ಆಭರಣ ವ್ಯಾಪಾರಿಯ ₹ 100 ಕೋಟಿ ಪೋಂಜಿ ಹಗರಣ: ನಟ ಪ್ರಕಾಶ ರೈಗೆ ಸಮನ್ಸ್

ನವದೆಹಲಿ : ಚಿನ್ನಾಭರಣ ವ್ಯಾಪಾರಿಗೆ ಸಂಬಂಧಿಸಿದ ₹ 100 ಕೋಟಿ ಮೊತ್ತದ ಪೋಂಜಿ ಯೋಜನೆಗೆ ಸಂಬಂಧಿಸಿದಂತೆ ವಿಚಾರಣೆಗಾಗಿ ನಟ ಪ್ರಕಾಶ ರೈ (ಪ್ರಕಾಶ ರಾಜ್‌) ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ನೀಡಿದೆ. ಅವರು ಹಗರಣದ ಆರೋಪದ ಸರಪಳಿಯಾದ ಪ್ರಣವ್ ಜ್ಯುವೆಲರ್ಸ್‌ನ ಬ್ರಾಂಡ್ ಅಂಬಾಸಿಡರ್ ಆಗಿದ್ದರು. ಚೆನ್ನೈ ಸೇರಿದಂತೆ ತಮಿಳುನಾಡು ಮತ್ತು ಪುದುಚೇರಿಯಲ್ಲಿ ಹಲವು ಸ್ಥಳಗಳಲ್ಲಿ … Continued

ಪ್ರಧಾನಿ ಮೋದಿ ವಿರುದ್ಧ ʼಅಪಶಕುನʼ ಟೀಕೆ : ರಾಹುಲ್‌ ಗಾಂಧಿಗೆ ಚುನಾವಣಾ ಆಯೋಗದಿಂದ ನೋಟಿಸ್ ಜಾರಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ‘ಪನೌತಿ’ (ಅಪಶಕುನ) ಮತ್ತು ʼಜೇಬುಗಳ್ಳʼ ಟೀಕೆಗಳ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಚುನಾವಣಾ ಆಯೋಗ ಗುರುವಾರ ನೋಟಿಸ್ ನೀಡಿದೆ. ವಯನಾಡ್ ಸಂಸದ ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ಚುನಾವಣಾ ಸಂಸ್ಥೆಗೆ ದೂರು ನೀಡಿದ ಒಂದು ದಿನದ ನಂತರ ಚುನಾವಣಾ ಆಯೋಗ ನೋಟಿಸ್‌ ನೀಡಿದೆ. ಚುನಾವಣಾ ಆಯೋಗವು … Continued

ಚಲಿಸುತ್ತಿದ್ದ ರೈಲಿನ ಮುಂದೆ ಬಿದ್ದ ಹಿರಿಯ ವ್ಯಕ್ತಿಯನ್ನು ಜೀವ ಪಣಕ್ಕಿಟ್ಟು ರಕ್ಷಿಸಿದ ರೈಲ್ವೆ ಭದ್ರತಾ ಸಿಬ್ಬಂದಿ | ವೀಕ್ಷಿಸಿ

ರೈಲ್ವೇ ಭದ್ರತಾ ಸಿಬ್ಬಂದಿಯೊಬ್ಬರು ಧೈರ್ಯ ಮತ್ತು ಕರ್ತವ್ಯ ಪ್ರಜ್ಞೆಯಿಂದ ಗುಜರಾತಿನ ವಾಪಿ ನಿಲ್ದಾಣದಲ್ಲಿ ರೈಲಿಗೆ ಸಿಲುಕಿ ನಜ್ಜುಗುಜ್ಜಾಗುತ್ತಿದ್ದ ವೃದ್ಧನನ್ನು ಮಂಗಳವಾರ ರಕ್ಷಿಸಿದ್ದಾರೆ. ಈ ಸಾಹಸ ದೃಶ್ಯ ನಿಲ್ದಾಣದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಒಂದು ಪ್ಲಾಟ್‌ಫಾರ್ಮ್‌ನಿಂದ ಇನ್ನೊಂದಕ್ಕೆ ಹೋಗಲು ಹಲವಾರು ಜನರು ಟ್ರ್ಯಾಕ್‌ಗಳನ್ನು ದಾಟುವುದನ್ನು ತುಣುಕನ್ನು ತೋರಿಸುತ್ತದೆ. ಇದು ದೇಶದಾದ್ಯಂತ ಮೂರ್ಖತನದ ಮತ್ತು ಅತ್ಯಂತ ಸಾಮಾನ್ಯ ಅಭ್ಯಾಸವಾಗಿಬಿಟ್ಟಿದೆ. … Continued

