ನಿಜ್ಜರ್ ಹತ್ಯೆ ಪ್ರಕರಣ: ವಾಷಿಂಗ್ಟನ್ ಪೋಸ್ಟ್‌ಗೆ ಭಾರತದ ವಿರುದ್ಧ ಮಾಹಿತಿ ಸೋರಿಕೆ ಮಾಡಿದ್ದನ್ನು ಒಪ್ಪಿಕೊಂಡ ಕೆನಡಾದ ಅಧಿಕಾರಿ

ನವದೆಹಲಿ: ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯ ತನಿಖೆಯು ಕೆನಡಾದಲ್ಲಿನ “ಹತ್ಯೆಗಳು ಮತ್ತು ಹಿಂಸಾತ್ಮಕ ಕೃತ್ಯಗಳಲ್ಲಿ ಭಾರತೀಯ ಏಜೆಂಟ್‌ಗಳ ನಡುವಿನ ಸಂಪರ್ಕವನ್ನು ಬಹಿರಂಗಪಡಿಸಿದೆ ಎಂದು ಕೆನಡಾದ ಪೊಲೀಸರು ಸಾರ್ವಜನಿಕವಾಗಿ ಆರೋಪಿಸುವ ಮುನ್ನವೇ ಜಸ್ಟಿನ್ ಟ್ರುಡೊ ನೇತೃತ್ವದ ಸರ್ಕಾರದ ಇಬ್ಬರು ಹಿರಿಯ ಅಧಿಕಾರಿಗಳು ಭಾರತದ ವಿರುದ್ಧ ಗುಪ್ತಚರ ಮತ್ತು ಸೂಕ್ಷ್ಮ ಮಾಹಿತಿಯನ್ನು ವಾಷಿಂಗ್ಟನ್ ಪೋಸ್ಟ್‌ಗೆ ಸೋರಿಕೆ … Continued

ದೀಪಾವಳಿ; ಕಾರವಾರ-ಬೆಂಗಳೂರು ವಿಶೇಷ ರೈಲು

ಬೆಂಗಳೂರು : ದೀಪಾವಳಿ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ಅಕ್ಟೋಬರ್ 30ರಂದು ಬೆಂಗಳೂರು- ಕಾರವಾರ ವಿಶೇಷ ರೈಲು ಸಂಚಾರವನ್ನು ಘೋಷಣೆ ಮಾಡಿದ್ದ ರೈಲ್ವೆ ಇದೀಗ ನವೆಂಬರ್ 3 ರಂದು ಕಾರವಾರದಿಂದ ಇನ್ನೊಂದು ವಿಶೇಷ ರೈಲು ಬಿಡಲಿದೆ. ನವೆಂಬರ್ 3 ರಂದು ಕಾರವಾರದಿಂದ ರೈಲು ಮಧ್ಯಾಹ್ನ 12ಕ್ಕೆ ಹೊರಟು ಮಾರನೇ ದಿನ ಬೆಳಗ್ಗೆ ನಾಲ್ಕು ಗಂಟೆಗೆ ಬೆಂಗಳೂರು ತಲುಪಲಿದೆ. … Continued

15 ವರ್ಷಗಳ ಕಾನೂನು ಹೋರಾಟದಲ್ಲಿ ದಂಪತಿಗೆ ಜಯ ; ಗೂಗಲ್‌ ಗೆ 26 ಸಾವಿರ ಕೋಟಿ ರೂ. ದಂಡ…!

ಟೆಕ್ ದೈತ್ಯ ಗೂಗಲ್ ವಿರುದ್ಧದ 15 ವರ್ಷಗಳ ಸುದೀರ್ಘ ಕಾನೂನು ಹೋರಾಟದಲ್ಲಿ ಉದ್ಯಮಿಗಳಾದ ಶಿವೌನ್ ರಾಫ್ ಮತ್ತು ಆಡಂ ರಾಫ್ ದಂಪತಿ ಗೆದ್ದಿದ್ದಾರೆ. ಯುರೋಪಿಯನ್ ಕೋರ್ಟ್ ಆಫ್ ಜಸ್ಟಿಸ್ (ECJ) ಎತ್ತಿಹಿಡಿದ ತೀರ್ಪಿನ ಪ್ರಕಾರ, ಗೂಗಲ್‌ (Google) ಈಗ € 2.4 ಶತಕೋಟಿ ( ಸುಮಾರು 26,000 ಕೋಟಿ ರೂಪಾಯಿ) ಮೌಲ್ಯದ ದಂಡವನ್ನು ಪಾವತಿಸಬೇಕಾಗುತ್ತದೆ. ಬ್ರಿಟನ್ನಿನ … Continued

ಸಿಕ್ಕಿಂ ವಿಧಾನಸಭೆಯಲ್ಲಿ ಈಗ ವಿಪಕ್ಷಗಳ ಒಬ್ಬ ಶಾಸಕನೂ ಇಲ್ಲ…!

