ಹುಬ್ಬಳ್ಳಿ ಗ್ಯಾಸ್ ಸಿಲಿಂಡರ್ ಸ್ಫೋಟ | ಮತ್ತೊಬ್ಬ ಅಯ್ಯಪ್ಪ ಮಾಲಾಧಾರಿ ಸಾವು ; ಮೃತರ ಸಂಖ್ಯೆ 8ಕ್ಕೆ ಏರಿಕೆ

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕೆಲವು ದಿನಗಳ ಹಿಂದೆ ಸಂಭವಿಸಿದ ಭೀಕರ ಸಿಲಿಂಡರ್ ಸ್ಫೋಟದಲ್ಲಿ ಗಂಭೀರವಾಗಿ (Gas Cylinder Blast) ಗಾಯಗೊಂಡಿದ್ದ ಮತ್ತೊಬ್ಬರು ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದು, ಈ ಘಟನೆಯಿಂದ ಮೃತಪಟ್ಟವರ ಸಂಖ್ಯೆ 8ಕ್ಕೆ ಏರಿದೆ. ಸಿಲಿಂಡರ್ ಸ್ಫೋಟದಿಂದ ಒಂಬತ್ತು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಚಿಕಿತ್ಸೆ ಫಲಿಸದೆ ಒಬ್ಬೊಬ್ಬರೇ ಮೃತಪಟ್ಟಿದ್ದರು. ಮಂಗಳವಾರ ಗಂಭೀರವಾಗಿ … Continued

ಪ್ರಧಾನಿ ಮೋದಿ ಪ್ರಧಾನ ಕಾರ್ಯದರ್ಶಿಯ ಮಗಳು, ಅಳಿಯನಂತೆ ಪೋಸ್‌ ನೀಡಿ ವಂಚಿಸುತ್ತಿದ್ದವರ ಬಂಧನ

ಪ್ರಧಾನಿ ನರೇಂದ್ರ ಮೋದಿ ಅವರ ಪ್ರಧಾನ ಕಾರ್ಯದರ್ಶಿ ಪಿಕೆ ಮಿಶ್ರಾ ಅವರ ಮಗಳು ಮತ್ತು ಅಳಿಯ ಎಂದು ಹೇಳಿಕೊಂಡು ಭುವನೇಶ್ವರದಲ್ಲಿ ಹಲವು ಬಿಲ್ಡರ್‌ಗಳು, ಗಣಿ ಮಾಲೀಕರು ಮತ್ತು ಉದ್ಯಮಿಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಪತಿಯನ್ನು ಒಡಿಶಾ ಪೊಲೀಸರು ಬಂಧಿಸಿದ್ದಾರೆ. ಹನ್ಸಿತಾ ಅಭಿಲಿಪ್ಸಾ (38) ಮತ್ತು ಅನಿಲ ಮೊಹಾಂತಿ, ಒಡಿಶಾದ ಪ್ರಮುಖ ಅಧಿಕಾರಿಗಳು ಮತ್ತು … Continued

ಹೊನ್ನಾವರ | ಶರಾವತಿ ಸೇತುವೆ ಮೇಲೆ ಬಸ್‌-ಬೈಕ್‌ ಡಿಕ್ಕಿ ; ಮೂವರು ಸಾವು

ಹೊನ್ನಾವರ : ಇಂದು ಬೆಳಬೆಳಿಗ್ಗೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ (Honnavara) ಪಟ್ಟಣದ ಶರಾವತಿ ಸೇತುವೆ ಮೇಲೆ ಭೀಕರ  ಅಪಘಾತ ಸಂಭವಿಸಿದ್ದು, ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಮೂವರು ಬೈಕ್ ಸವಾರರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ವಿಜಯಪುರದಿಂದ ಮಂಗಳೂರಿಗೆ ಸಾಗುತ್ತಿದ್ದ ಸಾರಿಗೆ ಸಂಸ್ಥೆ ಬಸ್ ಹಾಗೂ ಬೈಕ್‌ನಲ್ಲಿದ್ದವರು ಮಂಕಿ ಕಡೆಯಿಂದ ಹೊನ್ನಾವರ ಪಟ್ಟಣಕ್ಕೆ ಹೊರಟಿದ್ದ ಬೈಕ್ … Continued

ವೀಡಿಯೊ..| ಈ ಮಂಗ ಚಪಾತಿ ಮಾಡುತ್ತದೆ…ಪಾತ್ರೆ ತೊಳೆಯುತ್ತದೆ…ಮಸಾಲೆ ರುಬ್ಬುತ್ತದೆ…!

