ತನ್ನ ಕೊನೆಯ ಸಂಪೂರ್ಣ ಅನಿಲ ಚಾಲಿತ ಕಾರನ್ನು ಅತ್ಯಂತ ದುಬಾರಿ ಬೆಲೆ ₹ 88 ಕೋಟಿಗೆ ಮಾರಾಟ ಮಾಡಿ ದಾಖಲೆ ನಿರ್ಮಿಸಿದ ಬುಗಾಟ್ಟಿ…! ವೀಕ್ಷಿಸಿ

ಖ್ಯಾತ ಫ್ರೆಂಚ್‌ ಕಾರು ಕಂಪನಿ ಬುಗಾಟ್ಟಿಯು ತನ್ನ ಕೊನೆಯ ಸಂಪೂರ್ಣ ಅನಿಲ ಚಾಲಿತ ಕಾರನ್ನು ಮಾರಾಟ ಮಾಡಿದೆ ಮತ್ತು ಇದುವರೆಗೆ ಹರಾಜಾಗದ ಅತ್ಯಂತ ದುಬಾರಿ ಬೆಲೆಗೆ ಈ ಹೊಸ ಕಾರು ಮಾರಾಟವಾಗಿ ವಿಶ್ವ ದಾಖಲೆಯನ್ನು ನಿರ್ಮಿಸಿದೆ. ಇದು $10 ಮಿಲಿಯನ್‌ಗಿಂತಲೂ ಬೆಲೆಗೆ ಮಾರಾಟವಾಗಿದೆ. ಅಂದರೆ ಇದು ಭಾರತದ ಕರೆನ್ಸಿಯಲ್ಲಿ ಅಂದಾಜು 88.23 ಕೋಟಿ ರೂ.ಗಳಿಗೆ ಮಾರಾಟವಾಗಿ … Continued

ಎತ್ತರದಿಂದ ನದಿಗೆ ಡೈವ್‌ ಹೊಡೆದು ಈಜಿದ ಸೀರೆ ಉಟ್ಟ ಮಹಿಳೆಯರು : ವೀಡಿಯೊ ವೈರಲ್

ತಮಿಳುನಾಡಿನ ತಾಮಿರಬರಣಿ ನದಿಗೆ ಸೀರೆ ಉಟ್ಟ ಮಹಿಳೆಯರು ಧುಮುಕುತ್ತಿರುವುದನ್ನು ವೈರಲ್ ವಿಡಿಯೋ ತೋರಿಸುತ್ತದೆ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿ ಸುಪ್ರಿಯಾ ಸಾಹು ಅವರು ಹಂಚಿಕೊಂಡಿರುವ ವೀಡಿಯೊದಲ್ಲಿ ಸೀರೆಯುಟ್ಟ ಮಹಿಳೆಯರ ಗುಂಪೊಂದು ತಮಿಳುನಾಡಿನ ತಾಮಿರಬರಣಿ ನದಿಗೆ ಧುಮುಕುವುದನ್ನು ತೋರಿಸುತ್ತದೆ. 20 ಸೆಕೆಂಡ್‌ಗಳ ವೀಡಿಯೊದಲ್ಲಿ ಹಿರಿಯ ಮಹಿಳೆಯರು ಉತ್ಸಾಹದಿಂದ ನದಿಗೆ ಧುಮುಕುವುದನ್ನು ತೋರಿಸುತ್ತದೆ. ಮಹಿಳೆಯರ ಗುಂಪು ನಿರ್ಭಯವಾಗಿತ್ತು. … Continued

ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಗೌರಿ ನೇಮಕ : ಪ್ರಮಾಣವಚನಕ್ಕೂ ಮುನ್ನವೇ ಇಂದು ಸುಪ್ರೀಂ ಕೋರ್ಟ್‌ನಿಂದ ಅರ್ಜಿ ವಿಚಾರಣೆ

ನವದೆಹಲಿ: ಸುಪ್ರೀಂ ಕೋರ್ಟ್‌ನಲ್ಲಿ ನೇಮಕಾತಿಯನ್ನು ಪ್ರಶ್ನಿಸಿರುವ ವಕೀಲರಾದ ಲಕ್ಷ್ಮಣ ಚಂದ್ರ ವಿಕ್ಟೋರಿಯಾ ಗೌರಿ ಅವರು ಮಂಗಳವಾರ ಬೆಳಿಗ್ಗೆ 10:35 ಕ್ಕೆ ಮದ್ರಾಸ್ ಹೈಕೋರ್ಟ್‌ನ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರ ನೇಮಕದ ವಿರುದ್ಧದ ಅರ್ಜಿಯನ್ನು ಮಂಗಳವಾರ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ. ಬೆಳಗ್ಗೆ 10:15ರ ಸುಮಾರಿಗೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ನಡೆಯಲಿದ್ದು, ಬೆಳಿಗ್ಗೆ 10:35 … Continued

