ವೀಡಿಯೊ…| ಪೆಟ್ರೋಲ್ ತುಂಬುತ್ತಿರುವಾಗಲೇ ಪಂಪ್‌ ನಲ್ಲಿ ಲೈಟರಿನಲ್ಲಿ ಬೆಂಕಿ ಹಚ್ಚಿದ ಕುಡುಕ ; ಭುಗಿಲೆದ್ದ ಬೆಂಕಿ ….!

ಹೈದರಾಬಾದ್: ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಪೆಟ್ರೋಲ್ ಪಂಪ್‌ನಲ್ಲಿ ಲೈಟರ್ ಹಚ್ಚಿ ಬೆಂಕಿ ಹಚ್ಚಿದ ಘಟನೆ ಶನಿವಾರ ಸಂಜೆ ಹೈದರಾಬಾದಿನಲ್ಲಿ ನಡೆದಿದ್ದು, ನಂತರ ಆತನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶನಿವಾರ ಸಂಜೆ 7 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಆರೋಪಿಯನ್ನು ಚಿರನ್ ಎಂದು ಗುರುತಿಸಲಾಗಿದೆ. ಆತ ಕುಡಿದ ಸ್ಥಿತಿಯಲ್ಲಿ ಕೈಯಲ್ಲಿ ಸಿಗರೇಟ್ ಲೈಟರ್‌ ಹಿಡಿದು … Continued

4 ತಿಂಗಳ ಹಿಂದೆ ನಾಪತ್ತೆಯಾದ ಮಹಿಳೆ ಶವವಾಗಿ ಪತ್ತೆ ;ಜಿಲ್ಲಾ ಮ್ಯಾಜಿಸ್ಟ್ರೇಟ್ ಬಂಗಲೆಯ ಬಳಿ ಹೆಣ ಹೂತಿದ್ದ ಕೊಲೆ ಆರೋಪಿ…

ಕಾನ್ಪುರ : ಕಳೆದ ನಾಲ್ಕು ತಿಂಗಳಿಂದ ನಿಗೂಢವಾಗಿ ಕಣ್ಮರೆಯಾಗಿದ್ದ ಮಹಿಳೆಯೊಬ್ಬಳು ಶವವಾಗಿ ಪತ್ತೆಯಾದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಮಹಿಳೆಯನ್ನು ಹತ್ಯೆ ಮಾಡಿ ಕಾನ್ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ (Kanpur District Magistrate) ಬಂಗಲೆಯ ಸಮೀಪವೇ ಅಲ್ಲೇ ಹೂತು ಹಾಕಲಾಗಿತ್ತು. ಈ ಮಹಿಳೆಯನ್ನು ಜಿಮ್‌ ಟ್ರೇನರ್‌ ವಿಮಲ್‌ ಸೋನಿ ಎಂಬಾತ ಬರ್ಬರವಾಗಿ ಕೊಲೆ ಮಾಡಿ ಹೂತು … Continued

2025ಕ್ಕೆ ಜಗತ್ತಿನ ಘಟನೆಗಳ ಬಗ್ಗೆ ಒಂದೇ ತರsಹ ಭವಿಷ್ಯವಾಣಿ ನುಡಿದ ಬಾಬಾ ವಂಗಾ-ನಾಸ್ಟ್ರಾಡಾಮಸ್…!

ಹೆಸರಾಂತ ದಾರ್ಶನಿಕರಾದ ನಾಸ್ಟ್ರಡಾಮಸ್ ಹಾಗೂ ಬಾಬಾ ವಂಗಾ ಅವರು 2025 ರ ವಿಲಕ್ಷಣವಾದ ಒಂದೇ ರೀತಿಯ ಭವಿಷ್ಯವಾಣಿಗಳಿಂದಾಗಿ ಗಮನ ಸೆಳೆಯುತ್ತಿದ್ದಾರೆ. ಈ ಭವಿಷ್ಯಕಾರರು, ತಮ್ಮ ಬೆರಗುಗೊಳಿಸುವ ನಿಖರವಾದ ಮುನ್ಸೂಚನೆಗಳಿಗೆ ಹೆಸರುವಾಸಿಯಾಗಿದ್ದಾರೆ. ಮಾನವರೊಂದಿಗಿನ ಅನ್ಯಲೋಕದ ಸಂಪರ್ಕ, ವ್ಲಾದಿಮಿರ್ ಪುತಿನ್ ಹತ್ಯೆಯ ಯತ್ನ, ಭಯೋತ್ಪಾದಕ ದಾಳಿಗಳು ಸೇರಿದಂತೆ ಹಲವಾರು ಭವಿಷ್ಯವಾಣಿಯನ್ನು ಹೇಳೀದ್ದಾರೆ. ಅತ್ಯಂತ ಆತಂಕಕಾರಿಯಾಗಿ 2025 ರಲ್ಲಿ ಯುರೋಪಿನಲ್ಲಿ … Continued

ಮುಂಬೈ : ಬಾಂದ್ರಾ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತ ; 9 ಮಂದಿಗೆ ಗಾಯ