ಕ್ರೂರ ಹತ್ಯೆ….: 17 ವರ್ಷದ ಹುಡುಗನನ್ನು 60ಕ್ಕೂ ಹೆಚ್ಚು ಬಾರಿ ಇರಿದ ಕೊಂದ 16 ವರ್ಷದ ಹುಡುಗ…!

ನವದೆಹಲಿ: ಮಂಗಳವಾರ ರಾತ್ರಿ ದೆಹಲಿಯ ರಸ್ತೆಯಲ್ಲಿ 17 ವರ್ಷದ ಯುವಕನೊಬ್ಬನಿಗೆ ಕಿರಿಯ ಹುಡುಗನೊಬ್ಬ ಹಲವು ಬಾರಿ ಇರಿದು ಸಾಯಿಸಿದ್ದಾನೆ. ಅತ್ಯಂತ ಆಘಾತಕಾರಿ ವೀಡಿಯೊ ದೃಶ್ಯಗಳಲ್ಲಿ ಅಪ್ರಾಪ್ತ ಬಾಲಕ ದೇಹದ ಪಕ್ಕದಲ್ಲಿ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. 16 ವರ್ಷದ ಬಾಲಕ 17 ವರ್ಷದ ಹುಡುಗನಿಗೆ ಕನಿಷ್ಠ 60 ಬಾರಿ ಇರಿದಿದ್ದಾನೆ, ಆತನ ಕುತ್ತಿಗೆಯನ್ನು ಕತ್ತರಿಸಲು ಪ್ರಯತ್ನಿಸಿದ್ದಾನೆ, ಆತನ … Continued

ವೀಡಿಯೊ….| ಚೀನಾದಲ್ಲಿ ನಿಗೂಢ ನ್ಯುಮೋನಿಯಾ ಉಲ್ಬಣ : ರೋಗಿಗಳಿಂದ ತುಂಬಿ ಹೋಗಿರುವ ಆಸ್ಪತ್ರೆಗಳು…!

ಕೋವಿಡ್ -19 ಸಾಂಕ್ರಾಮಿಕದ ವಿನಾಶಕಾರಿ ಪರಿಣಾಮಗಳಿಂದ ಇನ್ನೂ ಚೇತರಿಸಿಕೊಳ್ಳುತ್ತಿರುವ ಚೀನಾ, ಮತ್ತೊಂದು ಸಂಭವನೀಯ ಆರೋಗ್ಯ ತುರ್ತುಸ್ಥಿತಿಯನ್ನು ಎದುರಿಸುತ್ತಿದೆ. ನಿಗೂಢ ನ್ಯುಮೋನಿಯಾ ಉಲ್ಬಣಗೊಂಡಿದ್ದು, ವಿಶೇಷವಾಗಿ ಶಾಲೆಗಳಲ್ಲಿ ವ್ಯಾಪಿಸಿದೆ ಮತ್ತು ಆಸ್ಪತ್ರೆಗಳು ಅನಾರೋಗ್ಯದ ಮಕ್ಕಳಿಂದ ತುಂಬಿಹೋಗಿವೆ. ಇದು ಜಾಗತಿಕ ಆರೋಗ್ಯ ತಜ್ಞರಲ್ಲಿ ಮತ್ತೊಮ್ಮೆ ಆತಂಕಕ್ಕೆ ಕಾರಣವಾಗಿದೆ. ಈ ನಿಗೂಢ ನ್ಯುಮೋನಿಯಾ ಉಲ್ಬಣದ ಕೇಂದ್ರಬಿಂದುಗಳು ಬೀಜಿಂಗ್ ಮತ್ತು ಲಿಯಾನಿಂಗ್ ಪ್ರಾಂತ್ಯಗಳಾಗಿವೆ, … Continued

