ಬ್ಲೇಡ್‌ ಹಿಡಿದು ಗ್ಯಾಂಗ್-ರೇಪ್ ಯತ್ನದಿಂದ ಪಾರಾದ ನರ್ಸ್… !

ಪಾಟ್ನಾ: ಕೋಲ್ಕತ್ತಾದಲ್ಲಿ ತರಬೇತಿ ನಿರತ ವೈದ್ಯೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದು, ರಾಷ್ಟ್ರವ್ಯಾಪಿ ಆಕ್ರೋಶ ಮತ್ತು ಪ್ರತಿಭಟನೆಗೆ ಕಾರಣವಾದ ಒಂದು ತಿಂಗಳ ನಂತರ, ಬಿಹಾರದ ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್ ಮೇಲೆ ಸಾಮೂಹಿಕ ಅತ್ಯಾಚಾರದ ಯತ್ನ ನಡೆದಿದೆ ಎಂದು ವರದಿಯಾಗಿದೆ. ಅತ್ಯಾಚಾರಕ್ಕೆ ಯತ್ನಿಸಿದವರಲ್ಲಿ ಒಬ್ಬರು ವೈದ್ಯರಾಗಿದ್ದು, ಅವರು ಸಂಸ್ಥೆಯ ನಿರ್ವಾಹಕರೂ ಆಗಿದ್ದಾರೆ ಎಂದು ಹೇಳಲಾಗಿದೆ. ನರ್ಸ್ ವೈದ್ಯರ … Continued

ಮನೆಯಲ್ಲೇ ಕಾಡುಕೋಣದ ಮಾಂಸ, ಜಿಂಕೆ ಕೊಂಬು ಇರಿಸಿಕೊಂಡಿದ್ದ ಇಬ್ಬರ ಬಂಧನ

ಬೆಳಗಾವಿ: ಖಾನಾಪುರ ತಾಲೂಕಿನ ಗೋಟಗಾಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಜಾಂಬೇಗಾಳಿ ಗ್ರಾಮದ ಮನೆಯಲ್ಲಿ ಅಕ್ರಮವಾಗಿ ಸಂಗ್ರಹ ಮಾಡಿ ಇಟ್ಟುಕೊಂಡಿದ್ದ ಕಾಡುಕೋಣದ ಮಾಂಸ ಮತ್ತು ಜಿಂಕೆಯ ಕೊಂಬುಗಳನ್ನು ಗುರುವಾರ ಅರಣ್ಯ ಇಲಾಖೆಯ ಅಧಿಕಾರಿಗಳು ಪತ್ತೆಹಚ್ಚಿ ಈ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು ಮಹಮ್ಮದ್ ಆಲಿ ಹಲಸಿಕರ ಮತ್ತು ಮೌಲಾಲಿ ಹಲಸಿಕರ … Continued

ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ಅರ್ಜಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ಮುಡಾ 14 ನಿವೇಶನ ಹಂಚಿಕೆ ಮಾಡಿರುವ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಗಾಗಿ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಅಭಿಯೋಜನಾ ಮಂಜೂರಾತಿ ನೀಡಿರುವುದನ್ನು ರದ್ದುಪಡಿಸಲು ಕೋರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಪೂರ್ಣಗೊಳಿಸಿರುವ ಕರ್ನಾಟಕ ಹೈಕೋರ್ಟ್‌ ಗುರುವಾರ ಆದೇಶ ಕಾಯ್ದಿರಿಸಿದೆ. ಅರ್ಜಿ ವಿಲೇವಾರಿಯಾಗುವವರೆಗೆ ಮಧ್ಯಂತರ ಆದೇಶ ಚಾಲ್ತಿಯಲ್ಲಿರಲಿದೆ ಎಂದು ಅದು … Continued

