ವ್ರತ-ಧರ್ಮಾಚರಣೆ ಇಂದಿನ ಅವಶ್ಯ : ಸೋಂದಾ ಜೈನ ಮಠದ ಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ

ಧಾರವಾಡ: ಅಹಿಂಸೆ, ಅಪರಿಗ್ರಹ ಇಂದಿನ ಅವಶ್ಯಕತೆಗಳಾಗಿವೆ. ಹಿಂಸೆಯಿಂದ ಇಡೀ ವಿಶ್ವವೇ ನಲುಗಿ ಹೋಗಿದೆ. ವ್ರತ-ಧರ್ಮಾಚರಣೆಯಿಂದ ಮನಸ್ಸಿಗೆ ಶಾಂತಿ ಪ್ರಾಪ್ತಿಯಾಗಿ ನಮ್ಮಲ್ಲಿರುವ ಕೆಟ್ಟ ವಿಚಾರಗಳನ್ನು ದೂರವಿಡಬಹುದು. ಆಗ ಸಮಾಜದಲ್ಲಿ ಶಾಂತಿ, ಸಾಮರಸ್ಯ ಉಂಟಾಗುತ್ತದೆ ಎಂದು ಸೋಂದಾ ಜೈನ ಮಠದ ಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಹೇಳಿದರು. ಧಾರವಾಡ ನಗರದ ಸನ್ಮತಿ ಜಿನ ಮಂದಿರದಲ್ಲಿ ನಡೆದ ನೂತನ ಏಕಶಿಲಾ … Continued

ಡಾ.ಅಜಿತ ಪ್ರಸಾದಗೆ ಬಂಗಾರದ ಪದಕ ನೀಡಿ ಸನ್ಮಾನಿಸಿದ ಡಾ.ವೀರೇಂದ್ರ ಹೆಗ್ಗಡೆ

ಧಾರವಾಡದ ವಿದ್ಯಾಗಿರಿಯ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ ದಶಮಾನೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಕಾಲೇಜಿನ ಯಶಸ್ಸಿಗೆ ಕಾರಣೀಕರ್ತರಾದ ಪ್ರಾಚಾರ್ಯರಾದ ಡಾ. ಅಜಿತ ಪ್ರಸಾದರವರಿಗೆ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಬಂಗಾರದ ಪದಕವನ್ನು ನೀಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಕಾರ್ಯದರ್ಶಿಗಳಾದ ಡಾ. ನ. ವಜ್ರಕುಮಾರವರು ಉಪಸ್ಥಿತರಿದ್ದರು.

ಶಿಕ್ಷಣವು ಎಲ್ಲ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವ ಶಕ್ತಿ ಹೊಂದಿದೆ-ಡಾ. ನ. ವಜ್ರಕುಮಾರ

ಶಿಕ್ಷಣ ಎಲ್ಲ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವ ಶಕ್ತಿ ಹೊಂದಿದೆ-ಡಾ. ನ. ವಜ್ರಕುಮಾರ ಧಾರವಾಡ : ಶಿಕ್ಷಣವೆಂಬುದು ನಿರಂತರವಾದ ಸಾಧನೆ ಹಾಗೂ ತಪಸ್ಸು. ಶಿಕ್ಷಣ ಎಂದೂ ನಿಲ್ಲದ ಪ್ರವಾಹ. ಇದಕ್ಕೆ ವಯಸ್ಸಿನ, ಲಿಂಗಭೇದಗಳ ಜಾತಿ-ಮತಗಳ ಅಧಿಕಾರ-ಅಂತಸ್ತಿನ ಅಡ್ಡಗೋಡೆಗಳಿಲ್ಲ ಎಂದು ಜೆಎಸ್‌ಎಸ್‌ ಸಂಸ್ಥೆಯ ಕಾರ್ಯದರ್ಶಿ ಡಾ. ನ. ವಜ್ರಕುಮಾರ ಹೇಳಿದರು. ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ … Continued

ಜೆ.ಎಸ್.ಎಸ್ ನಲ್ಲಿ ಶ್ರೀ ಧರ್ಮಸ್ಥಳ ಸಿರಿ ಮಿಲೆಟ್ ಹೌಸ್ ಉದ್ಘಾಟನೆ

ಧಾರವಾಡದ ವಿದ್ಯಾಗಿರಿಯ ಜೆ.ಎಸ್.ಎಸ್ ಕ್ಯಾಂಪಸ್‌ನ ಫುಡ್ ಕೋರ್ಟ್ ಆವರಣದಲ್ಲಿ ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಾದ ಡಾ. ನ. ವಜ್ರಕುಮಾರ ಅವರು ಶ್ರೀ ಧರ್ಮಸ್ಥಳ ಸಿರಿ ಮಿಲೆಟ್ ಹೌಸ್‌ ಅನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಿತ್ತಾಧಿಕಾರಿಗಳಾದ ಡಾ. ಅಜಿತ ಪ್ರಸಾದ, ಧರ್ಮಸ್ಥಳ ಗ್ರಾಮಿವೃದ್ಧಿ ಸಂಸ್ಥೆಯ ದಿನೇಶ ಎಂ. ಶ್ರೀ ಮಹಾವೀರ ಉಪಾದ್ಯೆ, ಸೂರಜ್ ಜೈನ್, ಮಾಲತೇಶ ಹಾಗೂ … Continued

