ವೀಡಿಯೊ : ಸಾರಾಯಿ ಕುಡಿಯಲು ಹಣ ನೀಡದ್ದಕ್ಕೆ ವಿದ್ಯುತ್ ಕಂಬ ಏರಿ ‘ಹೈ ಟೆನ್ಷನ್ ವೈರ್’ ಮೇಲೆ ಮಲಗಿದ ಭೂಪ….!

ಅಮರಾವತಿ: ಯುವಕನೋರ್ವ ತನ್ನ ತಾಯಿ ಸಾರಾಯಿ ಕುಡಿಯಲು ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಮನೆ ಬಳಿ ಇದ್ದ ಹೈ ಟೆನ್ಷನ್ ವೈರ್ ಮೇಲೆ ಮಲಗಿರುವ ಅಘಾತಕಾರಿ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆಂಧ್ರ ಪ್ರದೇಶದ ಪಾರ್ವತಿಪುರಂ ಮಾನ್ಯಂ ಜಿಲ್ಲೆಯ ಎಂ ಸಿಂಗಾಪುರಂ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಕುಡಿದ ಮತ್ತಿನ್ನಲ್ಲಿದ್ದ ಯುವಕ … Continued

ಫೇಸ್‌ಬುಕ್‌ ಪ್ರೇಮಿಯನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ಅಕ್ರಮವಾಗಿ ಪ್ರವೇಶಿಸಿ ಸಿಕ್ಕಿಬಿದ್ದ ಉತ್ತರ ಪ್ರದೇಶದ ವ್ಯಕ್ತಿ…!

ನವದೆಹಲಿ : ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ 30 ವರ್ಷದ ವ್ಯಕ್ತಿಯೊಬ್ಬನನ್ನು ಅಕ್ರಮವಾಗಿ ಗಡಿ ದಾಟಿದ್ದಕ್ಕಾಗಿ ಪಾಕಿಸ್ತಾನದಲ್ಲಿ ಬಂಧಿಸಲಾಗಿದೆ. ಫೇಸ್‌ಬುಕ್‌ನಲ್ಲಿ ಸ್ನೇಹ ಬೆಳೆಸಿದ ನಂತರ ತಾನು ಪ್ರೀತಿಸುತ್ತಿದ್ದ ಮಹಿಳೆಯನ್ನು ಭೇಟಿಯಾಗಲು ಗಡಿ ದಾಟಿದ್ದಾಗಿ ವ್ಯಕ್ತಿ ಹೇಳಿದ್ದಾನೆ ಎಂದು ಪಾಕಿಸ್ತಾನದ ಪೊಲೀಸರು ಹೇಳಿದ್ದಾರೆ. ಪಾಕಿಸ್ತಾನದ ಪಂಜಾಬ್ ಪೊಲೀಸರು ಮಂಡಿ ಬಹೌದ್ದೀನ್ ನಗರದಲ್ಲಿ ಬಂಧಿಸಿರುವ ಅಲಿಗಢದ ವ್ಯಕ್ತಿಯನ್ನು ನಾಗ್ಲಾ … Continued

ಹೊಸ ವರ್ಷಕ್ಕೆ ಸರ್ಕಾರದಿಂದ 62 ಐಪಿಎಸ್‌ ಅಧಿಕಾರಿಗಳಿಗೆ ಬಡ್ತಿ

ಬೆಂಗಳೂರು: ರಾಜ್ಯ ಸರ್ಕಾರ (Karnataka Government) ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕೆಲ ಐಪಿಎಸ್ ಅಧಿಕಾರಿಗಳಿಗೆ ಮತ್ತು 50 ಎಸ್​ಪಿಗಳಿಗೆ ಬಡ್ತಿ ನೀಡಿದೆ. ಇತ್ತೀಚೆಗಷ್ಟೆ ಏಳು ಐಪಿಎಸ್ (IPS transfer)​ ಅಧಿಕಾರಿಗಳ ವರ್ಗಾವಣೆ ಮಾಡಿದ್ದ ಸರ್ಕಾರ ಮತ್ತೆ ಹಲವರಿಗೆ ಬಡ್ತಿ ನೀಡಿ ಮಂಗಳವಾರ ಆದೇಶ ಹೊರಡಿಸಿದೆ. ಹೊಸ ವರ್ಷಕ್ಕೆ ರಾಜ್ಯ ಸರ್ಕಾರ 62 ಐಪಿಎಸ್ ಅಧಿಕಾರಿಗಳಿಗೆ ಬಡ್ತಿ … Continued

ಹೊಸ ವರ್ಷದ ಮೊದಲ ದಿನವೇ ಹೊಟೇಲ್‌ ನಲ್ಲಿ ತಾಯಿ, ನಾಲ್ವರು ಸಹೋದರಿಯರನ್ನು ಕೊಲೆ ಮಾಡಿದ ವ್ಯಕ್ತಿ…!

