ಟೈಮ್‌ ನೌ-ಸಿ ವೋಟರ್ ಸಮೀಕ್ಷೆ: ಪಿಣರಾಯಿಗೆ ಮತದಾರ ಜೈ..ಕಾಂಗ್ರೆಸ್‌ಗೆ ಕೈ

ನವ ದೆಹಲಿ: ಕೇರಳ ವಿಧಾನಸಭೆ ಚುನಾವಣೆಯಲ್ಲಿ ಕೇರಳದಲ್ಲಿ ಮತ್ತೆ ಆಡಳಿತಾರೂಢ ರಂಗವೇ ಅಧಿಕಾರಕ್ಕೆ ಬರಲಿದೆ ಎಂದು ಟೈಮ್‌ ನೌ – ಸಿ ವೋಟರ್ ಸಮೀಕ್ಷೆಯು ಹೇಳಿದೆ. ಕೇರಳದಲ್ಲಿ ವಿಧಾನಸಭಾ ಚುನಾವಣೆ ಏಪ್ರಿಲ್ 6 ರಿಂದ ಒಂದೇ ಹಂತದಲ್ಲಿ ನಡೆಯಲಿದ್ದು, ಹಲವು ದಶಕಗಳಿಂದ ರಾಜಕೀಯ ಶಕ್ತಿ ಎಲ್‌ಡಿಎಫ್ ಮತ್ತು ಯುಡಿಎಫ್ ನಡುವೆ ಹಣಾಹಣಿ ನಡೆಯುತ್ತದೆ. 2016 ರ … Continued

ಕೊರೊನಾ ಸೋಂಕು ಹೆಚ್ಚಳ:ಕರ್ನಾಟಕದಲ್ಲಿ ಖಾಸಗಿ ಆಸ್ಪತ್ರೆಗೆ ಸಜ್ಜಾಗಲು ಸರ್ಕಾರ ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಚಿಕಿತ್ಸೆಗೆ ಸಜ್ಜಾಗುವಂತೆ ಖಾಸಗಿ ಆಸ್ಪತ್ರೆಗಳಿಗೆ ರಾಜ್ಯಸ ಸರಕಾರ ಸೂಚಿಸಿದೆ. ಖಾಸಗಿ ಆಸ್ಪತ್ರೆಗಳ ಸಭೆ ನಡೆಸಿದ ಸರಕಾರ, ಕೊರೊನಾ ರೋಗಿಗಳ ಚಿಕಿತ್ಸೆಗೆ ಸಮರ್ಪಕ ವ್ಯವಸ್ಥೆ ಮಾಡಿಕೊಳ್ಳುವಂತೆ ತಿಳಿಸಿದೆ. ಮೊದಲ ಹಂತದಲ್ಲಿ ೨೦೦ಕ್ಕಿಂತ ಹೆಚ್ಚು ಹಾಸಿಗೆಗಳಿರುವ ಆಸ್ಪತ್ತೆಗಳನ್ನು ಆಯ್ಕೆ ಮಾಡಲು ನಿರ್ಧರಿಸಿದೆ. ಕೋರಮಂಗಲದ ಒಳಾಂಗಣ ಕ್ರೀಡಾಂಗಣ, ಹಜ್‌ ಭವನ, … Continued

ಪಶ್ಚಿಮ ಬಂಗಾಳದಲ್ಲಿ ಎನ್‌ ‌ಆರ್‌ಸಿ, ಎನ್‌ಪಿಆರ್‌ ಅನುಷ್ಠಾನಕ್ಕೆ ಅವಕಾಶ ನೀಡಲ್ಲ: ಮಮತಾ

ಬಂಕುರಾ: ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ಹಾಗೂ ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್‌ಆರ್‌ಸಿ) ಅನುಷ್ಠಾನಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಿಎಂ ಮಮತಾ ಬ್ಯಾನರ್ಜಿ ಅಬ್ಬರಿಸಿದ್ದಾರೆ. ಚುನಾವಣಾ ರ್ಯಾಲಿಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ದೀದಿ, ಪ್ರಧಾನಿ ನರೇಂದ್ರ ಮೋದಿ ಅವರು ಅಸ್ಸಾಂನಲ್ಲಿ 14 ಲಕ್ಷ ಬಂಗಾಳಿಗಳ ಹೆಸರನ್ನು ಮತದಾರರ ಪಟ್ಟಿಯಿಂದ ಹೊರಗಿಟ್ಟಿದ್ದಾರೆ. ಆದರೆ … Continued

