ದೀಪಾವಳಿ ಆಚರಿಸುತ್ತಿದ್ದ ವೇಳೆ ಮಗನ ಎದುರೇ ವ್ಯಕ್ತಿ-ಅಪ್ರಾಪ್ತನ ಹತ್ಯೆ ; ಇದರ ʼಮಾಸ್ಟರ್‌ ಮೈಂಡ್‌ʼ ಮತ್ತೊಬ್ಬ ಅಪ್ರಾಪ್ತ-ದೃಶ್ಯ ಸಿಸಿಟಿವಿಯಲ್ಲಿ ಸೆರೆ

ನವದೆಹಲಿ: ದೆಹಲಿಯ ಶಾಹದಾರ ಪ್ರದೇಶದ ಬಿಹಾರಿ ಕಾಲೋನಿಯಲ್ಲಿ ಗುರುವಾರ ದೀಪಾವಳಿ ಆಚರಣೆಯ ಸಂದರ್ಭದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಅಪ್ರಾಪ್ತ ಹುಡುಗ ಸೇರಿದಂತೆ ಇಬ್ಬರು ಸಾವಿಗೀಡಾಗಿದ್ದಾರೆ ಮತ್ತು ಒಬ್ಬ ಹುಡುಗ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಭಯಾನಕ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೃತರನ್ನು ಆಕಾಶ (40) ಮತ್ತು ಆತನ ಸಹೋದರನ ಮಗ ರಿಷಭ (16) ಎಂದು … Continued

ವಕ್ಫ್ ಆಸ್ತಿ ರಾಷ್ಟ್ರೀಕರಣ ಮಾಡಿ ; ಪ್ರಧಾನಿ ಮೋದಿಗೆ ಪತ್ರ ಬರೆದ ಯತ್ನಾಳ

ಬೆಂಗಳೂರು: ವಕ್ಫ್ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸಲು ಒತ್ತಾಯಿಸಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ‘ವಕ್ಫ್ ಮಂಡಳಿಯು ದೇಶದಾದ್ಯಂತ ರೈತರು, ಭೂಮಾಲೀಕರು, ದೇವಸ್ಥಾನಗಳು, ಟ್ರಸ್ಟ್‌ಗಳು ಮತ್ತು ಮಠಗಳ ಜಮೀನುಗಳ ಮೇಲೆ ಹಕ್ಕು ಸಾಧಿಸುವ ಅನಿಯಂತ್ರಿತ, ಸ್ಪಷ್ಟ … Continued

ಗೂಗಲ್‌ ಗೆ $20 ಡಿಸಿಲಿಯನ್ ದಂಡ ವಿಧಿಸಿದ ರಷ್ಯಾ ; ಈ ದಂಡದ ಮೊತ್ತ ಹೇಳುವುದೇ ಕಷ್ಟ ; ಯಾಕೆಂದರೆ 2ರ ಮುಂದೆ 34 ಸೊನ್ನೆಗಳು ಬರುತ್ತವೆ…!!

ನವದೆಹಲಿ : ರಷ್ಯಾದ ನ್ಯಾಯಾಲಯವೊಂದು ಟೆಕ್‌ ದೈತ್ಯ ಗೂಗಲ್‌ ಕಂಪನಿಗೆ ದಿಗ್ಭ್ರಮೆಗೊಳಿಸುವ $20 ಡೆಸಿಲಿಯನ್ ದಂಡ ವಿಧಿಸಿದೆ. ಇದು ಈವರೆಗೆ ವಿಧಿಸಲಾದ ಅತಿದೊಡ್ಡ ಆರ್ಥಿಕ ದಂಡ ಎಂದು ಪರಿಗಣಿಸಲಾಗಿದೆ. 20 ಡೆಸಿಲಿಯನ್ ಅಂದರೆ 2 ನಂತರ 34 ಸೊನ್ನೆಗಳು ಬರುತ್ತವೆ. ರಷ್ಯಾದ ಉಕ್ರೇನ್‌ನ ಆಕ್ರಮಣಕ್ಕೆ ಪ್ರತಿಕ್ರಿಯೆಯಾಗಿ ರಷ್ಯಾದ ಸರ್ಕಾರಿ ಮಾಧ್ಯಮ ಚಾನೆಲ್‌ಗಳನ್ನು ನಿರ್ಬಂಧಿಸುವ ನಿರ್ಧಾರ ತೆಗೆದುಕೊಂಡ … Continued

