶಾಂಗ ಕಾರ್ಯದರ್ಶಿ

ನವದೆಹಲಿ : ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ಯಾವಾಗಲೂ ಸಾಂಪ್ರದಾಯಿಕ ಕ್ಷೇತ್ರದಲ್ಲಿದೆ ಮತ್ತು ಪಕ್ಕದ ದೇಶದಿಂದ ಯಾವುದೇ ಪರಮಾಣು ಬೆದರಿಕೆ ಇಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ ಮಿಶ್ರಿ ಸೋಮವಾರ ಸಂಸದೀಯ ಸಮಿತಿಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆಪರೇಷನ್​ ಸಿಂಧೂರ ಮತ್ತು ಭಾರತ ಮತ್ತು ಪಾಕಿಸ್ತಾನ ನಡುವಿನ ಇತ್ತೀಚಿನ ಉದ್ವಿಗ್ನತೆಯ ಕುರಿತು ಸಂಸದೀಯ … Continued