ಲಕ್ನೋ: ದುರಂತ ಘಟನೆಯೊಂದರಲ್ಲಿ ವ್ಯಕ್ತಿಯೊಬ್ಬ ಹೊಸ ವರ್ಷದ ದಿನವೇ ಲಕ್ನೋದ ಹೋಟೆಲ್‌ನಲ್ಲಿ ತನ್ನ ತಾಯಿ ಮತ್ತು ನಾಲ್ವರು ಸಹೋದರಿಯರನ್ನು ಕೊಂದಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೋಲೀಸರ ಪ್ರಕಾರ, ಅರ್ಷದ್ (24) ಆಗ್ರಾ ಮೂಲದವನಾಗಿದ್ದು, ಕೌಟುಂಬಿಕ ಕಲಹದ ಕಾರಣದಿಂದ ಹೀಗೆ ಮಾಡಿರುವುದಾಗಿ ಪ್ರಾಥಮಿಕ ವಿಚಾರಣೆಯ ವೇಳೆ ತಿಳಿದುಬಂದಿದೆ. ಮೃತರನ್ನು ಅರ್ಷದ್‌ ಸಹೋದರಿಯರಾದ ಅಲಿಯಾ (9), … Continued

ವೀಡಿಯೊ : ಕಡಲತೀರದಲ್ಲಿ ಸಿಲುಕಿಕೊಂಡಿದ್ದ ಐಷಾರಾಮಿ ಸ್ಪೋರ್ಟ್ಸ್ ಫೆರಾರಿ ಕಾರನ್ನು ಹೊರಕ್ಕೆ ಎಳೆಯಲು ಎತ್ತಿನ ಗಾಡಿಯೇ ಬೇಕಾಯ್ತು..!

ಮುಂಬೈ: ರೇವದಂಡ ಕಡಲತೀರದಲ್ಲಿ ಫೆರಾರಿ ಕಾರನ್ನು ಚಲಾಯಿಸಿ ಪ್ರವಾಸಿಗರ ಜೀವಕ್ಕೆ ಅಪಾಯ ತಂದಿರುವ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ. ಫೆರಾರಿ ಮರಳಿನಲ್ಲಿ ಸಿಲುಕಿದ ನಂತರ ಎತ್ತಿನ ಬಂಡಿ ಅದನ್ನು ಹೊರಕ್ಕೆ ಎಳೆದುಕೊಂಡು ಹೋಗುವ ವೀಡಿಯೊ ವೈರಲ್ ಆದ ನಂತರ ರಾಯಗಢ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ಡಿಸೆಂಬರ್ 28ರಂದು, ಬೆಳಿಗ್ಗೆ ಫೆರಾರಿ ನೋಂದಣಿ ಸಂಖ್ಯೆ … Continued

ಭವಿಷ್ಯ ನಿಧಿ ವಂಚನೆ ಪ್ರಕರಣ : ರಾಬಿನ್‌ ಉತ್ತಪ್ಪಗೆ ರಿಲೀಫ್‌ ನೀಡಿದ ಹೈಕೋರ್ಟ್‌

ಬೆಂಗಳೂರು : ತಾನು ಸಹ ಪಾಲುದಾರನಾಗಿರುವ ಕಂಪನಿಯಲ್ಲಿನ ಸಿಬ್ಬಂದಿಗೆ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್‌) ಹಣ ಪಾವತಿ ಮಾಡದೆ ವಂಚಿಸಿದ ಆರೋಪದ ಮೇಲೆ ಭಾರತದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ವಿರುದ್ಧ ಹೊರಡಿಸಲಾಗಿದ್ದ ವಾರೆಂಟ್‌ಗೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ. ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತರು ಹೊರಡಿಸಿರುವ ವಸೂಲಿ (ರಿಕವರಿ) ನೋಟಿಸ್ ಮತ್ತು ಬಂಧನ ವಾರೆಂಟ್ ಪ್ರಶ್ನಿಸಿ … Continued

ಮಗು, ಗರ್ಭಿಣಿ ಸಾವು: ಮನನೊಂದು ಪತಿ ಆತ್ಮಹತ್ಯೆಗೆ ಯತ್ನ

ಬೆಳಗಾವಿ : ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕೆಎಂಸಿಆರ್‌ಐ ಆಸ್ಪತ್ರೆಗೆ ದಾಖಲಾಗಿದ್ದ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಗರ್ಭಿಣಿ ಚಿಕಿತ್ಸೆ ಫಲಿಸದೆ ಮಂಗಳವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ. ರಾಧಿಕಾ ಮಲ್ಲೇಶ ಗಡ್ಡಿಹೊಳಿ (19) ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ. ಪತ್ನಿಯ ಸಾವಿನ ಸುದ್ದಿ ತಿಳಿದು ವಿಷ ಸೇವಿಸಿ ಪತಿಯೂ ಆತ್ಮಹತ್ಯೆಗೆ ಯತ್ನಸಿರುವ ಘಟನೆ ನಡೆದಿದೆ. ಮಲ್ಲೇಶ ​(25) ಆತ್ಮಹತ್ಯೆಗೆ ಯತ್ನಿಸಿದ … Continued