ಪ್ರಧಾನಿಯವರ ಆರ್ಥಿಕ ಸಲಹಾ ಮಂಡಳಿ ಅಧ್ಯಕ್ಷ ಬಿಬೇಕ ದೆಬ್ರಾಯ್ ನಿಧನ

ನವದೆಹಲಿ: ಅರ್ಥಶಾಸ್ತ್ರಜ್ಞ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ಬಿಬೇಕ ದೆಬ್ರಾಯ್‌ ಅವರು ಶುಕ್ರವಾರ (ನವೆಂಬರ್‌ 1) ತಮ್ಮ 69 ನೇ ವಯಸ್ಸಿನಲ್ಲಿ ನಿಧನರಾದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದ ದೆಬ್ರಾಯ್‌ ಅವರು ಈ ಹಿಂದೆ ಪುಣೆಯ ಗೋಖಲೆ ಇನ್‌ಸ್ಟಿಟ್ಯೂಟ್ ಆಫ್ ಪಾಲಿಟಿಕ್ಸ್ ಅಂಡ್ ಎಕನಾಮಿಕ್ಸ್ (ಜಿಪಿಇ) ವಿಶ್ವ ವಿದ್ಯಾಲಯದಲ್ಲಿ ಕುಲಪತಿಯಾಗಿ … Continued

ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಹೆಚ್ಚಳ…

ನವದೆಹಲಿ : ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ದರವನ್ನು ನವೆಂಬರ್ 1 ರಿಂದ 62 ರೂ.ಗಳಷ್ಟು ಹೆಚ್ಚಿಸಲಾಗಿದೆ. ದೆಹಲಿಯಲ್ಲಿ ಈಗ ವಾಣಿಜ್ಯ ಅನಿಲ ಸಿಲಿಂಡರ್‌ ಬೆಲೆ 1,740 ರೂ.ನಿಂದ 1,802 ರೂ.ಗೆ ಏರಿದೆ. ಪರಿಷ್ಕೃತ ದರ ಇಂದಿನಿಂದಲೇ ಜಾರಿಗೆ ಬಂದಿದೆ. ದೆಹಲಿಯ ಹೊರತಾಗಿ, ಬೆಂಗಳೂರಿನಲ್ಲಿ 1,879 ರೂ., ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ … Continued

ವೀಡಿಯೊ..| ದೀಪಾವಳಿಗಾಗಿ ಒಯ್ಯುತ್ತಿದ್ದ ʼಈರುಳ್ಳಿ ಬಾಂಬ್’ ಪಟಾಕಿ ಸ್ಫೋಟ ; ಒಬ್ಬರು ಸಾವು, 6 ಮಂದಿಗೆ ಗಾಯ

ಹೈದರಾಬಾದ್ : ಆಂಧ್ರಪ್ರದೇಶದ ಎಲೂರು ಜಿಲ್ಲೆಯಲ್ಲಿ ಪಟಾಕಿ ಸಿಡಿಸಿದ ಅವಘಡದಲ್ಲಿ ಒಬ್ಬರು ಮೃತಪಟ್ಟು, ಆರು ಮಂದಿ ಗಾಯಗೊಂಡಿದ್ದಾರೆ. ದ್ವಿಚಕ್ರ ವಾಹನದಲ್ಲಿ ವ್ಯಕ್ತಿಯೊಬ್ಬರು ದೀಪಾವಳಿ ಹಬ್ಬದ ವಿಶೇಷ ಪಟಾಕಿ-ಈರುಳ್ಳಿ ಬಾಂಬ್‌ಗಳನ್ನು ಸಾಗಿಸುತ್ತಿದ್ದಾಗ ಸ್ಥಳೀಯ ದೇವಸ್ಥಾನದ ಬಳಿಯ ಗುಂಡಿಗೆ ಬೈಕ್ ಡಿಕ್ಕಿ ಹೊಡೆದು ಆ ಈರುಳ್ಳಿ ಬಾಂಬ್‌ಗಳು ಬಿದ್ದು ಸ್ಫೋಟಗೊಂಡಿವೆ. ವರದಿಗಳು ದೀಪಾವಳಿಯ ‘ಈರುಳ್ಳಿ ಬಾಂಬ್‌’ಗಳ ಸ್ಫೋಟದ ಪರಿಣಾಮವು … Continued

‘ಸುವರ್ಣ ಮಹೋತ್ಸವ’ ಪ್ರಶಸ್ತಿ ಮೊತ್ತ 1 ಲಕ್ಷಕ್ಕೆ ಏರಿಕೆ : ಸಚಿವ ಶಿವರಾಜ ತಂಗಡಗಿ

ಬೆಂಗಳೂರು: ಸುವರ್ಣ ಮಹೋತ್ಸವ ಪ್ರಶಸ್ತಿಯ ಮೊತ್ತವನ್ನು 50 ಸಾವಿರ ರೂ.ಗಳಿಂದ 1 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರು ಗುರುವಾರ ಪ್ರಕಟಿಸಿದ್ದಾರೆ. ಕರ್ನಾಟಕ ಸಂಭ್ರಮ – 50 ಸುವರ್ಣ ಮಹೋತ್ಸವ ಆಚರಣೆಯ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 50 ಮಹಿಳಾ ಸಾಧಕಿಯರಿಗೆ ಮತ್ತು 50 … Continued