ರಾಯ್ಬರೇಲಿ : ಉತ್ತರ ಪ್ರದೇಶದ ರಾಯ್ಬರೇಲಿ ಜಿಲ್ಲೆಯಲ್ಲಿ ರಾಣಿ ಎಂಬ ಮಂಗನ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ ಕೋತಿ ರೊಟ್ಟಿ ಮಾಡುವುದರಿಂದ ಹಿಡಿದು ಪಾತ್ರೆ ತೊಳೆಯುವವರೆಗೆ ಮನೆಕೆಲಸಗಳನ್ನು ಮಾಡುತ್ತದೆ. ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಮನೆಯ ಕೆಲಸಗಳನ್ನು ಮಾಡುತ್ತಿರುವ ಕೋತಿಯನ್ನು ನೋಡಿ ಎಲ್ಲರೂ ಆಶ್ಚರ್ಯ ಪಡುತ್ತಿದ್ದಾರೆ. ರಾಣಿ ಸಾಮಾಜಿಕ ಜಾಲತಾಣಗಳಲ್ಲಿ … Continued

ಚಂದ್ರಬಾಬು ನಾಯ್ಡು ದೇಶದ ಅತಿ ಶ್ರೀಮಂತ ಸಿಎಂ ; ಮಮತಾ ಬ್ಯಾನರ್ಜಿ ಬಡ ಸಿಎಂ ; ಸಿದ್ದರಾಮಯ್ಯ ಎಷ್ಟನೇ ಸಿರಿವಂತ ಸಿಎಂ ಗೊತ್ತೆ..?

 ನವದೆಹಲಿ: ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು 931 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿರುವ ಭಾರತದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿಯಾಗಿದ್ದಾರೆ. ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಕೇವಲ 15 ಲಕ್ಷ ರೂ.ಗಳೊಂದಿಗೆ ಅತ್ಯಂತ ಬಡವರು ಎಂದು ಸೋಮವಾರ ಬಿಡುಗಡೆಯಾದ ಅಸೋಸಿಯೇಷನ್ ​​​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿ ತಿಳಿಸಿದೆ. ವಿವಿಧ ರಾಜ್ಯಗಳು ಮತ್ತು … Continued

ವೇದಿಕೆಯಿಂದ ಕೆಳಗೆ ಬಿದ್ದು ಗಾಯಗೊಂಡ ಕಾಂಗ್ರೆಸ್‌ ಶಾಸಕಿ ಸ್ಥಿತಿ ಗಂಭೀರ

ಕೊಚ್ಚಿ: ಕಾರ್ಯಕ್ರಮದ ವೇದಿಕೆಯಿಂದ ಕೆಳಗೆ ಬಿದ್ದು ಕಾಂಗ್ರೆಸ್‌ ಶಾಸಕಿಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಕೇರಳದ ಕೊಚ್ಚಿ ಜವಾಹರ್​ಲಾಲ್ ನೆಹರು ಸ್ಟೇಡಿಯಂನಲ್ಲಿ ನಡೆದಿದೆ. ಶಾಸಕಿ ಉಮಾಥಾಮಸ್ ಅವರು ಗಂಭೀರ ಸ್ಥಿತಿಯಲ್ಲಿದ್ದು, ಅವರಿಗೆ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೊಚ್ಚಿಯ ಜವಾಹರ್​ಲಾಲ್ ನೆಹರು ಸ್ಟೇಡಿಯಂನಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್​ ಶಾಸಕಿ ಉಮಾ ಥಾಮಸ್ ಅಲ್ಲಿಂದ ಕೆಳಗೆ … Continued

ಮನಮೋಹನ್‌ ಸಿಂಗ್‌ ನಿಧನದ ಶೋಕಾಚರಣೆ ಮಧ್ಯೆ ಹೊಸವರ್ಷದ ಪಾರ್ಟಿಗೆ ವಿಯೆಟ್ನಾಂಗೆ ಹೊರಟ ರಾಹುಲ್‌ ಗಾಂಧಿ ; ಬಿಜೆಪಿ ವಾಗ್ದಾಳಿ

ನವದೆಹಲಿ: ಸೋಮವಾರ ರಾಜಕೀಯ ವಿವಾದ ಎಬ್ಬಿಸಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ, “ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ನಿಧನಕ್ಕೆ ದೇಶವು ಶೋಕಿಸುತ್ತಿರುವಾಗ, ರಾಹುಲ್ ಗಾಂಧಿ ಹೊಸ ವರ್ಷವನ್ನು ಆಚರಿಸಲು ವಿಯೆಟ್ನಾಂಗೆ ಹಾರಿದ್ದಾರೆ” ಎಂದು ಆರೋಪಿಸಿದ್ದಾರೆ. ಮಾಜಿ ಪ್ರಧಾನಿಯವರ ಸಾವನ್ನು ರಾಹುಲ್ ಗಾಂಧಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಮಾಳವೀಯ, “ಗಾಂಧಿಗಳು ಮತ್ತು … Continued