ಟರ್ಕಿ-ಸಿರಿಯಾ ಗಡಿ ಪ್ರದೇಶದಲ್ಲಿ ಭೂಕಂಪ : 4,300 ದಾಟಿದ ಸಾವಿನ ಸಂಖ್ಯೆ… ಅವಶೇಷಗಳಡಿ ಮುಂದುವರಿದ ಹುಡಕಾಟ

ಇಸ್ತಾಂಬುಲ್‌: ಟರ್ಕಿ-ಸಿರಿಯಾ ಗಡಿ ಪ್ರದೇಶದಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪಗಳಿಂದ ಸತ್ತವರ ಸಂಖ್ಯೆ 4,300 ಕ್ಕಿಂತ ಹೆಚ್ಚಾಗಿದೆ. ಟರ್ಕಿಯ ದಕ್ಷಿಣದಲ್ಲಿ ಕನಿಷ್ಠ 2,921 ಜನರು ಸಾವಿಗೀಡಾಗಿದ್ದಾರೆ ಮತ್ತು 15,834 ಜನರು ಗಾಯಗೊಂಡಿದ್ದಾರೆ ಎಂದು ಟರ್ಕಿಯ ವಿಪತ್ತು ಏಜೆನ್ಸಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಗ್ಯ ಸಚಿವಾಲಯ ಮತ್ತು ರಕ್ಷಣಾ ಸಂಸ್ಥೆ ವೈಟ್ ಹೆಲ್ಮೆಟ್ಸ್ ಪ್ರಕಾರ ಸಿರಿಯಾದಲ್ಲಿ ಕನಿಷ್ಠ 1,400 ಜನರು … Continued

ಮುಂಬೈ ಆಸ್ಪತ್ರೆಯಲ್ಲಿ ತೃತೀಯ ಲಿಂಗಿಗಳಿಗಾಗಿಯೇ ಪ್ರತ್ಯೇಕ ವಾರ್ಡ್ ಆರಂಭ

ಮುಂಬೈ: ತೃತೀಯಲಿಂಗಿ ಸಮುದಾಯವನ್ನು ಮುಖ್ಯವಾಹಿನಿಗೆ ಸೇರಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರವು ರಾಜ್ಯದಲ್ಲಿ ಅವರಿಗಾಗಿಯೇ ಮೀಸಲಾದ ಪ್ರತ್ಯೇಕ ವಾರ್ಡ್ ಅನ್ನು ಪ್ರಾರಂಭಿಸಿದೆ. ಧೋಬಿ ತಲಾವ್‌ನಲ್ಲಿರುವ ಸರ್ಕಾರಿ-ಸಂಯೋಜಿತ ಗೋಕುಲದಾಸ್ ತೇಜ್‌ಪಾಲ್ ಆಸ್ಪತ್ರೆಯಲ್ಲಿ ಇದನ್ನು ಸ್ಥಾಪಿಸಲಾಗಿದೆ, ಇದನ್ನು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವರಾದ ಗಿರೀಶ್ ಮಹಾಜನ್ ಅವರು ಉದ್ಘಾಟಿಸಿದ್ದಾರೆ. 30 ಹಾಸಿಗೆಗಳ ತೃತೀಯ ಲಿಂಗಿಗಳಿಗಾಗಿಯೇ ಇರುವ ಈ ಸೌಲಭ್ಯವು ಪರೀಕ್ಷಾ … Continued

ಗಾಯಕಿ ವಾಣಿ ಜಯರಾಮ್ ನಿಗೂಢ ಸಾವು: ಮರಣೋತ್ತರ ಪರೀಕ್ಷೆ ವರದಿಯಲ್ಲೇನಿದೆ ?

ಚೆನ್ನೈ: ಫೆಬ್ರವರಿ 4 ರಂದು, ಖ್ಯಾತ ಹಿನ್ನೆಲೆ ಗಾಯಕಿ ವಾಣಿ ಜಯರಾಮ್ ಅವರು ಚೆನ್ನೈನ ನುಂಗಂಬಾಕ್ಕಂನಲ್ಲಿರುವ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಅವರಿಗೆ 78 ವರ್ಷ ವಯಸ್ಸಾಗಿತ್ತು. ಅವರ ಹಣೆಯ ಮೇಲೆ ಗಾಯದ ಕಂಡುಬಂದ ನಂತರ ಅನುಮಾನಾಸ್ಪದ ಸಾವಿನ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈಗ ಅವರ ಮರಣೋತ್ತರ ಪರೀಕ್ಷೆಯು ಹೊರಬಿದ್ದಿದೆ. ಪೊಲೀಸರು ಪ್ರಾಥಮಿಕ ಮರಣೋತ್ತರ ಪರೀಕ್ಷೆಯ … Continued

900 ಶತಕೋಟಿ ರೂಪಾಯಿಗಳ ದೊಡ್ಡ ಸಾಲದ ನೆರವಿಗೆ ಪಾಕಿಸ್ತಾನ ಸರ್ಕಾರ-ಐಎಂಎಫ್‌ ಮಧ್ಯೆ ಅಡಚಣೆಯಾದ ಆದಾಯದ ಅಂತರ ; ವರದಿ