ಸಿಕ್ಕಿಂನಲ್ಲಿ ಎರಡು ವಿಧಾನಸಭೆ ಉಪಚುನಾವಣೆ ಸ್ಥಾನಗಳಿಗೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ (SDF) ನ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಹಿಂತೆಗೆದುಕೊಳ್ಳುವುದರೊಂದಿಗೆ ಸಿಕ್ಕಿಂ ವಿಧಾನಸಭೆಯಲ್ಲಿ ಈಗ ವಿಪಕ್ಷಗಳೇ ಇಲ್ಲದಂತಾಗಲಿದೆ. ಆಡಳಿತಾರೂಢ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾದ (SKM) ಅಭ್ಯರ್ಥಿಗಳು ಈಗ ಈ ಕ್ಷೇತ್ರಗಳಲ್ಲಿ ಅವಿರೋಧವಾಗಿ ಆಯ್ಕೆಯಾಗಲಿದ್ದು, ಪಕ್ಷವು ವಿಧಾನಸಭೆಯ ಒಟ್ಟು 32ಕ್ಕೆ 32 ಶಾಸಕರನ್ನು ಹೊಂದಲಿದೆ. … Continued

ಮಗನ ಸಾವಿನ ಬಗ್ಗೆ ತಿಳಿಯದೆ ಶವದೊಂದಿಗೆ 4 ದಿನ ಇದ್ದ ದೃಷ್ಟಿ ವಿಕಲಚೇತನ ವೃದ್ಧ ದಂಪತಿ…!

ಹೈದರಾಬಾದ್: 30ರ ಹರೆಯದ ಮಗನ ಶವದ ಜತೆ ವಯೋವೃದ್ಧ, ದೃಷ್ಟಿ ವಿಕಲಚೇತನ ದಂಪತಿ ನಾಲ್ಕು ದಿನಗಳ ಕಾಲ ಇದ್ದಾರೆ. ಅವರಿಗೆ ಆತ ಸತ್ತಿದ್ದಾನೆ ಎಂಬುದೇ ಅವರಿಗೆ ಗೊತ್ತಾಗಿಲ್ಲ. ಹೈದರಾಬಾದ್‌ನ ಬ್ಲೈಂಡ್ಸ್ ಕಾಲೋನಿಯಲ್ಲಿರುವ ದಂಪತಿಯ ಅಕ್ಕಪಕ್ಕದ ಮನೆಯವರು ಇವರ ಮನೆಯಿಂದ ದುರ್ವಾಸನೆ ಹೊರಹೊಮ್ಮುವುದನ್ನು ಗಮನಿಸಿ ಸೋಮವಾರ ಪೊಲೀಸರಿಗೆ ಕರೆ ಮಾಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. … Continued

ಹರಿಯಾಣ ಚುನಾವಣೆ : ನಿಮ್ಮ ನಿರಾಧಾರ ಆರೋಪಗಳು ಅರಾಜಕತೆ ಸೃಷ್ಟಿಸಬಹುದು; ಕಾಂಗ್ರೆಸ್ಸಿಗೆ ಚುನಾವಣಾ ಆಯೋಗ ತರಾಟೆ, ಆರೋಪಕ್ಕೆ 1,642 ಪುಟಗಳ ಉತ್ತರ…

ನವದೆಹಲಿ : ಇತ್ತೀಚೆಗಷ್ಟೇ ಮುಕ್ತಾಯಗೊಂಡ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಮಾಡಿದ “ಅಕ್ರಮ”ಗಳ ಆರೋಪಗಳನ್ನು “ಆಧಾರರಹಿತ” ಎಂದು ಭಾರತೀಯ ಚುನಾವಣಾ ಆಯೋಗ (ಇಸಿಐ) ಮಂಗಳವಾರ ತಿರಸ್ಕರಿಸಿದೆ. ಹಾಗೂ ತಮಗೆ ಅನುಕೂಲಕರವಲ್ಲದ ಚುನಾವಣಾ ಫಲಿತಾಂಶಗಳು ಬಂದಾಗ ಅನುಮಾನಗಳ ಹೊಗೆ ಹೆಚ್ಚಿಸದಂತೆ ಪಕ್ಷಕ್ಕೆ ಎಚ್ಚರಿಕೆ ನೀಡಿದೆ. ಹರಿಯಾಣ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಹಲವು ಆರೋಪಗಳನ್ನು ಮಾಡಿತ್ತು. ಇವಿಎಂ … Continued