ಉತ್ಖನನ ನಡೆಸಲು ಮನವಿ

ಧಾರವಾಡ: ನವಲಗುಂದ ತಾಲೂಕಿನ ಮೊರಬ ಗ್ರಾಮದಲ್ಲಿ ಜೈನ ಬಸದಿ ಇದ್ದ ಬಗ್ಗೆ ಗ್ರಾಮದ ಹಿರಿಯರಿಂದ ತಿಳಿದು ಬಂದಿದ್ದು, ಈ ಹಿಂದೆ ಇದ್ದ ಬಸದಿಯ ಜಾಗದ ಉತ್ಖನನವಾದರೆ ಸಂಪೂರ್ಣ ಮಾಹಿತಿ ಸಿಗಬಹುದು ಎಂಬ ಉದ್ದೇಶದಿಂದ ಉತ್ಖನನ ನಡೆಸುವಂತೆ ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಭಜಂತ್ರಿ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಹಾವೀರ ಉಪಾದ್ಯೆ, ಜಿನ್ನಪ್ಪ ಕುಂದಗೊಳ, ಡಾ. … Continued

ಪ್ರಜಾರಾಜ್ಯೋತ್ಸವ ಕಪ್ ಕ್ರಿಕೆಟ್ ಪಂದ್ಯಾವಳಿ ಆರಂಭ

ಅಂಕೋಲಾ : ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಆಯೋಜಿಸಿರುವ ಅಂಕೋಲಾ ಪ್ರಜಾರಾಜ್ಯೋತ್ಸವ ಕಪ್ ಕ್ರಿಕೆಟ್ ಪಂದ್ಯಾವಳಿ ಸೋಮವಾರ ಜೈಹಿಂದ ಕ್ರೀಡಾಂಗೆಣದಲ್ಲಿ ಆರಂಭವಾಯಿತು. ಒಟ್ಟಾರೆ 16 ತಂಡಗಳು ಈ ಪಂದ್ಯಾವಳಿಯಲ್ಲಿ ಆಡುತ್ತಿದ್ದಾರೆ. ಪುರಸಭೆಯ ಮುಖ್ಯಾಧಿಕಾರಿ ಶೃತಿ ಗಾಯಕವಾಡ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ವಿವಿಧ ಇಲಾಖೆಗಳ ಮಧ್ಯೆ ಸಮನ್ವಯ ಸಾಧಿಸಲು ಇಂತಹ ಪಂದ್ಯಾವಳಿ ಅಗತ್ಯ ಎಂದರು. ಪತ್ರಕರ್ತ ವಿಠ್ಠಲದಾಸ … Continued

ಚಾಲಕರು ಮಾಡುತ್ತಿರುವ ಜನಸಾಮಾನ್ಯರ ಸೇವೆಗೆ ಬೆಲೆಕಟ್ಟಲಾಗದು: ಡಾ.ಅಜಿತ ಪ್ರಸಾದ

ಧಾರವಾಡ: ಜನಸಾಮಾನ್ಯರ ಮತ್ತು ಪ್ರತಿಯೊಬ್ಬರ ಜೀವನದ ರಥ ಎಂದೇ ಕರೆಯಲ್ಪಡುವ ಚಾಲಕರ ಮಹತ್ವ ಅರಿಯಬೇಕು. ಹಾಗೆಯೇ ಈ ಚಾಲಕರು ಮಾಡುತ್ತಿರುವ ಜನಸಾಮಾನ್ಯರ ಸೇವೆಗೆ ಬೆಲೆಕಟ್ಟಲಾಗದು .ಅದೇರೀತಿ ಪ್ರಯೋಗಾಲಯದಲ್ಲಿ ಕಾರ್ಯಮಾಡುವವರ ಸೇವೆಯು ಅಷ್ಟೇ ಮಹತ್ವದ್ದು ಎಂದು ಜೆ.ಎಸ್.ಎಸ್ ನ ವಿತ್ತಾಧಿಕಾರಿಗಳಾದ ಡಾ. ಅಜಿತ ಪ್ರಸಾದ ಹೇಳಿದರು. ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ೧೦೦ ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಭಾರತೀಯ … Continued