ಮುಂಡಗೋಡ | ಹಾವು ಕಡಿದು 5 ವರ್ಷದ ಅಂಗನವಾಡಿ ಬಾಲಕಿ ಸಾವು

ಮುಂಡಗೋಡ: ಹಾವು ಕಡಿದು ಅಂಗನವಾಡಿ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ  ಪಟ್ಟಣದಲ್ಲಿ ಮಂಗಳವಾರ ನಡೆದಿದೆ ಎಂದು ವರದಿಯಾಗಿದೆ. ಮೃತ ಬಾಲಕಿಯನ್ನು ಮಯೂರಿ ಸುರೇಶ ಕುಂಬಳಪ್ಪನವರ (5) ಎಂದು ಗುರುತಿಸಲಾಗಿದೆ. ಮಯೂರಿ ಎಂದಿನಂತೆ ಅಂಗನವಾಡಿಗೆ ಹೋಗಿದ್ದ ವೇಳೆ ಮೂತ್ರ ವಿಸರ್ಜನೆಗೆಂದು ಅಂಗನವಾಡಿಯ ಹಿಂಬದಿ ತೆರಳಿದಾಗ ಹಾವು ಕಡಿದಿದೆ. ಬಾಲಕಿ ತಕ್ಷಣ, ಕಾಲಿಗೆ ಹಾವು … Continued

ಹೊಸ ವರ್ಷದ ಪಾರ್ಟಿಗೆ ಮದ್ಯ ಕದಿಯಲು ಬಾರ್‌ ಗೆ ಹೊಕ್ಕಿದ ಕಳ್ಳ ; ಕಂಠಪೂರ್ತಿ ಕುಡಿದು ಅಲ್ಲಿಯೇ ಮಲಗಿ ಸಿಕ್ಕಿಬಿದ್ದ…!

ಹೈದರಾಬಾದ್: ತೆಲಂಗಾಣದ(Telangana) ಮೇದಕ್‌ನಲ್ಲಿ ಹೊಸ ವರ್ಷದ ಆಚರಣೆಗೆಂದು(New Year) ಮದ್ಯ ಕದಿಯಲು ಯತ್ನಿಸಿದ ಐನಾತಿ ಕಳ್ಳ ಕಂಠಪೂರ್ತಿ ಕುಡಿದು ಅಲ್ಲೇ ಮಲಗಿದ ಘಟನೆ ವರದಿಯಾಗಿದೆ. ಮದ್ಯವನ್ನು ಅಲ್ಲಿಯೇ ಕಂಠಪೂರ್ತಿ ಕುಡಿದು ಅಮಲೇರಿ ಅಂಗಡಿಯಲ್ಲೇ ಮಲಗಿದ್ದಾನೆ. ಬೆಳಿಗ್ಗೆ ಅಂಗಡಿ ಮಾಲೀಕ ಬಾಗಿಲು ತೆಗೆದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ಮಾಲೀಕ ತಕ್ಷಣವೇ ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ಆತನನ್ನು … Continued

ಮುಂಬೈ-ನಾಗ್ಪುರ ಹೆದ್ದಾರಿಯಲ್ಲಿ ಬಿದ್ದ ಕಬ್ಬಿಣದ ಬೋರ್ಡ್ ಮೇಲೆ ಹಾದುಹೋದ ನಂತರ 50 ಕ್ಕೂ ಹೆಚ್ಚು ವಾಹನಗಳು ಪಂಕ್ಚರ್…!

ಮುಂಬೈ : ಮುಂಬೈ-ನಾಗ್ಪುರ ಸಮೃದ್ಧಿ ಹೆದ್ದಾರಿಯಲ್ಲಿ ರಸ್ತೆ ಮೇಲೆ ಬಿದ್ದ ಕಬ್ಬಿಣದ ಬೋರ್ಡ್ ಮೇಲೆ ಹಾದುಹೋದ ನಂತರ 50 ಕ್ಕೂ ಹೆಚ್ಚು ವಾಹನಗಳು ಪಂಕ್ಚರ್ ಆದ ಘಟನೆ ನಡೆದಿದ್ದು, ಇದರಿಂದ ಹೆದ್ದಾರಿಯಲ್ಲಿ ಸುದೀರ್ಘ ಟ್ರಾಫಿಕ್ ಜಾಮ್ ಉಂಟಾಗಿತ್ತು ಎಂದು ವರದಿಯಾಗಿದೆ. ವರದಿಯೊಂದರ ಪ್ರಕಾರ, ಡಿಸೆಂಬರ್ 29 ರಂದು ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ … Continued