ಆಮಿಷ…ಮದುವೆ.. ನಂತರ ಚಿನ್ನಾಭರಣ-ಹಣದೊಂದಿಗೆ ಪಲಾಯನ…: ಕೊನೆಗೂ ಬಲೆಗೆಬಿದ್ದ 25 ಪುರುಷರನ್ನು ವಂಚಿಸಿದ್ದ ‘ಲೂಟಿಕೋರ ವಧು’…!

ಜೈಪುರ: ವಿವಾಹವಾಗಬೇಕು ಎಂದು ಬಯಸುತ್ತಿದ್ದ ಅಮಾಯಕರನ್ನು ವಂಚಿಸಿ ಲಕ್ಷಾಂತರ ಮೌಲ್ಯದ ಆಭರಣ ಮತ್ತು ನಗದು ಜೊತೆ ಪರಾರಿಯಾಗಿದ್ದಕ್ಕಾಗಿ ‘ಲೂಟಿಕೋರ ವಧು’ ಎಂದೇ ಕುಖ್ಯಾತಿ ಪಡೆದಿದ್ದ ಅನುರಾಧಾ ಪಾಸ್ವಾನ್ ಎಂಬ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಆಕೆ ಹೊಸ ಹೆಸರು ಇಟ್ಟುಕೊಂಡು, ಅನೇಕ ಶಹರ ಮತ್ತು ಗುರುತನ್ನು ಬದಲಿಸಿಕೊಂಡು ಅನೇಕ ಬಾರಿ ಮದುವೆಯಾಗಿ ಆಭರಣ ಮತ್ತು ನಗದು ಜೊತೆ … Continued

ಜೈಲಿನಲ್ಲಿ ಸುಹಾಸ ಶೆಟ್ಟಿ ಕೊಲೆಯ ಪ್ರಮುಖ ಆರೋಪಿ ಮೇಲೆ ಸಹಕೈದಿಗಳಿಂದ ಹಲ್ಲೆ ಯತ್ನ

ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ (Suhas Shetty) ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಪ್ರಮುಖ ಆರೋಪಿ ಚೊಟ್ಟೆ ನೌಷಾದ್ ಮೇಲೆ ಮಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಜೈಲಿನ ಕೈದಿಗಳಿಂದ ಹಲ್ಲೆಗೆ ಯತ್ನ ನಡೆದಿದೆ ಎಂದು ವರದಿಯಾಗಿದೆ. ಚೊಟ್ಟೆ ನೌಷಾದ್‌ನನ್ನು ಮೈಸೂರು ಕೇಂದ್ರ ಕಾರಾಗೃಹಕ್ಕೆ ವರ್ಗಾವಣೆ ಮಾಡುವ ವೇಳೆ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ವಿಷಯ ತಿಳಿಯುತ್ತಿದ್ದಂತೆ … Continued

ಬೆಂಗಳೂರಿನಲ್ಲಿ ಮಳೆ ಅವಾಂತರಕ್ಕೆ ಮೂವರು ಸಾವು

ಬೆಂಗಳೂರು: ಬೆಂಗಳೂರಿನ ಅಪಾರ್ಟ್‌ಮೆಂಟ್ ಸಂಕೀರ್ಣವೊಂದರಲ್ಲಿ ನೀರು ತುಂಬಿದ್ದ ನೆಲಮಾಳಿಗೆಯಲ್ಲಿ ವೃದ್ಧ ಮತ್ತು ಬಾಲಕ ವಿದ್ಯುತ್ ಆಘಾತದಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. 63 ವರ್ಷದ ಮನಮೋಹನ ಕಾಮತ್ ಅವರು ನೆಲಮಾಳಿಗೆಯಿಂದ ನೀರನ್ನು ಹೊರಹಾಕಲು ಬಾಹ್ಯ ಮೋಟಾರ್ ಬಳಸುತ್ತಿದ್ದಾಗ ಶಾರ್ಟ್ ಸರ್ಕ್ಯೂಟ್‌ನಿಂದ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾರೆ. ಈ ವೇಳೆ ವಿದ್ಯುತ್‌ ಪ್ರವಾಹಕ್ಕೆ ಸಿಲುಕಿದ ನೆಲಮಾಳಿಗೆಯೊಳಗೆ ನಿಂತಿದ್ದ ದಿನೇಶ (12) … Continued

ಪಾಕಿಸ್ತಾನದಿಂದ ಪರಮಾಣು ಬೆದರಿಕೆ ಇಲ್ಲ ; ಅಮೆರಿಕ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿಲ್ಲ : ವಿದೇಶಾಂಗ ಕಾರ್ಯದರ್ಶಿ