ಮುರ್ಡೇಶ್ವರದ ಸಾರ್ವಜನಿಕ ಮಹಾರಥೋತ್ಸವ ಇಲ್ಲ: ಒಳಾಂಗಣ ಪೂಜೆಗಷ್ಟೇ ಸೀಮಿತ

ಭಟ್ಕಳ: ರಾಜ್ಯದಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನೆವರಿ 20 ರಂದು ನಡೆಯಲಿರುವ ಮುರ್ಡೇಶ್ವರದ ಮಹಾರಥೋತ್ಸವ ಕಾರ್ಯಕ್ರಮಕ್ಕೆ ಸರ್ಕಾರದ ಕೋವಿಡ್ ನಿಯಮಗಳ ಪ್ರಕಾರ ಅನುಮತಿ ನೀಡಿಲ್ಲ.ಜಾತ್ರೆ ಕೇವಲ ದೇವಾಲಯದ ಒಳಾಂಗಣದ ಪೂಜೆ ಪುರಸ್ಕಾರಗಳಿಗೆ ಮಾತ್ರ ಸೀಮಿತವಾಗಿರಲಿದೆ ಟ್ಕಳ ಸಹಾಯಕ ಆಯುಕ್ತೆ ಮಮತಾ ದೇವಿ ತಿಳಿಸಿದ್ದಾರೆ. ಹೀಗಾಗಿ ಸಾರ್ವಜನಿಕರು ಮತ್ತು ಭಕ್ತಾರು ಕೋವಿಡ್ ಮಾರ್ಗಸೂಚಿಗಳ ಉಲ್ಲಂಘನೆ ಆಗದಂತೆ … Continued

ಧಾರವಾಡ: ಜೆಎಸ್ಎಸ್ ಕನ್ನಡ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಕರಕುಶಲ ವಸ್ತುಗಳ ಪ್ರದರ್ಶನ

ಧಾರವಾಡ: ೨೦೨೨ನೇ ಹೊಸವರ್ಷದ ಪ್ರಯುಕ್ತ ಧಾರವಾಡದ ವಿದ್ಯಾಗಿರಿಯ ಜೆ.ಎಸ್.ಎಸ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಕರಕುಶಲ (ಕ್ರಾಫ್ಟ್‌) ವಸ್ತುಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಮಕ್ಕಳು ವಿವಿಧ ವಸ್ತುಗಳ ಮಾದರಿಗಳನ್ನು ಕಡಿಮೆ ಖರ್ಚಿನಲ್ಲಿ ಮಾಡಿ ಪ್ರದರ್ಶಿಸಿದರು. ಇದು ಮಕ್ಕಳ ಪ್ರತಿಭೆ ಬಿಂಬಿಸುವ ಪ್ರದರ್ಶನವಾಗಿತ್ತು. ಈ ಕಾರ್ಯಕ್ರಮವನ್ನು ಜೆ.ಎಸ್.ಎಸ್ ಸಂಸ್ಥೆಯ ಐ.ಟಿ.ಐ ಕಾಲೇಜಿನ ಪ್ರಾಚಾರ್ಯರಾದ ಮಹಾವೀರ ಉಪಾಧ್ಯೆಯವರು ಉದ್ಘಾಟಿಸಿದರು. … Continued

ಕುಮಟಾ: ನಾಗೇಶ ಭಟ್ಟರ ಮುಕ್ತಾಯ ಕಥಾಸಂಕಲನ ಲೋಕಾರ್ಪಣೆ

ಕುಮಟಾ: ಭಾರತೀಯ ದೂರ ಸಂಚಾರ ನಿಗಮ(ಬಿಎಸ್ಎನ್ಎಲ್)ದ ನಿವೃತ್ತ ಉದ್ಯೋಗಿಗಳಾದ ನಾಗೇಶ ಭಟ್ಟ ಅವರು ಬರೆದ ‘ಮುಕ್ತಾಯ’ ಕಥಾಸಂಕಲನ ಲೋಕಾರ್ಪಣೆಗೊಂಡಿತು. ಇದು ಹತ್ತು ಚಿಕ್ಕ ಕಥೆಗಳ ಸಂಕಲನವಾಗಿದೆ. ಖ್ಯಾತ ಸಾಹಿತಿ ಶ್ರೀಧರ ಬಳಿಗಾರ ಅವರು ಪುಸ್ತಕವನ್ನು ಲೋಕಾರ್ಪಣೆಗೊಳಿಸಿದರು. ಹೊನ್ನಾವರದ ನಾಗರಿಕ ಪತ್ರಿಕೆಯ ಸಂಪಾದಕ ಹಾಗೂ ಸರಸ್ವತಿ ಪ್ರಕಾಶನದ ಪ್ರಕಾಶಕ ಕೃಷ್ಣಮೂರ್ತಿ ಹೆಬ್ಬಾರರು ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಗಜಾನನ … Continued