ಚಿಕ್ಕೋಡಿ : ಜೆಸಿಬಿಗೆ ಸಿಲುಕಿ 3 ವರ್ಷದ ಬಾಲಕಿ ಸಾವು

ಬೆಳಗಾವಿ : ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಬ್ಬೂರ ಪಟ್ಟಣದ ಹನುಮಾನ ನಗರದ ತೋಟದ ಹತ್ತಿರ ಜೆಸಿಬಿಗೆ ಸಿಲುಕಿ ಮೂರು ವರ್ಷದ ಬಾಲಕಿ ಮೃತಪಟ್ಟ ಘಟನೆ ನಡೆದಿದೆ ಎಂದು ವರದಿಯಾಗಿದೆ. ಪೈಪಲೈನ್ ಹರಿ ತೆಗಿಯುವಾಗ ಈ ಧಾರುಣ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಮೃತ ಬಾಲಕಿಯನ್ನು ಭೂಮಿಕಾ ರಮೇಶ ಕೂಕನೂರ (3) ಎಂದು ಗುರುತಿಸಲಾಗಿದೆ. ಪಟ್ಟಣ ಪಂಚಾಯತದ … Continued

ಕೋಲ್ಕತ್ತಾ ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣ: ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದ ಮಮತಾ ಬ್ಯಾನರ್ಜಿ…

ಕೋಲ್ಕತ್ತಾ: ಆರ್.​ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದು ಹೇಳಿದ್ದಾರೆ. ನನಗೆ ಹುದ್ದೆಯ ಬಗ್ಗೆ ಕಾಳಜಿ ಇಲ್ಲ. ನ್ಯಾಯ ಖಾತ್ರಿ ಪಡಿಸುವುದಾದರೆ ಹುದ್ದೆಗೆ ರಾಜೀನಾಮೆ ಕೊಡಲು ಸಿದ್ಧ ಎಂದು ಹೇಳಿದ್ದಾರೆ. ಕಳೆದ ತಿಂಗಳು … Continued

ಹಳೆ ಮನೆ ಕೆಡವುತ್ತಿದ್ದಾಗ ಅವಘಡ : ಇಬ್ಬರು ಸಾವು

ಮಂಗಳೂರು: ಜೆಸಿಬಿಯಿಂದ ಹಳೆ ಮನೆ ಕೆಡವುತ್ತಿದ್ದಾಗ ಕಾಂಕ್ರೀಟ್ ಬೀಮ್ ಕುಸಿದು ಬಿದ್ದು ಅಲ್ಲಿಯೇ ಕೆಳಗೆ ನಿಂತು ನೋಡುತ್ತಿದ್ದ ಇಬ್ಬರು ಮೃತಪಟ್ಟ ಘಟನೆ ಮಂಗಳೂರಿನಲ್ಲಿ ಗುರುವಾರ ನಡೆದಿದೆ ಎಂದು ವರದಿಯಾಗಿದೆ. ಮನೆ ಮಾಲೀಕ ಜೇಮ್ಸ್ ಜತ್ತನ್ನ (56) ಹಾಗೂ ಅಡ್ವಿನ್ ಹೆರಾಲ್ಡ್ ಮಾಬೇನ್ (54) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡ ಇವರನ್ನು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ … Continued

ಹಿರಿಯ ಸಿಪಿಐ(ಎಂ) ನಾಯಕ ಸೀತಾರಾಮ ಯೆಚೂರಿ ಇನ್ನಿಲ್ಲ…

ನವದೆಹಲಿ: ದೀರ್ಘಕಾಲದ ಅನಾರೋಗ್ಯದಿಂದ ದೆಹಲಿಯ ಏಮ್ಸ್‌ಗೆ ದಾಖಲಾಗಿದ್ದ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಅವರು ಗುರುವಾರ ನಿಧನರಾಗಿದ್ದಾರೆ. ರಾಜಕೀಯ ತಂತ್ರಜ್ಞ, ಚಿಂತಕ, ಲೇಖಕ ಮತ್ತು ಪಕ್ಷದ ಮುಖವಾಣಿ ಪೀಪಲ್ಸ್ ಡೆಮಾಕ್ರಸಿಯ ಸಂಪಾದಕರಾಗಿದ್ದ ಸೀತಾರಾಮ್ ಯೆಚೂರಿ ಅವರ ನಿದನದಿಂದ ಸಿಪಿಐ(ಎಂ) ತನ್ನ ದೃಢವಾದ ಸ್ತಂಭಗಳಲ್ಲಿ ಒಂದನ್ನು ಕಳೆದುಕೊಂಡಿದೆ. ನ್ಯುಮೋನಿಯಾ ತರಹದ ಎದೆ ಸೋಂಕಿನ ಚಿಕಿತ್ಸೆಗಾಗಿ ಯೆಚೂರಿ … Continued