ನವದೆಹಲಿ : ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ಯಾವಾಗಲೂ ಸಾಂಪ್ರದಾಯಿಕ ಕ್ಷೇತ್ರದಲ್ಲಿದೆ ಮತ್ತು ಪಕ್ಕದ ದೇಶದಿಂದ ಯಾವುದೇ ಪರಮಾಣು ಬೆದರಿಕೆ ಇಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ ಮಿಶ್ರಿ ಸೋಮವಾರ ಸಂಸದೀಯ ಸಮಿತಿಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆಪರೇಷನ್​ ಸಿಂಧೂರ ಮತ್ತು ಭಾರತ ಮತ್ತು ಪಾಕಿಸ್ತಾನ ನಡುವಿನ ಇತ್ತೀಚಿನ ಉದ್ವಿಗ್ನತೆಯ ಕುರಿತು ಸಂಸದೀಯ … Continued

ವ್ಲಾಗರ್, ವಿದ್ಯಾರ್ಥಿ, ಉದ್ಯಮಿ, ಗಾರ್ಡ್….: 9 ಮಂದಿ ‘ಪಾಕಿಸ್ತಾನ ಗೂಢಚಾರರ’ ಬಂಧನ

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಬೇಹುಗಾರಿಕೆ ಚಟುವಟಿಕೆಗಳ ಮೇಲೆ ಹೆಚ್ಚಿದ ಕಣ್ಗಾವಲು ನಡುವೆಯೂ ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಮೂರು ರಾಜ್ಯಗಳಿಂದ ಕನಿಷ್ಠ ಒಂಬತ್ತು ಜನರನ್ನು ಭಾರತೀಯ ಅಧಿಕಾರಿಗಳು ಬಂಧಿಸಿದ್ದಾರೆ. ಈ ಇವರಲ್ಲಿ ಕನಿಷ್ಠ ನಾಲ್ಕು ಜನರನ್ನು ಹರಿಯಾಣದಲ್ಲಿ, ಮೂವರನ್ನು ಪಂಜಾಬ್‌ನಲ್ಲಿ ಮತ್ತು ಒಬ್ಬನನ್ನು ಉತ್ತರ ಪ್ರದೇಶದಲ್ಲಿ ಬಂಧಿಸಲಾಗಿದೆ. ಬೇಹುಗಾರಿಕೆ ನಡೆಸುತ್ತಿದ್ದಾರೆಂದು … Continued

ಕರ್ನಲ್ ಸೋಫಿಯಾ ಬಗ್ಗೆ ಸಚಿವ ವಿಜಯ ಶಾ ಹೇಳಿಕೆ | ಎಸ್ಐಟಿ ತನಿಖೆಗೆ ಸುಪ್ರೀಂ ಕೋರ್ಟ್‌ ಆದೇಶ ; ಬಂಧನಕ್ಕೆ ತಡೆ

ನವದೆಹಲಿ: ಪಾಕಿಸ್ತಾನದಲ್ಲಿನ ಉಗ್ರರ ನೆಲೆಗಳ ಮೇಲೆ ನಡೆಸಲಾದ ಸೇನಾ ಕಾರ್ಯಾಚರಣೆ ‘ಆಪರೇಷನ್ ಸಿಂಧೂರ’ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದ ಭಾರತೀಯ ಸೇನಾಧಿಕಾರಿ ಕರ್ನಲ್ ಸೋಫಿಯಾ ಕುರೇಷಿ ಅವರನ್ನು ಗುರಿಯಾಗಿಸಿಕೊಂಡು ಮಧ್ಯಪ್ರದೇಶದ ಆಡಳಿತಾರೂಢ ಬಿಜೆಪಿ ಸರ್ಕಾರದ ಸಚಿವ ಕುವರ ವಿಜಯ ಶಾ ನೀಡಿದ ಹೇಳಿಕೆಗಳ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವಂತೆ ಸುಪ್ರೀಂ … Continued

ಏಷ್ಯಾದ ಕೆಲವು ದೇಶಗಳಲ್ಲಿ ಕೋವಿಡ್-19 ಸೋಂಕು ಮತ್ತೆ ಹೆಚ್ಚಳ ; JN.1 ರೂಪಾಂತರ ಎಷ್ಟು ಅಪಾಯಕಾರಿ..?

ನವದೆಹಲಿ: ಕೋವಿಡ್-19 ಮತ್ತೊಮ್ಮೆ ಸುದ್ದಿಯಾಗುತ್ತಿದೆ. ಏಷ್ಯಾದ ಕೆಲವು ಭಾಗಗಳಲ್ಲಿ ಕೋವಿಡ್‌-19 (COVID-19) ಸಾಂಕ್ರಾಮಿಕದ ಹೊಸ ಅಲೆ ಕಾಣಿಸಿಕೊಂಡಿದ್ದು, ಇದು ವಿಶ್ವದಾದ್ಯಂತ ಎಚ್ಚರಿಕೆ ನೀಡಿದೆ. ಹಾಂಗ್ ಕಾಂಗ್‌ನಲ್ಲಿ, 10 ವಾರಗಳಲ್ಲಿ ಸಾಪ್ತಾಹಿಕ ಪ್ರಕರಣಗಳು 30 ಪಟ್ಟು ಹೆಚ್ಚಾಗಿದೆ. ಸಿಂಗಾಪುರದಲ್ಲಿ ಒಂದು ವಾರದಲ್ಲಿ ಪ್ರಕರಣಗಳು ಸುಮಾರು ಶೇ. 30 ರಷ್ಟು ಹೆಚ್ಚಾಗಿದೆ. ಚೀನಾ ಮತ್ತು ಥೈಲ್ಯಾಂಡ್‌ನಲ್ಲಿಯೂ ಗಮನಾರ್ಹ ಏರಿಕೆಯ … Continued