ಶಿಕ್ಷಕ ಸಿಟ್-ಅಪ್ ಮಾಡುವ ಶಿಕ್ಷೆ ನೀಡಿದ ನಂತರ ಸಾವಿಗೀಡಾದ 4ನೇ ತರಗತಿ ವಿದ್ಯಾರ್ಥಿ

ಜಾಜ್‌ಪುರ: ಒಡಿಶಾದ ಜಾಜ್‌ಪುರ ಜಿಲ್ಲೆಯ ಸರ್ಕಾರಿ ಶಾಲೆಯೊಂದರ ನಾಲ್ಕನೇ ತರಗತಿ ವಿದ್ಯಾರ್ಥಿಯೊಬ್ಬನಿಗೆ ಸಿಟ್‌ಅಪ್‌ ಮಾಡುವಂತೆ ಶಿಕ್ಷಕರೊಬ್ಬರು ಶಿಕ್ಷೆ ನೀಡಿದ ನಂತರ ಅದನ್ನು ಮಾಡಲು ಹೋಗಿ ವಿದ್ಯಾರ್ಥಿ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ. ರುದ್ರ ನಾರಾಯಣ ಸೇಠಿ ಎಂಬ ವಿದ್ಯಾರ್ಥಿ ಓರಳಿಯ ಸೂರ್ಯ ನಾರಾಯಣ ನೋಡಲ್ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯಾಗಿದ್ದ. ಮಂಗಳವಾರ ಹತ್ತರ ಹರೆಯದ ಈ ವಿದ್ಯಾರ್ಥಿ … Continued

ಉದ್ಯಮಿ ಗೌತಮ ಸಿಂಘಾನಿಯಾ-ಪತ್ನಿ ನವಾಜ್‌ ದಾಂಪತ್ಯದಲ್ಲಿ ವಿರಸ: ರೇಮಂಡ್‌ ಕಂಪನಿಗೆ ₹ 1,500 ಕೋಟಿ ನಷ್ಟ…!

ಮುಂಬೈ: ವಿಶ್ವದ ಅತಿ ದೊಡ್ಡ ಸೂಟ್ ಫ್ಯಾಬ್ರಿಕ್ ಉತ್ಪಾದಕರಲ್ಲಿ ಒಂದಾದ ರೇಮಂಡ್ ಲಿಮಿಟೆಡ್ ಶೇರ್‌ ಮುಂಬೈನಲ್ಲಿ ಏಳನೇ ದಿನಕ್ಕೆ ಕುಸಿಯಿತು, ಅದರ ಬಿಲಿಯನೇರ್ ಅಧ್ಯಕ್ಷ ಗೌತಮ ಸಿಂಘಾನಿಯಾ ಮತ್ತು ಅವರ ಪತ್ನಿ ನವಾಜ್ ಮೋದಿ ಪರಸ್ಪರ ಬೇರೆ ಬೇರೆಯಾಗುವುದಾಗಿ ಘೋಷಿಸಿದಾಗಿನಿಂದ ಹೂಡಿಕೆದಾರರಲ್ಲಿ ಅನಿಶ್ಚಿತತೆಗೆ ಕಾರಣವಾಗಿ ಶೇರುಗಳ ಬೆಲೆ ಕುಸಿದಿದೆ. ನವೆಂಬರ್ 13 ರಂದು ಗೌತಮ ಸಿಂಘಾನಿಯಾ … Continued