ಮುಂಬೈ : ಮುಂಬೈನ ಬಾಂದ್ರಾ ರೈಲು ನಿಲ್ದಾಣದ ಒಂದನೇ ಪ್ಲಾಟ್‌ಫಾರ್ಮಿನಲ್ಲಿ ಜನರ ನೂಕುನುಗ್ಗಲಿಂದಾಗಿ ಕಾಲ್ತುಳಿತ ಉಂಟಾಗಿದ್ದು, 9 ಮಂದಿ ಗಾಯಗೊಂಡ ಘಟನೆ ಭಾನುವಾರ ಬೆಳಿಗ್ಗೆ ಸಂಭವಿಸಿದೆ. ಉತ್ತರ ಪ್ರದೇಶದ ಗೋರಖಪುರಕ್ಕೆ ತೆರಳುತ್ತಿದ್ದ ರೈಲನ್ನು ಹತ್ತಲು ಪ್ರಯಾಣಿಕರು ಒಮ್ಮೆಲೆ ನುಗ್ಗಿ ಬಂದಾಗ ಕಾಲ್ತುಳಿತ ಉಂಟಾಗಿದೆ ಎಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಹೇಳಿದೆ. ಗಾಯಗೊಂಡ 9 ಮಂದಿಯ ಪೈಕಿ … Continued

ಡಿಜಿಟಲ್ ಜೂಜಿನಿಂದಾಗಿ ವಿಶ್ವದಾದ್ಯಂತ 8 ಕೋಟಿ ಜನರಿಗೆ ಮಾನಸಿಕ ಸಮಸ್ಯೆ…!

ನವದೆಹಲಿ: ಆನ್‌ಲೈನ್ ಕ್ಯಾಸಿನೊ ಮತ್ತು ಕ್ರೀಡಾ ಬೆಟ್ಟಿಂಗ್ ಮಾರುಕಟ್ಟೆಗಳ ಡಿಜಿಟಲ್ ಕ್ರಾಂತಿಯ ಗಣನೀಯ ವಿಸ್ತರಣೆಯ ಪರಿಣಾಮವಾಗಿ ಪ್ರಪಂಚದಾದ್ಯಂತ ಅಂದಾಜು 8 ಕೋಟಿ ಜನರು ಜೂಜಿಗೆ ಸಂಬಂಧಿಸಿದ ಮಾನಸಿಕ ಅಸ್ವಸ್ಥತೆಗಳಿಂದ ಬಳಲುತ್ತಿದ್ದಾರೆ. ಲ್ಯಾನ್ಸೆಟ್ ಸಾರ್ವಜನಿಕ ಆರೋಗ್ಯ ಆಯೋಗದ ಇತ್ತೀಚಿನ ಅಧ್ಯಯನದ ಪ್ರಕಾರ ಹದಿಹರೆಯದವರು ಹೆಚ್ಚು ಬಾಧಿತರಾಗಿದ್ದಾರೆ. ಆಯೋಗದ ಸಂಶೋಧನೆಯು ಮಕ್ಕಳು ಮತ್ತು ಹದಿಹರೆಯದವರು ಹಿಂದೆಂದೂ ಕೇಳಿರದ ರೀತಿಯಲ್ಲಿ … Continued

ರಾಜಕೀಯ ನಾಯಕನಿಗೆ ಹನಿಟ್ರ್ಯಾಪ್; 20 ಲಕ್ಷ ರೂ. ಪಡೆಯುತ್ತಿದ್ದಾಗ ಮಹಿಳೆ ಅರೆಸ್ಟ್…!

ಬೆಂಗಳೂರು: ರಾಜಕೀಯ ನಾಯಕರೊಬ್ಬರಿಗೆ ಹನಿಟ್ರ್ಯಾಪ್ ಆರೋಪ ಪ್ರಕರಣದಲ್ಲಿ (Honey Trap Case) ಮಹಿಳೆಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಬೆಂಗಳೂರಿನ ಸಿಸಿಬಿ ಪೊಲೀಸರಿಂದ ಮಂಜುಳಾ  ಎಂಬವಳನ್ನು ಬಂಧಿಸಿದ್ದು, ಈಕೆ ನಲಪಾಡ್ ಬ್ರಿಗೇಡ್‌ನ ಕಲಬುರಗಿ ಘಟಕದ ಅಧ್ಯಕ್ಷೆ ಎಂದು ಹೇಳಲಾಗುತ್ತಿದೆ. ರಾಜಕೀಯ ನಾಯಕನೊಂದೊಗೆ ಆರೋಪಿ ಮೊದಲಿಗೆ ಸೆಕ್ಸ್‌ ಚಾಟ್‌ ಮಾಡಿ, ನಂತರ ವಾಟ್ಸ್‌ ಆ್ಯಪ್‌ ವಿಡಿಯೊ ಕಾಲ್‌ನಲ್ಲಿ … Continued

ಯಮುನಾ ನದಿಯಲ್ಲಿ ಮುಳುಗಿ ಪ್ರತಿಭಟಿಸಿದ್ದ ದೆಹಲಿ ಬಿಜೆಪಿ ಅಧ್ಯಕ್ಷ ಈಗ ಆಸ್ಪತ್ರೆಗೆ ದಾಖಲು..!