ಪಶ್ಚಿಮ ಬಂಗಾಳ ಎಬಿಪಿ-ಸಿ ವೋಟರ್ಸ್‌ ಸಮೀಕ್ಷೆ 2021:ಟಿಎಂಸಿ ಅಧಿಕಾರಕ್ಕೆ, ಬಿಜೆಪಿ ತುಸು ಹಿಂದೆ

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮುಂಚಿನ ಮನಸ್ಥಿತಿಯನ್ನು ನಿರ್ಧರಿಸುವ ಸಲುವಾಗಿ, ಎಬಿಪಿ ನ್ಯೂಸ್ ಮತ್ತು ಸಿ-ವೋಟರ್ ಮತದಾರರ ಮನಸ್ಸಿನಲ್ಲಿ ಯಾವ ರಾಜಕೀಯ ಪಕ್ಷವು ಪ್ರಗತಿ ಸಾಧಿಸಿದೆ ಎಂಬುದನ್ನು ನೋಡಲು ಕ್ಷಿಪ್ರ ಸಮೀಕ್ಷೆ ನಡೆಸಿದೆ. ಪಶ್ಚಿಮ ಬಂಗಾಳ ವಿಧಾನಸಭೆಯ ಮೊದಲ ಹಂತದ ಮತದಾನವು ಶನಿವಾರ ನಡೆಯಲಿದೆ. ಮತದಾನದ ದಿನಾಂಕ ಹತ್ತಿರವಾಗುವ ಸಂದರ್ಭದಲ್ಲಿ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದ … Continued

ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಏಕದಿನದ ಕೊರೊನಾ ಸೋಂಕು ಬುಧವಾರ ದಾಖಲು..!..!

ಮುಂಬೈ: ಮಹಾರಾಷ್ಟ್ರದಲ್ಲಿ ಬುಧವಾರ (ಮಾರ್ಚ್ 24) 31,855 ಹೊಸ ಕೊವಿಡ್‌ -19 ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ಸಾಂಕ್ರಾಮಿಕ ರೋಗ ಹರಡಿದ ನಂತರ ಇದು ರಾಜ್ಯದ ಅತಿ ಹೆಚ್ಚು ಏಕದಿನದ ಕೊರೊನಾ ಉಲ್ಬಣವಾಗಿದೆ. ಮೊದಲು ಇದೇ 21 ರ ಶನಿವಾರ ಏಕದಿನದ ಅತಿ ಹೆಚ್ಚು 30,535 ಪ್ರಕರಣಗಳು ದಾಖಲಾಗಿತ್ತು. ಅದಾದ ಮೂರು ದಿನಗಳ ನಂತರ ಈಗ … Continued

ಮಮತಾ ಬರ್ಮುಡಾ ಧರಿಸಲಿ ಎಂದ ಬಂಗಾಳ ಬಿಜೆಪಿ ಅಧ್ಯಕ್ಷರ ಹೇಳಿಕೆಗೆ ತೀವ್ರ ಆಕ್ರೋಶ

ನವ ದೆಹಲಿ: ಪಶ್ಚಿಮ ಬಂಗಾಳದ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್ ನೀಡಿದ ಹೇಳಿಕೆ ಬಗ್ಗೆ ರಾಜಕೀಯ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ. ಪ್ರಚಾರದ ವೇಳೆ ಗಾಯಗೊಂಡಿದ್ದ ಮಮತಾ ಬ್ಯಾನರ್ಜಿ ವೀಲ್ ಚೇರ್ ನಲ್ಲಿ ಕುಳಿತುಕೊಂಡು ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರ ಕೈಗೊಂಡಿದ್ದಾರೆ. ಬ್ಯಾಂಡೇಜ್ ಸುತ್ತಿದ ಕಾಲು ನೋವಿನಲ್ಲೇ ಪ್ರಚಾರ ಕೈಗೊಂಡಿರುವುದಾಗಿ ಅವರು ಹೇಳಿದ್ದಾರೆ. ಇದನ್ನು … Continued

ದೆಹಲಿ ಮಸೂದೆ ವಿವಾದ: ರಾಜ್ಯಸಭೆಯಲ್ಲಿ ಗದ್ದಲ

ನವ ದೆಹಲಿ: ದೆಹಲಿಯಲ್ಲಿ ಚುನಾಯಿತ ಸರ್ಕಾರದ ಅಧಿಕಾರಗಳನ್ನು ಮೊಟಕುಗೊಳಿಸಿ, ಲೆಫ್ಟಿನೆಂಟ್ ಗವರ್ನರ್‌ಗೆ ಮತ್ತಷ್ಟು ಅಧಿಕಾರ ನೀಡುವ ಕೇಂದ್ರ ಸರ್ಕಾರದ ಹೊಸ ಮಸೂದೆ ವಿರುದ್ಧ ರಾಜ್ಯಸಭೆಯಲ್ಲಿ ಬುಧವಾರ ತೀವ್ರ ಕೋಲಾಹಲ ಉಂಟಾಯಿತು. ಹಣಕಾಸು ಮಸೂದೆ ಕುರಿತು ಚರ್ಚೆಯ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯೆ ನೀಡುವಾಗ ಆಡಳಿತ ಹಾಗೂ ಪ್ರತಿಪಕ್ಷಗಳ ಮಧ್ಯೆ ತಿವ್ರ ವಾಗ್ವಾದ ನಡೆಯಿತು. … Continued