ಕಾಶ್ಮೀರ : ಭಯೋತ್ಪಾದಕರ ವಿರುದ್ಧದ ಎನ್‌ ಕೌಂಟರಿನಲ್ಲಿ ಸೇನಾಧಿಕಾರಿ, ಸೈನಿಕ ಹುತಾತ್ಮ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಬಾಜಿ ಮಾಲ್ ಅರಣ್ಯದಲ್ಲಿ ನಡೆದ ಭೀಕರ ಎನ್‌ಕೌಂಟರ್‌ನಲ್ಲಿ ಕ್ಯಾಪ್ಟನ್ ಶ್ರೇಣಿಯ ಒಬ್ಬ ಸೇನಾಧಿಕಾರಿ ಮತ್ತು ಒಬ್ಬ ಯೋಧ ಹುತಾತ್ಮರಾಗಿದ್ದಾರೆ. ಎನ್‌ಕೌಂಟರ್‌ನಲ್ಲಿ ಇಬ್ಬರು ಯೋಧರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರ ಉಪಸ್ಥಿತಿಯ ಬಗ್ಗೆ ಗುಪ್ತಚರ ಮಾಹಿತಿಯ ನಂತರ ಸೇನೆಯ ವಿಶೇಷ ಪಡೆಗಳು ಮತ್ತು ಪೊಲೀಸರು ಜಂಟಿ … Continued

ವೀಡಿಯೊ…| ಆಟೋ-ಟ್ರಕ್ ಡಿಕ್ಕಿ : ಗಾಳಿಯಲ್ಲಿ ಹಾರಿಬಿದ್ದ ಶಾಲಾ ಮಕ್ಕಳು

ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಶಾಲಾ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಆಟೊರಿಕ್ಷಾ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಎಂಟು ಮಕ್ಕಳು ಗಾಯಗೊಂಡ ಘಟನೆ ಬುಧವಾರ ನಡೆದಿದೆ. ಈ ಭೀಕರ ಅಪಘಾತದ ದೃಶ್ಯ ಸಮೀಪದ ಅಂಗಡಿಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೆಳಗ್ಗೆ 7 ಗಂಟೆ ಸುಮಾರಿಗೆ ಮಕ್ಕಳು ಶಾಲೆಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. 35 ಸೆಕೆಂಡ್‌ಗಳ ಸಿಸಿಟಿವಿ ದೃಶ್ಯಾವಳಿಗಳು ಸಂಗಮ … Continued

ಸ್ಟಾಪ್ ಕ್ಲಾಕ್ ನಿಯಮ ಜಾರಿಗೆ ತಂದ ಐಸಿಸಿ : ಬೌಲಿಂಗ್ ತಡವಾದರೆ 5 ರನ್ ದಂಡ….!

ಸ್ಟಾಪ್ ಕ್ಲಾಕ್ ಎಂಬ ಹೊಸ ನಿಯಮವನ್ನು ಐಸಿಸಿ ಜಾರಿಗೆ ತಂದಿದೆ. ಅಹಮದಾಬಾದ್​ನಲ್ಲಿ ನಡೆದ ಐಸಿಸಿ ಸಭೆಯಲ್ಲಿ ಈ ನಿಯಮಗಳನ್ನು ತರಲಾಗುತ್ತದೆ ಮತ್ತು ಏಕದಿನ ಹಾಗೂ ಟಿ20 ಕ್ರಿಕೆಟ್‌ ಪಂದ್ಯದಲ್ಲಿ ಬಳಸಲಾಗುವುದು ಎಂದು ಮಾಹಿತಿ ನೀಡಿದೆ. ಪುರುಷರ ಅಂತಾರಾಷ್ಟ್ರೀಯ ಏಕದಿನ ಪಂದ್ಯ (ODI) ಮತ್ತು T20 ಪಂದ್ಯಗಳಲ್ಲಿ ಬೌಲಿಂಗ್ ಮಾಡುವ ತಂಡಗಳು ಇನಿಂಗ್ಸ್‌ನಲ್ಲಿ ಮೂರನೇ ಸಲ ಮುಂದಿನ … Continued