ಐಪಿಎಲ್‌ 2025 | ಕ್ಲಾಸೆನ್​ಗೆ 23 ಕೋಟಿ, ಕೊಹ್ಲಿಗೆ 21 ಕೋಟಿ ; ಮೆಗಾ ಹರಾಜಿನ ಮೊದಲು ಬೃಹತ್‌ ಮೊತ್ತಕ್ಕೆ ಆಟಗಾರರನ್ನು ಉಳಿಸಿಕೊಂಡ ತಂಡಗಳು ; ಸಂಪೂರ್ಣ ಪಟ್ಟಿ…

ನವದೆಹಲಿ: 10 ಐಪಿಎಲ್ ಫ್ರಾಂಚೈಸಿಗಳು ಮುಂದಿನ ತಿಂಗಳು ನಡೆಯಲಿರುವ ಮೆಗಾ ಹರಾಜಿಗಿಂತ ಮೊದಲು ತಾವು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಬಹಿರಂಗಪಡಿಸಿವೆ. ಐಪಿಎಲ್ ಆಡಳಿತ ಮಂಡಳಿಯು ಪ್ರತಿ ತಂಡಕ್ಕೆ ಆರು ಆಟಗಾರರನ್ನು (ಧಾರಣ ಅಥವಾ ರೈಟ್ ಟು ಮ್ಯಾಚ್ ಆಯ್ಕೆಯ ಮೂಲಕ) ಉಳಿಸಿಕೊಳ್ಳುವ ಆಯ್ಕೆಯನ್ನು ನೀಡಿತು. ಈ ಆರರಲ್ಲಿ, ಹೆಚ್ಚೆಂದರೆ ಐವರು ಕ್ಯಾಪ್ಡ್ ಆಟಗಾರರು (ಭಾರತೀಯ ಅಥವಾ … Continued

ನಾಗರ ಹಾವನ್ನು ಸಾಯಿಸಿದ ಯುವಕ…ಒಂದು ತಾಸಿನ ಬಳಿಕ ಈತನ ಪ್ರಾಣವನ್ನೇ ತೆಗೆದ ನಾಗರ ಹಾವು…!

ಬರೇಲಿ : ಉತ್ತರ ಪ್ರದೇಶದ ಬರೇಲಿಯ ಕ್ಯಾಂಟ್ ಪೊಲೀಸ್ ಠಾಣೆ ವ್ಯಾಪ್ತಿಯ ಕ್ಯಾರಾ ಗ್ರಾಮದಲ್ಲಿ ನಡೆದ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದು ಈವರೆಗೆ ಚಲನಚಿತ್ರಗಳಲ್ಲಿ ಮಾತ್ರ ನೋಡುತ್ತಿದ್ದ ಕಥೆಗಳಂತೆಯೇ ಇದೆ. ಈ ಪ್ರಕರಣ ಬೆಳಕಿಗೆ ಬಂದಾಗ ಜನರಿಗೂ ಇದನ್ನು ನಂಬಲು ಸಾಧ್ಯವಾಗಿಲ್ಲ. ಮಂಗಳವಾರ ಗದ್ದೆಯಲ್ಲಿ ಭತ್ತದ ಕಟಾವು ಮಾಡುತ್ತಿದ್ದ ಯುವಕನೊಬ್ಬ ಅಲ್ಲಿ ಕಂಡಿದ್ದ ಹಾವನ್ನು … Continued

ಬೆಳಗಾವಿ: ಮಾಜಿ ಸಚಿವರ ಮಗನ ಜಮೀನಿಗೂ ವಕ್ಫ್‌ ಕಂಟಕ

ಬೆಳಗಾವಿ: ಜಿಲ್ಲೆಯ ಪ್ರತಿಷ್ಠಿತ ಜೊಲ್ಲೆ ಕುಟುಂಬದ ಮೇಲೆ ಇದೀಗ ವಕ್ಫ್ ಕಾಡಲಾರಂಭಿಸಿದೆ. ನಿಪ್ಪಾಣಿ ಬಿಜೆಪಿ ಶಾಸಕಿ ಹಾಗೂ ಮಾಜಿ ಸಚಿವರು ಆಗಿರುವ ಶಶಿಕಲಾ ಜೊಲ್ಲೆ ಮತ್ತು ಚಿಕ್ಕೋಡಿಯ ಮಾಜಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ದಂಪತಿಯ ಮಗ ಬಸವ ಪ್ರಭು ಜೊಲ್ಲೆ ಹೆಸರಿನಲ್ಲಿರುವ ಜಮೀನು ಈಗ ವಕ್ಫ್ ಹೆಸರಲ್ಲಿ ನೋಂದಣಿಯಾಗಿರುವುದು ಬೆಳಕಿಗೆ ಬಂದಿದೆ. ಜೊತೆಗೆ ಕುಟುಂಬದ … Continued