ವೈಜಿ ಗುಡ್ಡ ಜಲಾಶಯದಲ್ಲಿ ಮುಳುಗಿ ಮೂವರು ಯುವತಿಯರು ಸಾವು ; ನಾಲ್ವರ ರಕ್ಷಣೆ

ರಾಮನಗರ: ಜಿಲ್ಲೆಯ ಮಾಗಡಿ ತಾಲೂಕಿನ ವೈಜಿ ಗುಡ್ಡ ಜಲಾಶಯದ ಹಿನ್ನೀರಿನಲ್ಲಿ ಮೂವರು ಯುವತಿಯರು ಮುಳುಗಿದ ಘಟನೆ ನಡೆದಿದೆ ಎಂದು ವರದಿಯಾಗಿದೆ. ಅವರ ಜತೆಗಿದ್ದ ನಾಲ್ವರನ್ನು ರಕ್ಷಣೆ ಮಾಡಲಾಗಿದೆ ಎಂದು ಹೇಳಲಾಗಿದೆ. ಜಲಾಶಯದ ಹಿನೀರಿನಲ್ಲಿ ಮುಳುಗಿದವರನ್ನು ಬೆಂಗಳೂರು ಮೂಲದ ಭಾರ್ಗವಿ (22) ಮಧು (೨೫) ಹಾಗೂ ರಮ್ಯಾ (20) ಎಂದು ಗುರುತಿಸಲಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ವೈ.ಜಿ. ಗುಡ್ಡ … Continued

ಭಯೋತ್ಪಾದನೆ ವಿರುದ್ಧ ಭಾರತವು ಜಾಗತಿಕವಾಗಿ ತಲುಪುವ ಪ್ರಯತ್ನಕ್ಕೆ ಸ್ಥಳೀಯ ರಾಜಕೀಯ ತರಬೇಡಿ ; ಸಂಜಯ ರಾವತಗೆ ಶರದ್ ಪವಾರ್

ಪುಣೆ: ಎನ್‌ಸಿಪಿ (ಶರದ್‌ ಪವಾರ್‌) ಅಧ್ಯಕ್ಷ ಹಾಗೂ ಹಿರಿಯ ರಾಜಕಾರಣಿ ಶರದ್ ಪವಾರ್ ಸೋಮವಾರ ತಮ್ಮ ಪಕ್ಷದ ಮೈತ್ರಿಕೂಟದ ನಾಯಕ ಸಂಜಯ ರಾವತ್ ಅವರ ಹೇಳಿಕೆಯನ್ನು  ತಾವು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ. ಭಯೋತ್ಪಾದನೆ ಹಾಗೂ ಅದರ ವಿರುದ್ಧ ದೇಶ ಕೈಗೊಂಡ ಕ್ರಮಗಳ ಕುರಿತು ಭಾರತದ ಜಾಗತಿಕ ಸಂಪರ್ಕ ಪ್ರಯತ್ನಗಳಲ್ಲಿ “ಸ್ಥಳೀಯ ಮಟ್ಟದ ರಾಜಕೀಯ”ವನ್ನು ತರಬೇಡಿ ಎಂದು … Continued

ವಾಯುಭಾರ ಕುಸಿತ : ಕರ್ನಾಟಕದಲ್ಲಿ ಮೇ 24ರ ವರೆಗೆ ಭಾರಿ ಮಳೆ ಮುನ್ನೆಚ್ಚರಿಕೆ ; 15 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

ಬೆಂಗಳೂರು : ವಾಯುಭಾರ ಕುಸಿತದಿಂದಾಗಿ ಕರ್ನಾಟಕದಾದ್ಯಂತ ಮೇ 24ರ ವರೆಗೂ ಭಾರಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ(ಐಎಂಡಿ) ಮುನ್ಸೂಚನೆ ನೀಡಿದೆ. ಕರ್ನಾಟಕದ ಒಳನಾಡಿನಲ್ಲಿ ಟ್ರಫ್ ಇದೆ. ಅರಬ್ಬೀ ಸಮುದ್ರದ ರಾಜ್ಯದ ಕರಾವಳಿಯ ಬಳಿ ಮೇ 22 ರಂದು ವಾಯುಭಾರ ಕುಸಿತ ಆಗಲಿದೆ. ಇದರ ಪ್ರಭಾವದಿಂದ ಮೇ 24ರ ವರೆಗೆ ಕರ್ನಾಟಕದಾದ್ಯಂತ ಉತ್ತಮ ಮಳೆ ಆಗಲಿದೆ … Continued