ಬೇಡ್ತಿ, ಅಘನಾಶಿನಿ, ವರದಾ ನದಿ ಜೋಡಣೆ ಕೈಬಿಡಲು ಒತ್ತಾಯಿಸಿ ಕಾಗೇರಿ, ಹೆಬ್ಬಾರ ನೇತೃತ್ವದಲ್ಲಿ ಸಿಎಂ ಬಳಿ ನಿಯೋಗ:ನಿರ್ಣಯ

ಶಿರಸಿ:ನಗರದ ಟಿಆರ್‌ ಸಿ ಸಭಾಂಗಣದಲ್ಲಿ ಬುಧವಾರ ಬೇಡ್ತಿ, ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಬೇಡ್ತಿ, ಅಘನಾಶಿನಿ, ವರದಾ ನದಿ ಜೋಡಣೆ ಯೋಜನೆಗಳ ಸಾಧಕ- ಬಾಧಕ ಕುರಿತ ಸಮಾಲೋಚನಾ ಕಾರ್ಯಾಗಾರದಲ್ಲಿ ಸ್ವರ್ಣವಲ್ಲಿ ಮಠಾಧೀಶರಾದ ಶ್ರೀ ಗಂಗಾಧರೇಂದ್ರ ಸ್ವಾಮೀಜಿ ಉಪಸ್ಥಿತಿಯಲ್ಲಿ ನದಿ ಜೋಡಣೆ ಯೋಜನೆ ಕೈಬಿಡುವಂತೆ ರಾಜ್ಯ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಿ ನಿರ್ಣಯ ಸ್ವೀಕರಿಸಲಾಯಿತು. ಅಲ್ಲದೆ, … Continued

ಹಿರೆನ್ ಸಾವಿನ ಪ್ರಕರಣ: ತಕ್ಷಣವೇ ಎನ್‌ಐಎಗೆ ಎಲ್ಲ ದಾಖಲೆಗಳ ಹಸ್ತಾಂತರಕ್ಕೆ ಎಟಿಎಸ್‌ಗೆ ಆದೇಶಿಸಿದ ಮುಂಬೈ ಕೋರ್ಟ್‌

ಮುಂಬೈ: ಮಹತ್ವದ ಬೆಳವಣಿಗೆಯಲ್ಲಿ ಮನ್ಸುಖ್ ಹಿರೆನ್ ಸಾವಿನ ಪ್ರಕರಣದ ಎಲ್ಲಾ ದಾಖಲೆಗಳು ಮತ್ತು ಪತ್ರಿಕೆಗಳನ್ನು ತಕ್ಷಣವೇ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಗೆ ಹಸ್ತಾಂತರಿಸುವಂತೆ ಥಾಣೆ ನ್ಯಾಯಾಲಯವು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳಕ್ಕೆ (ಎಟಿಎಸ್‌) ಆದೇಶಿಸಿದೆ. ಮುಖೇಶ್ ಅಂಬಾನಿಯ ಮನೆಯ ಆಂಟಿಲಿಯಾದ ಹೊರಗೆ ಸ್ಫೋಟಕ ತುಂಬಿ ನಿಲ್ಲಿಸಿದ ಎಸ್ಯುವಿಗೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿರುವ ಸಾವಿನ ಪ್ರಕರಣದ … Continued

ಭಾರತದಲ್ಲಿ ಕಂಡುಬಂದ ಕೊರೊನಾದ ಹೊಸ ಡಬಲ್ ರೂಪಾಂತರಿ…ಏನಿದರ ಗುಣಲಕ್ಷಣ..?

ಮಹಾರಾಷ್ಟ್ರ, ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿದಂತೆ 18 ರಾಜ್ಯಗಳಲ್ಲಿ ಕೊರೊನಾ ವೈರಸ್‌ ಹೊಸ ‘ಡಬಲ್ ವೇರಿಯಂಟ್’ (ಎರಡು ರೂಪಾಂತರಿ) ಪತ್ತೆಯಾಗಿದೆ ಎಂದು ಕೇಂದ್ರ ಸರ್ಕಾರ ಬುಧವಾರ ತಿಳಿಸಿದೆ . ಹಲವಾರು ರಾಜ್ಯಗಳಲ್ಲಿ ಇತ್ತೀಚಿನ ಕೊವಿಡ್‌-19 ಪ್ರಕರಣಗಳಲ್ಲಿನ ಹೆಚ್ಚಳ ವಿವರಿಸಲು ಸಾಕಷ್ಟು ಸಂಖ್ಯೆಯಲ್ಲಿ ಈ ರೂಪಾಂತರಗಳು ಪತ್ತೆಯಾಗಿಲ್ಲ. ರೂಪಾಂತರಗಳು ಸಂಭವಿಸುವುದು ವೈರಸ್‌ಗಳಲ್ಲಿ ಸ್ವಾಭಾವಿಕವಾಗಿದೆ ಮತ್ತು ತಜ್ಞರ … Continued