ಪಿಎಸ್‍ಐ ನೇಮಕಾತಿ ಪರೀಕ್ಷೆ ಸೆ.28ಕ್ಕೆ ಮುಂದೂಡಿಕೆ ; ಡಾ.ಪರಮೇಶ್ವರ

ಬೆಂಗಳೂರು : 402 ಪಿಎಸ್‌‍ಐ ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು (PSI Recruitment Exam) ಸೆ.22ರ ಬದಲಿಗೆ ಸೆ.28ರ ಶನಿವಾರ ನಡೆಸಲು ತೀರ್ಮಾನಿಸಲಾಗಿದೆ ಎಂದು ಗೃಹಸಚಿವ ಜಿ.ಪರಮೇಶ್ವರ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡನೇ ಹಂತದಲ್ಲಿ 402 ಹುದ್ದೆಗಳಿಗೆ ನೇಮಕಾತಿ ಪರೀಕ್ಷೆ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಸೆ.22 ಕ್ಕೆ ಪರೀಕ್ಷೆ ನಡೆಸಲು ದಿನಾಂಕ … Continued

ಅಮೆರಿಕವನ್ನು ಕಂಡುಹಿಡಿದದ್ದು ಕೊಲಂಬಸ್ ಅಲ್ಲ, ಭಾರತದವರು ; ಮಧ್ಯಪ್ರದೇಶ ಉನ್ನತ ಶಿಕ್ಷಣ ಸಚಿವ

ಭೋಪಾಲ್‌ : ಭಾರತದ ನಾವಿಕರೊಬ್ಬರು ಅಮೆರಿಕವನ್ನು ಕಂಡುಹಿಡಿದರು, ಬೀಜಿಂಗ್ ನಗರವನ್ನು ಭಾರತೀಯ ವಾಸ್ತುಶಿಲ್ಪಿ ಸಹಾಯದಿಂದ ವಿನ್ಯಾಸಗೊಳಿಸಲಾಗಿದೆ ಮತ್ತು ಋಗ್ವೇದವನ್ನು ಬರೆದವರು ಭೂಮಿಯು ಸೂರ್ಯನ ಸುತ್ತ ಸುತ್ತುತ್ತದೆ ಎಂದು ಮೊದಲು ಊಹಿಸಿದ್ದರು ಎಂದು ಮಧ್ಯಪ್ರದೇಶದ ಉನ್ನತ ಶಿಕ್ಷಣ ಸಚಿವ ಇಂದರ್ ಸಿಂಗ್ ಪರ್ಮಾರ್ ಹೇಳಿದ್ದಾರೆ. ಬರ್ಕತುಲ್ಲಾ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲ ಮಂಗುಭಾಯ್ ಸಿ. ಪಟೇಲ್ ಮತ್ತು … Continued

ಟ್ರೇನಿ ಸೇನಾ ಅಧಿಕಾರಿಗಳ ಮೇಲೆ ದಾಳಿ-ಹಲ್ಲೆ ; ಸ್ನೇಹಿತೆ ಮೇಲೆ ಸಾಮೂಹಿಕ ಅತ್ಯಾಚಾರ

ಭೋಪಾಲ್: ಮಧ್ಯಪ್ರದೇಶದ ಇಂದೋರ್‌ನಲ್ಲಿ ಮಂಗಳವಾರ ತಡರಾತ್ರಿ ಇಬ್ಬರು ಯುವ ಸೇನಾ ಅಧಿಕಾರಿಗಳ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಲಾಗಿದ್ದು, ಅವರ ಸ್ನೇಹಿತೆಯ ಮೇಲೆ ಬಂದೂಕು ತೋರಿಸಿ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ ಎಂದು ವರದಿಯಾಗಿದೆ. ದಾಳಿಕೋರರು ದರೋಡೆ ಮಾಡುವ ಉದ್ದೇಶದಿಂದ ವಿಹಾರಕ್ಕೆ ಹೊರಟಿದ್ದ ಗುಂಪಿನ ಮೇಲೆ ದಾಳಿ ನಡೆಸಿದ್ದು, ದಾಳಿಕೋರರಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ ಹಾಗೂ ಅವರಲ್ಲಿ ಒಬ್ಬ ಕ್ರಿಮಿನಲ್ … Continued