“ಅತಿಶಿ ತಾತ್ಕಾಲಿಕ ಸಿಎಂ ಎಂದು ಅರವಿಂದ ಕೇಜ್ರಿವಾಲ್ ಕರೆದಿರುವುದು ಆಕ್ಷೇಪಾರ್ಹ”: ದೆಹಲಿ ಲೆಫ್ಟಿನೆಂಟ್ ಗವರ್ನರ್

ನವದೆಹಲಿ: ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ ವಿನಯಕುಮಾರ ಸಕ್ಸೇನಾ ಅವರು ಸೋಮವಾರ ಮುಖ್ಯಮಂತ್ರಿ ಅತಿಶಿ ಅವರಿಗೆ ಪತ್ರ ಬರೆದಿದ್ದು, ಆಮ್‌ ಆದ್ಮಿ ಪಾರ್ಟಿಯ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರನ್ನು ತಾತ್ಕಾಲಿಕ ಮುಖ್ಯಮಂತ್ರಿ ಎಂದು ಕರೆದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 2025 ರ ವಿಧಾನಸಭಾ ಚುನಾವಣೆಗೆ ಮುನ್ನ ಆಡಳಿತರೂಢ ಎಎಪಿ ಮತ್ತು ಬಿಜೆಪಿ ಮಧ್ಯೆ ನಡೆಯುತ್ತಿರುವ ತೀವ್ರ ಜಟಾಪಟಿಯ … Continued

ಹೊಸ ವರ್ಷಾಚರಣೆಗೆ ಪ್ರವಾಸಿಗರಿಗೆ ಜೋಗ ಜಲಪಾತ ಓಪನ್‌

ಶಿವಮೊಗ್ಗ : ಅಭಿವೃದ್ಧಿ ಕಾಮಗಾರಿಗಳಿಗಾಗಿ ಬಂದ್‌ ಮಾಡಲಾಗಿದ್ದ ಜೋಗ ಜಲಪಾತ ವೀಕ್ಷಣೆಗೆ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಅವಕಾಶ ನೀಡಲಾಗಿದೆ. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಜೋಗ ನಿರ್ವಹಣಾ ಪ್ರಾಧಿಕಾರದ ಮುಖ್ಯ ದ್ವಾರ ಹೊರತುಪಡಿಸಿ ವ್ಯೂ ಪಾಯಿಂಟ್, ಯಾತ್ರಿ ನಿವಾಸ, ರಾಣಿ ಫಾಲ್ಸ್‌, ಮುಂಬಯಿ ಬಂಗಲೆ ಮೊದಲಾದೆಡೆಯಿಂದ ಜಲಪಾತ ವೀಕ್ಷಿಸಬಹುದು ಎಂದು ಜಿಲ್ಲಾಡಳಿತ ತಿಳಿಸಿದೆ. ವಿವಿಧ ಅಭಿವೃದ್ಧಿ ಕಾರ್ಯಗಳನ್ನು … Continued

ಹೆಜಮಾಡಿ : ಸಮುದ್ರ ಸ್ನಾನಕ್ಕೆ ತೆರಳಿದ್ದ ಇಬ್ಬರು ಯುವಕರು ನೀರು ಪಾಲು

ಉಡುಪಿ : ಸಮುದ್ರ ಸ್ನಾನಕ್ಕೆ ತೆರಳಿದ್ದ ಇಬ್ಬರು ಯುವಕರು ನೀರು ಪಾಲಾದ ಘಟನೆ ಉಡುಪಿ ಜಿಲ್ಲೆಯ ಹೆಜಮಾಡಿ ಸಮುದ್ರ ತೀರದಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ. ಮೂವರು ಹೆಜಮಾಡಿ ಸಮುದ್ರಕ್ಕೆ ಸ್ನಾನಕ್ಕೆಂದು ತೆರಳಿದ್ದರು ಎನ್ನಲಾಗಿದೆ. ಈ ವೇಳೆ ಸಮುದ್ರದಲೆಗಳ ಸೆಳೆತಕ್ಕೆ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಆ ಪೈಕಿ ನಾಲ್ವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಇಬ್ಬರನ್ನು ರಕ್ಷಣೆ ಮಾಡಲು … Continued