ಇಸ್ಲಾಮಾಬಾದ್: ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮತ್ತು ಪಾಕಿಸ್ತಾನ ಸರ್ಕಾರವು 900 ಶತಕೋಟಿ ರೂಪಾಯಿಗಳ  ಆದಾಯದ ಅಂತರದ ಬಗ್ಗೆ ಹಗ್ಗಜಗ್ಗಾಟ ಮುಂದುವರಿದಿದ್ದು, ಇದು ಸಾಲ ನೀಡಲು ಸದ್ಯಕ್ಕೆ ಅಡಚಣೆಯಾಗಿದೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ. ಐಎಂಎಫ್‌ (IMF) ಸರಿಸುಮಾರು 900 ಶತಕೋಟಿ ರೂಪಾಯಿಗಳ ದೊಡ್ಡ ಸಾಲದ ನೆರವನ್ನು ರೂಪಿಸಿದೆ, ಇದು ಒಟ್ಟು ದೇಶೀಯ ಉತ್ಪನ್ನದ … Continued

ದ್ವೇಷ ಭಾಷಣ : ಬಾಬಾ ರಾಮದೇವ್ ವಿರುದ್ಧ ಎಫ್‌ಐಆರ್ ದಾಖಲು

ಬಾರ್ಮರ್: ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆದ ಧರ್ಮಗುರುಗಳ ಸಮಾವೇಶದಲ್ಲಿ ಪ್ರಚೋದನಕಾರಿ ಭಾಷಣ ಮಾಡಿ ದ್ವೇಷ ಮತ್ತು ಧಾರ್ಮಿಕ ಭಾವನೆಗಳನ್ನು ಕೆರಳಿಸಿದ ಆರೋಪದ ಮೇಲೆ ಯೋಗ ಗುರು ರಾಮದೇವ ವಿರುದ್ಧ ಭಾನುವಾರ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳೀಯ ನಿವಾಸಿ ಪಥಾಯಿ ಖಾನ್ ನೀಡಿದ ದೂರಿನ ಆಧಾರದ ಮೇಲೆ ಚೌಹಾಟನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ … Continued

ಹೈದರಾಬಾದ್ ಎರಡು ಆಸ್ಪತ್ರೆಗಳಲ್ಲಿ ಅಪರೂಪದ ಅಂತಾರಾಜ್ಯ ಕಿಡ್ನಿ ವಿನಿಮಯ

ಹೈದರಾಬಾದ್‌: ಛತ್ತೀಸ್‌ಗಢದ ಸಂದೀಪ್ ಭಟ್ನಾಗರ್ ಮತ್ತು ತೆಲಂಗಾಣದ ಹನುಮಂತು ಇವರಿಬ್ಬರೂ ತಮಗೆ ಸೂಕ್ತ ಹೊಂದಾಣಿಕೆಯಾಗುವ ಕಿಡ್ನಿ ದಾನಕ್ಕಾಗಿ ಕಾಯುತ್ತಿದ್ದರು. ಆದರೆ ಅವರ ಕುಟುಂಬಗಳಲ್ಲಿ ಅವರಿಗೆ ಒಬ್ಬರೂ ಸಿಗಲಿಲ್ಲ. ಅಂತಿಮವಾಗಿ, ಸಂದೀಪ್ ಅವರ ಪತ್ನಿ ಇಂದು ಭಟ್ನಾಗರ್ (40) ಹನುಮಂತು ಅವರಿಗೆ ಮತ್ತು ಹನುಮಂತು ಅವರ ಪತ್ನಿ ವರಲಕ್ಷ್ಮಿ (37) ಸಂದೀಪ್‌ ಅವರಿಗೆ ತಮ್ಮ ಕಿಡ್ನಿ ದಾನ … Continued

ಏಷ್ಯಾ ಕಪ್-2023 : ಭಾರತ ತಂಡ ಪಾಕಿಸ್ತಾನಕ್ಕೆ ಹೋಗುವುದಿಲ್ಲ, ಸ್ಥಳಾಂತರಿಸುವುದು ಅನಿವಾರ್ಯ ಎಂದ ಬಿಸಿಸಿಐ-ವರದಿ

ನವದೆಹಲಿ: ಮುಂಬರುವ ಏಷ್ಯಾಕಪ್ ಪಂದ್ಯಾವಳಿಯಲ್ಲಿ ಆಡಲು ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತೊಮ್ಮೆ ತಮ್ಮ ನಿಲುವು ಸ್ಪಷ್ಟಪಡಿಸಿದೆ. ಬಹ್ರೇನ್‌ನಲ್ಲಿ ಶನಿವಾರ ನಡೆದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸಲು ಉತ್ಸುಕವಾಗಿಲ್ಲ ಎಂದು ಪುನರುಚ್ಚರಿಸಿದೆ. ಏಷ್ಯಾಕಪ್ ಕ್ರಿಕೆಟ್ ಪಂದ್ಯಾವಳಿ ಆಡಲು ಪಾಕಿಸ್ತಾನಕ್ಕೆ … Continued