ಮಂಗಳೂರು : ಮೊಬೈಲ್‌ ಫೋನ್‌ ವಿಚಾರಕ್ಕೆ ಜಗಳ ; ಅಣ್ಣನನ್ನೇ ಚಾಕುವಿನಿಂದ ಇರಿದು ಕೊಂದ ತಮ್ಮ

ಮಂಗಳೂರು : ಮೊಬೈಲ್‌ ಫೋನ್‌ ವಿಚಾರವಾಗಿ ಉಂಟಾದ ಜಗಳ ವಿಕೋಪಕ್ಕೆ ತಿರುಗಿ, ತಮ್ಮ ತನ್ನ ಅಣ್ಣನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಮಂಗಳೂರಿನ ಕೊಟ್ಟಾರ ಕ್ರಾಸ್‌ ಸಮೀಪ ಭಾನುವಾರ ತಡರಾತ್ರಿ ನಡೆದಿದೆ ಎಂದು ವರದಿಯಾಗಿದೆ. ಮೃತ ವ್ಯಕ್ತಿಯನ್ನು 40 ವರ್ಷದ ಅಡಿವಪ್ಪ ಎಂದು ಗುರುತಿಸಲಾಗಿದ್ದು, ಆರೋಪಿ 36 ವರ್ಷದ ತಮ್ಮ ರಾಜು ಎಂದು ಪೊಲೀಸರು … Continued

ದೊಡ್ಡಬಳ್ಳಾಪುರ : ಹಳಿ ದಾಟುತ್ತಿದ್ದ ವೇಳೆ ರೈಲು ಡಿಕ್ಕಿಯಾಗಿ ಅಜ್ಜಿ, ಇಬ್ಬರು ಮೊಮ್ಮಕ್ಕಳು ಸಾವು

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದಲ್ಲಿ ರೈಲು ಹಳಿ ದಾಟುತ್ತಿದ್ದ ವೇಳೆ ರೈಲು ಡಿಕ್ಕಿ ಹೊಡೆದ ಪರಿಣಾಮ ಅಜ್ಜಿ ಮತ್ತು ಆಕೆಯ ಇಬ್ಬರು ಮೊಮ್ಮಕ್ಕಳು ಸ್ಥಳದಲ್ಲೇ ಮೃತಪಟ್ಟ ಹೃದಯವಿದ್ರಾವಕ ಘಟನೆ ಸೋಮವಾರ ನಡೆದಿದೆ ಎಂದು ವರದಿಯಾಗಿದೆ. ಮೃತರನ್ನು ಇರ್ಫಾನಾ (52), ರುಕಿಯಾ (13) ಹಾಗೂ ರಾಕಿಯಾ (8) ಎಂದು ಗುರುತಿಸಲಾಗಿದೆ. ಇವರು ಪಾಳನಜೋಗಹಳ್ಳಿ ನಿವಾಸಿಗಳಾಗಿದ್ದಾರೆ … Continued

ವಿಡಿಯೋ | ನೇಪಾಳ ಮಹಾವಿನಾಶಕ್ಕೆ ಕಾರಣವಾದ ಪರ್ವತದಿಂದ ಹಿಮನದಿ ಕುಸಿದ ಕ್ಷಣದ ದೃಶ್ಯ ಡ್ರೋನ್‌ನಲ್ಲಿ ಸೆರೆ

ನವದೆಹಲಿ: ಕಳೆದ ವಾರ ನೇಪಾಳ ಮತ್ತು ಟಿಬೆಟ್‌ನಲ್ಲಿ ಸಂಭವಿಸಿದ ಭೀಕರ ಪ್ರವಾಹ ದುರಂತಕ್ಕೆ ಕಾರಣವಾದ ಹಿಮನದಿ ಕುಸಿತದ ಕ್ಷಣಗಳು ಆಕಸ್ಮಿಕವಾಗಿ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಈ ದುರಂತದಲ್ಲಿ ನೂರಾರು ಜನರು ಮೃತಪಟ್ಟಿದ್ದು, ಸಾವಿರಾರು ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. ಚೀನಾದ ಛಾಯಾಗ್ರಾಹಕರೊಬ್ಬರು ಸೆರೆಹಿಡಿದಿರುವ ಈ ದೃಶ್ಯಗಳಲ್ಲಿ, ಸಮುದ್ರಮಟ್ಟದಿಂದ 7,200 ಮೀಟರ್‌ಗಿಂತಲೂ ಹೆಚ್ಚು ಎತ್ತರದಲ್ಲಿರುವ ಲಾಂಗ್‌ಟಾಂಗ್ ಲಿರುಂಗ್ (Langtang … Continued

ಆಡಿಯೊ ವೈರಲ್‌; ಮೂವರು ಪಿಎಸ್‌ಐಗಳು ಅಮಾನತು…?