ನವದೆಹಲಿ: ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಅವರು ಕಲುಷಿತ ಯಮುನಾ ನದಿಯಲ್ಲಿ ಮುಳುಗಿ ಪ್ರತಿಭಟಿಸಿದ್ದ ಕೆಲವೇ ದಿನಗಳಲ್ಲಿ ರಾಮಮನೋಹರ ಲೋಹಿಯಾ(ಆರ್‌ಎಂಎಲ್) ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಲುಷಿತಗೊಂಡಿರುವ ಯಮುನಾ ನದಿಯನ್ನು ಶುಚಿಗೊಳಿಸುವ ಭರವಸೆ ನೀಡಿ ಅಧಿಕಾರಕ್ಕೆ ಬಂದ ವೇಳೆ ಈವರೆಗೂ ಯಮುನಾ ನದಿಯನ್ನು ಶುಚಿಗೊಳಿಸದ ಆಪ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ವೀರೇಂದ್ರ ಸಚದೇವ … Continued

‘ಗಮನ ಸೆಳೆಯಲು ಹೀಗೆ ಮಾಡಿದ್ದೆ’ : ವಿಮಾನಯಾನ ಸಂಸ್ಥೆಗಳಿಗೆ ಬೆದರಿಕೆ ಹಾಕಿದ ನಿರುದ್ಯೋಗಿಯನ್ನು ಬಂಧಿಸಿದ ಪೊಲೀಸರು

ನವದೆಹಲಿ : ದೆಹಲಿಯ 25 ವರ್ಷದ ನಿರುದ್ಯೋಗಿ ವ್ಯಕ್ತಿಯೊಬ್ಬರು ನಕಲಿ ಬಾಂಬ್ ಬೆದರಿಕೆಗಳನ್ನು ಹಾಕಿದ್ದಕ್ಕಾಗಿ ಕಸ್ಟಡಿಗೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಕಳೆದ ವಾರ ವಿಮಾನಯಾನ ಸಂಸ್ಥೆಗಳಿಗೆ ಬಾಂಬ್‌ ಬೆದರಿಕೆಗಳನ್ನು ಹಾಕಿದ ನಂತರ ಇದು ಎರಡನೇ ಬಂಧನವಾಗಿದೆ. ಗಮನ ಸೆಳೆಯಲು ಬೆದರಿಕೆ ಹಾಕಿದ್ದಾಗಿ ವ್ಯಕ್ತಿ ಒಪ್ಪಿಕೊಂಡಿದ್ದಾನೆ ಎಂದು ದೆಹಲಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಅಕ್ಟೋಬರ್ 14ರಿಂದ 275 … Continued

ದೀಪಾವಳಿ..| ಹಸಿರು ಪಟಾಕಿ ಮಾತ್ರ ಮಾರಾಟ, ಪಟಾಕಿ ಸಿಡಿಸಲು 2 ಗಂಟೆ ಮಾತ್ರ ಅವಕಾಶ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ದೀಪಾವಳಿ ಹಬ್ಬದ ವೇಳೆ ಹಸಿರು ಪಟಾಕಿಗೆ ಮಾತ್ರ ಅವಕಾಶ ನೀಡಬೇಕು. ಹಾಗೂ ರಾತ್ರಿ 8 ಗಂಟೆಯಿಂದ 10 ಗಂಟೆ ಒಳಗೆ ಮಾತ್ರ ಪಟಾಕಿ ಹೊಡೆಯಲು ಅವಕಾಶ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ ಸಿಇಒಗಳೊಂದಿಗೆ ಗೃಹಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದ ಅವರು, ಪಟಾಕಿ … Continued

ಅಕ್ರಮ ಅದಿರು ಸಾಗಣೆ ಪ್ರಕರಣ: ಕಾರವಾರ ಕಾಂಗ್ರೆಸ್‌ ಶಾಸಕ ಸತೀಶ ಸೈಲ್‌ ಗೆ 7 ವರ್ಷ ಜೈಲು ಶಿಕ್ಷೆ

ಬೆಂಗಳೂರು : ಬೇಲೆಕೇರಿ ಬಂದರಿನಿಂದ ಅಕ್ರಮವಾಗಿ ಸಾವಿರಾರು ಮೆಟ್ರಿಕ್‌ ಟನ್‌ ಅದಿರು ಸಾಗಣೆ ಮಾಡಿ ರಾಜ್ಯದ ಬೊಕ್ಕಸಕ್ಕೆ ನೂರಾರು ಕೋಟಿ ನಷ್ಟ ಉಂಟು ಮಾಡಿರುವ ಆರು ಕ್ರಿಮಿನಲ್‌ ಪ್ರಕರಣಗಳಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯವು ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ ಸೇರಿ ಏಳು ಮಂದಿಗೆ ಏಳು ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ. ಅಲ್ಲದೆ, ಒಟ್ಟಾರೆ ₹44.65 ಕೋಟಿ … Continued