ವಕ್ಫ್ ಆಸ್ತಿ ವಿವಾದ | ಯಾವ ರೈತರನ್ನೂ ಒಕ್ಕಲೆಬ್ಬಿಸುವುದಿಲ್ಲ : ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಯಾವುದೇ ರೈತರನ್ನು ಅವರ ಜಮೀನುಗಳಿಂದ ಒಕ್ಕಲೆಬ್ಬಿಸುವುದಿಲ್ಲ ಮತ್ತು ಅವರಿಗೆ ನೀಡಲಾದ ನೋಟಿಸ್ ಹಿಂಪಡೆಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಹೇಳಿದ್ದಾರೆ. ವಿಜಯಪುರ, ಯಾದಗಿರಿ ಮತ್ತು ಧಾರವಾಡ ಜಿಲ್ಲೆಯ ಕೆಲವು ರೈತರಿಗೆ ಅವರ ಆಸ್ತಿ ವಕ್ಫ್ ಆಸ್ತಿ ಎಂದು ನೋಟಿಸ್ ನೀಡಿರುವ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, “ಯಾವುದೇ ರೈತರನ್ನು ಅವರ ಜಮೀನಿನಿಂದ ಹೊರಹಾಕುವುದಿಲ್ಲ. … Continued

ದರ್ಶನಗೆ ವೈದ್ಯಕೀಯ ಜಾಮೀನು : ಬುಧವಾರ ಆದೇಶ ಪ್ರಕಟಿಸಲಿರುವ ಹೈಕೋರ್ಟ್‌

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ನಟ ದರ್ಶನ್‌ ಅವರು ಬೆನ್ನುಹುರಿ ಸಮಸ್ಯೆಗಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ವೈದ್ಯಕೀಯ ಜಾಮೀನು ಕೋರಿರುವ ಮಧ್ಯಂತರ ಅರ್ಜಿಗೆ ಸಂಬಂಧಿಸಿದ ಆದೇಶವನ್ನು ಬುಧವಾರಕ್ಕೆ (ಅಕ್ಟೋಬರ್‌ 30) ಕರ್ನಾಟಕ ಹೈಕೋರ್ಟ್‌ ಕಾಯ್ದಿರಿಸಿದೆ. ಪ್ರಕರಣದಲ್ಲಿ ಜಾಮೀನು ಕೋರಿ ನಟ ದರ್ಶನ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರ … Continued

ಮುಡಾ ಪ್ರಕರಣದಲ್ಲಿ ಬೆಳವಣಿಗೆ: ಮುಡಾ ಮಾಜಿ ಆಯುಕ್ತ ನಟೇಶ ವಶಕ್ಕೆ ಪಡೆದ ಇ.ಡಿ.ಅಧಿಕಾರಿಗಳು…

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (MUDA) ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಾಗಿದ್ದು, ಮುಡಾ ಮಾಜಿ ಆಯುಕ್ತ ನಟೇಶ ಅವರನ್ನು ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ವಿಚಾರಣೆಗೆ ಸಹಕರಿಸದ ಹಿನ್ನೆಲೆಯಲ್ಲಿ ನಟೇಶ ಅವರನ್ನು ಶಾಂತಿನಗರದ ಇ.ಡಿ ಕಚೇರಿಗೆ ಅಧಿಕಾರಿಗಳು ಕರೆದೊಯ್ದಿದ್ದಾರೆ ಎನ್ನಲಾಗಿದೆ. ಮುಡಾದಿಂದ 50:50 … Continued

ವೀಡಿಯೊ..| ನ್ಯಾಯಾಲಯದಲ್ಲಿ ವಿಕೋಪಕ್ಕೆ ತಿರುಗಿದ ನ್ಯಾಯಾಧೀಶರ ಜತೆ ವಕೀಲರ ವಾಗ್ವಾದ ; ಪೊಲೀಸರಿಂದ ಲಾಠಿ ಚಾರ್ಜ್

ಗಾಜಿಯಾಬಾದ್: ಗಾಜಿಯಾಬಾದ್ ಜಿಲ್ಲಾ ನ್ಯಾಯಾಲಯದಲ್ಲಿ ಮಂಗಳವಾರ (ಅ.29) ನ್ಯಾಯಾಧೀಶರು ಮತ್ತು ವಕೀಲರ ನಡುವಿನ ವಾಗ್ವಾದ ಹಿಂಸಾ ರೂಪಕ್ಕೆ ತಿರುಗಿ ಪೊಲೀಸರು ಲಾಠಿ ಚಾರ್ಜ್ ನಡೆಸಿದ ಘಟನೆ ನಡೆದಿದೆ. ನ್ಯಾಯಾಧೀಶರ ಕೊಠಡಿಯಲ್ಲಿ ಹೆಚ್ಚಿನ ವಕೀಲರು ಜಮಾಯಿಸಿ ಗದ್ದಲ ಸೃಷ್ಟಿಸಿದ್ದರಿಂದ ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರನ್ನು ಕರೆಸಬೇಕಾಯಿತು. ಪೊಲೀಸರು ಕುರ್ಚಿಗಳನ್ನು ಎತ್ತಿ ವಕೀಲರನ್ನು ಓಡಿಸುತ್ತಿರುವ ಆಘಾತಕಾರಿ ದೃಶ್ಯಗಳು ಕಂಡುಬಂದಿವೆ. … Continued