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪೊಲೀಸ್ ಠಾಣೆಯ (Haliyal Police Station) ಪಿಎಸ್‌ಐಗಳ ಪೋಸ್ಟಿಂಗ್ ಹಾಗೂ ಲಂಚದ ವ್ಯವಹಾರಕ್ಕೆ ಸಂಬಂಧಿಸಿದಂತೆ ಆಡಿಯೊ ವೈರಲ್ ಅದ ಬೆನ್ನಲ್ಲಿಯೇ ಮೂವರು ಪಿಎಸ್‌ಐಗಳನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ. ಲಂಚದ ಆಡಿಯೊ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದರಿಂದ ಎಚ್ಚೆತ್ತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಗಂಭೀರ ಆರೋಪ ಎದುರಿಸುತ್ತಿದ್ದ ಮೂರು ಪಿಎಸ್‌ಐಗಳನ್ನು ಅಮಾನತುಗೊಳಿಸಿದ್ದಾರೆ … Continued

170 ಕಿಮೀ ವೇಗ, 300 ಅಡಿ ಎತ್ತರದ ʼಜಲಸುನಾಮಿʼ, 7 ನಿಮಿಷದಲ್ಲಿ 21 ಕಿಮೀ ಪಯಣ : ನೇಪಾಳದ ವಿನಾಶಕಾರಿ ಪ್ರವಾಹಕ್ಕೆ ಕಾರಣಗಳೇನು?

ನೇಪಾಳದ ಹಿಮಾಲಯ ಪ್ರದೇಶದಲ್ಲಿ ಸಂಭವಿಸಿದ ಭೀಕರ ಹಠಾತ್‌ ಪ್ರವಾಹ (Flash Flood) ಕೇವಲ ಕೆಲವೇ ನಿಮಿಷಗಳಲ್ಲಿ ಹೇಗೆ ಮಹಾವಿಪತ್ತಾಗಿ ರೂಪುಗೊಂಡಿತು ಎಂಬುದನ್ನು ವಿವರಿಸುವ ವಿಶ್ಲೇಷಣಾತ್ಮಕ ವಿಡಿಯೊ ಒಂದು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಈ ವಿಡಿಯೊ ಉಪಗ್ರಹ ಚಿತ್ರಗಳು, ಭೌಗೋಳಿಕ ಮಾಹಿತಿ, ಸಮಯದ ದಾಖಲೆಗಳು ಹಾಗೂ ವೈಜ್ಞಾನಿಕ ವಿಶ್ಲೇಷಣೆಗಳ ಆಧಾರದ ಮೇಲೆ ಘಟನೆ ಹೇಗೆ ನಡೆಯಿತು … Continued

ಪ್ಲೇಸ್ಕೂಲ್‌ನಲ್ಲಿ 3 ವರ್ಷದ ಮಗುವನ್ನು ಕುರ್ಚಿಗೆ ಕಟ್ಟಿ ಕಪಾಳಮೋಕ್ಷ, ಥಳಿತ ; ದೃಶ್ಯ ಸಿಸಿಟಿವಿಯಲ್ಲಿ ಸೆರೆ

ನವದೆಹಲಿ: ದೆಹಲಿಯ ಈಶಾನ್ಯ ಭಾಗದ ಮೌಜ್‌ಪುರ ಪ್ರದೇಶದಲ್ಲಿರುವ ಖಾಸಗಿ ಪ್ಲೇಸ್ಕೂಲ್‌ನಲ್ಲಿ ಮೂರು ವರ್ಷದ ಮಗುವಿನ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ದೆಹಲಿ ಪೊಲೀಸರು ಪೋಕ್ಸೊ (POCSO) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಘಟನೆಯ ಕುರಿತು ಹೊರಬಂದಿರುವ ಆಘಾತಕಾರಿ ಸಿಸಿಟಿವಿ ದೃಶ್ಯಗಳಲ್ಲಿ, ಪುಟ್ಟ ಮಗು ಕುಳಿತಿದ್ದ ಹಳದಿ ಬಣ್ಣದ ಸಣ್ಣ ಪ್ಲಾಸ್ಟಿಕ್ ಕುರ್ಚಿಯನ್ನು … Continued

ಮಹಿಳೆಯರು ಹೊರಗೆ ಬಂದರೆ ಅನಾಹುತ, ಮನೆಯೊಳಗೆ ಇರಬೇಕು : ಕೇರಳ ಧರ್ಮಗುರುವಿನ ವಿವಾದಾತ್ಮಕ ಹೇಳಿಕೆ

ಕೊಚ್ಚಿ: ಕೇರಳದ ಖ್ಯಾತ ಮುಸ್ಲಿಂ ಧರ್ಮಗುರು ಮಹಿಳೆಯರ ಕುರಿತು ನೀಡಿದ ವಿವಾದಾತ್ಮಕ ಹೇಳಿಕೆ ತೀವ್ರ ಚರ್ಚೆಗೆ ಕಾರಣವಾಗಿದೆ. ಮಹಿಳೆಯರು ಮನೆಗಳಲ್ಲೇ ಉಳಿಯಬೇಕು ಹಾಗೂ ಅವರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವುದರಿಂದ “ದೊಡ್ಡ ವಿನಾಶ” ಉಂಟಾಗುತ್ತದೆ ಎಂದು ಮುಸ್ಲಿಂ ಧರ್ಮಗುರು ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ (95) ಹೇಳಿರುವುದು ಈಗ ವಿವಾದಕ್ಕೆ ಕಾರಣವಾಗಿದ್ದು, ಸಿಪಿಐ(ಎಂ) ಮತ್ತು ಬಿಜೆಪಿ ಸೇರಿದಂತೆ … Continued

ಇರಾನ್‌ ಯುದ್ಧ ಯಾರಿಗೆ ಲಾಭ ? ಎಲ್‌ಪಿಜಿ, ಎಲ್‌ಎನ್‌ಜಿ : ಗಲ್ಫ್‌ ಅಲ್ಲ, ಈಗ ಅಮೆರಿಕವೇ ಭಾರತಕ್ಕೆ ಅತಿದೊಡ್ಡ ಪೂರೈಕೆದಾರ !

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿನ ಯುದ್ಧ ಪರಿಸ್ಥಿತಿಯಿಂದ ಸಾಂಪ್ರದಾಯಿಕ ಗಲ್ಫ್ ರಾಷ್ಟ್ರಗಳಿಂದ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಹಿನ್ನೆಲೆಯಲ್ಲಿ ಭಾರತವು ಅಮೆರಿಕದಿಂದ ದ್ರವೀಕೃತ ಪೆಟ್ರೋಲಿಯಂ ಅನಿಲ (LPG) ಮತ್ತು ದ್ರವೀಕೃತ ನೈಸರ್ಗಿಕ ಅನಿಲ (LNG) ಆಮದುಗಳನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಿದೆ. ಸಮುದ್ರ ಸಾರಿಗೆ ಮತ್ತು ಇಂಧನ ವ್ಯಾಪಾರ ಮಾಹಿತಿ ಸಂಸ್ಥೆ ಕ್ಲೆಪರ್ (Kpler) ಬಿಡುಗಡೆ ಮಾಡಿದ ಅಂಕಿ-ಅಂಶಗಳು … Continued

ಧಾರವಾಡ : ರೈಲಿನ ಬೋಗಿಯಲ್ಲಿ ಸೀಟ್ ಕೆಳಗಡೆ ಮಹಿಳೆಯ ಶವ ಪತ್ತೆ

ಧಾರವಾಡ: ಮಹಾರಾಷ್ಟ್ರದ ಸೊಲ್ಲಾಪುರದಿಂದ ಧಾರವಾಡಕ್ಕೆ ಭಾನುವಾರ ಬಂದ ರೈಲಿನ ಮಹಿಳಾ ಬೋಗಿಯ ಆಸನದ ಕೆಳಗೆ ಅಡಗಿಸಿಟ್ಟ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿದ್ದು, ರೈಲ್ವೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಪೊಲೀಸರ ಪ್ರಕಾರ, ಮೃತ ಮಹಿಳೆಯ ವಯಸ್ಸು ಸುಮಾರು 30ರಿಂದ 35 ವರ್ಷಗಳ ನಡುವೆ ಇರಬಹುದೆಂದು ಅಂದಾಜಿಸಲಾಗಿದೆ. ರೈಲು ಬೆಳಿಗ್ಗೆ ಸುಮಾರು 9:30ಕ್ಕೆ ಧಾರವಾಡ … Continued

ವಿಡಿಯೋ | ನೇಪಾಳ ಪ್ರವಾಹ : ಬೆಕ್ಕು ಎಂದುಕೊಂಡು ಮಣ್ಣು ತೆಗೆದಾಗ ಅವಶೇಷಗಳಡಿ ಜೀವಂತವಾಗಿ ಸಿಕ್ಕಳು 5 ವರ್ಷದ ಬಾಲಕಿ !

ಕಠ್ಮಂಡು: ನೇಪಾಳದಲ್ಲಿ ಸಂಭವಿಸಿದ ಭೀಕರ ಹಠಾತ್‌ ಪ್ರವಾಹದಿಂದ ಉಂಟಾದ ದುರಂತದ ನಡುವೆ ಆಶಾಕಿರಣವಾಗಿ ಮೂಡಿಬಂದ ಘಟನೆಯಲ್ಲಿ, ಮೂರು ದಿನಗಳ ಕಾಲ ಮಣ್ಣು ಮತ್ತು ಅವಶೇಷಗಳಡಿ ಸಿಲುಕಿದ್ದರೂ ಐದು ವರ್ಷದ ಬಾಲಕಿ ಜೀವಂತವಾಗಿ ಪತ್ತೆಯಾಗಿದ್ದಾಳೆ. ಶುಕ್ರವಾರ ರಸುವಾ ಜಿಲ್ಲೆಯ ಸ್ಯಾಬ್ರುಬೆಸಿ ಸಮೀಪದಲ್ಲಿ ರಕ್ಷಣಾ ಸಿಬ್ಬಂದಿ ಆಕೆಯನ್ನು ರಕ್ಷಿಸಿದ್ದು, ಬಳಿಕ ಕಠ್ಮಂಡುವಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆಕೆ ಆರೋಗ್ಯ … Continued